ನೋಟು ನಿಷೇಧ ವಿರೋಧಿಸಿದರೆ ದೇಶದ್ರೋಹದ ಆಪಾದನೆ: ಬೊಳುವಾರು ವ್ಯಂಗ್ಯ
Team Udayavani, Jan 13, 2017, 3:45 AM IST
ಉಡುಪಿ: ನೋಟು ನಿಷೇಧವನ್ನು ವಿರೋಧಿಸಿದರೆ ದೇಶದ್ರೋಹದ ಆಪಾದನೆಯನ್ನೂ ಎದುರಿಸಬೇಕಾದ ಸಂದಿಗ್ಧತೆ ಇದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್ ಕುಂಞಿ ವ್ಯಂಗ್ಯವಾಡಿದರು.ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಡಾ| ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಅಕಾಡೆಮಿ, ಮಣಿಪಾಲ ವಿ.ವಿ. ಹಾಗೂ ರಥಬೀದಿ ಗೆಳೆಯರ ವತಿಯಿಂದ ಗುರುವಾರ ನಡೆದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತ ಇರುವ ಎಲ್ಲರನ್ನು ಪ್ರೀತಿಸಲು ಕಲಿಯಿರಿ. ಈ ಜಗತ್ತೇ ನಮ್ಮ ಮಾತೃಭೂಮಿಯೆಂದು ತಿಳಿಯಿರಿ. ಮಾತೃಭೂಮಿ ಎಂದರೆ ಕೇವಲ ದೇಶ ಮಾತ್ರವಲ್ಲ. ತಾಲೂಕು, ಜಿಲ್ಲೆ, ರಾಜ್ಯ ಎಲ್ಲವೂ ನಮ್ಮ ಮಾತೃಭೂಮಿಯೇ. ಪ್ರೀತಿಯೊಂದಿದ್ದರೆ ಬೇರೆ ಎಲ್ಲವೂ ಸಿಗುತ್ತವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮಹಮ್ಮದ್ ಕುಂಞಿß ಹೇಳಿದರು.
ಇದು ನನ್ನೂರು: ನಾನು ಪುತ್ತೂರಿನ ಬೊಳುವಾರಿನವನಾದರೂ ನನಗೆ ಬದುಕು ಕಟ್ಟಿಕೊಟ್ಟ ಊರು ಉಡುಪಿ. ಇದು ನನ್ನೂರು. ಈ ಊರಲ್ಲಿ ನನಗೆ ಸಾಕಷ್ಟು ಮಹನೀಯರು ನೆರವಾಗಿದ್ದಾರೆ. ಅವರಲ್ಲಿ ಕೆ.ಕೆ. ಪೈ, ಕು.ಶಿ. ಹರಿದಾಸ ಭಟ್, ಬನ್ನಂಜೆ ಗೋವಿಂದಾಚಾರ್ಯ ಹಾಗೂ ಮುರಾರಿ ಬಲ್ಲಾಳ್ ಪ್ರಮುಖರು. ನನಗೆ ಎರಡು ಆಸೆಗಳಿವೆ.
ಕಾರಂತರಂತೆ ಬದುಕ ಬೇಕು ಹಾಗೂ ಕುವೆಂಪು ಅವರಂತೆ ಬರೆಯಬೇಕು. ಅವರಷ್ಟು ಅಲ್ಲದಿದ್ದರೂ ಅವರು ಬರೆದಷ್ಟು ದಪ್ಪದ ಪುಸ್ತಕವನ್ನಾದರೂ ಬರೆಯಬೇಕು ಎಂದು ಬರೆದಿದ್ದೇನೆ ಎಂದರು.
