ಮೊಟೆರಾ ನೈಟ್ಸ್‌ : ಕ್ರಿಕೆಟ್‌ ‘ರಾಜಾಂಗಣ’ದಲ್ಲಿಂದು  ಪಿಂಕ್‌ ಬಾಲ್‌ ಟೆಸ್ಟ್


Team Udayavani, Feb 24, 2021, 8:12 AM IST

motera stadium ahmedabad

ಅಹ್ಮದಾಬಾದ್‌: ಒಂದು ಲಕ್ಷದ ಹತ್ತು ಸಾವಿರ ಮಂದಿಯನ್ನು ತನ್ನೊಡಲಲ್ಲಿ ತುಂಬಿಸಿಕೊಳ್ಳಬಲ್ಲ ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಬುಧವಾರ ಮತ್ತೆ ಟೆಸ್ಟ್‌ ಕ್ರಿಕೆಟಿಗೆ ತೆರೆದುಕೊಳ್ಳಲಿದೆ. ಸದ್ಯ 1-1 ಸಮಬಲ ಸಾಧನೆಗೈದಿರುವ ಭಾರತ-ಇಂಗ್ಲೆಂಡ್‌ ನಡುವೆ ಇಲ್ಲಿ 3ನೇ ಟೆಸ್ಟ್‌ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು, ಇಡೀ ಕ್ರಿಕೆಟ್‌ ಜಗತ್ತೇ ಈ ಪಂದ್ಯದತ್ತ ಕುತೂಹಲದ ನೋಟ ಬೀರಲಿದೆ

ಸದ್ಯ ಕೊರೊನಾ ಕಾರಣದಿಂದ ಸಾಮರ್ಥ್ಯದ ಶೇ. 50ರಷ್ಟು ವೀಕ್ಷಕರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದೆ. ಆದರೂ ಈ ದೈತ್ಯ ಕ್ರೀಡಾಂಗಣದಲ್ಲಿ 55 ಸಾವಿರದಷ್ಟು ಪ್ರೇಕ್ಷಕರು ಜಮಾಯಿಸಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಮಟ್ಟಿಗೆ ಇದು ನಿರೀಕ್ಷೆಗೂ ಮೀರಿದ ಜನಸ್ತೋಮವೇ ಆಗಿದೆ.

ಇಶಾಂತ್‌ “ಟೆಸ್ಟ್‌ ಶತಕ’

ಭಾರತದ ಲೆಜೆಂಡ್ರಿ ಕ್ರಿಕೆಟಿಗರಾದ ಸುನೀಲ್‌ ಗಾವಸ್ಕರ್‌ ಮತ್ತು ಕಪಿಲ್‌ದೇವ್‌ ಅವರ ಮಹೋನ್ನತ ಸಾಧನೆಗಳಿಗೆ ಸಾಕ್ಷಿಯಾದ ಈ ಅಂಗಳದಲ್ಲಿ ವೇಗಿ ಇಶಾಂತ್‌ ಶರ್ಮ 100ನೇ ಟೆಸ್ಟ್‌ ಆಡಲಿರುವುದೊಂದು ವಿಶೇಷ. ಕಪಿಲ್‌ ಹೊರತುಪಡಿಸಿದರೆ 100 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ವೇಗಿ ಎಂಬುದು ಇಶಾಂತ್‌ ಪಾಲಿನ ಹೆಗ್ಗಳಿಕೆ.

ಭಾರತದ ಅತೀ ವೇಗದ ಟ್ರ್ಯಾಕ್‌ ಎಂದೇ ಜನಜನಿತವಾಗಿರುವ ಅಹ್ಮದಾಬಾದ್‌ನಲ್ಲಿ ತ್ರಿವಳಿ ವೇಗಿಗಳು ದಾಳಿಗಿಳಿಯುವ ಎಲ್ಲ ಸಾಧ್ಯತೆ ಇದೆ. ಇಶಾಂತ್‌ ಶರ್ಮ ಜತೆಗೆ ವಿಶ್ರಾಂತಿ ಮುಗಿಸಿ ಬಂದ ಜಸ್‌ಪ್ರೀತ್‌ ಬುಮ್ರಾ ಮತ್ತು ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಪಾಸ್‌ ಆದ ಉಮೇಶ್‌ ಯಾದವ್‌ ಅವರ ಕಾಂಬಿನೇಶನ್‌ ಪಕ್ಕಾ ಆದಂತಿದೆ. ಇವರಿಗಾಗಿ ಕುಲದೀಪ್‌ ಯಾದವ್‌ ಮತ್ತು ಮೊಹಮ್ಮದ್‌ ಸಿರಾಜ್‌ ಜಾಗ ಬಿಡುವುದೂ ನಿಶ್ಚಿತ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೆಸರು ಕೂಡ ಕೇಳಿ ಬರುತ್ತಿದೆಯಾದರೂ ಅವರಿಗೆ ಕನಿಷ್ಠ 15 ಓವರ್‌ ಬೌಲಿಂಗ್‌ ನಡೆಸಲು ಸಾಧ್ಯವೇ ಎಂಬುದೊಂದು ಪ್ರಶ್ನೆ. ಶುಭಮನ್‌ ಗಿಲ್‌ ಫಿಟ್‌ ಆಗಿರುವ ಕಾರಣ ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಯಾವುದೇ ಪರಿವರ್ತನೆ ಗೋಚರಿಸುವ ಸಾಧ್ಯತೆ ಇಲ್ಲ.

