ಗ್ರಾಹಕರಿಗೆ ಆಶ್ವಾಸನೆ ನೀಡುತ್ತಿದೆ ‘ಎಸ್ ಬಿ ಐ’ ನ ಹೊಸ ಯೋಜನೆ..!
ಏನಿದು ಎಸ್ ಬಿ ಐ ನ ವರ್ಷಾಶನ ಯೋಜನೆ..?
Team Udayavani, Feb 23, 2021, 1:57 PM IST
ನವದೆಹಲಿ : ಸಾಮಾನ್ಯವಾಗಿ ಎಲ್ಲರೂ ಹೂಡಿಕೆಯ ಮೂಲಕ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಯೋಜನೆಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಹೂಡಿಕೆಯ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದೇ ಹೂಡಿಕೆ ಮಾಡುವುದರಿಂದ ಸಮಸ್ಯೆ ಉಲ್ಬಣಿಸುತ್ತದೆ. ಸರಿಯಾದ ಹೂಡಿಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ವರ್ಷಾಶನ ಯೋಜನೆಯನ್ನು (Annuity Scheme) ತಂದಿದೆ.
ವರ್ಷಾಶನ ಯೋಜನೆಯ ವೈಶಿಷ್ಟ್ಯಗಳೇನು..?
1) ಎಸ್ ಬಿ ಐ ನ ಎಲ್ಲಾ ಶಾಖೆಗಳಿಂದ ವರ್ಷಾಶನ ಯೋಜನೆಯಲ್ಲಿ (Annuity Scheme) ಹೂಡಿಕೆ ಮಾಡಬಹುದಾಗಿದೆ.
2) ವರ್ಷಾಶನ ಯೋಜನೆಯಲ್ಲಿ ಕನಿಷ್ಠ 25 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
3) ಎಸ್ ಬಿ ಐ ಉದ್ಯೋಗಿಗಳು ಮತ್ತು ಮಾಜಿ ಉದ್ಯೋಗಿಗಳು 1% ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.
4) ಹಿರಿಯ ನಾಗರಿಕರಿಗೆ ಶೇಕಡಾ 0.5 ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತದೆ.
5) ಟರ್ಮ್ ಡೆಪೊಸಿಟ್ ಬಡ್ಡಿದರಗಳು ಈ ಯೋಜನೆಗೆ ಅನ್ವಯಿಸುತ್ತವೆ.
6) ಠೇವಣಿಯ ಮುಂದಿನ ತಿಂಗಳಿನಿಂದ ನಿಗದಿತ ದಿನಾಂಕದಂದು ವರ್ಷಾಶನವನ್ನು ಪಾವತಿಸಲಾಗುತ್ತದೆ.
7) ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಗೆ ಟಿಡಿಎಸ್ ಕಡಿತಗೊಳಿಸಿದ ನಂತರ ವರ್ಷಾಶನವನ್ನು ಪಾವತಿಸಲಾಗುತ್ತದೆ.
8) ಒಟ್ಟು ಮೊತ್ತದಲ್ಲಿ ಉತ್ತಮ ಲಾಭ ಪಡೆಯಲು ಉತ್ತಮ ಯೋಜನೆ ಇದಾಗಿದೆ.
9) ವಿಶೇಷ ಸಂದರ್ಭಗಳಲ್ಲಿ ವರ್ಷಾಶನದ ಬಾಕಿ ಮೊತ್ತದ 75% ವರೆಗಿನ ಓವರ್‌ಡ್ರಾಫ್ಟ್ / ಸಾಲವನ್ನು ಪಡೆಯಬಹುದಾಗಿದೆ.
10) ಉಳಿತಾಯ ಖಾತೆಗಿಂತ ವರ್ಷಾಶನ ಯೋಜನೆಯಲ್ಲಿ ಉತ್ತಮ ಲಾಭವನ್ನು ನೀಡುತ್ತದೆ.
ಏನಿದು ಎಸ್ ಬಿ ಐ ನ ವರ್ಷಾಶನ ಯೋಜನೆ..?
ಎಸ್ ಬಿ ಐ ನ ಈ ಯೋಜನೆಯನ್ನು 36, 60, 84 ಅಥವಾ 120 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದ್ದು, ಇದರಲ್ಲಿ ಹೂಡಿಕೆಯ ಮೇಲಿನ ಬಡ್ಡಿದರವು ಒಂದೇ ಆಗಿರುತ್ತದೆ.
ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿ ಆದಾಯವನ್ನು ಬಯಸಿದರೆ, ಹೂಡಿಕೆದಾರರು 5 ಲಕ್ಷ 7 ಸಾವಿರ 965 ರೂಪಾಯಿ ಮತ್ತು 93 ಪೈಸೆಗಳನ್ನು ಠೇವಣಿ ಇಡಬೇಕಾಗುತ್ತದೆ. ಠೇವಣಿ ಮಾಡಿದ ಮೊತ್ತದ ಮೇಲೆ, ನೀವು 7 ಪ್ರತಿಶತದಷ್ಟು ಬಡ್ಡಿದರದಿಂದ ಲಾಭವನ್ನು ಪಡೆಯುತ್ತೀರಿ, ಇದು ಹೂಡಿಕೆದಾರರಿಗೆ ಪ್ರತಿ ತಿಂಗಳು ಸುಮಾರು 10 ಸಾವಿರ ರೂಪಾಯಿಗಳನ್ನು ಗಳಿಸಿಕೊಡುತ್ತದೆ. ಆದ್ದರಿಂದ ನೀವು ಒಂದು ದೊಡ್ಡ ಮೊತ್ತವನ್ನು ಹೊಂದಿದ್ದರೆ, ವಿಳಂಬ ಮಾಡದೇ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ನೀವು ಹೂಡಿಕೆ ಮಾಡಲು ನಿಯಮಗಳೇನು..?
ಎಸ್ ಬಿ ಐ ನ (SBI) ವರ್ಷಾಶನ ಯೋಜನೆಯಲ್ಲಿ ಪ್ರತಿ ತಿಂಗಳು ಕನಿಷ್ಠ 1000 ರೂಪಾಯಿಗಳನ್ನು ಠೇವಣಿ ಇಡುವ ನಿಯಮವಿದೆ, ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ವರ್ಷಾಶನ ಪಾವತಿಯಲ್ಲಿ ನಿಗದಿತ ಸಮಯದ ನಂತರ ಗ್ರಾಹಕರು ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.