ಸ್ವಾತಂತ್ರ್ಯ ಅಮೃತ ಮಹೋತ್ಸವ: 75ರ ಸ್ವಾತಂತ್ರ್ಯದ ಸೇನಾನಿಗಳ ನೆನಹು
Team Udayavani, Aug 7, 2022, 6:40 AM IST
ಬಂಕೀಮ ಚಂದ್ರ ಚಟ್ಟೋಪಾಧ್ಯಾಯ (1858-1894)
1882ರಲ್ಲಿ ಇವರು ಬ್ರಿಟಿಷರನ್ನು ಸೋಲಿಸಿದ ಸನ್ಯಾಸಿಗಳ ಕುರಿತ ಆನಂದಮತ ಎಂಬ ಪುಸ್ತಕವೊಂದನ್ನು ಬರೆದರು. ಇದರಲ್ಲಿನ ವಂದೇಮಾತರಂ ಮುಂದಿನ ಸ್ವಾತಂತ್ರ್ಯ ಸಮರಕ್ಕೆ ಧ್ಯೇಯಗೀತೆಯಾಗಿ ಬದಲಾಯಿತು. ಅಲ್ಲದೆ, ಲಾರ್ಡ್ ಕರ್ಜನ್ ಬಂಗಾಲವನ್ನು ಧರ್ಮದ ಆಧಾರದ ಮೇಲೆ ಒಡೆಯಲು ನೋಡಿದಾಗ, ಸ್ವದೇಶಿ ಆಂದೋಲನಕ್ಕೂ ಇದು ಸ್ಫೂರ್ತಿಯಾ ಯಿತು. ಇವರು ಬಂಗಾದರ್ಶನ್ ಎಂಬ ಮ್ಯಾಗಜಿನ್ ಅನ್ನು ಸ್ಥಾಪಿಸಿದ್ದರು. ಇದು ರಾಷ್ಟ್ರೀಯತೆಯ ಬೀಜವನ್ನು ಬಿತ್ತಿತು.
ಬಿಪಿನ್ ಚಂದ್ರಪಾಲ್(1858-1932)
ಲಾಲ್ -ಬಾಲ್- ಪಾಲ್ ಎಂಬ ತ್ರಿಮೂರ್ತಿಗಳಲ್ಲಿ ಇವರೂ ಒಬ್ಬರು. ಅಷ್ಟೇ ಅಲ್ಲ, 1905ರಲ್ಲಿ ಬಂಗಾಲವನ್ನು ವಿಭಜನೆ ಮಾಡಿದಾಗ, ಮಹಾತ್ಮಾ ಗಾಂಧಿಯ ವರ ಅಹಿಂಸಾ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಸಿಲ್ಹೆಟ್ ನಲ್ಲಿ ಜನಿಸಿದ್ದ ಪಾಲ್ ಅವರು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳನ್ನು ಬಳಸಲು ಪ್ರೋತ್ಸಾಹಿಸಿದರು. ಇದೇ ಮುಂದೆ ಸ್ವದೇಶಿ ಆಂದೋಲನವಾಗಿ ಬದಲಾಯಿತು. ಈ ಸ್ವದೇಶಿ ಚಳವಳಿಯನ್ನು ಸ್ವರಾಜ್ ಪತ್ರಿಕೆಯ ಮೂಲಕವೂ ಪಸರಿಸಿದರು. ಬ್ರಹ್ಮ ಸಮಾಜದ ಸದಸ್ಯರಾಗಿದ್ದ ಇವರು ಜಾತಿ ವ್ಯವಸ್ಥೆಯ ಬಲವಾದ ವಿರೋಧಿಯಾಗಿದ್ದರು.
ಮದನ ಮೋಹನ ಮಾಳವೀಯ (1861-1946)
ಮಹಾತ್ಮಾ ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಮತ್ತು 1930ರ ಅಸಹಕಾರ ಚಳವಳಿಯಲ್ಲಿ ಇವರು ಭಾಗಿಯಾಗಿದ್ದರು. ಲಾ ಓದಿದ್ದರೂ, ವಕೀಲಿ ವೃತ್ತಿ ಮಾಡುತ್ತಿರಲಿಲ್ಲ. ಆದರೆ, ಚೌರಿ-ಚೌರಾ ಕೇಸ್ ಸಂಬಂಧ 177 ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವ ತೀರ್ಪು ನೀಡಿದಾಗ, ಇದರ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರಿ ಹೋರಾಡಿದ್ದರು. ಕಡೆಗೆ 156 ಮಂದಿಯನ್ನು ನಿರಪರಾಧಿಗಳು ಎಂದು ಬಿಡುಗಡೆ ಮಾಡಿಸಿದ್ದರು. ಬನಾರಸ್ ಹಿಂದೂ ವಿವಿಯನ್ನು ಕಟ್ಟಿದವರು ಇವರೇ.
