ಚಂಪಾಯಣ


Team Udayavani, Oct 1, 2017, 6:25 AM IST

Champa4.jpg

ಮೈಸೂರಿನಲ್ಲಿ ನಡೆಯಲಿರುವ ಎಂಬತ್ತಮೂರನೆಯ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಪಾಟೀಲ (ಚಂಪಾ) ಮೊನ್ನೆ ಮಾತಿಗೆ ಸಿಕ್ಕಿದರು !

ಅಗೋ ಆ ಕಡೆ ಕಡೆ ನೋಡ್ರಿ…’ ಎಂದರು. ನೋಡಿದೆ. “ಅದು ಧಾರವಾಡದ ಅಗದೀ ಫೇಮಸ್‌ ಜೈಲು’ ಅಂದರು. ನಾನು ಇನ್ನೂ ಯಾವ ಭಾವಭಂಗಿಗೂ ಹೊರಳಿರಲಿಲ್ಲ ಆಗಲೇ, “ಇಗೋ ಈ ಕಡೆ ನೋಡ್ರಿ…’ ಎಂದರು. ನೋಡಿದೆ. “ಅದು ಮತ್ತೂ ಫೇಮಸ್‌ ಜಾಗ ಧಾರವಾಡದ ಹುಚ್ಚಾಸ್ಪತ್ರಿ. ನಡುವಿನ್ಯಾಗ ಇರೋದೇ ಈ ನಮ್ಮನಿ’ ಎಂದರು. ಆ ವೇಳೆಗೆ ನನಗೆ ಗೊತ್ತಾಗಿ ಹೋಗಿತ್ತು ಚಂಪಾಗೆ ಚಂಪಾನೇ ಸಾಟಿ ಅಂತ. ಅದು ನಾನು ಪಿಯುಸಿ ಓದುತ್ತಿದ್ದ ಕಾಲ. ಧಾರವಾಡದಲ್ಲಿ ಅಣ್ಣ ಕೃಷಿ ಅಧಿಕಾರಿ. ಹಾಗಾಗಿ, ಧಾರವಾಡದ ಮಣ್ಣಿನ ಕಮ್ಮನೆಯ ವಾಸನೆಗೆ ಜೋತು ಬಿದ್ದು  ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತಿ¨ªೆ. ಆ ವೇಳೆಗಾಗಲೇ ಸಂಕ್ರಮಣ ಅಣ್ಣನ ಅಟ್ಟದಿಂದ ಇಳಿದು ನನ್ನೆಡೆಗೆ ಬಂದಿತ್ತು. ನೆಲ್ಸನ್‌ ಮಂಡೇಲಾ ವಿಶೇಷಾಂಕ ನನ್ನನ್ನು ಇನ್ನಿಲ್ಲದಂತೆ ಕಾಡಿತ್ತು. ಚಂಪಾ ನನ್ನೊಳಗೆ ಹೊಕ್ಕಿದ್ದು ಅವರ ಹಾಸ್ಯ, ಮಾತು, ಚಾಟಿ ಏಟಿನ ಭಾಷೆ ಯಾವುದರಿಂದಲೂ ಅಲ್ಲ. ನೆಲ್ಸನ್‌ ಮಂಡೇಲಾ ಬಗ್ಗೆ ಅವರು ಬರೆದ ಇಂದಿಗೂ ಕಾಡುವ ಕವನದಿಂದ. ಅಷ್ಟೇ ಅಲ್ಲ, ಅವರ ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಕಥನದಿಂದ…

