ಜನರ ಆಶೋತ್ತರಕ್ಕೆ ಸ್ಪಂದಿಸುವರೇ ಯೋಗಿ?


Team Udayavani, Mar 20, 2017, 2:20 AM IST

Yogi-Adityanath-600.jpg

ಪಂಚರಾಜ್ಯ ಚುನಾವಣೆಯ ಉದ್ದಕ್ಕೂ ಅಭಿವೃದ್ಧಿಯ ಮಂತ್ರದ ಜತೆಗೆ ಕಪ್ಪುಹಣ, ಭ್ರಷ್ಟಾಚಾರ ವಿರುದ್ಧ ಭಾಷಣ ಮಾಡಿಕೊಂಡು ಬಂದ ಭಾಜಪ ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಹಿಂದುತ್ವದ ಶಾಲು ಹೊದ್ದು, ಹಾರ್ಡ್‌ಲೈನ್‌ ಹಿಂದುತ್ವವಾದಿಗೆ ಸಿಎಂ ಪಟ್ಟ ಕಟ್ಟಿ ಬಲವಾದ ಸಂದೇಶ ರವಾನಿಸುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

‘The measure of a man is what he does with power’ ಗ್ರೀಸ್‌ನ ಖ್ಯಾತ ಫಿಲಾಸಫರ್‌ ಪ್ಲೆಟೊ ಹೇಳಿದ ಮಾತಿದು. ಸಾರ್ವಕಾಲಿಕ ಸತ್ಯ ಕೂಡ. ಹೇಗೇ ತೂಗಿ ಅಳೆದರೂ ಯಾವುದೋ ವ್ಯಾಪ್ತಿಗೆ ಒಳಪಡುವ ಮಾತು ಅನಿಸುವುದೇ ಇಲ್ಲ. ಅಷ್ಟು ವಿಶಾಲವಾಗಿದೆ ಅದರ ವ್ಯಾಪ್ತಿ ಮತ್ತು ಅರ್ಥ. ಪ್ರತಿಯೊಬ್ಬನ ನಿಜವಾದ ಬಣ್ಣ ಬಯಲಾಗುವುದೇ ಆತ ಅಧಿಕಾರದಲ್ಲಿದ್ದಾಗ. ಅಧಿಕಾರವೆನ್ನುವ ಶಕ್ತಿ ಕೈಗೆ ಸಿಕ್ಕಾಗ ಅವನೇನು ಮಾಡುತ್ತಾನೆ? ಅಧಿಕಾರವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ? ಎನ್ನುವುದು ಅನಾವರಣಗೊಳ್ಳುತ್ತಲೇ ವ್ಯಕ್ತಿಯ ವ್ಯಕ್ತಿತ್ವವೂ ತೆರೆದುಕೊಳ್ಳುತ್ತದೆ.