ಬಾಲ ಗಂಗಾಧರ ತಿಲಕ್ (1856-1920)
ಲಾಲ್ -ಬಾಲ್ -ಪಾಲ್ ತ್ರಿಮೂರ್ತಿಗಳಲ್ಲಿನ ಒಬ್ಬರು. ಸ್ವಾತಂತ್ರ್ಯ ಹೋರಾಟದಲ್ಲಿನ ಕಾಂಗ್ರೆಸ್‌ನ ಮೃದು ಧೋರಣೆಯನ್ನು ವಿರೋಧಿಸಿದ್ದ ತಿಲಕ್ ಅವರು, ಅಹಿಂಸಾತ್ಮಕ ಹೋರಾಟದಿಂದ ಸಾಧ್ಯವಿಲ್ಲ ಎಂದು ಮಹಾತ್ಮಾ ಗಾಂಧೀಜಿ ಅವರ ಮನವೊಲಿಕೆಗೆ ಯತ್ನಿಸಿದ್ದರು. ಜನರಿಂದಲೇ ಲೋಕಮಾನ್ಯ ಎಂಬ ಹೆಸರು ಗಳಿಸಿದ್ದ ಇವರು, ಬ್ರಿಟಿಷರಿಂದ ಭಾರತದ ದಂಗೆಯ ಪಿತಾಮಹ ಎಂದು ಕರೆಯಲ್ಪಡುತ್ತಿದ್ದರು.
ಬಿರ್ಸಾ ಮುಂಡಾ (1875-1900)
ಝಾರ್ಖಂಡ್‌ನ ಯುವ ಹೋರಾಟಗಾರ ಇವರು. ಬುಡಕಟ್ಟು ಜನಾಂಗದವರ ಮೇಲೆ ಬ್ರಿಟಿಷರು ಮಾಡುತ್ತಿದ್ದ ದಬ್ಟಾಳಿಕೆಯನ್ನು ವಿರೋಧಿಸಿದರು. 1900ರಲ್ಲಿ ಇವರ ಹಿಂಬಾಲಕರು ಏಕ್‌ದಿಹಾ ಮತ್ತು ಖುಂತಿ ಎಂಬ ಪೊಲೀಸ್ ಠಾಣೆಗಳ ಕಾನ್‌ಸ್ಟೆಬಲ್‌ಗಳನ್ನು ಕೊಂದರು. ಇದಾದ ಬಳಿಕ ಮುಂಡಾ ಅವರು ಬ್ರಿಟಿಷರಿಂದ ತಪ್ಪಿಸಿಕೊಂಡು ಸಿಂಗ್‌ಧುಮ್ ಬೆಟ್ಟದಲ್ಲಿದ್ದರು. ಆದರೆ ಅನಂತರ ಬ್ರಿಟಿಷರು ಬಂಧಿಸಿದ್ದರು. ವಿಚಾರಣೆ ಅವಧಿಯಲ್ಲೇ ಮುಂಡಾ ಪ್ರಾಣತ್ಯಾಗ ಮಾಡಿದರು.
ದೇಶಬಂಧು ಚಿತ್ತರಂಜನ್ ದಾಸ್ (1870-1925)
1919-22ರ ಬಂಗಾಲದಲ್ಲಿನ ಅಸಹಕಾರ ಚಳುವಳಿಯಲ್ಲಿ ಕಾಣಿಸಿಕೊಂಡ ಅತ್ಯಂತ ಪ್ರಮುಖ ಹೆಸರು ಇವರದ್ದು. ಇವರು ಐರೋಪ್ಯ ಬಟ್ಟೆಗಳನ್ನು ಸುಟ್ಟು ಖಾದಿ ಬಳಕೆಗೆ ಪ್ರೋತ್ಸಾಹ ನೀಡಿದರು. ಕಾಂಗ್ರೆಸ್‌ನ ಗಯಾ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಕವಿ ಮತ್ತು ಬರಹಗಾರರಾಗಿದ್ದ ಇವರು, ಅಹಿಂಸಾತ್ಮಕ ಚಳವಳಿಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ಹಾಗೆಯೇ, ಹಿಂದೂ-ಮುಸ್ಲಿಂ ಒಗ್ಗಟ್ಟಿಗೆ ಹೋರಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.