ತುರ್ತುಪರಿಸ್ಥಿತಿಯಲ್ಲಿ ಎಷ್ಟು ಜನ ಪರಾಕು ಪಂಪು ಒತ್ತಿದರೋ ಗೊತ್ತಿಲ್ಲ. ಆದರೆ, ಜೈಲಿನ ಒಳಗೆ ಯಾವುದೇ ಮುಲಾಜಿಲ್ಲದೆ ನಡೆದುಬಿಟ್ಟವರು ಚಂಪಾ. ಅವರ ಆ ತುರ್ತುಪರಿಸ್ಥಿತಿ ಅನುಭವ ಕಥನ ಕೈನಲ್ಲಿ ಹಿಡಿದು ಅವರ ಎದುರು ಕುಳಿತಿ¨ªಾಗಲೇ ಅವರು ಹೇಳಿದ್ದು ಎದುರಿಗಿನ ರೋಡ್‌ ದಾಟಿದರೆ ಜೈಲು, ಈ ಕಡೆ ರೋಡು ದಾಟಿದರೆ ಹುಚ್ಚಾಸ್ಪತ್ರೆ ಅಂತ. ಅಂದಿನಿಂದ ಇಂದಿನವರೆಗೂ ನನ್ನ ಚಂಪಾ ನಂಟು ಶಾಲ್ಮಲೆಯ ರೀತಿ.
ಖಾರಕ್ಕೆ ಹೆಸರಾದ ಸವಣೂರಿನಿಂದ ಧಾರವಾಡಕ್ಕೆ ತಲುಪಿಕೊಂಡವರು ಚಂದ್ರಶೇಖರ ಪಾಟೀಲ. ಹಾಗಾಗಿ ನನ್ನ ಮಾತು ಅವರೊಂದಿಗೆ ಶುರುವಾದದ್ದೇ ಸವಣೂರಿನ ಮೂಲಕ.
.
“ಹಾವೇರಿಯ ಸವಣೂರಿನ ನೆಲದಿಂದ ಬಂದವರು ನೀವು. ಸವಣೂರು ಅಂದ್ರೆ ನೆನಪಾಗೋದು ರಾಜ ಮಹಾರಾಜರು, ಎಲೆ ಅಡಿಕೆ,ಆ ಎತ್ತರದ ಬೇವೋಬಾಪ್‌ ಮರ, ಖಾರ. ಸವಣೂರು ಖಾರದ ಗುಣ ನಿಮ್ಮೊಳಗೆ ಹೇಗೆ ಬಂತು? ‘
ಸವಣೂರು ಅಂದ್ರೆ ಮುಂಚೆ ಧಾರವಾಡ ಜಿÇÉೆನಾಗಾ ಇತ್ತು. ಸವಣೂರು ಮಗ್ಗಲಿಗೆ ನಮ್ಮೂರು ಹತ್ತಿಮತ್ತೂರು ಅಂತಾ. ಅದು ನಮ್ಮವ್ವನ ಊರು. ಹತ್ತಿಮತ್ತೂರು ಅಂದ್ರೆ ನನಗೆ ತಟ್ಟನೆ ನೆನಪಾಗೋದು ಕೆರೆ. ಸವಣೂರು ಹಾಗೂ ಮತ್ತೂರು ಕೆರೆ ಅಂದ್ರ ಅಕ್ಕ-ತಂಗಿ ಇ¨ªಾಂಗ. ವೀಳ್ಯದೆಲೆಗೆ ಭಾಳಾ ಫೇಮಸ್‌, ಸೇವಂತಿಗೆ ಹೂವಿಗೂ. ಇವೆಲ್ಲ ಒಂದು ಕಾಲಕ್ಕೆ ಪಾಕಿಸ್ತಾನಕ್ಕೆಲ್ಲ ರಪು¤ ಆಗ್ತಿತ್ತು. ಸವಣೂರಿನ ಖಾರದ ಮುಂದೆ ಯಾವುದಿಲ್ಲ. ಸವಣೂರು ನನಗೆ ಹೆಚ್ಚು ಸಂಪರ್ಕ ಇಲ್ಲ. ಕನ್ನಡ ಶಾಲೆ ಮುಗಿಸಿಕೊಂಡು ಸೀದಾ ಬಂದಿದ್ದು ನಾನು ಹಾವೇರಿಗೆ. ಹಾವೇರಿ ಮುನಿಸಿಪಲ್‌ ಹೈಸ್ಕೂಲು ನನ್ನ ಮೊಟ್ಟ ಮೊದಲ ವಿದ್ಯಾಕೇಂದ್ರ, ಹಾವೇರಿನಾಗಾ ನಾನು ಮೆಟ್ರಿಕ್‌ ಪಾಸಾಗಿದ್ದು.

