ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ
Team Udayavani, Aug 14, 2022, 5:45 AM IST
ರಾಜಾ ವೆಂಕಟಪ್ಪ ನಾಯಕ
1858
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ದಕ್ಷಿಣ ಭಾರತದಲ್ಲಿ ಮೊದಲು ಮೊಳಗಿದ್ದೇ ಸುರಪುರದಲ್ಲಿ. ಈ ಹೋರಾಟದ ನೇತೃತ್ವ ವಹಿಸಿದ್ದ ರಾಜಾ ವೆಂಕಟಪ್ಪ ನಾಯಕ ಜೀವನದುದ್ದಕ್ಕೂ ಬ್ರಿಟಿಷರ ವಿರುದ್ಧ ಹೋರಾಡಿದವರು. ತಮ್ಮ ವಿರುದ್ಧ ದಂಡೆತ್ತಿ ಬಂದಿದ್ದ ಬ್ರಿಟಿಷ್ ಸೇನೆಯನ್ನು ಸೋಲಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಕಿತ್ತೂರಿನ ಸಂಗೊಳ್ಳಿ ರಾಯಣ್ಣನ ಜತೆಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ತಮ್ಮವರೇ ಮೋಸ ಮಾಡಿದ ಕಾರಣದಿಂದಾಗಿ ಬ್ರಿಟಿಷರ ಕೈಗೆ ಸಿಕ್ಕು ಹತರಾದರು.
ಪ್ರಫುಲ್ಲ ಚಾಕಿ
1888 -1908
ಖುದಿ ರಾಮ್ ಬೋಸ್ ಅವ ರೊಂದಿಗೆ ಸೇರಿಕೊಂಡು ಕಿಂಗ್ಸ್ ಫೋರ್ಡ್ ಅವರನ್ನು ಹತ್ಯೆ ಮಾಡುವ ಸಂಚಿನಲ್ಲಿ ಪ್ರಫುಲ್ಲ ಚಾಕಿ ಇದ್ದರು. ಎಲ್ಲ ರೀತಿಯಲ್ಲೂ ಸಂಚು ಹಾಕಿ ಸಿದ್ಧವಾದ ಸಮಯದಲ್ಲಿ ಈ ಸಂಚು ಪೊಲೀಸರಿಗೆ ತಿಳಿದುಬಂದಿತು. ಇದರಿಂದಾಗಿ ತಾನು ಬಂಧಿತನಾಗಬಹುದು ಎನ್ನುವ ಭಯದಿಂದ ಪ್ರಫುಲ್ಲ ಆತ್ಮಹತ್ಯೆಗೆ ಶರಣಾದರು. ಹಾಗಾಗಿ ಕಿಂಗ್ಸ್‌ಫೋರ್ಡ್ ಹತ್ಯೆಯ ಸಂಚು ಅಲ್ಲಿಯೇ ಕೊನೆಯಾಯಿತು.
ಕೆಎಂ ಮುನ್ಷಿ
1887 -1971
ಬುದ್ಧಿಜೀವಿ ಹಾಗೂ ಬರಹಗಾರರು ಆಗಿದ್ದ ಇವರು ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣರಾಗಿದ್ದರು. ಇವರ ಬರಹ ಭಾರೀ ಪ್ರಭಾವ ಬೀರುತ್ತಿತ್ತು. ಕಾಂಗ್ರೆಸ್ ಮುಖಂಡರಾಗಿದ್ದ ಇವರು ಸ್ವಾತಂತ್ರ್ಯ ಪಕ್ಷಕ್ಕೆ ಸೇರಿದರು. ಎಲ್ಲೆಡೆ ಪ್ರವಾಸ ಮಾಡಿ ರಾಷ್ಟ್ರೀಯತೆ ಬಗ್ಗೆ ಭಾಷಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರು ಸಮಕಾಲೀನ ಸನ್ನಿವೇಶಗಳ ಮೇಲೆ ಪ್ರಭಾವ ಬೀರುತ್ತಿದ್ದರು.
ಸೋಹನ್ ಸಿಂಗ್ ಭಾಕ್ನ
1870 -1968
ಇವರು ಗದಾರ್ ಪಕ್ಷ ಸಂಸ್ಥಾಪಕರು. ಉತ್ತರ ಅಮೆರಿಕದಲ್ಲಿ ಕ್ರಾಂತಿಕಾರಿ ಚಟುವಟಿಕೆಗೆ ಸಹಕರಿಸಿದ್ದರು. ಇವರು ಭಾರತಕ್ಕೆ ಬಂದಾಗ 1914ರಲ್ಲಿ ಬಂಧನಕ್ಕೀಡಾಗಿ ಸತತ 16 ವರ್ಷ ದೇಶದ ವಿವಿಧ ಕಾರಾಗೃಹಗಳಲ್ಲಿ ಸಜೆ ಅನುಭವಿಸಿದರು. ಇವರು ಬಿಡುಗಡೆಯಾಗಿ 2ನೇ ವಿಶ್ವಯುದ್ಧದ ವೇಳೆಗೆ ಕಿಸಾನ್ ಚಳವಳಿ ವೇಳೆ ಮತ್ತೆ ಬಂಧನಕ್ಕೊಳಪಟ್ಟರು.
