ಜಗತ್ತಿನ ಅತಿದೊಡ್ಡ ಹಾಗೂ ಭವ್ಯ ಸ್ಟೆಪ್ ವೆಲ್ ‘ಚಾಂದ್ ಬಾವೊರಿ’..!
ರಾಜಸ್ಥಾನದ ರಾಜಧಾನಿ ಜೈಪುರದಿಂದ 93 ಕಿಲೋಮೀಟರ್ ದೂರದಲ್ಲಿರುವ ಅಭನೇರಿ ಎಂಬ ಹೆಸರಿನ ಪುಟ್ಟ ಪಟ್ಟಣದಲ್ಲಿದೆ ಚಾಂದ್ ಬಾವೊರಿ.
Team Udayavani, Feb 22, 2021, 6:54 PM IST
ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಶತಮಾನಗಳ ಹಿಂದೆ, ಈ ಪ್ರದೇಶಗಳಲ್ಲಿ ಜನರಿಗೆ ವರ್ಷಪೂರ್ತಿ ನೀರು ಒದಗಿಸಲು ಸ್ಟೆಪ್ ವೆಲ್‌ಗಳನ್ನು ನಿರ್ಮಿಸಲಾಗುತ್ತಿತ್ತು. ಈ ಬಾವಿಗಳು ಜಲಾಶಯಗಳು ಅಥವಾ ಶೇಖರಣಾ ಟ್ಯಾಂಕ್ ಗಳಾಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು.
ಬೌರಿಸ್, ಬಾವೊಲಿಸ್ ಮತ್ತು ವಾವ್ ಎಂದು ವಿಭಿನ್ನವಾಗಿ ಕರೆಯಲ್ಪಡುವ ಸ್ಟೆಪ್ ವೆಲ್‌ಗಳು ಹೆಸರೇ ಹೇಳುವ ಹಾಗೆ ಬಾವಿಯ ಗೋಡೆಗಳಲ್ಲಿ ಮೆಟ್ಟಿಲುಗಳನ್ನು ಅಥವಾ ಸ್ಟೆಪ್ಸ್ ಗಳನ್ನು ಹೊಂದಿದೆ. ಅವುಗಳ ಸಹಾಯದಿಂದ ಕೆಳಗಡೆ ಸಂಗ್ರಹವಾದ ನೀರನ್ನು ತೆಗೆಯಲು ಸಹಕಾರಿಯಾಗಿದೆ. ಸ್ಟೆಪ್ ವೆಲ್‌ಗಳು ಸಾಮಾನ್ಯ ಬಾವಿಗಳಿಗಿಂತ ದೊಡ್ಡದಾಗಿರುತ್ತವೆ.ಬಹಳ ವಿಶೇಷವಾಗಿ ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿವೆ, ಚಾಂದ್ ಬಾವರಿ ಇದು ಭಾರತದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಸ್ಟೆಪ್ ವೆಲ್ ಗಳಲ್ಲಿ ಒಂದಾಗಿದೆ.
ಓದಿ: ನಿಮ್ಮ ಪಾಕೆಟ್ ಖಾಲಿ ಮಾಡುವ ಮೂಲಕ ಮೋದಿ ಸರ್ಕಾರ ದೊಡ್ಡ ಕೆಲಸ ಮಾಡುತ್ತಿದೆ : ರಾಹುಲ್ ಗಾಂಧಿ
ಚಾಂದ್ ಬಾವೊರಿ ಆಳವಾದ ನಾಲ್ಕು ಬದಿಯ ರಚನೆಯಾಗಿದ್ದು, ಒಂದು ಬದಿಯ ಮೇಲೆ ಅಗಾಧವಾದ ದೇವಾಲಯವಿದೆ. ಇದರ ರಚನೆಯು 13 ಅಂತಸ್ತಿನ ಆಳವಾಗಿದೆ ಎಂದು ನಂಬಲಾಗಿದೆ. 3,500 ಕಿರಿದಾದ ಮೆಟ್ಟಿಲುಗಳನ್ನು ಬಾವಿಯ ಕೆಳಭಾಗಕ್ಕೆ 20 ಮೀಟರ್ ಆಳದಲ್ಲಿ ಹಸಿರು ಪಾಚಿಗಟ್ಟಿದ ನೀರಿಗೆ ಇಳಿಯುವ ಹಾಗೆ ನಿರ್ಮಿಸಲಾಗಿದೆ. ಬಾವಿಯ ಒಂದು ಬದಿಯಲ್ಲಿ ಪೆವಿಲಿಯನ್ ಮತ್ತು ವಿಶ್ರಾಂತಿ ಕೊಠಡಿ ಕೂಡ ಇದೆ.
