ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್

ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು.

ಕೀರ್ತನ್ ಶೆಟ್ಟಿ ಬೋಳ, Aug 9, 2022, 2:46 PM IST

independence 75 k

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ಶ್ರಮವಿದೆ. ಸಾವಿರಾರು ಮಂದಿ ಹೋರಾಟಗಾರರು ಎಲೆಮರೆಯ ಕಾಯಿಯಂತೆ ಮಹಾನ್ ನಾಯಕರ ಮರೆಯಲ್ಲಿಯೇ ಹೋರಾಡಿದ್ದಾರೆ. ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ಹೋರಾಡಿದವರಲ್ಲಿ ಕೇರಳ ಅಮಚಡಿ ತೇವನ್ ಕೂಡಾ ಒಬ್ಬರು. ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ನಿಂತು, ನಂತರ ಗಾಂಧೀಜಿ ಅನುಯಾಯಿಯಾಗಿ ಬೆಳೆದ ಅಮಚಡಿ ತೇವನ್ ಅವರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೆನೆಯಲೇ ಬೇಕು.

ಕೇರಳದ ಆಲಪ್ಪಿ ಜಿಲ್ಲೆಯ ಚೇರ್ತಲಾ ತಾಲೂಕಿನ ಪೆರುಂಬಲಂ ದ್ವೀಪದಲ್ಲಿ ಹುಟ್ಟಿದವರು ಈ ಅಮಚಡಿ ತೇವನ್. ಇವರು ಇಲ್ಲಿನ ಪುಲಯಾ ಸಮುದಾಯಕ್ಕೆ ಸೇರಿದವರು. ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು. ಆದರೆ ಇತರ ಪುಲಯ ಮಕ್ಕಳಿಗಿಂತ ಭಿನ್ನವಾಗಿ, ಅವರು ಕ್ರಾಂತಿಕಾರಿ ಮಹಿಳೆ ಅಚ್ಚುಕುಟ್ಟಿ ಅಮ್ಮನ ಸಹಾಯದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಭಾಗ್ಯ ಪಡೆದರು.

ಆದರೆ ಮೇಲ್ಜಾತಿಯ ಜನರ ಪ್ರತಿಭಟನೆಯಿಂದಾಗಿ ಸಾಕು ಮನೆಯಿಂದ ಹೊರಹಾಕಲ್ಪಟ್ಟ ಅಮಚಡಿ ತೇವನ್ ಇತರ ಪುಲಯ ಜನರಂತೆ ಗದ್ದೆಯಲ್ಲಿ ಜೀತದ ಕೆಲಸ ಮಾಡಬೇಕಾಯಿತು. ಆದರೆ ಅಕ್ಷರ ಜ್ಞಾನ ಹೊಂದಿದ್ದ ತೇವನ್, ಸಮಾಜ ಸುಧಾರಕರ ಕೃತಿಗಳನ್ನು ಓದುತ್ತಿದ್ದರು. ಈ ಸಮಯದಲ್ಲಿ ಅವರು ಗಾಂಧೀಜಿ ಮತ್ತು ನಾರಾಯಣ ಗುರುಗಳ ಬರಹಗಗಳಿಂದ ಆಕರ್ಷಿತರಾದರು.

ಈ ವೇಳೆ ಪ್ರಕರಣವೊಂದರಲ್ಲಿ ಮೇಲ್ಜಾತಿಯ ಗುಂಪೊಂದು ತೇವನ್ ರನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಿತ್ತು. ಪೊಲೀಸರು ಈತನನ್ನು ಬಂಧಿಸಿ ಕ್ರೂರವಾಗಿ ಹಿಂಸಿಸಿದ್ದರು. ಅಸ್ಪೃಶ್ಯತೆ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದ ಅಮಚಡಿ ತೇವನ್ ಈ ಕಾರಣದಿಂದಲೇ ಕಾಂಗ್ರೆಸ್ಸಿನ ಪ್ರಬಲ ಬೆಂಬಲಿಗರಾದರು. ತೇವನ್ ಎಷ್ಟು ರೆಬೆಲ್ ಆಗಿದ್ದರು ಎಂದರೆ ಆಗ ಕೆಳ ಜಾತಿಯವರು ಧರಿಸಲೇ ಬಾರದು ಎಂಬಂತಿದ್ದ ಬಿಳಿ ಬಟ್ಟೆಯನ್ನೇ ಅವರು ಧರಿಸುತ್ತಿದ್ದರು. ಇದರಿಂದ ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅಸ್ಪೃಶ್ಯತೆ ಮತ್ತು ಅನಾಚಾರದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದಾಗ ಟಿ.ಕೆ. ಮಾಧವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದರು. ಇದರ ಪ್ರಯತ್ನದ ಭಾಗವಾಗಿ ತೇವನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಟಿ.ಕೆ.ಮಾಧವನ್ ಪೂತೊಟ್ಟ ದೇವಸ್ಥಾನಕ್ಕೆ ಪ್ರವೇಶಿಸಿದಾಗ ಅಮಚಡಿ ತೇವನ್ ಮತ್ತು ಕೆಳವರ್ಗದ ಪುಲ್ಯರ ಗುಂಪು ಕೂಡ ದೇವಸ್ಥಾನವನ್ನು ಪ್ರವೇಶಿಸಿ ದೇವರ ಮುಂದೆ ಪ್ರಾರ್ಥಿಸಿದರು. ಇದು ಮೆಲ್ಜಾತಿಗೆ ಅರಗಿಸಲಾಗಲಿಲ್ಲ. ಪರಿಣಾಮ ತೇವನ್ ಮತ್ತು ಟಿ.ಕೆ.ಮಾಧವನ್ ಅವರನ್ನು ಬಂಧಿಸಿ ಎರಡು ವಾರಗಳ ಕಾಲ ಜೈಲಿನಲ್ಲಿರಿಸಲಾಯಿತು.