ರಾಣಿ ಅಬ್ಬಕ್ಕ
1525 – 1570
ಬ್ರಿಟಿಷರಿಗಿಂತ ಮುಂಚೆ ಭಾರತಕ್ಕೆ ಅಡಿ ಇಟ್ಟವರು ಪೋರ್ಚುಗೀಸರು. ಹೀಗಾಗಿಯೇ 15ನೇ ಶತಮಾನದಲ್ಲಿ ಕರ್ನಾಟಕದ, ಅದರಲ್ಲೂ ತುಳುನಾಡಿನ ರಾಣಿ ಅಬ್ಬಕ್ಕ ಅವರು ಪೋರ್ಚುಗೀಸರ ವಿರುದ್ಧ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು. ಚೌಟ ರಾಜ ಮನೆತನದ ರಾಣಿಯಾಗಿದ್ದ ಇವರು ಅಭಯ ರಾಣಿ ಎಂದೇ ಹೆಸರುವಾಸಿಯಾಗಿದ್ದರು.
ಅಯ್ಯನ್ ಕಾಳಿ
1863 -1941
ಶಿಕ್ಷಣ ತಜ್ಞ, ಅರ್ಥಶಾಸ್ತ್ರಜ್ಞ ಅಯ್ಯನ್ ಕಾಳಿ ಅವರು ತಿರುವಾಂಕೂರಿನಲ್ಲಿ ದಲಿತ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಿದವರು. ದಲಿತ ಚಳುವಳಿಯನ್ನು ರೂಪಿಸಿದ ಮೊದ ಲಿಗರು. ಎತ್ತಿನಗಾಡಿ ಖರೀದಿಸಿ ಯಾವ ಕೇರಿಗಳಲ್ಲಿ ದಲಿತರಿಗೆ ಪ್ರವೇಶ ಇರುವುದಿಲ್ಲವೋ ಅಂಥಲ್ಲಿ ಪ್ರಚಾರ ಮಾಡಿದರು. ಇವರು ಹೋರಾಟ ಮಾಡುವ ವರೆಗೆ ಮಹಿಳೆಯರು ನೆಕ್ಲೆಸ್ ಧರಿಸುತ್ತಿರಲಿಲ್ಲ. ಕಲ್ಲಿನ ಸರ ಮಾಡಿ ಕೊಂಡು ಹಾಕಿಕೊಳ್ಳಬೇಕಿತ್ತು. ಪುರುಷರು ಗಡ್ಡ ಬಿಡುವಂತಿರಲಿಲ್ಲ.
ಎನ್.ಎಸ್. ಹರ್ಡೀಕರ್
1889 -1975
ಡಾ| ಎನ್.ಎಸ್. ಹರ್ಡೀಕರ್ ಅವರು ಲಾಲಾ ಲಜಪತ್ ರಾಯ್ ಅವರ ಪರಮಾಪ್ತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು, ತಮ್ಮ ಬರಹ ಮತ್ತು ಉಪನ್ಯಾಸಗಳಿಂದ ಜನರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದರು.
ಕೇಶವ ಬಲಿರಾಮ್ ಹೆಡ್ಗೆವಾರ್
1889 -1940
ಆರ್‌ಎಸ್‌ಎಸ್ ಸ್ಥಾಪನೆಗೂ ಮೊದಲು ಕೋಲ್ಕತ್ತದಲ್ಲಿ ವೈದ್ಯ ತರಬೇತಿ ನಡೆಸಿದ್ದರು. ಅನುಶೀಲನ ಸಮಿತಿಯ ಸದಸ್ಯರಾಗಿದ್ದ ಇವರು ಬಂಕಿಮ ಚಂದ್ರ ಚಟರ್ಜಿ ಅವರ ಬರಹದ ಪ್ರಭಾವಕ್ಕೊಳಗಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. 1921ರಲ್ಲಿ ಮಹಾರಾಷ್ಟ್ರದಲ್ಲಿ ಸೆರೆವಾಸ ಅನುಭವಿಸಿದರು.
