ಸಂಸ್ಕೃತಿ ಪುಸ್ತಕಗಳು ಕಡ್ಡಾಯ
Team Udayavani, Sep 25, 2017, 6:55 AM IST
ನವದೆಹಲಿ: ರೈಲು ನಿಲ್ದಾಣಗಳಿಗೆ ಹೋದಾಗ ಅಲ್ಲಿನ ಅಂಗಡಿಗಳಲ್ಲಿ ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಕಣ್ಣಿಗೆ ರಾಚುವುದನ್ನು ನೋಡೇ ಇರುತ್ತೀರ. ಆದರೆ ಇನ್ನು ಮುಂದೆ ಅಂಥ ಪುಸ್ತಕಗಳು ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಬದಲಿಗೆ “ಆದರ್ಶ ಪುರುಷ ರಾಮ’, “ಸ್ವಾಮಿ ವಿವೇಕಾನಂದ’ ಮತ್ತು “ಹಂಪಿ ವೈಭವ’ ರೀತಿಯ ನೀತಿ ಬೋಧನೆ, ಸಾಂಸ್ಕೃತಿಕ ಸಿರಿ ಒಳಗೊಂಡ ಸಾಹಿತ್ಯಿಕ ಪುಸ್ತಕಗಳು ಕಾಣಲಿವೆ.
ಕಾರಣ, “ದೇಶದ ಎಲ್ಲ ವಿಭಾಗಗಳ ರೈಲು ನಿಲ್ದಾಣ, ಪ್ಲಾಟ್‌ಫಾರಂಗಳಲ್ಲಿರುವ ಅಂಗಡಿಗಳಲ್ಲಿ ಭಾರತದ ಸಂಸ್ಕೃತಿ ಮತ್ತು ಮೌಲ್ಯ ಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ತಪ್ಪದೇ ಮಾರಾಟಕ್ಕಿರಿಸಬೇಕು ಮತ್ತು ಇಂಥ ಪುಸ್ತಕಗಳನ್ನು ಜನರ ಕಣ್ಣಿಗೆ ಕಾಣುವಂತೆ ಪ್ರದರ್ಶಿಸಬೇಕು’ ಎಂದು ರೈಲ್ವೆ ಮಂಡಳಿ ಎಲ್ಲ ವಿಭಾಗಗಳಿಗೂ ಸುತ್ತೋಲೆ ಕಳುಹಿಸಿದೆ. ಸೆ.5ರಂದು ಈ ಸುತ್ತೋಲೆ ಹೊರಡಿಸಿದ್ದು, ಎಲ್ಲ ಅಂಗಡಿಗಳನ್ನೂ ಇನ್ನು ಹೊಸ ಮಲ್ಟಿ ಪರ್ಪಸ್ ಸ್ಟಾಲ್ (ಎಂಪಿಎಸ್) ನೀತಿ ವ್ಯಾಪ್ತಿಗೆ ಸೇರಿಸಿ, ಅವುಗಳನ್ನು ಬಹು ಉದ್ದೇಶಿತ ಮಳಿಗೆಗಳು ಎಂದೇ ಪರಿಗಣಿಸಲು ಮಂಡಳಿ ನಿರ್ಧರಿಸಿದೆ. ದೇಶದ ರೈಲು ನಿಲ್ದಾಣಗಳಲ್ಲಿನ ಅಂಗಡಿಗಳವರು ಈ ಆದೇಶವನ್ನು ಕಡ್ಡಾಯ ವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಎಲ್ಲ ವಲಯಗಳಲ್ಲಿರುವ ನಾನಾ ಬಗೆ ವಸ್ತು ಮಾರಾಟ ಮಾಡುವ ಅಂಗಡಿ, ಪುಸ್ತಕ ಮಳಿಗೆಗಳು, ಔಷಧ ಅಂಗಡಿಗಳಲ್ಲಿ ಭಾರತದ ಸಂಪ್ರ ದಾಯ, ಸಂಸ್ಕೃತಿ, ಇತಿಹಾಸ, ಮೌಲ್ಯ ಗಳು ಮತ್ತು ನೀತಿ, ಸಾಹಿತ್ಯ, ಮಕ್ಕಳ ಸಾಹಿತ್ಯ, ಜಾನಪದ, ಪ್ರವಾಸ, ಕಲೆ, ರಾಷ್ಟ್ರೀಯ ಐಕ್ಯತೆ ಸೇರಿದಂತೆ ಉತ್ತಮ ಗುಣಗಳನ್ನು ಬೆಳೆಸುವ, ಮಾಹಿತಿ ನೀಡುವ ವಿಷಯಗಳನ್ನು ಒಳ ಗೊಂಡ, ಕನ್ನಡ ಸೇರಿದಂತೆ ಇತರ ಸ್ಥಳೀಯ ಭಾಷೆಗಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಪುಸ್ತಕಗಳನ್ನು ಮಾರಾಟ ಮಾಡುವುದು ಕಡ್ಡಾಯ ಎಂಬುದು ಸುತ್ತೋಲೆಯ ಸಾರ.
ಇವೆಲ್ಲವುಗಳ ಜತೆ “ಟ್ರೇನ್ ಅಟ್ ಎ ಗ್ಲಾನ್ಸ್’ ಸೇರಿದಂತೆ ರೈಲ್ವೆ ಇಲಾಖೆ ಪ್ರಕಟಿಸುವ ಎಲ್ಲ ಪುಸ್ತಕಗಳು, ಎಲ್ಲ ಅಂಗಡಿಗಳಲ್ಲಿ ಲಭ್ಯವಿರಬೇಕು ಎಂದು ಮಂಡಳಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.