“ಮೃತ’ ಭಾಷೆಯಿಂದ “ಅಮೃತ’ ಭಾಷೆ ಪಟ್ಟದತ್ತ ಸಂಸ್ಕೃತ


Team Udayavani, Jan 5, 2017, 3:45 AM IST

matru-bashe.jpg

ಉಡುಪಿ: ಈ ಮುಂದಿನ ಹೇಳಿಕೆ ಸಂಸ್ಕೃತ ಕಲಿಕೆ ಕಡ್ಡಾಯವಿರುವ ಲಂಡನ್‌ನ ಪ್ರತಿಷ್ಠಿತ ಸೈಂಟ್‌ ಜಾನ್ಸ್‌ ಇಂಡಿಪೆಂಡೆಂಟ್‌ ಸ್ಕೂಲ್‌ನ ಕೈಪಿಡಿಯದು: Sanskrit is a perfect tool for the awakening of young minds to the universality of human thought and depth of self-expression which will help prepare them for the challenges of an increasingly global society.

ಭಾರತದ ಕೆಲವೇ ಜನರಲ್ಲಿರುವ ಸಂಸ್ಕೃತ ಯುನೈಟೆಡ್‌ ಕಿಂಗ್‌ಡಮ್‌ನ ಶಾಲೆ, ವಿ.ವಿ.ಗಳಲ್ಲಿ ಆಸಕ್ತಿ ಕೆರಳಿಸಿವೆ. ಲಂಡನ್‌ನ ಸೈಂಟ್‌ ಜೇಮ್ಸ್‌ ಜೂನಿಯರ್‌ ಶಾಲೆಯಲ್ಲಿ ಬಹುತೇಕ ಮಕ್ಕಳು ಸಂಸ್ಕೃತ ಓದಲು ತುದಿಗಾಲಲ್ಲಿ ನಿಂತಿದ್ದಾರೆ. 1975ರಲ್ಲಿ ಆರಂಭವಾದ ಈ ಹವೆ ಈಗ ಆಂದೋಲನ ರೂಪದಲ್ಲಿದೆ. “It gives them brilliant linguistic training” ಎಂದು ಸಂಸ್ಕೃತ ವಿಭಾಗ ಮುಖ್ಯಸ್ಥ ವಾರ್‌ವಿಕ್‌ ಜೆಸಾಪ್‌ ಹೇಳಿರುವುದನ್ನು ಎನ್‌ಡಿಟಿವಿ ಕಾಮ್‌ ವರದಿ ಮಾಡಿದೆ. ಸೈಂಟ್‌ ಜೇಮ್ಸ್‌ ಶಾಲೆ ಸಂಸ್ಕೃತ ಭಾಷೆಗಾಗಿ ಆಂದೋಲನವನ್ನೇ ಆರಂಭಿಸಿದೆ. ಅಮೆರಿಕದಲ್ಲಿ ವಿದೇಶೀ ಭಾಷೆ ಕಲಿಯಲು ಅವಕಾಶವಿದ್ದು, ಭಾರತದ ಸಂಸ್ಕೃತ ಭಾರತೀ ಸಂಘಟನೆ “ಸ್ಯಾಂಸ್ಕೃತ್‌ ಆ್ಯಸ್‌ ಫಾರಿನ್‌ ಲ್ಯಾಂಗ್ವೇಜ್‌’ ಪ್ರಕಲ್ಪ ಆರಂಭಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಲಂಡನ್‌ನ ಎಸ್‌ಒಎಎಸ್‌ ವಿ.ವಿ. ಸಂಜೆಯ ಸಂಸ್ಕೃತ ಕೋರ್ಸ್‌ ನಡೆಸುತ್ತಿದ್ದು, 2017ಕ್ಕೆ ಅಂತರ್ಜಾಲದಲ್ಲಿ ಅರ್ಜಿ ಆಹ್ವಾನಿಸಿದೆ. 