ಹರ್ಡೀಕರ್ ಮಂಜಪ್ಪ
1886 – 1947
ಕರುನಾಡ ಗಾಂಧಿ ಎಂದೇ ಹೆಸರುವಾಸಿಯಾಗಿದ್ದ ಹರ್ಡೀಕರ್ ಮಂಜಪ್ಪ ಅವರು ತಮ್ಮ ಸಹೋದರನೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರಿ ಹೋರಾಟ ನಡೆಸಿದರು. ಸತ್ಯಾಗ್ರಹ, ದೇಶಭಕ್ತಿ ಮತ್ತು ರಾಷ್ಟ್ರೀಯತೆ ಕುರಿತಂತೆ ಸಾವಿರಕ್ಕೂ ಹೆಚ್ಚು ಭಾಷಣಗಳನ್ನು ಮಾಡಿ ಜನರನ್ನು ಹುರಿದುಂಬಿಸಿದರು. ಯುವಕರು ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದರು.
ಆಚಾರ್ಯ ನರೇಂದ್ರ ದೇವ್
1989-1956
ತಿಲಕ್ ಮತ್ತು ಅರಬಿಂದೋ ಇವರ ಆಶ್ರಯದಲ್ಲಿದ್ದರು. ಮಾರ್ಕ್ಸಿಸಂ ಹಾಗೂ ಬುದ್ಧಿಸಂ ತತ್ವ ಅಳವಡಿಸಿಕೊಂಡ ಇವರು ಬಡತನ ನಿರ್ಮೂಲನೆ ಹಾಗೂ ಕಾರ್ಮಿಕ ಶೋಷಣೆ ವಿರುದ್ಧ ದನಿಯಾದರು. ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷ ಸ್ಥಾಪಿಸಿದರು. ಸ್ವಾತಂತ್ರ್ಯ ಹೋರಾಟದ ವೇಳೆ ಹಲವು ಬಾರಿ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದರು.
ಗಡಿನಾಡ ಗಾಂಧಿ
ಖಾನ್ ಅಬ್ದುಲ್ ಗಫಾರ್ ಖಾನ್
ಗಡಿನಾಡ ಗಾಂಧಿ ಎಂದೇ ಹೆಸರಾದ ಖಾನ್ ಅಬ್ದುಲ್ ಗಫಾರ್ ಖಾನ್ ಪೇಶಾವರ ಮೂಲದ ಶಾಂತಿಪ್ರಿಯರು ಹಾಗೂ ವಕೀಲರಾಗಿ ಹಿಂದೂ- ಮುಸ್ಲಿಂ ಒಗ್ಗಟ್ಟಿಗೆ ಕಾರಣರಾದವರು. ಇವರು ಗಾಂಧಿ ಒಡನಾಡಿಯಾಗಿ ದ್ದವರು. ಇವರು 1920ರಲ್ಲಿ ಕುಡೈ ಕಿದ್‌ಮತ್ ಗರ್ ಚಳವಳಿ ಆರಂಭಿಸಿ ಬ್ರಿಟಿಷರ ಕೆಂಗಣ್ಣು, ಕ್ರೌರ್ಯಕ್ಕೆ ಗುರಿಯಾದರು. ಭಾರತ-ಪಾಕಿಸ್ಥಾನ ವಿಭಜನೆಯನ್ನು ವಿರೋಧಿಸಿದ್ದರು.
ರಾಜೇಂದ್ರ ಪ್ರಸಾದ್
1884 – 1963
ಮಹಾತ್ಮಾ ಗಾಂಧಿ ಪ್ರಭಾವಕ್ಕೆ ಒಳಗಾದ ಇವರು ಸ್ವಾತಂತ್ರ್ಯ ಹೋರಾಟಗಾರಕ್ಕೆ ಧುಮುಕಿದರು. ಗಾಂಧೀಜಿ ಚಂಪಾ ರಣ್ಯಕ್ಕೆ ಹೋದಾಗ ಅವರ ಜತೆಗೆ ರಾಜೇಂದ್ರ ಪ್ರಸಾದ್ ಕೂಡ ಹೋಗಿದ್ದರು. ಕ್ವಿಟ್ ಇಂಡಿಯಾ ಚಳವಳಿ ಮತ್ತು ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿದ್ದರು.