ಇದು “ಬಿ’ ಟೀಮ್‌ ಅಲ್ಲ

ಈ ಪಿಂಕ್‌ ಬಾಲ್‌ ಟೆಸ್ಟ್‌ ಆಡುವಾಗ ಟೀಮ್‌ ಇಂಡಿಯಾ ಎರಡು ವಿಷಯಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಭಾರತಕ್ಕೆ ಪಿಂಕ್‌ ಟೆಸ್ಟ್‌ ಅನುಭವ ಕಡಿಮೆ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನ‌ಲ್ಲಿ 36 ರನ್ನಿಗೆ ಮುಗ್ಗರಿಸಲು ಹೊನಲು ಬೆಳಕೇ ಕಾರಣ ಎಂದು ತರ್ಕಿಸಲಾಗಿತ್ತು. ತವರಿನಲ್ಲಿ ಇಂಥ ಕಂಟಕ ಎದುರಾಗದಂತೆ ನೋಡಿಕೊಳ್ಳಬೇಕು.

ಇನ್ನೊಂದು ಸಂಗತಿಯೆಂದರೆ, ಇಂಗ್ಲೆಂಡ್‌ ಚೆನ್ನೈನ ದ್ವಿತೀಯ ಟೆಸ್ಟ್‌ ಪಂದ್ಯದಂತೆ “ಬಿ’ ಮಟ್ಟದ ಟೀಮ್‌ ಆಗಿ ಉಳಿದಿಲ್ಲ ಎಂಬುದು. ಕೊಹ್ಲಿ ಪಡೆ 317 ರನ್ನುಗಳ ದಾಖಲೆ ಅಂತರದಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತಂದಿತೇನೋ ನಿಜ, ಆದರೆ ಇಂಗ್ಲೆಂಡ್‌ ಬಲಾಡ್ಯ ತಂಡವನ್ನು ಕಣಕ್ಕಿಳಿಸಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಮೊದಲ ಪಂದ್ಯ ಹೀರೋಗಳಾದ ಬೆಸ್‌, ಆ್ಯಂಡರ್ಸನ್‌, ಆರ್ಚರ್‌, ಬಟ್ಲರ್‌ ನಾನಾ ಕಾರಣಗಳಿಂದ ಬೇರ್ಪಟ್ಟಿದ್ದರು. ಆದರೀಗ ಪ್ರಮುಖ ಆಟಗಾರರೆಲ್ಲ ವಾಪಸಾಗುವ ಕಾರಣ ಆಂಗ್ಲರ ಪಡೆ ಮೊದಲಿನಷ್ಟೇ ಸ್ಟ್ರಾಂಗ್‌ ಅಗಲಿದೆ. ಬ್ಯಾಟಿಂಗ್‌ ಸರದಿಯಲ್ಲಿ ಒಂದು ಸ್ಥಾನವನ್ನು ಜಾಕ್‌ ಕ್ರಾಲಿಗೆ ಮೀಸಲಿಡುವ ಕಾರಣ ಇಂಗ್ಲೆಂಡ್‌ ಓಪನಿಂಗ್‌ ಕೂಡ ಹೆಚ್ಚು ಬಲಿಷ್ಠಗೊಳ್ಳಲಿದೆ. ಡಾನ್‌ ಲಾರೆನ್ಸ್‌ ಬದಲು ಅನುಭವಿ ಜಾನಿ ಬೇರ್‌ಸ್ಟೊ ಆಡಲಿದ್ದಾರೆ. ಅಲ್ಲಿಗೆ ಆಂಗ್ಲರ ಹನ್ನೊಂದರ ಬಳಗ ಎಷ್ಟು ಶಕ್ತಿಶಾಲಿಯಾಗಲಿದೆ ಎಂಬುದನ್ನು ನಾವೇ ಊಹಿಸಬಹುದು.