ಚಂಪಾ ಹೆಚ್ಚು ಜನಕ್ಕೆ ಗೊತ್ತಿರುವುದೇ ಅವರು ಇಂಗ್ಲೆಂಡ್‌ನಿಂದ ಸ್ಟೈಲಾಗಿ ಧಾರವಾಡಕ್ಕೆ ಬಂದಿಳಿದ ನಂತರ. ಹಾಗಾಗಿ, ನನಗೆ ಅದರ ಹಿಂದಿನ ದಿನಗಳ ಬಗ್ಗೆಯೇ ಹೆಚ್ಚು ಆಸಕ್ತಿ. ನೀವು ಮುನಿಸಿಪಲ್‌ ಹೈಸ್ಕೂಲ್‌ನಲ್ಲಿ ಇ¨ªಾಗ ಕವನ ಬರಿಯೋದಕ್ಕೆ ಪ್ರಾರಂಭ ಮಾಡಿದ್ರಿ ಅಂತ ಅವರನ್ನು ಸೀದಾ ನೆನಪಿನ ಓಣಿಯಲ್ಲಿ ಇಳಿಸಿದೆ. ಬಿದರಿಮs… ಮಾಸ್ತರ್‌ ಅಂತ ನನ್ನ ಮಾಸ್ತರ್‌. ಆಶುಕವಿ ಅವರು, ಗಂಗಾಧರ ಸವದತ್ತಿ ಅಂತಾ ಇದ್ರು. ಪಾಪು ಅವರ ಶಿಷ್ಯರು. ಅವರು ನನಗೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಯೋಕೆ ಕಾರಣ, ನಾನು ಮೊದಲಿಂದಲೂ ಸ್ವಲ್ಪ ಶಾಣ್ಯ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡು ನೆನಪಿನ ಬುತ್ತಿ ಬಿಚ್ಚಿದರು. ಹೈಸ್ಕೂಲ್‌ನಲ್ಲಿ ಇಡೀ ಬಾಂಬೆ ರಾಜ್ಯಕ್ಕೆ ನಾನು ರ್‍ಯಾಂಕ್‌ ವಿದ್ಯಾರ್ಥಿಯಾಗಿ¨ªೆ. ಕನ್ನಡ ವಿಷಯದಲ್ಲಿ ಇಡೀ ಸ್ಟೇಟ್‌ಗೆ ಫ‌ರ್ಸ್ಡ್ ಬಂದೆ. ಆನಂತರ ನಾನು ಧಾರವಾಡ ಕರ್ನಾಟಕ ಕಾಲೇಜಿಗೆ ಬಂದೆ. ಅಂದು ನಮ್‌ ವಿದ್ಯಾಕಾಶಿ. ಅಲ್ಲಿನ ಭಾಳ ಮುಖ್ಯ ಸೆಳೆತ ಅಂದ್ರ ಗೋಕಾಕ್‌. ಅವರು ಆವಾಗ ಪವಾಡ ಪುರುಷ ಅನ್ನೋಂಗೆ ಕಾಣೋರು. ನಮ್‌ ಅಪ್ಪನ ಮಹತ್ವಾಕಾಂಕ್ಷಿ ಏನಂದ್ರೆ ಈ ನನ್‌ ಮಗ  ಐಎಎಸ್‌, ಐಪಿಎಸ್‌ ಓದಬೇಕು ಅನ್ನೋದು. ಹಿಂಗಾಗಿ ನನಗ ಸೈನ್ಸ್‌ ಕೊಡಿಸಿದ್ರು. ಒಂದು ವರ್ಷ ಓದಿ ತಲೆ ಕೆಡು¤. ಮೇಲೆ ಗೋಕಾಕರ ಹತ್ರ ಹೋದೆ. ಅವರು ನಮ್ಮಪ್ಪನ ಕರೆದು ಹೇಳಿಸಿ ಆರ್ಟ್ಸ್ಗೆ ಸೇರಿಸಿದ್ರು.

1960ರಲ್ಲಿ ಬಿಎ ಇಕಾನಾಮಿಕ್ಸ್‌ ನಾನು. ತಲೆ ಕೆಟ್ಟೋಯ್ತು. ಮುಂದೆ ಅದು ನನ್‌ ಹಾದಿ ಅÇÉಾ ಅಂತ ಗೊತ್ತಾಗೋಯ್ತು. ಬಿಎ ಪಾಸಾದ್‌ ಮೇಲೆ ದೊಡ್ಡ ಪ್ರೊಫೆಸರ್‌ ಅರ್ಮಾಂದೋ ಮೇನೆಜಸ್‌ ಅಂತ ಯುನಿವರ್ಸಿಟಿನಲ್ಲಿದ್ದರು. ಅವರ ಹತ್ತಿರ ಹೋಗಿ ಹೇಳೆª, “ನನಗೆ ಎಂಎ ಇಂಗ್ಲಿಷ್‌ಗೆ ಅಡ್ಮಿಷನ್‌ ಕೊಡಿ’ ಅಂತ. ನಾನ್‌ ಕಾಲೇಜಿನ ಮಿಷನರಿ ಒಳಗಾ ಕನ್ನಡ ಹಾಡು, ಇಂಗ್ಲೀಷ್‌ ಕವನ ಬರೀತಾ ಇ¨ªೆ. ಅದನ್ನು ನೋಡಿ ಅವರು ನನಗೆ ಅಡ್ಮಿàಶನ್‌ ಕೊಟ್ರಾ. ಎಂಎದೊಳಗಾ ನಾನು ಫ‌ರ್ಸ್ಡ್ ಬಂದೆ. ಪಾಸಾದ್‌ ಮರುದಿನ ಹೋಗಿ ಕರ್ನಾಟಕ ಕಾಲೇಜಿಗೆ ಲೆಕjರ್‌ ತಗೋ ಅಂದ್ರು. ನಾನು ಸೂಟು-ಗೀಟು ಹಾಕ್ಕೊಂಡು ಪ್ರೊಫೆಸರ್‌ ಆಗಿºಟ್ಟೆ.
.
(ಕವಿತೆಯನ್ನ ಪ್ರೇಯಸಿ ಥರಾ ನೋಡಿಕೊಂಡಿದ್ರು ಚಂಪಾ. ಆಮೇಲೆ ಯಾಕೋ ಬೇಡ ಅನಿಸ್ತು ಅವರಿಗೆ. ನಾಟಕ, ಪ್ರಬಂಧ, ಅನುಭವ ಕಥನ ಹೀಗೆ ಹೊರಳಿಕೊಂಡರು. )