ಅಶ್ಫಕುಲ್ಲಾ ಖಾನ್
1900 -1927
ಸ್ವಾತಂತ್ರ್ಯ ಹೋರಾಟಗಾರ ಬಿಸ್ಮಿಲ್‌ರ ಅತ್ಯಾಪ್ತ ಗೆಳೆಯರಾಗಿದ್ದ ಅಶ್ಫಕುಲ್ಲಾ ಖಾನ್
ಖಾನ್ ಉತ್ತರಪ್ರದೇಶದ ಶಹಜಾನ ಪುರ ದವರು. ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸಹ ಸಂಸ್ಥಾಪಕ. ಸ್ವಾತಂತ್ರ್ಯಕ್ಕಾಗಿ ಕ್ರಾಂತಿ ಯನ್ನು ಮತ್ತೆ ಭುಗಿಲೆಬ್ಬಿಸಬೇಕೆಂದು ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಗೆಳೆಯರು ನಿರಂತರ ಚಿಂತಿಸುತ್ತಿದ್ದರು. 1922ರಲ್ಲಿ ಚೌರಿ ಚೌರಾ ಘಟನೆಯಲ್ಲಿ ಅಸಹಕಾರ ಚಳವಳಿಯನ್ನು ಹಿಂಪಡೆ ದಿ ದ್ದಕ್ಕೆ ಹಾಗೂ ಕಾಂಗ್ರೆಸ್ ನಾಯಕರ ಅಸಹಕಾರದಿಂದ ವಿಚಲಿತರಾದ ಇವರ ತಂಡ ಕ್ರಾಂತಿಕಾರಿ ಪ್ರತಿಭಟನೆಯ ಮಾರ್ಗ ಹಿಡಿಯಿತು.
ಕಮಲಾದೇವಿ ಚಟ್ಟೋಪಾಧ್ಯಾಯ
1903 -1988
ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಣಿಸಿಕೊಂಡ ಪ್ರಮುಖ ಮಹಿಳೆಯಾಗಿದ್ದರು. ಮೂಲತಃ ಕರ್ನಾಟಕದವರಾದ ಇವರು ಮಹಿಳೆಯರು ಮತ್ತು ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಈ ಮೂಲಕ ಗಾಂಧೀಜಿ ಅವರು ದೇಶಾದ್ಯಂತ ನಡೆಸುತ್ತಿದ್ದ ಸತ್ಯಾಗ್ರಹ ಚಳುವಳಿಗಳಿಗೆ ಜನರನ್ನು ಸೇರಿಸುವ ಕೆಲಸ ಮಾಡುತ್ತಿದ್ದರು. ಉತ್ತಮ ಸಂಘಟಕಿ ಎಂದೇ ಇವರು ಹೆಸರುವಾಸಿಯಾಗಿದ್ದರು.
ಬಾಬು ಜಗಜೀವನ್ ರಾಮ್
1908 – 1986
ಇವರು ವಿಧಾನಸಭೆಯ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಸುದೀರ್ಘವಾಗಿ ಸಂಸತ್ ಸದಸ್ಯರಾದ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ಇವರದ್ದು. ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಚಳವಳಿ ನಡೆಸಿದರು. ಪರಿಣಾಮ ಕಾಶಿ ವಿಶ್ವನಾಥ ದೇಗುಲ, ಮೀನಾಕ್ಷಿ ದೇಗುಲ, ಜಗನ್ನಾಥ ದೇಗುಲ ದಲಿತರಿಗೆ ಪ್ರವೇಶ ಮುಕ್ತವಾಯಿತು.
ಉಮಾಭಾಯಿ ಕುಂದಾಪುರ
1892 -1992
ಜಲಿಯನ್‌ವಾಲಾಭಾಗ್‌ನಲ್ಲಿ ಬ್ರಿಟಿಷರು ನಡೆಸಿದ ನರಮೇಧದ ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು ಉಮಾಭಾಯಿ ಕುಂದಾಪುರ ಅವರು. ಮೂಲತಃ ಹುಬ್ಬಳ್ಳಿಯವರಾದ ಇವರು ಹೋರಾಟಕ್ಕಾಗಿ ದೊಡ್ಡ ದೊಡ್ಡ ಗುಂಪುಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಧೊಂಡಿಯ ವಾಘ್
