Mangalore: ATMಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನ | Udayavani
Team Udayavani, Feb 23, 2021, 1:40 PM IST
ಮಂಗಳೂರು: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಮಂಗಳಾದೇವಿಯಲ್ಲಿರುವ ಎಟಿಎಂನಲ್ಲಿ ಈ ವಂಚಕರು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಇವರನ್ನು ಸೆರೆ ಹಿಡಿಯಲು ಹೋದಾಗ ವಂಚಕರು ತಪ್ಪಿಸಲು ಯತ್ನಸಿದ್ದಾರೆ. ಕೂಡಲೇ ಮೂವರು ಸೇರಿ ವಂಚಕರನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