ಪ್ಲೆಟೊನ ಈ ಮಾತು ಉತ್ತರಪ್ರದೇಶದಲ್ಲಿನ ಸದ್ಯದ ರಾಜಕೀಯ ಬೆಳವಣಿಗೆಗೆ ಹೆಚ್ಚು ಪ್ರಸ್ತುತ. ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕಟ್ಟರ್‌ ಹಿಂದುತ್ವವಾದಿ, ಗೋರಖಪುರದ ಸಂಸದ ಹಾಗೂ ಗೋರಕ್ಷನಾಥ ಪೀಠದ ‘ಮಹಂತ’ ಯೋಗಿ ಆದಿತ್ಯನಾಥ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯೋಗಿ ಆದಿತ್ಯನಾಥ್‌ ಆಪೇಕ್ಷೆಯ ಮೇರೆಗೆ ಅಥವಾ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವರಿಷ್ಠರ ರಾಜಕೀಯ ಲೆಕ್ಕಾಚಾರದ ನಿರ್ಧಾರದಿಂದ, ರಾಜ್ಯಾಧ್ಯಕ್ಷ, ಪ್ರೌಢ ರಾಜಕಾರಣಿಯೂ ಆಗಿರುವ ಕೇಶವಪ್ರಸಾದ್‌ ಮೌರ್ಯ ಮತ್ತು ಲಕ್ನೋದ ಮಾಜಿ ಮೇಯರ್‌ ದಿನೇಶ್‌ ಶರ್ಮ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪಂಚರಾಜ್ಯ ಚುನಾವಣೆಯ ಉದ್ದಕ್ಕೂ ಅಭಿವೃದ್ಧಿಯ ಮಂತ್ರದ ಜತೆಗೆ ಕಪ್ಪುಹಣ, ಭ್ರಷ್ಟಾಚಾರ ವಿರುದ್ಧ ಭಾಷಣ ಮಾಡಿಕೊಂಡು ಬಂದ ಭಾರತೀಯ ಜನತಾ ಪಕ್ಷ ಚುನಾವಣೆ ಫಲಿತಾಂಶ ಪ್ರಕಟಗೊಂಡು ಒಂದು ವಾರದ ಬಳಿಕ ಮತ್ತೆ ಹಿಂದುತ್ವದ ಶಾಲು ಹೊದ್ದು, ಹಾರ್ಡ್‌ಲೈನ್‌ ಹಿಂದುತ್ವವಾದಿಗೆ ಸಿಎಂ ಪಟ್ಟ ಕಟ್ಟಿರುವುದರ ಹಿಂದೆ ಬಲವಾದ ಸಂದೇಶ ರವಾನಿಸುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಳೆದೊಂದು ದಶಕದ ಬಿಜೆಪಿ ನಡೆ ಗಮನಿಸಿದಾಗ ಆದಿತ್ಯನಾಥ್‌ ಆಯ್ಕೆಯೂ ಬಹಳ ಅಚ್ಚರಿ ಮೂಡಿಸುವಂಥದ್ದೇನು ಅಲ್ಲ. ಗೋರಕ್ಷಣೆ, ಹಿಂದುತ್ವ ಹಾಗೂ ಅನ್ಯಧರ್ಮೀಯರ ವಿರುದ್ಧ ರಾಜಕೀಯ ಪ್ರೇರಿತವಾದ ವಿವಾದಾತ್ಮಕ  ಹೇಳಿಕೆಯಿಂದ ಜನಪ್ರಿಯತೆ ಗಳಿಸಿಕೊಂಡು ಬಂದವರು ಆದಿತ್ಯನಾಥ್‌. 

ಭಾರತೀಯರು ಭಾವನಾತ್ಮಕವಾದ ಒಂದಿಷ್ಟು ಉದ್ವೇಗದ ಮಾತುಗಳಿಗೆ ಬೇಗ ತಮ್ಮನ್ನು ಮಾರಿಕೊಳ್ಳುವುದೂ ಈ ಜನಪ್ರಿಯತೆಗೊಂದು ಕಾರಣ ಇದ್ದಿರಬಹುದು. ಆದರೆ, ಆ ಮೂಲಕ ಜನಪ್ರಿಯತೆ ಗಳಿಸಿಕೊಳ್ಳಬಹುದು ಎನ್ನುವ ಮನಸ್ಥಿತಿ ಇಂದಿನ ರಾಜಕಾರಣದಲ್ಲಿ ಹಾಸುಹೊಕ್ಕಿರುವಂಥದ್ದು. ಹೀಗಾಗಿ ಆದಿತ್ಯನಾಥ್‌ ಅವರಲ್ಲಿನ ಈ ಗುಣ ವಿಶೇಷವೂ ಅಲ್ಲ. ನಿತ್ಯ ಮಠಾಧಿಪತಿಯಂತೇ ಇದ್ದರೂ ರಾಜಕಾರಣದಲ್ಲಿರುವ ಅವರ ವಿಶೇಷ ಆಸಕ್ತಿ ಸಂಘಟನೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿತ್ತು.