ಕಲಿಕೆಯಲ್ಲಿ ಎಷ್ಟೋ ಭಾಷೆಗಳಲ್ಲಿ ಬರವಣಿಗೆ ಸಾಧ್ಯವಿಲ್ಲದಿದ್ದರೂ ಮಾತನಾಡುವವರು ಇರುವುದರಿಂದಲೇ ಅದು ಜೀವಂತವೆನಿಸಿದೆ. ಸಂಸ್ಕೃತದ ವಿಷಯಗಳನ್ನು ಮಾತ್ರ ಕಲಿಸುವ 15 ವಿ.ವಿ.ಗಳು, ಶೃಂಗೇರಿ, ಜಮ್ಮು ಮೊದಲಾದೆಡೆ ಬಹು ಕ್ಯಾಂಪಸ್‌ ಇರುವ ಡೀಮ್ಡ್ ವಿ.ವಿ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೇಶದಲ್ಲಿ 120 ವಿ.ವಿ., ಸಾವಿರಾರು ಶಾಲೆ, ಕಾಲೇಜು, ಜರ್ಮನ್‌, ಫ್ರಾನ್ಸ್‌, ರಶ್ಯಾ, ಅಮೆರಿಕ ಮೊದಲಾದ ವಿದೇಶಗಳ 254 ವಿ.ವಿ.ಗಳಲ್ಲಿ ಸಂಸ್ಕೃತ ವಿಭಾಗ, ದೇಶದಲ್ಲಿ ಒಟ್ಟು 8 ಕೋಟಿ ವಿದ್ಯಾರ್ಥಿಗಳು ಸಂಸ್ಕೃತ ಓದುವವರಿದ್ದರೂ ಮಾತನಾಡುವವರಿಲ್ಲದ ಕಾರಣ “ಮೃತ ಭಾಷೆ’ ಪಟ್ಟ ಕಟ್ಟಿಕೊಂಡ ಸಂಸ್ಕೃತಕ್ಕೆ ಮಾತನಾಡುವವರನ್ನು ಕಟ್ಟಿ “ಅಮೃತ ಭಾಷೆ’ ಪಟ್ಟ ಕೊಡಲು ಸಂಸ್ಕೃತ ಭಾರತೀ ಅಣಿಯಾಗಿದೆ. 1981ರಲ್ಲಿ ಹಿಂದೂ ಸೇವಾ ಪ್ರತಿಷ್ಠಾನ ಜನ್ಮತಳೆದು ಅದರ ಒಂದು ಅಂಗವಾಗಿ ಸಂಸ್ಕೃತ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಪ್ರತಿಷ್ಠಾನದ ಈ ವಿಭಾಗವೇ 1995ರಲ್ಲಿ ಸಂಸ್ಕೃತ ಭಾರತಿಯಾಗಿ ಸ್ಥಾಪನೆಗೊಂಡಿತು. ಪ್ರತಿಷ್ಠಾನದ ಆರಂಭದಿಂದ ಈವರೆಗೂ ಗೌರವಾಧ್ಯಕ್ಷರಾಗಿರುವ ಪೇಜಾವರ ಶ್ರೀ ಪರ್ಯಾಯದಲ್ಲಿ ಅ. ಭಾರತ ಸಂಸ್ಕೃತ ಅಧಿವೇಶನ ರಾಜಾಂಗಣದಲ್ಲಿ ಸಂಪನ್ನಗೊಳ್ಳುತ್ತಿದೆ. 