ಇದರ ನಿರ್ಮಾಣದ ಬಗ್ಗೆ ಯಾವುದೇ ದಾಖಲಾತಿಗಳಿಲ್ಲದಿದ್ದರೂ, ಇದನ್ನು 8 ಮತ್ತು 9 ನೇ ಶತಮಾನಗಳ ನಡುವೆ ನಿಕುಂಬಾ ರಾಜವಂಶದ ರಾಜ ಚಂದಾ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆ ಭಾಗದ ರಾಜ್ಯ ವಂಶದ ವಜ್ರ ವೈಡೂರ್ಯಗಳನ್ನು ಅಡಗಿಸಿಡುವ ತಾಣವೆಂದು ಪರಿಗಣಿಸಿದ್ದ ಕಾರಣದಿಂದ ಚಾಂದ್ ಬಾವೊರಿ ರಾಜಸ್ಥಾನದ ಪ್ರವಾಸೋದ್ಯಮದ ಪಟ್ಟಿಯಲ್ಲಿ ಈ ಹಿಂದೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಅದು ಬೆಳಕಿಗೆ ಬಂದಿದೆ.
ರಾಜಸ್ಥಾನದ ರಾಜಧಾನಿ ಜೈಪುರದಿಂದ 93 ಕಿಲೋಮೀಟರ್ ದೂರದಲ್ಲಿರುವ ಅಭನೇರಿ ಎಂಬ ಹೆಸರಿನ ಪುಟ್ಟ ಪಟ್ಟಣದಲ್ಲಿದೆ ಚಾಂದ್ ಬಾವೊರಿ. ಈ ಸ್ಥಳವನ್ನು ಅಭನಗರಿ (ಪ್ರಕಾಶಮಾನ ನಗರ ) (City of Brightness) ಎಂದು ಕರೆಯಲಾಗುತ್ತಿತ್ತು. ಕಾಲಾಂತರದ ಬೆಳವಣಿಗೆಯಲ್ಲಿ ಅಭನಗರಿ ಅಭನೇರಿಯಾಗಿ ಬದಲಾಯಿತು ಎಂದು ಇತಿಹಾಸ ಹೇಳುತ್ತದೆ.
ಈ ಬಾವಿಯೊಳಗಿರುವ ಅತ್ಯಂತ ಮನೋಹರವಾಗಿ ನಿರ್ಮಿಸಲ್ಪಟ್ಟ ಮೆಟ್ಟಿಲುಗಳು ಭಾರತೀಯ ಶಿಲ್ಪ ಕಲೆಯನ್ನು ಜಗತ್ತಿಗೆ ತೋರಿಸಿಕೊಡುತ್ತದೆ ಎನ್ನುವುದರಲ್ಲಿ ಸಂಶಯ ಬೇಕಾಗಿಲ್ಲ. ಆಧುನೀಕರಣಗೊಳ್ಳದ ಕಾಲಘಟ್ಟದಲ್ಲಿ ನಿರ್ಮಿಸಲ್ಪಟ್ಟ ಈ ಶಿಲ್ಪ ಕಲೆ ಹಿಂದಿನ ಯುಗದ ಶಿಲ್ಪಿಗಳ ಬುದ್ಧಿಮತ್ತೆಯನ್ನು ಎತ್ತಿ ತೋರಿಸುತ್ತದೆ. ಈ ಮೆಟ್ಟಿಲುಗಳು ಮಾಂತ್ರಿಕ ಜಟಿಲವನ್ನು ರೂಪಿಸುತ್ತವೆ ಮತ್ತು ಅದರ ಪರಿಣಾಮವಾಗಿ ರಚನೆಯ ಮೇಲೆ ಬೆಳಕು ಮತ್ತು ನೆರಳಿನ ಆಟವು ಮನಮೋಹಕ ದೃಶ್ಯವನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.
ನೀರನ್ನು ಸಂರಕ್ಷಿಸುವುದರ ಜೊತೆಗೆ, ಚಾಂದ್ ಬಾವೊರಿ ಅಭನೇರಿ ಸ್ಥಳೀಯರಿಗೆ ತಮ್ಮ ಸಮುದಾಯವನ್ನು ಒಟ್ಟುಗೂಡಿಸುವ ಸ್ಥಳವೂ ಆಗಿತ್ತು. ಪಟ್ಟಣವಾಸಿಗಳು ಮೆಟ್ಟಿಲಿನ ಸುತ್ತಲೂ ಚೆನ್ನಾಗಿ ಕುಳಿತು ಬೇಸಿಗೆಯ ದಿನಗಳಲ್ಲಿ ಬೇಸರ ಕಳೆಯುವುದಕ್ಕೆ ಕೂತು ಹರಟೆ ಮಾಡುತ್ತಾ ಕಾಲ ಕಳೇಯುತ್ತಿದ್ದರು. ಕೆಳಭಾಗದಲ್ಲಿ ಬಾವಿ ಯಾವಾಗಲೂ ಮೇಲ್ಭಾಗಕ್ಕಿಂತ 5-6 ಡಿಗ್ರಿ ತಂಪಾಗಿರುತ್ತದೆ.