ಮುಗ್ಧತೆಯಿಂದಲೇ ಸ್ವಾತಂತ್ರ್ಯದ ಓಟ: ಬೊಳುವಾರು ಅವರ ಬರವಣಿಗೆಯಲ್ಲಿ ಸೃಷ್ಟಿಶೀಲತೆ, ಲೋಕ ಸರಿ ಇರಬೇಕು
ಅನ್ನುವ ಮನೋಧರ್ಮ ಅವರದು. ಅವರ ಸ್ವಾತಂತ್ರ್ಯದ ಓಟ ಪುಸ್ತಕ ಬಿಡುಗಡೆ ಸಂದರ್ಭ ಪರಸ್ಪರ ವಿರುದ್ಧ ಆಲೋಚನೆ ಗಳನ್ನು ಹೊಂದಿದ್ದ ಎಸ್.ಎಲ್. ಭೈರಪ್ಪ ಹಾಗೂ ಯು.ಆರ್. ಅನಂತಮೂರ್ತಿ ಅವರನ್ನು ಒಂದೇ ವೇದಿಕೆಯಲ್ಲಿ ತರಲು ಬಯಸಿದ್ದರು. ಅವರೋರ್ವ ಮುಗ್ಧ ಬರೆಹಗಾರರು.
ಅಂತಹ ಮುಗ್ಧತೆಯಿಂದಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ “ಸ್ವಾತಂತ್ರ್ಯದ ಓಟ’ ಅನ್ನುವ ಮಹಾನ್ ಕಾದಂಬರಿ ಹುಟ್ಟಿದ್ದು ಎಂದು ಲೇಖಕ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಕಾರ್ಯಕ್ರಮದಲ್ಲಿ ಬೊಳುವಾರು ಅವರ ಸಹೋದರ, ಮಕ್ಕಳ ನಾಟಕ ನಿರ್ದೇಶಕ ಐ.ಕೆ. ಬೋಳುವಾರು ಉಪಸ್ಥಿತರಿದ್ದರು. ಬೊಳುವಾರು ಅವರ ಬಗ್ಗೆ ಸಾಹಿತಿ, ಡಾ| ಟಿ.ಎಂ.ಎ. ಪೈ ಭಾರತೀಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ವೈದೇಹಿ, ರಥಬೀದಿ ಗೆಳೆಯರ ಬಳಗದ ಅಧ್ಯಕ್ಷ ಮುರಳೀಧರ ಉಪಾಧ್ಯಾಯ ಅವರು ಬೊಳುವಾರು ಮಹಮ್ಮದ್ ಕುಂಞಿ ಅವರ ಬಗ್ಗೆ ಮಾತನಾಡಿದರು.
ಮಣಿಪಾಲ ವಿ.ವಿ.ಯ ಗಾಂಧಿ ಅಧ್ಯಯನ ಕೇಂದ್ರದ ವರದೇಶ್ ಹಿರೇಗಂಗೆ ಸ್ವಾಗತಿಸಿದರು. ಜಿ.ಪಿ. ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.
ಇದೆಂಥಾ ದೇಶಪ್ರೇಮ?
ಎಟಿಎಂನಲ್ಲಿ ದುಡ್ಡು ಬಂದರೆ ಖುಷಿ ಜತೆಗೆ ಬೇಸರ ಎರಡೂ ಆಗುವ ಸಂದಿಗ್ಧ ಕಾಲಘಟ್ಟದಲ್ಲಿ ಇದ್ದೇವೆ. ದುಡ್ಡು ಬಂತು ಅನ್ನುವ ಖುಷಿ, ಚಿಲ್ಲರೆ ಹೇಗೆ ಮಾಡುವುದು ಅನ್ನುವ ಬೇಸರ. ಬ್ಯಾಂಕ್, ಎಟಿಎಂ ಮುಂದೆ ಹಣಕ್ಕಾಗಿ ಸಾಲು ನಿಂತವರನ್ನು ಹಗಲು-ರಾತ್ರಿಯೆನ್ನದೆ ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹೋಲಿಸುವುದು ಎಂದರೆ ಇದೆಂಥಾ ದೇಶಪ್ರೇಮ ಅನ್ನುವುದನ್ನು ಬೊಳುವಾರು ಮಹಮ್ಮದ್ ಕುಂಞಿ ಮಾರ್ಮಿಕವಾಗಿ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.