ಭಾರತ-ಚೀನ ನಡುವೆ 5.63 ಲಕ್ಷ ಕೋಟಿ ರೂ. ಮೊತ್ತದ ವಹಿವಾಟು
Team Udayavani, Feb 24, 2021, 7:05 AM IST
ಬೀಜಿಂಗ್: 2020ರಲ್ಲಿ ಗಡಿ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಚೀನ ನಡುವೆ ಸಂಬಂಧ ಹದ ಗೆಟ್ಟಿದ್ದ ನಡುವೆಯೂ ಉಭಯ ದೇಶಗಳ ನಡುವಿನ ದ್ವಿಮುಖ ವ್ಯಾಪಾರ ವಹಿವಾಟು ನೆಲಕ್ಕಚ್ಚಿರಲಿಲ್ಲ. ಎರಡೂ ರಾಷ್ಟ್ರಗಳು ಬರೋಬ್ಬರಿ 5.63 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು, ಇದು ಬೇರೆಲ್ಲ ರಾಷ್ಟ್ರಗಳಿಗಿಂತ ಅತ್ಯಧಿಕ ಎಂದು ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ.
ಭಾರತ ಕಳೆದ ವರ್ಷ 4.25 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಚೀನದಿಂದ ಆಮದು ಮಾಡಿಕೊಂಡಿತ್ತು. ಈ ಮೊತ್ತ ನಂ.1- ನಂ.2 ಸ್ಥಾನದಲ್ಲಿರುವ ಅಮೆರಿಕ, ಯುಎಇಗಳಿಂದ ಭಾರತ ಮಾಡಿಕೊಳ್ಳುವ ಒಟ್ಟು ಆಮದುಗಿಂತಲೂ ಅಧಿಕ. ಆದರೆ ಒಟ್ಟು 5.63 ಲಕ್ಷ ಕೋಟಿ ರೂ. ವಹಿವಾಟಿನಲ್ಲಿ ಭಾರತ ಕೇವಲ 1.37 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಮಾತ್ರವೇ ಚೀನಕ್ಕೆ ರಫ್ತು ಮಾಡಿದೆ. ಅಂದರೆ, ದ್ವಿಮುಖ ವ್ಯಾಪಾರದಲ್ಲಿ ನಮ್ಮ ಪಾಲು ಕೇವಲ ಶೇ.11!
ಭಾರತವು ಚೀನದಿಂದ 2.89 ಲಕ್ಷ ಕೋಟಿ ರೂ. ಮೊತ್ತದ ಭಾರೀ ಯಂತ್ರಗಳು, ಟೆಲಿಕಾಂ ಉಪಕರಣಗಳು, ಗೃಹ ಬಳಕೆ ವಸ್ತುಗಳನ್ನು ಆಮದು ಮಾಡಿಕೊಂಡಿದೆ.
ಸ್ವಾವಲಂಬಿಯಾಗಲು 4-5 ವರ್ಷ ಬೇಕು: ಸ್ಥಳೀಯವಾಗಿ ವಸ್ತುಗಳ ಉತ್ಪಾದನೆಗೆ ಪ್ರಧಾನಿ ಮೋದಿ ಅವರು ಪಿಎಲ್‌ಐ ಯೋಜನೆ (ಉತ್ಪಾದನೆ ಆಧಾರಿತ ಪ್ರೋತ್ಸಾಹಧನ) ಜಾರಿಮಾಡಿದ್ದಾರೆ. ಈ ಅನುದಾನ ಬಳಸಿಕೊಂಡು ಈಗಾಗಲೇ ಸ್ಥಳೀಯವಾಗಿ ವಸ್ತುಗಳ ತಯಾರಿಕೆ ಶುರುವಾಗಿದೆ. “ಪಿಎಲ್‌ಐ ಬಳಸಿಕೊಂಡು ಭಾರತ ಸ್ವಾವಲಂಬಿಯಾಗಲು ಇನ್ನೂ 4-5 ವರ್ಷಗಳು ಬೇಕು. ಅಲ್ಲಿಯವರೆಗೆ ಚೀನ ವಸ್ತುಗಳನ್ನೇ ಅವಲಂಬಿಸಬೇಕಾಗಿದೆ’ ಎನ್ನುತ್ತಾರೆ ಆರ್ಥಿಕ ತಜ್ಞ ಅಮಿತೇಂದು ಪಾಲಿಟ್.
45 ಚೀನೀ ಸಂಸ್ಥೆಗಳ ಹೂಡಿಕೆಗೆ ಸಮ್ಮತಿ ವಿಚಾರ ಸುಳ್ಳು
45 ಚೀನೀ ಸಂಸ್ಥೆಗಳಿಗೆ ಹೂಡಿಕೆ ಮಾಡಲು ಭಾರತ ಗ್ರೀನ್ ಸಿಗ್ನಲ್ ನೀಡುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ನಿರಾಕರಿಸಿದೆ. “ಯಾವ ಚೀನೀ ಕಂಪೆನಿಗಳ ಹೂಡಿಕೆಗೂ ಭಾರತ ಸಮ್ಮತಿ ನೀಡಿಲ್ಲ’ ಎಂದು ಸರಕಾರದ ಮೂಲಗಳು ಸ್ಪಷ್ಪಪಡಿಸಿವೆ. “ಹಾಂಕಾಂಗ್ ಮೂಲದ 3 ಪ್ರಸ್ತಾವಗಳಿಗಷ್ಟೇ ಒಪ್ಪಿಗೆ ನೀಡಲಾಗಿದೆ. ಸಿಟಿಜನ್ ವಾಚಸ್, ನಿಪ್ಪಾನ್ ಪೇಂಟ್ಸ್ ಮತ್ತು ನೆಟ್‌ಪ್ಲೇ ಇಂಥ ಅವಕಾಶ ಪಡೆದಿವೆ. ಇವುಗಳ ಪೈಕಿ 2 ಜಪಾನೀಸ್ ಮತ್ತು 1 ಎನ್‌ಆರ್‌ಐಗೆ ಸೇರಿದ ಕಂಪೆನಿಗಳಾಗಿವೆ’ ಎಂದಿದೆ. ಭಾರತದ ಎಫ್ಡಿಐ ಕಾಯ್ದೆಯ ಹೊಸ ತಿದ್ದುಪಡಿಯಂತೆ ಬಿಕ್ಕಟ್ಟು ಹೊಂದಿರುವ ಯಾವುದೇ ನೆರೆರಾಷ್ಟ್ರಗಳು ಸರಕಾರದಿಂದ ರಕ್ಷಣ ವಿಶ್ಲೇಷಣೆಗೊಳಪಟ್ಟೇ ಅನುಮತಿ ಪಡೆಯಬೇಕು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.