ಉತ್ತರಪ್ರದೇಶ ಮತ್ತು ಬಿಹಾರ ಗಡಿಯಲ್ಲಿನ ಗೋರಖನಾಥ ಮಠದ ಮುಖ್ಯಸ್ಥರಾಗಿದ್ದುಕೊಂಡು (2014ರಿಂದ), 2002ರಿಂದ ಹಿಂದೂ ಯುವವಾಹಿನಿ ಸಂಘಟನೆ ಆರಂಭಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆ ನಡೆಸಿದ ಪರಿಣಾಮ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಆಗಾಗ ಅವರು ನೀಡುತ್ತಿದ್ದ ನಿರ್ದಾಕ್ಷಿಣ್ಯ, ನಿಷ್ಠುರ, ಪ್ರಖರವಾದ ಹೇಳಿಕೆಗಳು ಹಿಂದು ಯುವ ಕಾರ್ಯಕರ್ತರನ್ನು ಪ್ರಚೋದಿಸಿದ್ದು ಸುಳ್ಳಲ್ಲ. ಇಂಥ ನಾಯಕತ್ವವನ್ನೇ ಎದುರು ನೋಡುತ್ತಿದ್ದ ಬಿಜೆಪಿ ಉತ್ತರಪ್ರದೇಶದಂಥ ದೊಡ್ಡ ರಾಜ್ಯವನ್ನು ನಿರ್ಲಕ್ಷಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಷ್ಟವಾದೀತು ಎನ್ನುವ ಲೆಕ್ಕಾಚಾರಕ್ಕೆ ಪಂಚರಾಜ್ಯ ಚುನಾವಣೆ ಪ್ರಕಟಗೊಳ್ಳುವುದಕ್ಕೂ ಮೊದಲೇ ಬಂದಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಉತ್ತರಪ್ರದೇಶದ ಜಯಕ್ಕಾಗಿ ಪಣ ತೊಟ್ಟಿದ್ದರು. ‘ಕೋಲು ಮುರಿಯಬಾರದು, ಹಾವೂ ಸಾಯಬಾರದು’ ಎನ್ನುವಂತೆ ಸೂಕ್ಷ್ಮ, ಜಾಣತನದಲ್ಲಿ ಹೆಜ್ಜೆ ಇಟ್ಟಿದ್ದರು. ಅದೇ ಕಾರಣಕ್ಕಾಗಿ ಎಷ್ಟೇ ಒತ್ತಡವಿದ್ದರೂ ಯುಪಿಗೆ ಸಿಎಂ ಅಭ್ಯರ್ಥಿ ಪ್ರಕಟಿಸಿರಲಿಲ್ಲ. ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ರಾಮಮಂದಿರ ನಿರ್ಮಾಣವನ್ನೇ ಅಜೆಂಡಾ ಮಾಡಿಕೊಂಡು ಬಂದಿದ್ದ ಬಿಜೆಪಿ, ರಾಜ್ಯದ ಅಲ್ಪಸಂಖ್ಯಾತರಲ್ಲಿ ಮೂಡಿದ್ದ ಆಡಳಿತ ವಿರೋಧಿ ಅಭಿಪ್ರಾಯದ ಲಾಭವನ್ನೂ ಪಡೆದುಕೊಳ್ಳುವ ಉದ್ದೇಶ ಹೊಂದಿತ್ತು. ಹೀಗಾಗಿ ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಿಯೂ ರಾಮಮಂದಿರದ ಬಗ್ಗೆ ಉಸಿರೆತ್ತಲಿಲ್ಲ. ರಾಮರಥವೂ ಹೊರಟಿರಲಿಲ್ಲ. ಬಿಜೆಪಿ ನಡೆಸಿದ ಬಹುತೇಕ ರ್ಯಾಲಿಗಳಲ್ಲಿ ರಾಮ ಕಾಣಿಸಿಕೊಳ್ಳಲೇ ಇಲ್ಲ. ರಾಮ ಭಕ್ತರು ಇದರಿಂದ ವಿಚಲಿತರಾಗಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಆದಿತ್ಯನಾಥ್‌ ಅವರ ಬಾಯಲ್ಲಿ ಒಮ್ಮೆ ರಾಮಮಂದಿರ ಶತಸಿದ್ಧ ಎಂದು ಹೇಳಿಸಿ ಸುಮ್ಮನಾಯಿತು. ಆದಿತ್ಯನಾಥ್‌ ಕೂಡ ಈ ಹೇಳಿಕೆಯನ್ನು ಸಾಕಷ್ಟು ಮಾರ್ಮಿಕವಾಗಿಯೇ ನೀಡಿ ಸುಮ್ಮನಾಗಿದ್ದರು. ಇವೆಲ್ಲದರ ಜತೆಗೆ ಅನ್ಯ ಧರ್ಮೀಯ ಮತದಾರ ಕೂಡ ಮೋದಿ ಅಲೆಯಿಂದ ಜಾರಿಕೊಳ್ಳದಂತೆ ನೋಡಿಕೊಂಡಿದ್ದೂ ಅಕ್ಷರಶಃ ಸತ್ಯ. ಮೋದಿಯಿಂದ ಯುಪಿ ಅಭಿವೃದ್ಧಿ ಸಾಧ್ಯ ಎನ್ನುವ ಭಾವನೆ ಮೂಡಿಸುತ್ತಿದ್ದ ಬಿಜೆಪಿ ನಾಯಕರ ಅಬ್ಬರದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಿದ್ದ ಆಗಿನ ಸಿಎಂ ಅಖೀಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ, ಮಾಯಾವತಿ ನೇತೃತ್ವದ ಬಿಎಸ್‌ಪಿ ಯಾವುದೇ ತಂತ್ರ ಕೆಲಸ ಮಾಡಲಿಲ್ಲ. ಯಾದವ ಕಲಹವೂ ಬಿಜೆಪಿಯ ಪ್ರಚಂಡ ಗೆಲುವಿಗೆ ಇನ್ನೊಂದು ಕಾರಣವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಬಿಜೆಪಿ ಇದೀಗ ಹಿಂದುತ್ವ ಇಲ್ಲದೇ ಪಕ್ಷ ಇಲ್ಲ ಎನ್ನುವುದನ್ನು ಮತ್ತೂಮ್ಮೆ ಸಾರಿ ಹೇಳಿದೆ. 2019ರ ಲೋಕಸಭಾ ಚುನಾವಣೆಗೆ ತಯಾರಿಯ ಮುನ್ಸೂಚನೆ ನೀಡಿದೆ. ಆದಿತ್ಯನಾಥ್‌ರನ್ನು ಸಿಎಂ ಮಾಡುವ ಬಿಜೆಪಿ ವರಿಷ್ಠರ ನಿರ್ಧಾರದಲ್ಲಿ ತಕ್ಷಣಕ್ಕೆ ಕಾಣುವ ಲೆಕ್ಕಾಚಾರ ಇಷ್ಟೆ.