“ಒಂದು ಕಾಲಕ್ಕೆ ಕವಿತೆ ಸಾಕು ಅನ್ನಿಸಿ ಬಿಡ್ತಾ ನಿಮಗೆ?’
ನಂದೇ ತಲಿ ಕೆಟ್ಟೋಯ್ತು. ಬ್ಯಾಡ ಇನ್ನು ಅಂತ‌ ತಿಳ್ಕೊಂಡೆ. ಬಾನುಲಿ, ಮತಿಬಿಂದು ಸೇರಿ 19 ಕವನ ಸಂಕಲನಗಳು ಬಂದಿದ್ದವು. ನನ್ನ ವ್ಯಂಗ್ಯ ನನಗೇ ಅಸಹ್ಯ ಅನಿಸಿಬಿಟ್ಟಿತ್ತು. ಆಮೇಲೆ ನಾನು ಹೈದ್ರಾಬಾದ್‌ನ ಸೆಂಟ್ರಲ್‌ ಇನ್ಸ್ಟಿಟ್ಯೂಟ್‌ ಆಫ್ ಇಂಗ್ಲೀಷ್‌ಗೆ ಹೋದೆ. ಅದು ಒಂದು ಹೊಸ ಜಗತ್ತು. ವಿಶ್ವನಾಥ್‌ ಮಿರ್ಲೆ ಅಂತ ಮೈಸೂರಿನವರು. ಅವರು ಒಂದು ನಾಟಕ ಬರೆದಿದ್ದರು ಗೋಡೆಗಳು ಅಂತ. ಅದನ್ನ ಓದೋಕೆ ಕೊಟ್ಟರು. ಅದನ್ನ ಓದಿ ಒಂದೇ ರಾತ್ರಿ ಒಳಗೆ ನಾನು ಕೊಡೆಗಳು ಅಂಥಾ ನಾಟಕ ಬರೆದ್‌ ಬಿಟ್ಟಿ¨ªೆ. ಅದು ಮೊತ್ತಮೊದಲ ನಾಟಕ. ಮಿರ್ಲೆ ಅದನ್ನ ಓದಿ ಕನ್ನಡದಲ್ಲಿ ಹೊಸ ಆಯಾಮದ ನಾಟಕ ಅಂಥಾ ಸರ್ಟಿಫಿಕೇಟ್‌ ಕೊಟ್ಟರು. ಅಲ್ಲಿಂದ ಶುರುವಾಯಿತು ಹೊಸ ಪರ್ವ. ಅಪ್ಪ, ಟಿಂಗರ ಬುಡ್ಡಣ್ಣ, ಕುಂಟಾ ಕುಂಟಾ ಕುರವತ್ತಿ, ಗುರುತಿನವರು… ಇವೆಲ್ಲವೂ ಬಂತು.

