ನಿಗದಿತ ಸ್ಥಳದಲ್ಲೇ ರೇಷ್ಮೆ ಮಾರುಕಟ್ಟೆ ನಿರ್ಮಾಣ
Team Udayavani, Feb 23, 2021, 1:08 PM IST
ರಾಮನಗರ: ಅವಳಿ ನಗರದಗಳ ಮಧ್ಯಭಾಗದಲ್ಲಿ 15 ರಿಂದ 20 ಎಕರೆ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಲಿದೆ. ರಾಮನಗರ ಅಥವಾ ಚನ್ನಪಟ್ಟಣದ ರೇಷ್ಮೆ ಮಾರುಕಟ್ಟೆಗಳು ಯಥಾಸ್ಥಿತಿ ಮುಂದುವರೆಯಲಿದ್ದು, ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಶಾಸಕ ಎ.ಮಂಜು ನಾಥ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಮಾರುಕಟ್ಟೆಗೆ ರಾಮನಗರದ ಹೆಸರನ್ನೇ ಇಡಲಾಗುತ್ತದೆ. ವಂದಾರಗುಪ್ಪೆ ಬಳಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಈಗಾಗಲೇ, ನಬಾರ್ಡ್‌ನಿಂದ 35 ಕೋಟಿ ರೂ. ಬಿಡುಗಡೆಯೂಆಗಿದೆ. ಪ್ರಬಲವಾದ ಕಾರಣಗಳಿಲ್ಲದೇ, ರೀಲರ್‌ಗಳು ಉತ್ತಮವಾದ ಯೋಜನೆ ಅನುಷ್ಠಾನಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು.
ಬೆದರಿಕೆಗಳಿಗೆ ಹೆದರುವುದಿಲ್ಲ: ರೇಷ್ಮೆ ಬೆಳೆಗಾರರು ಹಾಗೂ ರೀಲರ್‌ಗಳಿಗೆ ಅನುಕೂಲವಾಗುವಂತಹ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ವಾಗಲಿದೆ. ಬೆಳೆಗಾರರು ಹಾಗೂ ರೀಲರ್ಸ್‌ಗಳು ಬೇಕಾದರೆ ರಾಮನಗರದ ಹಳೇ ಮಾರುಕಟ್ಟೆಯಲ್ಲೇ ವಹಿ ವಾಟು ನಡೆಸಬಹುದು. ಯಾರಿಗೂ ಬಲವಂತ ಮಾಡುವ ಪ್ರಶ್ನೆಯೇ ಇಲ್ಲ. ನೂತನ ಮಾರುಕಟ್ಟೆಯ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೋಲ್ ಕಾಲ್ ಮಾಡುವ, ಚಂದಾ ಎತ್ತುವವರ ಬೆದರಿಕೆ ಗಳಿಗೆ ಹೆದರುವುದಿಲ್ಲ. ಯಾರು ಏನು ಮಾಡುತ್ತಾರೊ,ನಾವೂ ನೋಡುತ್ತೇವೆ ಎಂದು ಸವಾಲೆಸೆದರು.
ಭವಿಷ್ಯದಲ್ಲಿ ಅವಳಿ ಪಟ್ಟಣ: ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಭವಿಷ್ಯದಲ್ಲಿ ಅವಳಿ ನಗರಗಳು ಎಂದು ಘೋಷಿಸಿ, ಮಹಾನಗರ ಪಾಲಿಕೆಯಾಗಿ ಘೋಷಿಸಿದರೂ, ಆಶ್ಚರ್ಯವಿಲ್ಲ. ಹೀಗಾಗಿ ಎರಡೂ ನಗರಗಳ ನಡುವೆ ಇರುವ ಜಾಗದದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾದರೇ, ಅವಳಿ ಪಟ್ಟಣಗಳು ಕ್ಷೀಪ್ರ ಗತಿಯಲ್ಲಿ ಪ್ರಗತಿ ಹೊಂದುತ್ತವೆ. ನೂತನ ಮಾರುಕಟ್ಟೆ ಸ್ಥಾಪನೆಗೆ ವಿರೋಧ ಮಾಡುತ್ತಿರುವವರುಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ನಿರುದ್ಯೋಗಿ ರಾಜಕಾರಣಿಗಳ ವಿರೋಧ: ನೂತನ ಹೈಟೆಕ್ ಮಾರುಕಟ್ಟೆಯನ್ನು ನಿರುದ್ಯೋಗಿ ರಾಜ ಕಾರಣಿಗಳು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಮನಗರ ಬಂದ್‌ಗೆ ಕರೆ ನೀಡಿದ್ದ ರಾಜಕರಣಿಗಳ ವಿರುದ್ಧ ಕುಟುಕಿದರು. ಅವರೆಲ್ಲರು ರಾಮನಗರ ಜಿಲ್ಲೆ ರಚನೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೂ ವಿರೋಧ ಮಾಡಿದವರು. ಇಂತಹ ರೋಲ್‌ಕಾಲ್ ವ್ಯಕ್ತಿಗಳ ಮಾತುಗಳಿಗೆ ರೀಲರ್‌ಗಳು ಕಿವಿಗೋಡಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರವಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಗೌತಮ್ ಗೌಡ ಇದ್ದರು
ಏತಕ್ಕಾಗಿ ನೂತನ ಮಾರುಕಟ್ಟೆ? :
ನೂತನ ಮಾರುಕಟ್ಟೆ ನಿರ್ಮಾಣ ಏತಕ್ಕಾಗಿ ಎಂಬ ಬಗ್ಗೆ ವಿವರಣೆ ನೀಡಿದ ಶಾಸಕ ಎ.ಮಂಜುನಾಥ್, ಹಾಲಿ ಮಾರುಕಟ್ಟೆಯಲ್ಲಿ ಸ್ಥಳದ ಕೊರತೆ ಇದೆ. ಇಲ್ಲಿ ಪ್ರತಿ ನಿತ್ಯ 20 ರಿಂದ 24 ಟನ್ ವಹಿವಾಟು ನಡೆಸಲು ಮಾತ್ರ ಸಾಧ್ಯವಿದೆ. ಪ್ರಸ್ತುತ ದಿನಗಳಲ್ಲಿ ಕಲಬುರ್ಗಿ, ಬಳ್ಳಾರಿ ಸೇರಿದಂತೆ ಕೇರಳ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಂದಲೂ ರೈತರು ರೇಷ್ಮೆಗೂಡು ತಂದು ಮಾರಾಟ ಮಾಡು ತ್ತಿರುವುದ್ದಾರೆ. ನಿತ್ಯ 40 ರಿಂದ 50 ಟನ್ ರೇಷ್ಮೆವಹಿವಾಟು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆಯಿದೆ. ಹೆಚ್ಚಿನ ಗೂಡು ಬಂದಾಗ ಸ್ಥಳದ ಅಭಾವ, ರೈತರಿಗೆ ಉಪಹಾರ, ವಾಸ್ತವ್ಯದ ವ್ಯವಸ್ಥೆ ಇಲ್ಲ. ರೈತರಿಗೆ ಭದ್ರತೆ, ಆರೋಗ್ಯ ಸಮಸ್ಯೆ ಎದುರಾದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಸೌಲಭ್ಯಗಳಿಲ್ಲ. ಹೈಟೆಕ್ ಮಾರುಕಟ್ಟೆಯಲ್ಲಿ ಈ ಸಮಸ್ಯೆಗಳು ನೀಗಲಿವೆ ಎಂದು ಸಮರ್ಥಿಸಿಕೊಂಡರು.
ನೂತನ ಮಾರುಕಟ್ಟೆ ನಿರ್ಮಾಣ ದಿಂದ ರೀಲರ್‌ಗಳಿಗೆ ಸಮಸ್ಯೆ ಇದ್ದರೆ ಅಥವಾ ಬೇಡಿಕೆಗಳನ್ನು ಗಮನಕ್ಕೆ ತರಬ ಹುದು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ. ಸಿ. ಎನ್.ಅಶ್ವತ್ಥನಾರಾಯಣ, ಸಚಿವ ಸಿ.ಪಿ.ಯೋಗೇಶ್ವರ್, ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸಹಕಾರ ನೀಡುತ್ತೇನೆ. –ಎ.ಮಂಜುನಾಥ್, ಶಾಸಕ
ರಾಮನಗರ-ಚನ್ನಪಟ್ಟಣ ಮಧ್ಯ ಭಾಗದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಬೆಳೆಗಾರರ ಸಂಪೂರ್ಣ ಸಹಕಾರವಿದೆ. ಪ್ರತಿ ವಿಚಾರದಲ್ಲಿಯೂ, ರೀಲರ್‌ಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. –ಕೆ.ರವಿ, ಪ್ರಧಾನ ಕಾರ್ಯದರ್ಶಿ, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.