– ಬಿಜೆಪಿ ಹಿಂದುತ್ವವನ್ನು ಬಿಟ್ಟಿಲ್ಲ. ಹಿಂದುತ್ವವೇ ನಮ್ಮ ಮೂಲ ಮಂತ್ರ ಎನ್ನುವುದನ್ನು ಉಳಿದೆಲ್ಲಾ ಯೋಜನೆಗಳ ನಡುವೆಯೂ ತಿಳಿಸಬೇಕಿತ್ತು. ಅದನ್ನು ಈ ಮೂಲಕ ಜಾಹೀರುಪಡಿಸಿದೆ. (ಪರಿಣಾಮ ಬೇರೆ)

– ಅಖಂಡ ಭಾರತವನ್ನು ಕೇಸರಿಯಾಗಿಸುವ ಕನಸು ಕಾಣುತ್ತಿರುವ ಬಿಜೆಪಿ ಒಂದೊಮ್ಮೆ ಈಗಾಗಲೇ ಕೇಂದ್ರದಲ್ಲಿ ಘೋಷಿಸಲಾಗಿರುವ ಜನಪ್ರಿಯ ಯೋಜನೆಗಳಾದ ಸ್ವಚ್ಛ ಭಾರತ, ಅಪನಗದೀಕರಣದ ಭಾಗವಾಗಿ ಪರಿಚಯಿಸಲಾದ ಕ್ಯಾಶ್‌ಲೆಸ್‌ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ಸೇರಿ ಉಳಿದ ಅಭಿವೃದ್ಧಿ ಯೋಜನೆಗಳು ಒಂದೊಮ್ಮೆ ಯಶಸ್ವಿ ಆಗದೇ ಇದ್ದಲ್ಲಿ ಅಥವಾ ನಿರೀಕ್ಷಿತ ಜನಪ್ರಿಯತೆ ಕಂಡುಕೊಳ್ಳದೇ ಇದ್ದಲ್ಲಿ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಬೇಕಾಗುತ್ತದೆ ಎನ್ನುವ ದೂರಾಲೋಚನೆ ಮಾಡಿದೆ.

– ಉತ್ತರಪ್ರದೇಶದಂಥ ಸೂಕ್ಷ್ಮರಾಜ್ಯದಲ್ಲಿ ರಾಮಮಂದಿರ ವಿಚಾರವಾಗಿ ನೀಡಲಾದ ಮಾತು ಉಳಿಸಿಕೊಳ್ಳುವ ಅಗತ್ಯ ಬಿಜೆಪಿಗಿದೆ. ಇದಕ್ಕೆ ಈಗಲೇ ಅಡಿಪಾಯ ಹಾಕಿಕೊಳ್ಳುವುದಕ್ಕೆ ಮಹತ್ವ ನೀಡಬೇಕಾದ ಅನಿವಾರ್ಯತೆಯೂ ಇದೆ. ಹಾಗಿರುವಾಗ ಅದಕ್ಕೆ ಸೂಕ್ತ ಅಭ್ಯರ್ಥಿ ಆದಿತ್ಯನಾಥ್‌ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.

– ಆದಿತ್ಯನಾಥ್‌ ಕೇವಲ ಫಯರ್‌ಬ್ರಾಂಡ್‌ ಹಿಂದುತ್ವವಾದಿ ಅಲ್ಲ. ತಮ್ಮದೇ ಆದ ಸಂಘಟನೆಗಳ ಹೋರಾಟದ ಮೂಲಕ ಭ್ರಷ್ಟಾಚಾರ, ಮಾಫಿಯಾಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಒಲವು ಹೊಂದಿದ್ದಾರೆ ಎನ್ನುವುದನ್ನು ಪ್ರತಿಬಿಂಬಿಸುವ ಉದ್ದೇಶ ಮೋದಿ – ಅಮಿತ್‌ ಶಾ ಅವರದ್ದಾಗಿರಲಿಕ್ಕೆ ಸಾಕು. ಈಗಾಗಲೇ ಯುಪಿ ವಿಚಾರದಲ್ಲಿ ಮೋದಿ ಪ್ರಕಟಿಸಿರುವ ‘ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌’ ಅಭಿವೃದ್ಧಿ ಯೋಜನೆ ಆದಿತ್ಯನಾಥ್‌ರಿಂದ ಸಾಧ್ಯ ಎನ್ನುವ ಲೆಕ್ಕಾಚಾರವೂ ಇರಬಹುದು. 