ಹೈದ್ರಾಬಾದ್‌ನಿಂದ ವಾಪಸ್‌ ಆದ್ಮೇಲೆ ಸೀದಾ ಕರ್ನಾಟಕ ಯೂನಿವರ್ಸಿಟಿಗೆ ಇಂಗ್ಲಿಶ್‌ ಪ್ರೊಫೆಸರ್‌ ಆಗಿ ಹೋದೆ. ಫ‌ರ್ಸ್ಡ್ ರ್‍ಯಾಂಕ್‌ ಬಂತು. ಅದರ ಆಧಾರದ ಮ್ಯಾಲೆ ಇಂಗ್ಲೆಂಡ್‌ಗೆ ಹೋಗೋಕೆ ಬ್ರಿಟಿಶ್‌ ಕೌನ್ಸಿಲ್‌ ಟಿಎನ್‌ಟಿ ಅವಾರ್ಡ್‌ ಸಿಕು¤. ಲೀಡ್ಸ್‌ಗೆ ಹೋದೆ. ಅಲ್ಲಿಗೆ ಹೋದ ಮೇಲೆ ಗೋಕರ್ಣದ ಗೌಡಸಾನಿ ಬರೆದೆ. ನೀವು ಹೇಳಿದ್ರÇÉಾ ಅದೇ ಜವಾರಿ ಭಾಷೆ, ಎಲೆ ಅಡಿಕೆ. ಸವಣೂರು ಖಾರ ಎÇÉಾ ಸೇರಿಸಿಯೇ ಗೌಡಸಾನಿ ಬರೆದಿದ್ದು . ಪಿ. ಲಂಕೇಶ್‌, ಟಿ. ಎನ್‌. ಸೀತಾರಾಂ ಕೊಡೆಗಳು ನಾಟಕದಲ್ಲಿ ಅಭಿನಯಿಸಿದ್ದರು. ಈಗಲೂ ನನಗೆ ಆ ನಾಟಕದಲ್ಲಿ ಬಹಳ ನೆನಪಾಗೋದು- ಇಬ್ಬರೂ ನೆಲದ ಮೇಲೆ ಬಿದ್ದು ಒ¨ªಾಡ್ತಾರೆ. ಇ¨ªಾಕಿದ್ದ ಹಾಗೆ ಏನಾಯ್ತಪ್ಪಾ ಅನಾಹುತಾ ಅಂತ ಅಂದುಕೊಂಡೆ. ಆಮೇಲೆ ವಿಚಾರ ಮಾಡಿದೆ. ನಾಟಕದಲ್ಲಿ ಬಿದ್ದು ಬಿದ್ದು ನಗುವರು ಅಂತ ಬರೆದಿ¨ªೆ. ಅವರು ಅಕ್ಷರಶ‌ಃ ಬಿದ್ದೂ ಬಿದ್ದೂ ನಕ್ಕಿದ್ದರು.
(ಚಂಪಾ ಅದನ್ನು ನೆನೆಸಿಕೊಂಡು ಇನ್ನೂ ನಗುತ್ತಲೇ ಇದ್ದರು)
.
“ನಿಮ್ಮ ಬರವಣಿಗೆಗಳಲ್ಲಿನ ವ್ಯಂಗ್ಯ ಬೆಲ್ಲ ಮೆತ್ತಿದ್ದ ಕಲ್ಲಿನಂತೆ. ಯಾಕೆ ವ್ಯಂಗ್ಯ ನಿಮ್ಮ ಭಾಗವಾಯಿತು?’
ವ್ಯಂಗ್ಯ ಅಂದ್ರೆ ಬರೀ ಜೋಕ್‌ ಅಲ್ಲ, ಬರೀ ಹ್ಯೂಮರ್‌ ಅಲ್ಲ. ಅದಕ್ಕೆ ಭಾಳ ಗಂಭೀರವಾದ ರೀತಿಯಲ್ಲಿ ಇಂಗ್ಲಿಷಿನೊಳಗಾ ಐರಾನಿಕ್‌ ವಿಷನ್‌ ಅಂತಾರೆ. ವ್ಯಂಗ್ಯ ದೃಷ್ಟಿಕೋನ ಅಂತಾರೆ. ಇವತ್ತಿಗೂ ನನ್ನ ಎದುರಿಗೆ ಏನೇ ನಡೀತಾ ಇದ್ರೂ ಅದು ತಕ್ಷಣದ ವರ್ತಮಾನದ ಬಿಂಬ. ಅದೇ ಟೈಮಿನೊಳಗಾ ನನಗೆ ಒಂದು ಘಟನೆಗೆ ಬೇರೆ ಬೇರೆ ಆಯಾಮಾಗಳು ಕಾಣಿಸ್ತಾವೆ. ಒಬ್ಬ ವ್ಯಕ್ತಿಯ ಬಗೆಗಿನ ಬಿಂಬಗಳು ಒಟ್ಟಿಗೆ ಬಂದಂಗೆ ಆಗಿ ಒಂದು ಭಾಷೆಯ ನುಡಿಗಟ್ಟು  ತಯಾರಾಗಿ ಬಿಡುತ್ತದೆ. ಇದು ಐರಾನಿಕ್‌ ವಿಷನ್‌. ಕ್ಯಾಮೆರಾದಲ್ಲಿ ಒಂದು ಬಿಂಬ ತೆಗೀತಾರೆ. ಮೂವಿ ಕ್ಯಾಮೆರಾದ ಹಾಗೆ ಸುತ್ತಾಡುತ್ತ ಎÇÉಾ ಆಯಾಮ ತೆಗಿಯೋ ಹಾಗೆ ನನ್ನ ಶೈಲಿ.

