ಎಚ್ಚೆಸ್ವಿ ಯವರ ಟಾಪ್ 6 ಪುಸ್ತಕಗಳು


Team Udayavani, Feb 6, 2020, 5:14 AM IST

sam-11

ಎಚ್ಚೆಸ್ವಿ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಕವಿಯಾಗಿಯೇ ಹೆಚ್ಚು ಪರಿಚಿತರು. ಅವರು ಉಳಿದ ಕೃತಿಗಳು ಕೂಡ ಉತ್ತಮ ಅಭಿರುಚಿಯ ಅನುಭವಕ್ಕೆ ತೆರೆದುಕೊಳ್ಳಬಹುದಾದಂಥವು. ಸಾಹಿತ್ಯದ ಬಹುಪಾಲು ಎಲ್ಲ ಪ್ರಕಾರಗಳಿಗೂ ತಮ್ಮನ್ನು ತೆರೆದುಕೊಂಡಿರುವ ಎಚ್ಚೆಸ್ವಿ ಅವರ ಸಾಹಿತ್ಯದ ವಿವಿಧ ಮಜಲುಗಳನ್ನು, ಅಭಿವ್ಯಕ್ತಿಯ ವೈವಿಧ್ಯತೆಗಳನ್ನು ಬಿಂಬಿಸುವಂಥ ಹತ್ತು ಪುಸ್ತಕಗಳನ್ನು ಇಲ್ಲಿ ಪರಿಚಯಿಸಲಾಗಿದೆ.

1. ಆಪ್ತಗೀತೆ (ಭಗವದ್ಗೀತೆಯ ತಿಳಿಗನ್ನಡ ಅವತರಣ)
ಎಚ್ಚೆಸ್ವಿಯವರ ಸೃಜನಶೀಲತೆ ಕನ್ನಡದ ಹಲವು ಪರಂಪರೆಗಳಲ್ಲಿ ಮಿಂದೇಳುವಂಥದು. ಅವರ ಕಾವ್ಯಸೃಷ್ಠಿಯ ಅನೇಕ ಆಯಾಮಗಳಲ್ಲಿ ಹಳಗನ್ನಡ ಕಾವ್ಯಗಳನ್ನು ತಿಳಿಗನ್ನಡದಲ್ಲಿ ಕಟ್ಟಿಕೊಡುವ ಪ್ರಯತ್ನವೂ ಒಂದು. ಪಂಪನ “ವಿಕ್ರಮಾರ್ಜುನ ವಿಜಯ, “ಆದಿಪುರಾಣ’, “ಯಶೋಧರ ಚರಿತೆ ಯಂಥ ಕಾವ್ಯಗಳನ್ನು ಹೊಸಗನನ್ನಡ ಪರಿವೇಷದಲ್ಲಿ ನೋಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಜೊತೆಗೆ “ಋಗ್ವೇದ ಸ್ಪುರಣ’ (2017, 2019), “ಶ್ರೀರಾಮಚಾರಣ’ ಮತ್ತು “ಆಪ್ತಗೀತೆ’ ಮೂಲಕ ತಿಳಿಗನ್ನಡ ಅವತರಣಗಳನ್ನು ಹೊರತಂದಿದ್ದಾರೆ.

3. ಎಲ್ಲ ನೆನಪಾಗುತಿದೆ (ಅನಾತ್ಮಕಥನ)
ನಮ್ಮ ಬದುಕಿನ ಎಲ್ಲ ಸಂಗತಿಗಳನ್ನೂ ಕಾವ್ಯದಲ್ಲಿ, ಕಾದಂಬರಿಯಲ್ಲಿ ತರಲು ಸಾಧ್ಯವಿಲ್ಲ ಮತ್ತು ಆ ಒಬ್ಬ ಲೇಖಕನ ಬರವಣಿಗೆಯನ್ನು, ಹಿಂದಿರುವ ವಿಚಾರಗಳನ್ನು ಗ್ರಹಿಸಲು ಕವಿಯ/ ಕಥನಕಾರನ ಆತ್ಮಕತೆಗಳು ಸಹಾಯಕವಾಗುತ್ತವೆ. ಅಂಥದ್ದೇ ಒಂದು ರಚನೆ ಇದು. “ಇದರಲ್ಲಿನ ತಿಳಿಹಾಸ್ಯ, ಮುಖವಾಡಗಳಿಲ್ಲದ ವಿವರಗಳು, ಜೀವ ಒಳಗೊಳಗೇ ಇಳಿಯುತ್ತಾ ಮಾತಾಡುವ ಪರಿ ಎಲ್ಲವೂ ಇಷ್ಟವಾಯಿತು’ ಎಂದಿದ್ದಾರೆ ವೈದೇಹಿ. ಎಚ್ಚೆಸ್ವಿಯವರ “ಆತ್ಮಕಥೆ ಕೇವಲ ಅವರ “ಆತ್ಮಕಥನ’ ಮಾತ್ರವಾಗದೆ ಒಬ್ಬ ಕವಿಯ, ಪರಿಸರದ, ಸಮಾಜದ, ಕಾಲದ “ಕನ್ನಡಿಯಾಗಿಯೂ ಕಾಣುವುದು ಇಲ್ಲಿನ ವಿಶೇಷ.

