ಹಿಂದುತ್ವ ಹೇಳುವವರು ಭಾರತೀಯರಲ್ಲ, ಕೋಮುವಾದಿಗಳು : ಸಿದ್ದರಾಮಯ್ಯ ವಾಗ್ದಾಳಿ
Team Udayavani, Feb 22, 2021, 7:26 PM IST
ಮಂಗಳೂರು : ಕೋಮುವಾದವನ್ನು ಯಾರೇ ಮಾಡಲಿ ಅದು ಕೋಮುವಾದನೇ ಕೋಮುವಾದ ಇರುವಲ್ಲಿ ಶಾಂತಿ ನೆಮ್ಮದಿ ಇರೋದಿಲ್ಲ ಹಿಂದುತ್ವ ಹೇಳುವವರು ಭಾರತೀಯರಲ್ಲ, ಹಿಂದುತ್ವ ಹೇಳುವವರು ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಸಂಘ ಪರಿವಾರದ ವಿರುದ್ಧ ಗುಡುಗಿದ ಅವರು ಸಾವರ್ಕರ್ ತ್ರಿವಣ ಧ್ವಜ ಒಪ್ಪೋದಿಲ್ಲ ಆದರೆ ಕೇಸರಿ ಧ್ವಜವನ್ನು ಒಪ್ಪಿಕೊಳ್ಳುತ್ತಾರೆ, ಕಳೆದ 52 ವರ್ಷ ನಾಗ್ಪುರದ ಕಛೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿಲ್ಲ ಇದೊಂದು ಸುಳ್ಳು ಸಂಘಟನೆ ಎಂದ ಅವರು ಸಂವಿಧಾನವನ್ನು ಆರೆಸ್ಸೆಸ್ ಒಪ್ಪೋದಿಲ್ಲ ಸಂವಿಧಾನದ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಲು ಹೊರಟಿದ್ದಾರೆ ಸಂಘ ಪರಿವಾರದವರು ಮೀಸಲಾತಿ ವಿರುದ್ಧ ಇದ್ದಾರೆ ಹಾಗಾಗಿ ಮೀಸಲಾತಿ ತೆಗೆಯಲು ಬಿಜೆಪಿಯವರು ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ವಾಟ್ಸ್ಯಾಪ್ ಹ್ಯಾಕರ್ಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ
ಇತ್ತೇಚೆನ ದಿನಗಳಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಾಲಯವನ್ನಾಗಿ ಮಾಡಿದ್ದಾರೆ ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಅಂತಾ ಹೇಳುತ್ತಾರೆ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ, ಆರೆಸ್ಸೆಸ್ ಒಂದು ಜಾತಿ ಸಂಘಟನೆಯಾಗಿದೆ ಆರೆಸ್ಸೆಸ್ ನವ್ರು ದೇಶ ಭಕ್ತರು ಅಂತಾ ಹೇಳ್ತಾರೆ ಹಾಗಾದರೆ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಸಿದ್ದು, 1977 ರಲ್ಲಿ ಜನತಾಪಾರ್ಟಿ ಆಗದೇ ಇರುತ್ತಿದ್ದರೆ ಇಷ್ಟೊಂದು ಶಕ್ತಿ ಬರುತ್ತಿರಲಿಲ್ಲ ಹೆಗಡೇವಾರ್ ಬಳಿಕ ಗೋಳ್ವಾಲ್ಕರ್ ಆರೆಸ್ಸೆಸ್ ಮುಖ್ಯಸ್ಥರು ಬಂದ್ರು ಆದರೆ ಇವರು ಯಾರೂ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿಲ್ಲ ಎಂದು ಹೇಳಿದರು.
SFI ಮತ್ತು PFI ಎರಡೂ ಒಂದೇ :
PFI,SDPI ಯವರ ಮಾತುಗಳನ್ನು ಕೇಳೋಕೆ ಹೋಗಬೇಡಿ ಇವರು ಬಿಜೆಪಿಗೆ ಹಿಂದಿನಿಂದ ಪ್ರೋತ್ಸಾಹ ನೀಡುವವರು, ಬಿಹಾರದ ಚುನಾವಣೆಯಲ್ಲೂ ಇವರಿಂದ ಬಿಜೆಪಿಗೆ ಲಾಭವಾಯಿತು, ಮುಸ್ಲಿಮರ ಓಟನ್ನು ಒಡೆಯುವಂತಗ ಹುನ್ನಾರ ಮಾಡುತ್ತಿದ್ದಾರೆ ಈ ಹುನ್ನಾರಕ್ಕೆ ಯಾರೂ ಕೈ ಜೋಡಿಸಬಾರದು ಬೆಂಗಳೂರು ಗಲಭೆ ಸಂಧರ್ಭದಲ್ಲಿ SDPI, PFI ಬ್ಯಾನ್ ಅಂತಾ ಹೇಳಿದ್ರು ಸೂಕ್ತ ದಾಖಲೆಯಿದ್ದರೆ ಕೂಡಲೇ ಬ್ಯಾನ್ ಮಾಡಬೇಕು SFI ಮತ್ತು PFI ಎರಡೂ ಒಂದೇ ಹಿಂದೂಗಳಲ್ಲೂ ಅನೇಕ ಜನ ಮುಸ್ಲಿಮರ ರೀತಿ ಇದ್ದಾರೆ ಎಂದು ಹೇಳಿದರು.
ಈ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಕೊಡಬೇಕು, ನಾನು ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರಿಗೆ ಮೂರುಸಾವಿರದ ಐವತ್ತು ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ರೂಪಾಯಿ ನೀಡುತ್ತೇನೆ, ಆದರೆ ಬಿಜೆಪಿಯವರು ಇದ್ದ ಅನುದಾನದಲ್ಲೂ ಅಲ್ಪಸಂಖ್ಯಾತರಿಗೆ ಕಡಿಮೆ ಮಾಡಿದ್ದಾರೆ ಬಿಜೆಪಿಯವರು ಸಂವಿಧಾನ ವಿರೋಧಿಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಣೆ ಮಾಡುತ್ತಿಲ್ಲ ಎಂದು ಗುಡುಗಿದ್ದಾರೆ.
ಗೋ ಹತ್ಯೆ ನಿಷೇಧವನ್ನು ಒಂದು ಧರ್ಮವನ್ನು ಗುರಿಯಾಗಿಸಿ ಜಾರಿ ಮಾಡಿದ್ದಾರೆ ಬೀಫ್ ತಿನ್ನೋದು ಅವರವರ ಆಹಾರದ ಹಕ್ಕು ಅದನ್ನು ನಿಯಂತ್ರಣ ಮಾಡೋಕೆ ನೀವು ಯಾರು ನಾನು ಇಲ್ಲಿಯವರೆಗೆ ಭೀಫ್ ತಿಂದಿಲ್ಲ ತಿನ್ನಬೇಕು ಅನಿಸಿದರೆ ಬೀಫ್ ತಿನ್ನುತ್ತೇನೆ ಅದನ್ನು ಕೇಳೋಕೆ ಬಿಜೆಪಿಯವರು ಯಾರು. ಬೀಫ್ ತಿನ್ನಬಾರದು ಅಂತಾ ಹೇಳುತ್ತಾರೆ ಆದರೆ ಆಸ್ಟ್ರೇಲಿಯಾ ದಿಂದ ಬಂದ ಭೀಫ್ ನ್ನು ತಿನ್ನಬಹುದು ಅಂತಾ ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.