ಅಂಚೆ ಮೂಲಕ ಸಂಸ್ಕೃತ
ಸಂಸ್ಕೃತ ಭಾರತೀ ಅಂಚೆ ಮೂಲಕ ಸಂಸ್ಕೃತವನ್ನು ತೆಲುಗು, ಕನ್ನಡ, ತಮಿಳು, ಗುಜರಾತಿ, ಮರಾಠಿ, ಹಿಂದಿ, ಅಸ್ಸಾಮಿ, ಒಡಿಯ, ಬಂಗಾಲಿ, ಮಲಯಾಳ, ಇಂಗ್ಲಿಷ್‌ ಈ 11 ಭಾಷೆಗಳಲ್ಲಿ ಕಲಿಸುತ್ತಿದೆ. ಮಾಸ ಪತ್ರಿಕೆ ‘ಸಂಭಾಷಣಾ ಸಂದೇಶ’ಕ್ಕೆ 14 ದೇಶಗಳಲ್ಲಿ ಲಕ್ಷ ಚಂದಾದಾರರಿದ್ದಾರೆ. ಸಂಸ್ಕೃತ ಭಾರತಿಯನ್ನು ಕಟ್ಟಿ ಬೆಳೆಸಿದ ಎಚ್‌.ಆರ್‌. ವಿಶ್ವಾಸ್‌, ಜನಾರ್ದನ ಹೆಗಡೆ, ಚ.ಮೂ. ಕೃಷ್ಣಶಾಸ್ತ್ರಿಯಂತಹ ವಿದ್ವಾಂಸರು ವೃತ್ತಿ ಜೀವನದಲ್ಲಿದ್ದರೆ ವಿ.ವಿ. ಕುಲಪತಿ ವರೆಗೆ ಹೋಗುವ ಸಾಮರ್ಥ್ಯ ಹೊಂದಿದವರು. ಸಂಸ್ಕೃತ ಭಾರತೀ ಯುವಕರು, ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಹೀಗೆ ವಿವಿಧ ವಯೋಮಾನದವರು ಸಂಸ್ಕೃತದಲ್ಲಿ ಮಾತನಾಡುವಂತೆ ಮಾಡುತ್ತಿದೆ. ಇಂತಹ 1.35 ಲಕ್ಷ ಶಿಬಿರಗಳ ಮೂಲಕ 95 ಲಕ್ಷ ಜನರಿಗೆ ಸಂಸ್ಕೃತದಲ್ಲಿ ಮಾತನಾಡಲು ಕಲಿಸಿದೆ. 20,000 ಸ್ಥಳೀಯ ಕಾರ್ಯಕರ್ತರ ಪಡೆ ಇದೆ. 

ಅಸಾಮಾನ್ಯರವರೆಗೆ
ಸಂಸ್ಕೃತ ಸಮ್ಮೇಳನದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತ ಒಂದು ಸ್ಥಾನದಿಂದ ಒಬ್ಬರೇ ಎಂಬ ನಿಯಮದಂತೆ 2,000 ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ 100 ಮಂದಿ ಈಶಾನ್ಯ ಭಾರತದಿಂದ, ಒಟ್ಟು 600 ಮಹಿಳಾ ಕಾರ್ಯಕರ್ತರು ಬರುತ್ತಿದ್ದಾರೆ. ಅಗತ್ಯವುಳ್ಳ ಮಹಿಳಾ ಕಾರ್ಯಕರ್ತರನ್ನು ಶ್ರೀಕೃಷ್ಣ ಮಠದ ಆಸುಪಾಸಿನ ಮನೆಗಳಲ್ಲಿ ಉಳಿಸಿಕೊಳ್ಳುತ್ತಿರುವುದು, ಸಂಸ್ಕೃತ ಭಾರತೀ ಕಾರ್ಯಾಲಯಕ್ಕಾಗಿ ಉಡುಪಿ ನಗರದಲ್ಲಿರುವ ಉದ್ಯಾವರದ ವಿಠಲ ಕಾಮತ್‌ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿರುವುದು, ಮೂರು ವಿ.ವಿ.ಗಳಲ್ಲಿ ಕುಲಪತಿಯಾಗಿದ್ದು, ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಕೃತ ಅಧ್ಯಯನ ಸಂಸ್ಥೆ  ಮುಖ್ಯಸ್ಥ ಡಾ| ಕುಟುಂಬ ಶಾಸ್ತ್ರಿ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಜಮ್ಮು ಕ್ಯಾಂಪಸ್‌ ಪ್ರಾಂಶುಪಾಲರಾಗಿದ್ದ, ಜೀವನವಿಡೀ ಸ್ವಯಂಪಾಕ ವ್ರತ ನಡೆಸುತ್ತಿರುವ (ಸ್ವತಃ ಅಡುಗೆ ಮಾಡಿ ಊಟ ಮಾಡುವ) ಡಾ| ರಾಮಾನುಜ ದೇವನಾಥನ್‌, ಸಾಹಿತಿ ಚೆನ್ನೈನ ಜೋ ಡಿ’ಕ್ರೂಸ್‌, ಸಿಬಿಎಸ್‌ಇ ಅಧ್ಯಕ್ಷರು, ಇಸ್ರೋ ಅಧ್ಯಕ್ಷರು, ರಾಷ್ಟ್ರೀಯ ಪಾಂಡುಲಿಪಿ ಮಿಶನ್‌ ನಿರ್ದೇಶಕರಂತಹ ವಿವಿಧ ಕ್ಷೇತ್ರಗಳ ಹಿರಿಯರು ಪಾಲ್ಗೊಳ್ಳುತ್ತಿರುವುದು ವಿಶೇಷ ಘಟನೆಗಳಾಗಲಿವೆ. ಜ. 5 ಸಂಜೆ 5.30ಕ್ಕೆ ಅಪೂರ್ವ ಪ್ರದರ್ಶಿನಿ, ಜ. 6 ಬೆಳಗ್ಗೆ 10ಕ್ಕೆ ಅಧಿವೇಶನದ ಉದ್ಘಾಟನೆ ನಡೆಯಲಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಜ. 8ರ ವರೆಗೆ ಬೆಳಗ್ಗೆ 8.30ರಿಂದ ರಾತ್ರಿ 8.30 ರವರೆಗೆ ಭೇಟಿ ನೀಡಬಹುದು. 