“ಚಂಪಾ ಅಂದ್ರೆ ಖಡಕ್‌, ಚಂಪಾ ಅಂದ್ರೆ ವಿಮರ್ಶೆ, ಚಂಪಾ ಅಂದ್ರೆ ನೇರಾ ನೇರಾ… ಆ ಗುಣ ನಿಮಗೆ ಎಲ್ಲಿಂದ ಬಂತು ?’
ಮಣ್ಣಿನ ಗುಣ ಅಂತ ಬಾಳ ಮಂದಿ ಹೇಳ್ತಾರ. ಅದ್ರಾಗ ನನಗೆ ನಂಬಿಗಿ ಇಲ್ಲ. ನಮ್ಮ ಅಪ್ಪ ಹಂಗೆ ಇದ್ದ. ಅವ ಸ್ವಲ್ಪ ಅರ್ಧ ರಾಜಕಾರಣಿ, ಅರ್ಧ ಮಾಸ್ತರು. ಬಿ. ಹೆಚ್‌. ಪಾಟೀಲ್‌ ಅಂಥಾ. ಆವಾಗಾ ಅವನು ಆ ಭಾಗದ ಜಗತ್ತಲ್ಲಿ ಭಾಳ ಪ್ರಸಿದ್ಧ. ಮೈಲಾರ ಮಾದೇವಪ್ಪ , ಹಳ್ಳಿಕೇರಿ ಗುದ್ಲಪ್ಪ ಅವರಿಗೆಲ್ಲ ಮಾಸ್ತಾರಿ¨ªಾಂಗೆ ಸ್ವಲ್ಪ ಎಜುಕೇಟೆಡ್‌. ಧಾರವಾಡ ಕರ್ನಾಟಕ ಕಾಲೇಜಿನ ಪ್ರಾರಂಭದ ಹಂತದಲ್ಲಿ ನಮ್‌ ಅಪ್ಪ ವಿದ್ಯಾರ್ಥಿ ಆಗಿದ್ದನಂತೆ. ಮುರುಘಾಮಠದಲ್ಲಿ ಜಗಳ ಮಾಡಿಕೊಂಡ ಅಂತ ಒದ್ದು ಹೊರಗೆ ಹಾಕ್ತಾರೆ. ಅವನು ಬಿಎ ಮುಗಿಸಲಿಲ್ಲ, ನಮ್‌ ಅಪ್ಪನ ಇಂಗ್ಲಿಶ್‌ ಭಾಳಾ ಚಲೋ ಇತ್ತು. ನನ್ನ ಮೊತ್ತಮೊದಲ ಗುರು ಅಂದ್ರೆ ನಮ್‌ ಅಪ್ಪನೇ. ಪ್ರಶ್ನೆà ಕೇಳ್ಳೋ ಸ್ವಭಾವ, ಜಗಳಗಂಟತನ ವೈಚಾರಿಕತೆ ಬಂದಿರೋದು ನಮ್‌ ಅಪ್ಪನಿಂದಲೇ.
ಪ್ರಶ್ನೆ ಕೇಳ್ಳೋದಕ್ಕೆ ಹೆದರಬ್ಯಾಡ ಅಂತ ಹೇಳ್ಳೋನು.

“ನಿಮ್ಮ ಸಿಟ್ಟು, ನಿಮ್ಮ ಪ್ರಶ್ನೆ ಮಾಡೋ ಧಾಟಿ, ಬಿಚ್ಚು ಮನಸ್ಸಿನ ಚಂಪಾ ಒಳಗೆ ಒಬ್ಬ ಶಾಲ್ಮಲೆ ಕೂಡ ಹರಿದಳು. “ಯಾರು ಆ ಶಾಲ್ಮಲೆ ‘ ಅಂದೆ’.
ಶಾಲ್ಮಲೆ ಏನು ಯಾರು ಅಂತ ಬಿಚ್ಚಿ ಹೇಳ್ಳೋಕೆ ಆಗಲ್ಲ. ಭೂಮಿಯ ಗರ್ಭದೊಳಗೆ ಹರಿಯುತ್ತಿರುವ ಜೀವಶಕ್ತಿ ಅಂತ ಅನ್ನಬಹುದು. ಧಾರವಾಡದ ಕಡೆ ಏಳು ಗುಡ್ಡದ ಹೊಟ್ಟಿ ಒಳಗಾ ಗುಪ್ತಗಾಮಿನಿ ನದಿ ಐತಿ ಅಂತ ಹೇಳಿಕೊಂಡು ಬಂದಾರ.
“ಶಾಲ್ಮಲೆಯನ್ನು ಕಲ್ಪಿಸಿಕೊಂಡ ನೀವು ಇಂದಿರಾಗಾಂಧಿಯನ್ನ ಎದುರು ಹಾಕಿಕೊಂಡ್ರಿ. ತುರ್ತುಪರಿಸ್ಥಿತಿ ನಿಮ್ಮ ಬದುಕಿನಲ್ಲಿ ದೊಡ್ಡ ಪರಿಣಾಮ ಬೀರಿತು.