4. ಉತ್ತರಾಯಣ ಮತ್ತು…
ದಾಂಪತ್ಯ ಪರಿಕಲ್ಪನೆ ಕುರಿತ ಕವಿತೆಗಳು ಕನ್ನಡದಲ್ಲಿ ಹಲವು ಗೀತೆಗಳು, ಗುತ್ಛಗಳು ಬಂದಿವೆ. ಬೇಂದ್ರೆಯವರ “ಸಖೀಗೀತೆ, ಕುವೆಂಪು, ಕೆ.ಎಸ್‌.ನ. ಮುಂತಾದವರ ಕವಿತೆಗಳು ಪ್ರಸಿದ್ಧವಾಗಿವೆ. ಎಚ್ಚೆಸ್ವಿ ಅವರ “ಉತ್ತರಾಯಣ ಇವೆಲ್ಲವುಗಳಿಗಿಂತ ಭಿನ್ನ. ಇಲ್ಲಿನ ಬಹುಪಾಲು ಕವಿತೆಗಳು ಭಾವಗೀತಾತ್ಮಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ನಮ್ಮನ್ನು ಒಳಗೊಳ್ಳುತ್ತವೆ. ಕೃಷ್ಣಜೀವನದ ವಿವಿಧ ನೆಲೆಗಳನ್ನು ಪರಿಚಯಿಸುವ “ಆಪ್ತಗೀತ(ಹೊಸ ಒಡಂಬಡಿಕೆ) ದೇವಕೃಷ್ಣನ ಕಷ್ಟಗಳನ್ನು ಚಿತ್ರಿಸುತ್ತಲೇ ಆ ಆಪ್ತತೆ ನಮ್ಮ ಅಂತರಂಗದೊಳಗಿನ ಬೇಗುದಿ, ನಿಟ್ಟುಸಿರು, ಅಸಹಾಯಕತೆಗಳನ್ನು ಪ್ರಕಟಪಡಿಸುತ್ತದೆ. ಪತ್ನಿಯ ಸಾವಿನ ದುಃಖವೂ, ಕವಿಯ ಎದೆಕಂಪನದ ಸಾಲುಗಳಾಗಿವೆ.