ದೇಶ ವಿದೇಶಗಳಲ್ಲಿ
ಸಂಸ್ಕೃತ ಭಾರತೀ ಈಗ ಎಲ್ಲ ರಾಜ್ಯಗಳು, 549 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 114 ಪೂರ್ಣಕಾಲೀನ ಕಾರ್ಯಕರ್ತರನ್ನು ಹೊಂದಿದ ಸಂಸ್ಥೆಯ ಚಟುವಟಿಕೆ ದೇಶದ 4,612 ಕಡೆಗಳಲ್ಲಿ ನಡೆಯುತ್ತಿದೆ. ಅಮೆರಿಕ, ಕೆನಡ, ಇಸ್ರೇಲ್‌, ಕೆರೆಬಿಯನ್‌, ಗಯಾನ, ಟ್ರಿನಿಡಾಡ್‌, ಮಾರಿಷಸ್‌, ಆಸ್ಟ್ರೇಲಿಯ, ನ್ಯೂಜಿಲಂಡ್‌, ಕೊಲ್ಲಿ ರಾಷ್ಟ್ರ ಹೀಗೆ 39 ದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳು ನಡೆದಿವೆ. ದುಬೈ ಮೊದಲಾದ 13 ದೇಶಗಳಲ್ಲಿ ನಿರಂತರ ಶಿಬಿರಗಳು ನಡೆಯುತ್ತಿವೆಯಲ್ಲದೆ ಪೂರ್ಣಾವಧಿ ಕಾರ್ಯಕರ್ತರು ಮೂಡಿಬಂದಿದ್ದಾರೆ. ಅಮೆರಿಕದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ನ್ಯೂಜೆರ್ಸಿ, ವಾಷಿಂಗ್ಟನ್‌, ಕ್ಯಾಲಿಫೋರ್ನಿಯ, ಲಾಸ್‌ಏಂಜಲೀಸ್‌ ಮೊದಲಾದೆಡೆ ವಾರಾಂತ್ಯ ಶಿಬಿರಗಳು ನಡೆಯುತ್ತಿವೆ. ಇದಕ್ಕೆ ಟೆಕ್ಕಿಗಳು, ಮಕ್ಕಳು, ಮಹಿಳೆಯರು ಬರುತ್ತಿದ್ದಾರೆ. ಕ್ರಿಸ್ಮಸ್‌, ಆಗಸ್ಟ್‌ ರಜೆಗಳಲ್ಲಿ ಶಿಬಿರಗಳು ನಡೆಯುತ್ತಿವೆ.

ಟಾಪ್ ನ್ಯೂಸ್

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

sand

Karkala: ಪರವಾನಿಗೆ ಇಲ್ಲದೆ ಮರಳು ಲೂಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Man enters church and chants Jai Shri Ram in Meghalaya: Case registered

Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್‌ ಘೋಷಣೆ: ಕೇಸು ದಾಖಲು

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.