ಬಾವರಿಯ ಪಕ್ಕದಲ್ಲಿ ಹರ್ಷತ್ ಮಾತಾ ದೇವಾಲಯದ ಅವಶೇಷಗಳಿವೆ, ಇದನ್ನು ಚಂದ್ ಬಾವೋರಿ ನಿರ್ಮಿಸಿದ ಸ್ವಲ್ಪ ಸಮಯದ ನಂತರ 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಅಲ್ಲಿನ ಸ್ಥಳ ಪುರಾಣ ತಿಳಿಸುತ್ತದೆ. ದೇವಾಲಯಕ್ಕೆ ಪ್ರವೇಶಿಸುವ ಮೊದಲು ಯಾತ್ರಿಕರು ಬಾವಿಯಲ್ಲಿ ಕೈ ಕಾಲು ತೊಳೆಯುವುದು ಒಂದು ಸಂಪ್ರದಾಯ. ಈ ದೇವಾಲಯವನ್ನು 10 ನೇ ಶತಮಾನದಲ್ಲಿ ಮಹಮೂದ್ ಘಜ್ನಿ ನಾಶಪಡಿಸಿದ ಎಂದು ಇತಿಹಾಸ ತಿಳಿಸುತ್ತದೆ. ಆ ದೇವಾಲಯದ ಅನೇಕ ಸ್ತಂಭಗಳು ಮತ್ತು ಪ್ರತಿಮೆಗಳು ಈಗ ದೇವಾಲಯದ ಪ್ರಾಂಗಣದಲ್ಲಿವೆ.
ಓದಿ: 3000 ಹಾಡು ಮಾಡುವವರೆಗೂ ನಾನು ಯಾರಂತಾನೇ ಗೊತ್ತಿರಲಿಲ್ಲ | Udayavani
ಸ್ಟೆಪ್ ವೆಲ್ ಗಳಲ್ಲಿ ಅತ್ಯಂತ ಪ್ರಸಿದ್ಧವಾದವುಗಳು ಮಧ್ಯಕಾಲೀನ ಯುಗದಲ್ಲಿ ನಿರ್ಮಿಸಲ್ಪಟ್ಟವುಗಳು. ಅವು ಬಹಳ ಹಿಂದೆಯೇ ನಿರ್ಮಿಸಲ್ಪಟ್ಟವುಗಳು ಎಂಬ ಪುರಾವೆಗಳಿವೆ. ಅವುಗಳ ಪೂರ್ವಗಾಮಿಗಳನ್ನು ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ 3,000 ಕ್ಕೂ ಹೆಚ್ಚು ಸ್ಟೆಪ್ ವೆಲ್‌ಗಳನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಆಧುನಿಕ ಯುಗದಲ್ಲಿ ಅನೇಕವು ದುರಸ್ತಿಯಲ್ಲಿದ್ದರೆ ಮತ್ತು ಕೆಲವು ಹಾಳು ಬಿದ್ದಿವೆ. ಇನ್ನು ನೂರಾರು ಮೆಟ್ಟಿಲು ಬಾವಿಗಳು(ಸ್ಟೆಪ್ ವೆಲ್ ಗಳು) ಇನ್ನೂ ಅಸ್ತಿತ್ವದಲ್ಲಿವೆ.
–ಶ್ರೀರಾಜ್ ವಕ್ವಾಡಿ
ಓದಿ: ದೆಹಲಿ ಹಿಂಸೆಯ ಹಿಂದೆ ಕಾಂಗ್ರೆಸ್ ಪಕ್ಷ: ಖರ್ಗೆ ಹೇಳಿಕೆಗೆ ನಳಿನ್ ಕುಮಾರ್ ತಿರುಗೇಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…
International: New Orleans-ದಾಳಿ ನಡೆಸಿದಾತ ಅಮೆರಿಕದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Year Ender: 2024ರಲ್ಲಿ ಬಣ್ಣದ ಲೋಕದಿಂದ ದೂರ ಉಳಿದ ಬಿಟೌನ್ ಸ್ಟಾರ್ ಗಳಿವರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.