1800
ಕೆಳದಿ ಕೋಟೆ ಹೈದರ್ ಅಲಿ ಸೇನೆಗೆ ಶರಣಾಗಿ, ರಾಣಿ ವೀರಮ್ಮಾಜಿ ಕೂಡ ಸೆರೆಯಾಗಿದ್ದರು. ಈ ಯುದ್ಧದಲ್ಲಿ ಭಾಗಿಯಾಗಿದ್ದ ಅರೆಕಾಲಿಕ ಕೂಲಿ ಸೈನಿಕ ಧೊಂಡಿಯಾ ಎರಡೇ ದಿನದಲ್ಲಿ ಹೈದರ್ ಅಲಿ ಸೇನೆಯನ್ನು ಚೆಂಡಾಡಿದ್ದ. ಆದರೂ ವೀರಮ್ಮಾಜಿ ಸೇನೆ ಸೋತಿತ್ತು. ಆಗ ಅಲ್ಲಿನ ಬಹಳಷ್ಟು ಮಂದಿ ಹೈದರ್ ಅಲಿ ಸೇನೆ ಸೇರಿದ್ದರು. ಧೊಂಡಿಯಾ ಕೂಡ ಹೈದರ್ ಅಲಿ ಸೇನೆ ಸೇರಿ ಶತ್ರುವಿನ ರಹಸ್ಯ ತಿಳಿದ. ಬಳಿಕ ಹಳ್ಳಿಹಳ್ಳಿಗಳಲ್ಲಿ ಯುವಕರಿಗೆ ಗೆರಿಲ್ಲಾ ಮಾದರಿ ಯುದ್ಧ ತಂತ್ರ ಹೇಳಿಕೊಟ್ಟ. ಬಳಿಕ ಸವಣೂರು ನವಾಬನ ಸೇನೆ ಸೇರಿದ. ಬ್ರಿಟಿಷರು ರೈತರ ಮೇಲೆ ಕರಭಾರ ಹೇರಿದಾಗ ಇದರ ವಿರುದ್ಧ ಹೋರಾಡಿದ. ಆಗ ಟಿಪ್ಪು ಈತನನ್ನು ಜೈಲಿಗೆ ಅಟ್ಟಿದ್ದ. ಟಿಪ್ಪು ಮರಣಹೊಂದಿದ ಮೇಲೆ ಬಿಡುಗಡೆಯಾಗಿ ಮತ್ತೆ ಸೇನೆ ಕಟ್ಟಿ ಬ್ರಿಟಿಷರನ್ನು ಸದೆಬಡಿಯಲು ಆರಂಭಿಸಿದ. ಈತನ ಸೆರೆಗಾಗಿ ಬ್ರಿಟಿಷ್ ಸೈನ್ಯ ಬಹಳಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಕಡೆಗೆ 1800ರಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದರು.
ಮುಂಡರಗಿ ಭೀಮರಾವ್
1901- 1940
ಬ್ರಿಟಿಷರ ಆಳ್ವಿಕೆ ವೇಳೆ ಅಧಿಕಾರಿಯಾಗಿದ್ದ ಮುಂಡರಗಿ ಭೀಮರಾವ್ ಅವರಿಗೆ ಭಾರತೀಯರ ಕುರಿತ ಬ್ರಿಟಿಷರ ಧೋರಣೆ ಇಷ್ಟವಾಗಿರಲಿಲ್ಲ. ಭಾರತೀಯರ ಮೇಲಿನ ಅವರ ತಿರಸ್ಕಾರ, ಅವಮಾನವನ್ನು ಸಹಿಸದೇ ಬ್ರಿಟಿಷರ ವಿರುದ್ಧವೇ ತಿರುಗಿನಿಂತರು. ಹೀಗಾಗಿ ಬ್ರಿಟಿಷರು ಇವರನ್ನು ಕೆಲಸದಿಂದ ಕಿತುಹಾಕಿದರು. ಬಳಿಕ ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದ ಸೊರಟೂರು ದೇಸಾಯಿ, ಹೆಮ್ಮಿಗೆ ಕೆಂಚನಗೌಡ ಮತ್ತಿತರರ ಜತೆ ಸೇರಿ ತಂಡ ಕಟ್ಟಿ ಶಸ್ತ್ರಾಸ್ತ್ರ ಸಂಗ್ರಹಿಸಲು ಆರಂಭಿಸಿದರು. ಇದು ಗೊತ್ತಾಗಿ ಬ್ರಿಟಿಷರು ಆರಂಭದಲ್ಲೇ ಇವರಿಗೆ ಅಡ್ಡಿ ಮಾಡತೊಡಗಿದರು. ಇವರ ಹುಡುಕಾಟವನ್ನೂ ಆರಂಭಿಸಿದರು. ಸ್ಥಳಗಳನ್ನು ಬದಲಾಯಿಸುತ್ತ ಕೊಪ್ಪಳಕ್ಕೆ ಹೋದರು. ಕೊಪ್ಪಳದ ಕೋಟೆ ಮೇಲೆ ಬ್ರಿಟಿಷ್ ಸೇನೆ ದಂಡೆತ್ತಿ ಬಂದಿತ್ತು. ಆಗ ನಡೆದ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಭೀಮರಾವ್ ವೀರಮರಣವನ್ನಪ್ಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.