ನೀವು ತುರ್ತು ಪರಿಸ್ಥಿತಿಯನ್ನ ಹೇಗೆ ಎದುರಿಸಿದಿರಿ?’
ಕುವೆಂಪು ನೇತೃತ್ವದಲ್ಲಿ ಜಾತಿ ವಿನಾಶನ ಅಂದೋಲನ, ಕರ್ನಾಟಕ ಕಲಾವಿದರ ಹಾಗೂ ಬರಹಗಾರರ ಒಕ್ಕೂಟದ ಭಾಗವಾಗಿ ನನ್ನ ಹೋರಾಟದ ಬದುಕು ಆರಂಭವಾಯಿತು. ಆಗಲೇ ಜೆಪಿ ಆಂದೋಲನ ಸಹ ಶುರು ಆಯಿತು. ಗುಜರಾತ್‌, ಬಿಹಾರ, ಕರ್ನಾಟಕದೊಳಗೆ ತೀವ್ರ ಸ್ವರೂಪ ಪಡೆದಾಗ ಆ ಆಂದೋಲನದ ಭಾಗವಾಗಿ ಕೆಲಸ ಮಾಡಿದೆ. ತುರ್ತು ಪರಿಸ್ಥಿತಿ ಬಂತು. ನನ್ನ ಮನೆ ಮೇಲೆ ರೇಡ್‌ ಆಯಿತು. ಇಂದಿರಾ ಗಾಂಧಿಯನ್ನ ಜಗದಂಬೆ ಮಾಡಿ ಉಳಿದವರನ್ನ ಷಂಡರನ್ನಾಗಿ ಮಾಡಿ ಬರೆದ ಜಗದಂಬೆಯ ಬೀದಿ ನಾಟಕ ಅನೇಕ ಕಡೆ ಪ್ರಯೋಗವಾಯಿತು. 26-27 ದಿನ ಜೈಲಿಗೆ ಹಾಕಿದ್ರು.

“ತುರ್ತು ಪರಿಸ್ಥಿತಿಯ ನಿಮ್ಮ ಜೈಲಿನ ಅನುಭವಗಳು ಕನ್ನಡದ ಪ್ರಜ್ಞೆಗೆ ತಿರುವು ಕೊಡು¤. ನಿಮ್ಮ ಜೈಲಿನ ನೆನಪುಗಳು’
ಜೈಲಿನೊಳಗ ನನಗೆ ಹೊಡೆಯೋದು ಬಡಿಯೋದು ಏನೂ ಮಾಡಿಲ್ಲ. ಆ ಭಾಗದೊಳಗೆ ಜಗತ್‌ಪ್ರಸಿದ್ಧ ಪ್ರೊಫೆಸರ್‌ ಆಗಿ ಕನ್ನಡ ಸಾಹಿತಿಯಾಗಿದ್ನಲ್ಲ, ಅಲ್ಲಿನ ಪೊಲೀಸರು ನಾನು ಜೈಲಿಗೆ ಬಂದಿದ್ದೇ ಅವರ ಭಾಗ್ಯ ಅನ್ನೋ ಹಂಗೆ ನೋಡ್ಕೊàಳ್ಳೋರೋ. ನಮ್ಮ ಮನಿ ಎದ್ರೂಗೆ ಹುಚ್ಚರ ಆಸ್ಪತ್ರೆ. ಆ ಕಡೆಗೆ ಜೈಲು. ಈ ಕಡೆ ಪೊಲೀಸ್‌ ಸ್ಟೇಷನ್‌. ಆಚೆ ಕಡೆಗೆ ಝೂ! ನಾನು ಒಂದು ಕವನದೊಳಗೆ ಬರೆದಿದ್ದೇನೆ: ನಮ್‌ ಮನೆ ಮಗ್ಗಿಲಿನೊಳಗೆ ಪೊಲೀಸ್‌ ಸ್ಟೇಷನ್‌ ಇದೆ, ಕಳ್ಳರ ಭಯವಿಲ್ಲ , ಪೊಲೀಸರದ್ದೇ ಭಯ ಅಂತ. ಇಷ್ಟೆÇÉಾ ಇದ್ದೂ ಕ್ರಾಂತಿ ಎಂಬ ಹುಚ್ಚು ಯಾಕೆ ಬಂತು ಅಂತ ಚಿಂತನೆ ಮಾಡೋಕೆ ಜೈಲಿನ ಅವಕಾಶ ಸಹಾಯ ಮಾಡು¤¤. ಅದು ನನಗೆ ದೊಡ್ಡ ತಿರುವು. ಅಲ್ಲಿಂದ ಬಂದ್ಮೇಲೆ ಗಾಂಧಿ ಸ್ಮರಣೆ  ಬಂತು. ಲಂಕೇಶರು ಹಿನ್ನುಡಿ ಬರೆದರು. ಅದು ಅನಂತರದ ಅವಧಿ.                      

