ವಿಶ್ವದ ಅತೀ ದೊಡ್ಡ ವಯೋಲಿನ್ ವಾದಕ ಕುಟುಂಬ
Team Udayavani, Jun 15, 2017, 2:49 PM IST
ಮಂಗಳೂರು: ಈ ಎನ್‌ಆರ್‌ಐ ಕುಟುಂಬದ ಹನ್ನೊಂದು ಮಂದಿಯೂ ವಯೋಲಿನ್ ವಾದನದಲ್ಲಿ ಪಳಗಿದವರು. ಅಷ್ಟೇ ಅಲ್ಲ ಇದು ವಿಶ್ವದ ಅತೀ ದೊಡ್ಡ ವಯೋಲಿನ್ ವಾದಕ ಕುಟುಂಬವೂ ಹೌದು. ಅಷ್ಟಕ್ಕೂ ಇವರು ಮಂಗಳೂರು ಮೂಲದವರು ಎಂಬುದು ವಿಶೇಷ.
ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿ ರುವ ಮೂಲತಃ ಮಂಗಳೂರಿನ ಕುಲಶೇಖರದವರಾದ ಹೃದ್ರೋಗ ತಜ್ಞ ಡಾ| ಜೆರಾರ್ಡ್ ಅಬ್ರಿಯೊ ಅವರ ಕುಟುಂಬ ವಯೋಲಿನ್ ವಾದನದಲ್ಲಿ ತೊಡಗಿಸಿಕೊಂಡವರು. ಜೆರಾಲ್ಡ್ ಅವರ ಪತ್ನಿ ನಿಕೋಲ್ ವಯೋಲಿನ್ ವಾದಕಿಯಾಗಿದ್ದರೆ, ಒಂಬತ್ತು ಮಕ್ಕಳು ಕೂಡ ವಯೋಲಿನ್ ವಾದನ ಕಲಿತು ನುಡಿಸುತ್ತಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನ ಹಾಮ್ಸ್ ಮಾರ್ಟ್ ಮಳಿಗೆಯಲ್ಲಿ ಬುಧವಾರ ಈ ಮಕ್ಕಳು ವಯೋಲಿನ್ ನುಡಿಸಿದರು.
ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗನುಗುಣ ವಾಗಿ ಮಕ್ಕಳು ವಯೋಲಿನ್ ತಂತಿಗಳ ಮೂಲಕ ಸಂಗೀತ ನುಡಿಸಿದರು. ಅಬ್ರಿಯೋ ಅವರ ಪ್ರಥಮ ಪುತ್ರ, 18ರ ಹರೆಯದ ಮೈಕಲ್, 17ರ ಹರೆಯದ ಡೇನಿಯಲ್, 15ರ ಹರೆಯದ ಕ್ರಿಸ್ತೀನಾ, 13ರ ಹರೆಯದ ಮರಿಯಾ, 11ರ ಹರೆಯದ ಜೇನ್, 9ರ ಹರೆಯದ ರಾಚೆಲ್, ಏಳರ ಹರೆಯದ ಜಾನ್, 5ರ ಹರೆಯದ ಲೂಕ್ ವಾಯ್ಲಿನ್ ಬಾರಿಸುತ್ತಾರೆ. ಇನ್ನು 3ರ ಹರೆಯದ ಜೋಸೆಫ್ ಕೂಡ ಇದೇ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವಯೋಲಿನ್ ಕಲಿಕೆ ಆರಂಭಿಸಿದ್ದಾರೆ.
ತಾಯಿಯೇ ಸಂಗೀತ ಗುರು!
ಮಕ್ಕಳಿಗೆ ತಾಯಿ ನಿಕೋಲ್ ಅವರೇ ಸಂಗೀತ ಗುರು. ಮೂರು ವರ್ಷ ತುಂಬುತ್ತಲೇ ಮಕ್ಕಳಿಗೆ ನಿಕೋಲ್ ವಯೋಲಿನ್ ಬಾರಿಸುವ ತರಬೇತಿ ಆರಂಭಿಸಿದ್ದಾರೆ. ಏಳನೇ ತರಗತಿಯ ಬಳಿಕ ಸಂಗೀತ ತರಗತಿಯ ಮೂಲಕ ತರಬೇತಿ ಕೊಡಿಸಲಾಗುತ್ತದೆ. ಮಕ್ಕಳು ಪಿಯಾನೊ ಕೂಡ ಬಾರಿಸುತ್ತಾರೆ ಎನ್ನುತ್ತಾರೆ ಡಾ| ಜೆರಾರ್ಡ್. ನಿಕೋಲ್ ಅಬ್ರಿಯೋ ಅವರ ಸಂಬಂಧಿ ಫ್ರಾಕ್ ಲೋಬೋ ಅವರು ಕಳೆದ 60 ವರ್ಷಗಳಿಂದ ವಯೋಲಿನ್‌ವಾದಕರಾಗಿ ಖ್ಯಾತರಾಗಿದ್ದಾರೆ. ಆರಂಭದಲ್ಲಿ ಅವರಿಂದಲೇ ನಿಕೋಲ್ ವಯೋಲಿನ್ ವಾದನ ಕಲಿತಿದ್ದರಲ್ಲದೇ, ನಿಕೋಲ್ ಅವರ ತಂದೆ ಜೆರಾಲ್ಡ್ ಲೋಬೋ ಸಂಗೀತಗಾರರಾಗಿದ್ದರಿಂದ ಕಲಿಕೆ ಸುಲಭವಾಯಿತು ಎನ್ನುತ್ತಾರೆ.
ಇಂದು ಬಜ್ಜೋಡಿ ವೃದ್ಧಾಶ್ರಮದಲ್ಲಿ ಸಂಗೀತ
ಡಾ| ಜೆರಾರ್ಡ್ ಅವರ ಕುಟುಂಬಿಕರು ಮಂಗಳೂರಿನಲ್ಲೇ ನೆಲೆಸಿರುವು ದರಿಂದ ಎರಡು ವರ್ಷಗಳಿಗೊಮ್ಮೆ ಪತ್ನಿ ಹಾಗೂ ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸುತ್ತಾರೆ. ಹೀಗೆ ಬರುವಾಗ ನಗರದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಂಗೀತ ಕಛೇರಿ ಏರ್ಪಡಿಸುತ್ತಾರೆ.
ಡಾ| ಜೆರಾರ್ಡ್ ಅಬ್ರಿಯೊ ಅವರ ಮಕ್ಕಳಿಂದ ನಂತೂರು ಸಮೀಪದ ಬಜೊjàಡಿಯ ಲಿಟಲ್ ಸಿಸ್ಟರ್ಸ್ ಆಫ್ ದಿ ಪುವರ್- ವೃದ್ಧಾಶ್ರಮದಲ್ಲಿ ಜೂ. 15ರಂದು ಸಂಜೆ 3.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.