ಆಶಯ ಕಳೆದುಕೊಂಡ ಸಚಿವರ ಗ್ರಾಮವಾಸ್ತವ್ಯ
Team Udayavani, Feb 23, 2021, 11:51 AM IST
ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಕಂದಾಯ ಸಚಿವರ ಗ್ರಾಮವಾಸ್ತವ್ಯ ತನ್ನ ಆಶಯ ಕಳೆದುಕೊಂಡಿದ್ದು, ಇದು ಅವರ ಚೊಚ್ಚಲ ಪ್ರಚಾರ ಕಾರ್ಯಕ್ರಮವಾಗಿ ಉಳಿಯಿತೆ ಹೊರತು, ಜನರ ಕಾರ್ಯಕ್ರಮ ಆಗಲಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರಲ್ಲಿ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮವಾಸ್ತವ್ಯಕ್ಕೂ ಮುನ್ನ ರೈತರಿಗೆ ಆಗಬೇಕಿದ್ದ ಕೆಲಸಗಳ ರೂಪುರೇಷೆ ಸಿದ್ಧವಾಗಬೇಕಿತ್ತು. ರಾಜ್ಯ,ಕೇಂದ್ರ ರೈತ ಕಾನೂನು ಬಗ್ಗೆ ಸಾರ್ವಜನಿಕವಾಗಿ ತಿಳಿಸಿಕೊಡಬೇಕಿತ್ತು ಎಂದರು. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆಯಿಂದ ಶೇ.34ರಷ್ಟು ರೈತರ ಭೂಮಿ ಉದ್ಯಮಿಗಳ ಪಾಲು ಮಾಡಿರುವ ಬಿಜೆಪಿ ಸರ್ಕಾರ ಯಾರಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿವುದು ರೈತರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡಿ ಗ್ರಾಮವಾಸ್ತವ್ಯ ಮಾಡಿದರೆ ಮಾತ್ರ ಅದರ ಆಶಯ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಸೂದೆ ವಾಪಸ್ ಪಡೆಯಿರಿ: ಸಂಘದ ಸಂಘಟನಾ ಕಾರ್ಯದರ್ಶಿ ವಸಂತ್ ಮಾತನಾಡಿ, ಸರ್ಕಾರ ಬಂಡವಾಳ ಶಾಹಿಪರವಾದ ಕಾನೂನು ರೂಪಿಸುತ್ತಿವೆ. ಇದರಿಂದ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿ. ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಗೋಹತ್ಯೆ ನಿಷೇಧಕಾಯ್ದೆ ನಾವು ಒಪ್ಪಿಕೊಳ್ಳಬೇಕೆಂದರೆ ಗಂಡುಕರು ಸಾಕುವ ನಿರ್ವಹಣಾ ವೆಚ್ಚ ನೀಡಿ. ಇಲ್ಲವಾದಲ್ಲಿ ಮಸೂದೆ ಹಿಂದಕ್ಕೆ ಪಡೆಯಿರಿ ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ವಸಂತ್,ತೂಬಗೆರ ಹೋಬಳಿ ಅಧ್ಯಕ್ಷ ವೆಂಕಟನಾರಾಯಣಪ್ಪ, ಕಾಂತರಾಜು, ನಾರಾಯಣಸ್ವಾಮಿ, ಚೆಲುವರಾಜ್ ಇದ್ದರು.
ಸಕಾಲಕ್ಕೆ ರೈತರ ಕೆಲಸ ಮಾಡಿಕೊಟ್ಟರೆ ಸಾಕು : ಮುಂದಿನ ದಿನಗಳಲ್ಲಾದರೂ ಸ್ಥಳೀಯ ರೈತರಿಗೆ ಕಂದಾಯ ಇಲಾಖೆಯಿಂದ ಆಗಬಹುದಾದ ಕೆಲಸಗಳ ರೂಪುರೇಷೆ, ಕೆಲಸಗಳು ಆಗಬಹುದಾದ ಸಮಯ ನಿಗದಿ ಮಾಡಬೇಕು. ರೈತರು ತಾಲೂಕು ಕಚೇರಿಗೆ ಹೋದಾಗ ಸೌಜನ್ಯದಿಂದ ನಡೆದಕೊಂಡು ಸಕಾಲಕ್ಕೆ ಅವರ ಕೆಲಸ ಮಾಡಿಕೊಟ್ಟರೆ ಸಾಕಾಗಿದೆ. ಇಂತಹ ಗ್ರಾಮ ವಾಸ್ತವ್ಯಗಳ ಆಶಯ ಈಡೇರುವಲ್ಲಿ ಇಂತಹ ಕ್ರಿಯಾತ್ಮಕ ಆಡಳಿತಕ್ಕೆ ಚಾಲನೆ ನೀಡಬೇಕಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.