“ತುರ್ತು ಪರಿಸ್ಥಿತಿಯ ನಿಮಗೆ ತುಂಬಾ ಕಾಡಿದ ಘಟನೆ ಯಾವುದು ?’
ಇದು ಸ್ವಂತ ಅನುಭವದ ಘಟನೆಯಲ್ಲ. ಸ್ನೇಹಲತಾ ರೆಡ್ಡಿ ಅವರು ಹಾರ್ಟ್‌ ಪೇಷಂಟ್‌. ಸಮಾಜವಾದಿಗಳ ಜೊತೆ, ಜಾರ್ಜ್‌ ಫೆರ್ನಾಂಡಿಸ್‌ ಜೊತೆ ಸ್ನೇಹ ಇದೆ ಅಂತ ಅರೆಸ್ಟ್‌ ಮಾಡಿದ್ರು. ಆ ಹೆಣ್ಣುಮಗಳು ಭಾಳ ಒ¨ªಾಡಿ ಸತ್ತಳು. ಅದು ನನಗೆ ಭಾಳ ಕಾಡಿದ ಘಟನೆ. ತಣ್ಣಗಿನ ಕ್ರೌರ್ಯ. ಇಡೀ ವ್ಯವಸ್ಥೆ ಮೌನವಾಗಿ ಯಾವ ರೀತಿಯಾಗಿ ಜೀವ ಹತ್ಯೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆ. ಆಮೇಲೆ ಚುನಾವಣೆಯಲ್ಲಿ ಇಂದಿರಾಗಾಂಧಿ ಸೋತರು. ಕಾಂಗ್ರೆಸ್ಸೇತರ ಸರ್ಕಾರ ಬಂತು. ಯೂನಿವರ್ಸಿಟಿಯವರು ನನ್ನ ಡಿಸ್‌ಮಿಸ್‌ ಮಾಡºಹುದಿತ್ತು. ಮಾಡಿದ್ರೆ ಒಳ್ಳೇದಿತ್ತು. ಪಾಲಿಟಿಕ್ಸ್‌ ಸೇರಿ ಇಷ್ಟು ಹೊತ್ತಿಗೆ ನಾನೊಬ್ಬ ಮಾಜಿ ಮುಖ್ಯಮಂತ್ರಿಯಾಗಿ ಬಿಡ್ತಿ¨ªೆ.

“ಇಂಗ್ಲಿಶ್‌ ಪ್ರೊಫೆಸರ್‌- ಕನ್ನಡ ಹೋರಾಟ, ಎತ್ತಣಿಂದೆತ್ತ ಸಂಬಂಧವಯ್ಯ?’
ನಾನು ನೇರವಾಗಿ ಒಂದು ಮಾತು ಹೇಳ್ತಿನಿ ಎಲ್ಲರಿಗೂ. ಇಂಗ್ಲಿಶ್‌ ನನ್ನ ಉಪ ಜೀವನ. ಕನ್ನಡ ನನ್ನ ಜೀವನ.
(ಅಷ್ಟರಲ್ಲಿ ನಾವೂ ಸಾಕಷ್ಟು ಸುತ್ತಿ¨ªೆವು. ಆದರೂ ಈ ಪ್ರಶ್ನೆ ಅವರತ್ತ ತೋರದೆ ಮುಗಿಸಲು ಸಾಧ್ಯವೇ ಇಲ್ಲ ಅನಿಸಿತು. ಕೇಳಿಯೇಬಿಟ್ಟೆ)
“ಆದಿ ಕವಿ ಪಂಪ, ಅಂತ್ಯ ಕವಿ ಚಂಪಾ… ಹೌದಾ?’
(ಚಂಪಾ ತಮ್ಮದೇ ಶೈಲಿಯಲ್ಲಿ ಗಹಗಹಿಸಿ ನಕ್ಕರು) ಅದು ಒಬ್ಬ ಗಾಂಪಾ ಹೇಳುವ ಮಾತು, ಆ ಗಾಂಪಾನನ್ನ ನಾನೇ ಸೃಷ್ಟಿ ಮಾಡಿದ್ದು, ಕನ್ನಡ ಕಾವ್ಯದ ಸ್ಥಿತಿಗತಿ ಬಗ್ಗೆ ಹಿಂಗೆ ಒಂದು ನಮೂನಿ ವಿಚಾರ ಮಾಡೋ ಅಂತ ಒಂದ್‌ ಸಣ್ಣ ಡೈಲಾಗ್‌. “ಕನ್ನಡ ಕಾವ್ಯಾದ ಭೂತ ಭವಿಷ್ಯವ ಬಣ್ಣಿಸಿ ಹೇಳ್ಳೋ ಗಾಂಪಾ’…. ಗಾಂಪಾ ಅಂದ್ರೆ ನಮ್ಮಂಗ ನಿಮ್ಮಂಗ ಗಾವುಟಿ ಮನುಷ್ಯ. ಅವ ಹೇಳ್ತಾನಾ, “ನಮ್ಮ ಆದಿಕವಿ ಪಂಪಾ ಗುರುವೇ, ನಮ್ಮ ಅಂತ್ಯ ಕವಿ ಪಂಪಾ’. ಗಾಂಪ, ಪಂಪ, ಚಂಪಾ ಹುಟ್ಟಿದ್ದು ಬರಿ ಪ್ರಾಸಕ್ಕಾಗಿ!

ಮಾತುಕತೆ : ಜಿ. ಎನ್‌. ಮೋಹನ್‌

ಟಾಪ್ ನ್ಯೂಸ್

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ

BPL-CARD

Food Department Operation: ಬಿಪಿಎಲ್‌ ಚೀಟಿದಾರರಿಗೆ ಎಪಿಎಲ್‌ ಕಾವು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.