5. ಕುಮಾರವ್ಯಾಸ ಕಥಾಂತರ
ಕುಮಾರವ್ಯಾಸನ ಪ್ರತಿಭೆಗೆ ಮಾರುಹೋಗದವರಿಲ್ಲ. ಕವಿಗೆ ಕವಿ ಮಣಿವನ್‌ ಎಂಬ ಮಾತೊಂದಿದೆ. ಹಾಗೆ ಕನ್ನಡದ ಮೇರು ಪ್ರತಿಭೆ ಕುಮಾರವ್ಯಾಸನ ಕಾವ್ಯಕ್ಕೆ ಮತ್ತೂಂದು ಕವಿ ಪ್ರತಿಭೆ ಪ್ರತಿಸ್ಪಂದಿಸಿದ ಬಗೆ ಯಾವ ರೀತಿಯಲ್ಲಿರಬಹುದು ಎಂಬುದಕ್ಕೆ ಉದಾಹರಣೆ ಎಚ್ಚೆಸ್ವಿ ಅವರ ಕುಮಾರವ್ಯಾಸ ಕಥಾಂತರಗಳು (ಈಗಾಗಲೇ ಆದಿಪರ್ವ- ಸಭಾ ಪರ್ವ), ಅರಣ್ಯಪರ್ವ ಸಭಾಪರ್ವ ಸಂಪುಟಗಳು ಬಂದಿವೆ. ಕೊನೆಯ ಸಂಪುಟದ ಸಿದ್ಧತೆಯಲ್ಲಿ ಅವರು ತೊಡಗಿದ್ದಾರೆ). ಕುಮಾರವ್ಯಾಸ ಒಂದು ಪದ್ಯದಲ್ಲಿ ಕುರುಕ್ಷೇತ್ರದತ್ತ ಹೊರಟ ಪಾಂಡವರ ಸೇನೆಯ ಪಾದಧೂಳಿಯನ್ನು ವರ್ಣಿಸುತ್ತಾ “ಬ್ರಹ್ಮಶಿವನಾದನು ಎಂಬ ಉಪಮೆಯನ್ನು ಬಳಸುತ್ತಾನೆ. ಬ್ರಹ್ಮ ಸೃಷ್ಟಿಕರ್ತನಾದರೆ ಶಿವ ಲಯಕಾರ. ಇದನ್ನು ಎಚ್ಚೆಸ್ವಿ ತಮ್ಮ ದೇಸೀ ಶೈಲಿಯ ಸಾಲುಗಳಲ್ಲಿ “ಕಾಯುವ ದೈವ ಕೊಲ್ಲುವ ದೈವವಾಯಿತು ಎನ್ನುತ್ತಾರೆ. ಇಂಥ ಅನೇಕ ವಿವರಗಳು ಪ್ರತಿ ಪುಟಗಳಲ್ಲಿ ವ್ಯಕ್ತವಾಗಿವೆ.

6. ಬಾರೋ ಬಾರೋ ಮಳೆರಾಯ (ಮಕ್ಕಳ ಪದ್ಯಗಳು)
“ಕಥನದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ಪಳಗಿಸಿಕೊಂಡ ಎಚ್ಚೆಸ್ವಿಯವರ ಪ್ರವೇಶದಿಂದಾಗಿ ಮಕ್ಕಳ ಕವಿತೆಗೊಂದು ವಸಂತಸ್ಪರ್ಶವೇ ದೊರಕಿದೆ ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ’ ಇದು ಈ ಪುಸ್ತಕಕ್ಕೆ ಜಿ.ಎಸ್‌. ಶಿವರುದ್ರಪ್ಪನವರು ಬೆನ್ನುಡಿಯಲ್ಲಿ ಬರೆದಿರುವ ಸಾಲುಗಳು. ಮಕ್ಕಳ ಮನೋಲೋಕವನ್ನು ಸಹಜವಾಗಿ ಮತ್ತು ಸರಳವಾಗಿ ಅಷ್ಟೇ ಆಪ್ತವಾಗಿ ಬಿಚ್ಚಿಡುವ ಪ್ರಯತ್ನವನ್ನು ಎಚ್ಚೆಸ್ವಿ ಮಾಡಿದ್ದಾರೆ. ಸುಮ್ಮನೆ ಮಕ್ಕಳೇ ಓದಿ ಖುಷಿಪಡಬಹುದಾದ ಹಲವು ಕವಿತೆಗಳು ಇಲ್ಲಿವೆ.

ಆಯ್ಕೆ ಮತ್ತು ವಿವರಣೆ: ಸಂಧ್ಯಾ ಹೆಗಡೆ ದೊಡ್ಡಹೊಂಡ.

ಟಾಪ್ ನ್ಯೂಸ್

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jai-54

ಕಲ್ಯಾಣಕ್ಕೆ ಭರವಸೆ; ಸಮ್ಮೇಳನಕ್ಕೆ ತೆರೆ

jai-51

ನೇರ ಪ್ರಶ್ನೆಗೆ ಓರೆ ಉತ್ತರ

jai-50

ಅಶ್ಲೀಲತೆ ಬಿಂಬಿಸುವ ಚಿತ್ರಕ್ಕೂ ಸಬ್ಸಿಡಿ: ಆಕ್ಷೇಪ

jai-49

ಸರ್ಕಾರ ಬಿಡಿಎಗೆ ಬೀಗ ಹಾಕಲಿ: ಭೂವಿಜ್ಞಾನಿ ಪ್ರಕಾಶ್‌

jai-53

ಕಸಾಪ ಚುಕ್ಕಾಣಿ ಹಿಡಿಯಲು ಈಗಲೇ ಪ್ರಚಾರ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.