– 403 ವಿಧಾನಸಭಾ ಕ್ಷೇತ್ರಗಳ ಪೈಕಿ ಜೀರ್ಣಿಸಿಕೊಳ್ಳಲಾಗದ ರೀತಿ 312ರಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಲಿದೆ. 80 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲೂ ಪ್ರಚಂಡ ಗೆಲುವಿಗೆ ಈಗಲೇ ಅಣಿಯಾಗಲು ಹೆಜ್ಜೆ ಇಟ್ಟಿದೆ.

– ಆರ್‌ಎಸ್‌ಎಸ್‌ ಮನೋಜ್‌ ಸಿನ್ಹಾ ಅವರನ್ನು ಸಿಎಂ ಮಾಡುವ ಒಲವು ಹೊಂದಿದ್ದರೂ, ಅಂತಿಮ ವೇಳೆಯಲ್ಲಿ ಯೋಗಿ ಆದಿತ್ಯನಾಥ್‌ ಬೆಂಬಲಿಗರ ಒಲವು ನೋಡಿ ಸುಮ್ಮನಾಗಿರಬೇಕು ಅಥವಾ ಯೋಗಿ ಯೋಗದ ಕಡೆಯೇ ಒಲವು ತೋರಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಿನ್ಹಾಗಿಂತ ಯೋಗಿ ಜನಪ್ರಿಯರಾಗಿ ಗುರುತಿಸಿಕೊಂಡಿದ್ದು ಗೊತ್ತಿರುವ ವಿಚಾರವೇ ಆಗಿದೆ.

ಇಷ್ಟಾಗಿಯೂ ಬಿಜೆಪಿಗೆ ಆದಿತ್ಯನಾಥ್‌ ಅವರ ಮೇಲೆ ಒಂದು ಭಯ ಇದ್ದೇ ಇದೆ. ಎಲ್ಲಿ ವಿವಾದಾತ್ಮಕ ಹೇಳಿಕೆಗಳಿಂದ ಮುಜುಗರಕ್ಕೆ ಕಾರಣವಾಗಬಹುದೋ ಎನ್ನುವುದು. ಹೀಗಾಗಿಯೇ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವಂತೆ ಕಾಣಿಸುತ್ತಿದೆ. ಒಟ್ಟಾರೆ ಬಾಬ್ರಿ ಮಸೀದಿ ವಿವಾದ, ಅಯೋಧ್ಯಾ ರಾಮಜನ್ಮಭೂಮಿ/ಮಂದಿರ ವಿವಾದಗಳ ಹಿಂದಿರುವ ಬಿಜೆಪಿಯ ಅನೇಕ ನಾಯಕರಿಗೆ ಉತ್ತರಪ್ರದೇಶ ಎಷ್ಟು ಪ್ರತಿಷ್ಠೆಯ ಕಣವಾಗಿತ್ತೋ ಅದೇ ರೀತಿ ಅಲ್ಪಸಂಖ್ಯಾತ ವರ್ಗದ ಬೆಂಬಲ ಪಡೆದು ಇದೀಗ ಐತಿಹಾಸಿಕ ಜಯವೊಂದಕ್ಕೆ ಕಾರಣವಾಗಿರುವ ಅಲ್ಲಿಯ ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಕೆಲಸಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್‌ ಹಿಂದುತ್ವವನ್ನೂ ಮೀರಿ ಜನಹಿತಕ್ಕಾಗಿ  ಪ್ರಧಾನಿ ಮೋದಿ ಆಶಯದಂತೆ ಸೇವಕನಾಗಿ ಕಾರ್ಯನಿರ್ವಹಿಸಬೇಕಿದೆ. ಸ್ವಲ್ಪ ಎಡವಿದರೂ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷದ ನಾಯಕರಂತೆ ಜನಮನ್ನಣೆ ಕಳೆದುಕೊಂಡು ಧೂಳಿಪಟ ಆಗುವುದರಲ್ಲಿ ಅನುಮಾನವಿಲ್ಲ.

– ಜಿಎಸ್‌ಬಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.