ಪ್ರಬಲ ಕಾಂಗ್ರೆಸ್ಸಿಗರಾಗಿ, ತೇವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಸೇರಿದರು. ಸತ್ಯಾಗ್ರಹದ ಸಮಯದಲ್ಲಿ ಕೆ.ಪಿ.ಕೇಶವ ಮೆನನ್ ಮತ್ತು ಟಿ.ಕೆ.ಮಾಧವನ್ ಅವರು ತೇವನ್ ಅವರನ್ನು ಬೆಂಬಲಿಸಿದರು. ಅಲ್ಲದೆ ಗಾಂಧೀಜಿಯನ್ನು ಭೇಟಿಯಾಗಲು ತೇವನ್‌ ಗೆ ಸಹಾಯ ಮಾಡಿದವರು ಕೆ.ಪಿ.ಕೇಶವ ಮೆನನ್. ಕೆಳವರ್ಗದ ಜನರಲ್ಲಿ ಮದ್ಯ ವ್ಯಸನದ ವಿರುದ್ಧ ಪ್ರಚಾರ ಮಾಡಬೇಕು ಎಂದು ಗಾಂಧೀಜಿ ತೇವನ್‌ ಗೆ ಸಲಹೆ ನೀಡಿದ್ದರು. ಅಲ್ಲದೆ ಈ ಕೆಳ ಜಾತಿ ಜನರು ಎಲೆಗಳು ಮತ್ತು ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸುವುದನ್ನು ಬಿಡುವಂತೆ ಮಾಡಬೇಕು ಎಂದು ತೇವನ್ ಗೆ ಗಾಂಧೀಜಿ ಸೂಚಿಸಿದ್ದರು.

ವೈಕ್ಕಂ ಸತ್ಯಾಗ್ರಹದ ಸಮಯದಲ್ಲಿ ಅಮಚಡಿ ತೇವನ್ ಮೇಲೆ ಉನ್ನತ ಜಾತಿಯ ಹಲವರು ದಾಳಿ ಮಾಡಿದ್ದರು. ಈ ವೇಳೆ ತೇವನ್ ಅವರ ಕಣ್ಣುಗಳಿಗೆ ಸುಣ್ಣದ ದ್ರಾವಣವನ್ನು ಸುರಿದು, ಚಿತ್ರಹಿಂಸೆ ನೀಡಿದ್ದರು. ಇದರಿಂದ ಅವರು ಬಹುತೇಕ ಕುರುಡರಾಗಿದ್ದರು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೆ.ಪಿ.ಕೇಶವ ಮೆನನ್, ಗಾಂಧೀಜಿಯವರು ತೇವನ್ ಗೆ ಔಷಧಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಇದು ತೇವನ್ ಅವರಿಗೆ ದೃಷ್ಟಿ ಮರಳಿ ಪಡೆಯಲು ನೆರವಾಯಿತು.

ವೈಕ್ಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಚಡಿ ತೇವನ್ ಮತ್ತು ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು. 1925 ರಲ್ಲಿ ಅಮಚಡಿ ತೇವನ್ ಜೈಲಿನಿಂದ ಬಿಡುಗಡೆ ಹೊಂದಿ ಊರಿಗೆ ಮರಳಿದಾಗ, ಅವರ ಮನೆಯನ್ನು ಧ್ವಂಸ ಮಾಡಲಾಗಿತ್ತು. ಮೇಲ್ಜಾತಿಯವರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಟಿ.ಕೆ ಮಾಧವನ್ ಅವರ ಸಹಾಯದಿಂದ ಅದೇ ದ್ವೀಪದಲ್ಲಿ ತೇವನ್ ಅವರಿಗೆ ಒಂದು ಎಕರೆ ಜಮೀನು ಸಿಕ್ಕಿತು.

ಕೊನೆಯವರೆಗೂ ಸಮಾಜಕ್ಕಾಗಿ, ದೇಶಕ್ಕಾಗಿ ಹೋರಾಡಿದ ಅಮಚಡಿ ತೇವನ್ ಅವರ ನೆನಪಿಗಾಗಿ ಅಮಚಡಿ ತುರುತ್‌ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb tiranga sale 4

ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.