ಅಕಾಲಿಕ ಮಳೆ: ಫಸಲಿಗೆ ಕಂಟಕ
Team Udayavani, Feb 23, 2021, 6:05 AM IST
ಬೆಳ್ತಂಗಡಿ: ಮೂರು ದಿನ ಗಳಿಂದ ಸುರಿದ ಮಳೆಯಿಂದಾಗಿ ಹಾಲಿ ಕೃಷಿ ಬೆಳೆಗಳಿಗೆ ಹಾಗೂ ಉತ್ಪನ್ನಗಳಿಗೆ ಹಾನಿ ಆಗಿರುವುದಲ್ಲದೆ ಮುಂದಿನ ವರ್ಷದ ಇಳುವರಿಗೂ ಹೊಡೆತ ಬೀಳುವ ಆತಂಕ ಸೃಷ್ಟಿಯಾಗಿದೆ.
ಭತ್ತ ಈಗಾಗಲೆ ಕೊಯ್ಲಿಗೆ ಬಂದಿದ್ದು, ಕೆಲವೆಡೆ ಅರ್ಧ ಕೊಯ್ಲು ನಡೆಸಿ ಗದ್ದೆಯಲ್ಲೇ ಬಿಟ್ಟ ಬೆಳೆಗೆ ಹಾನಿಯಾಗಿದೆ. ತಾಲೂಕಿನಲ್ಲಿ ಈ ಬಾರಿ ಕೃಷಿ ಇಲಾಖೆ ಮಾಹಿತಿಯಂತೆ 400 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಅಕಾಲಿಕವಾಗಿ ಮಳೆ ಸುರಿದ ಪರಿಣಾಮ ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದಂತಾಗಿದೆ.
ಗಾಳಿ ಮಳೆ ಸುರಿದಿದ್ದರಿಂದ ಕಟಾವಿಗೆ ಬಂದ ಭತ್ತ ನೆಲಸಮವಾಗಿದೆ. ಅವಧಿ ಯಲ್ಲದ ಅವಧಿಯಲ್ಲಿ ಮಳೆ ಸುರಿದು ಭತ್ತ, ಹುಲ್ಲಿಗೆ ಫಂಗಸ್ ಹಿಡಿಯುವ ಭೀತಿ ಎದುರಾಗಿದೆ. ಒದ್ದೆಯಾದ ಹುಲ್ಲು ಬಿಸಿಲಿಗೆ ಒಣ ಹಾಕಿದರೂ ಅಪ್ರಯೋಜಕ ವಾಗಲಿದೆ ಎಂಬುದು ಕೃಷಿಕರ ಅಳಲು.
25 ದಿನ ಬಿಸಿಲು ತಾಗಿದ ಅಡಿಕೆ ಹಾಳು
2ನೇ ಕೊಯ್ಲು ನಡೆಸಿ ಬಹುತೇಕ 25ರಿಂದ 30 ಬಿಸಿಲು ಬಿದ್ದ ಅಡಿಕೆಗಳು ಅಂಗಳದಲ್ಲಿ ಒದ್ದೆಯಾಗಿದ್ದು ಗುಣಮಟ್ಟಕ್ಕೆ ತೊಂದರೆಯಾಗಲಿದೆ. ಹೆಚ್ಚಿನ ಮಂದಿ ಈ ಸಮಯ ವಿವಿಧ ತರಕಾರಿ ಬೆಳೆಗಳಿಗೆ ಒಗ್ಗಿ ಕೊಂಡಿದ್ದು, ಗದ್ದೆಯಲ್ಲಿ ನೀರು ನಿಂತು ಹಾನಿಯಾಗಿದೆ. ಎಳನೀರು ಪ್ರದೇಶದ ಲ್ಲಿ ಕಾಫಿ ಬೆಳೆಗೆ ಹಾನಿಯಾಗಿದೆ.
2020-21ರಲ್ಲಿ 200 ಮಳೆ ಹಾನಿ ಪ್ರಕರಣ
2020-21ರ ಮಳೆ ಹಾನಿಯಿಂದಾಗಿ 200 ಪ್ರಕರಣ ವರದಿಯಾಗಿದ್ದು, 24,57,606 ರೂ. ಪರಿಹಾರ ತಾಲೂಕು ಆಡಳಿತದಿಂದ ವಿತರಿಸಲಾಗಿದೆ. ವಾಸ್ತವ್ಯದ ಕಚ್ಚಾಮನೆ ಪೂರ್ತಿ ಹಾನಿ 7 ಪಕ್ರರಣದಲ್ಲಿ 5,13,400 ರೂ. ವಿತರಿಸಲಾಗಿದೆ. ವಾಸ್ತವ್ಯದ ಪಕ್ಕಾ ಮನೆ ತೀವ್ರ ಹಾನಿ 20 ಪ್ರಕರಣಗಳಲ್ಲಿ 4,60,116 ರೂ. ವಿತರಿಸಲಾಗಿದ್ದು, ಕಚ್ಚಾಮನೆ ತೀವ್ರ ಹಾನಿ 28 ಪ್ರಕರಣಗಳಲ್ಲಿ 6,88,500 ರೂ. ವಿತರಿಸಲಾಗಿದೆ. ಪಕ್ಕಾ ಮನೆ ಭಾಗಶಃ ಹಾನಿಯಲ್ಲಿ 54 ಪ್ರಕರಣದ ಪೈಕಿ 2,73,800 ರೂ. ವಿತರಿಸಿದ್ದು, ಕಚ್ಚಾ ಮನೆ ಭಾಗಶಃ ಹಾನಿ 67 ಪ್ರಕರಣ ಪೈಕಿ 2,54,440 ರೂ. ವಿತರಿಸಲಾಗಿದೆ. ಗುಡಿಸಲು ಹಾನಿ 2 ಪ್ರಕರಣವಾಗಿದ್ದು, 8,200 ರೂ. ವಿತರಿಸಲಾಗಿದೆ. ಜಾನುವಾರು ಹಟ್ಟಿ ಹಾನಿ 21 ಪ್ರಕರಣ ದಾಖಲಾಗಿದ್ದು 44,100 ರೂ. ವಿತರಿ ಸಲಾಗಿದೆ. ಓರ್ವ ವ್ಯಕ್ತಿಗೆ ಗಾಯ ಗೊಂಡ ಪರಿಹಾರವಾಗಿ 2,790 ರೂ. ಸೇರಿ 200 ಪ್ರಕರಣಗಳ ಪೈಕಿ 24,57,606 ರೂ. ಪರಿಹಾರ ಮೊತ್ತ ವಿತರಿಸಲಾಗಿದೆ.
ನೆಲಕ್ಕಚ್ಚಿದ ಭತ್ತ
ಅಕಾಲಿಕ ಮಳೆಯಿಂದಾಗಿ ಅಡಿಕೆ, ಭತ್ತ ಬೆಳೆಗಾರರಿಗೆ ನಷ್ಟ ಉಂಟಾಗಲಿದೆ. 25 ಮೇಲಷ್ಟು ಬಿಸಿಲು ತಾಗಿದ ಅಡಿಕೆ ಗುಣಮಟ್ಟ ಕಳೆದು ಕೊಂಡರೆ, ಭತ್ತ ನೆಲಕ್ಕಚ್ಚಿದೆ. ಇತ್ತ ತರಕಾರಿ ಬೆಳೆಗೂ ಹಾನಿಯುಂಟಾಗಲಿದೆ.
-ಪ್ರಭಾಕರ ಮಯ್ಯ, ಕೃಷಿ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.