ಭಾರತಕ್ಕೆ ಮಹತ್ವದ ಟೆಸ್ಟ್‌

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇದು ಮಹತ್ವದ ಪಂದ್ಯ. ಉಳಿದೆರಡು ಟೆಸ್ಟ್‌ಗಳಲ್ಲಿ ಕೊಹ್ಲಿ ಪಡೆಗೆ ಒಂದು ಗೆಲುವು ಅನಿವಾರ್ಯವಾಗಿದೆ. ಇನ್ನೊಂದು ಡ್ರಾಗೊಂಡರೂ ಸಾಕು. ಆದರೆ ಮತ್ತೆ ಸೋಲಿನ ಮುಖ ನೋಡಬಾರದು!

ಪಿಂಕ್‌ ಬಾಲ್‌ ಟೆಸ್ಟ್‌ ನಲ್ಲಿ ಭಾರತ, ಇಂಗ್ಲೆಂಡ್‌

ಈ ವರೆಗೆ 15 ಡೇ-ನೈಟ್‌ ಟೆಸ್ಟ್‌ ಪಂದ್ಯಗಳು ನಡೆದಿದ್ದು, ಭಾರತ ಎರಡರಲ್ಲಿ ಪಾಲ್ಗೊಂಡಿದೆ. ಒಂದನ್ನು ಗೆದ್ದರೆ, ಇನ್ನೊಂದನ್ನು ಹೀನಾಯವಾಗಿ ಸೋತಿದೆ. ಭಾರತ ಮೊದಲ ಹಗಲು-ರಾತ್ರಿ ಟೆಸ್ಟ್‌ ಆಡಿದ್ದು 2019ರ ನವೆಂಬರ್‌ನಲ್ಲಿ. ಎದುರಾಳಿ ಬಾಂಗ್ಲಾದೇಶ. ಸ್ಥಳ, ಕೋಲ್ಕತಾದ ಈಡನ್‌ ಗಾರ್ಡನ್ಸ್‌. ಗೆಲುವಿನ ಅಂತರ ಇನ್ನಿಂಗ್ಸ್‌ ಹಾಗೂ 46 ರನ್‌. ಟೀಮ್‌ ಇಂಡಿಯಾದ ಎರಡನೇ ಪಿಂಕ್‌

ಟೆಸ್ಟ್‌ ಎನ್ನುವುದು ಅಭಿಮಾನಿಗಳ ಪಾಲಿಗೆ ಈಗಲೂ ದುಸ್ವಪ್ನವಾಗಿ ಕಾಡುತ್ತಿದೆ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡ್‌ನ‌ಲ್ಲಿ ಆಡಿದ ಈ ಪಂದ್ಯದಲ್ಲಿ ಕೊಹ್ಲಿ ಪಡೆ 36 ರನ್ನಿಗೆ ಕುಸಿದು 8 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು.

ಇಂಗ್ಲೆಂಡಿಗೂ ಒಂದೇ ಜಯ

ಇಂಗ್ಲೆಂಡ್‌ ಒಟ್ಟು 3 ಡೇ-ನೈಟ್‌ ಟೆಸ್ಟ್‌ ಆಡಿದೆ. ತವರಿನ ಒಂದು ಟೆಸ್ಟ್‌ ಗೆದ್ದರೆ, ವಿದೇಶದಲ್ಲಿ ಆಡಿದ ಕೊನೆಯ 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂಗ್ಲೆಂಡಿನ ಏಕೈಕ ಗೆಲುವು ಒಲಿದದ್ದು 2017ರ ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಬರ್ಮಿಂಗ್‌ ಹ್ಯಾಮ್‌ ಪಂದ್ಯದಲ್ಲಿ. ಅಂತರ ಇನ್ನಿಂಗ್ಸ್‌ ಮತ್ತು 209 ರನ್‌. ಅದೇ ವರ್ಷಾಂತ್ಯ ಅಡಿಲೇಡ್‌ನ‌ಲ್ಲಿ ಆಡಲಾದ ಆ್ಯಶಸ್‌ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 120 ರನ್ನುಗಳಿಂದ ಶರಣಾಯಿತು. ಬಳಿಕ 2018ರಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಆಕ್ಲೆಂಡ್‌ ಮುಖಾಮುಖೀಯಲ್ಲಿ ಇನ್ನಿಂಗ್ಸ್‌ ಮತ್ತು 49 ರನ್ನುಗಳ ಸೋಲಿಗೆ ತುತ್ತಾಯಿತು. ಭಾರತ-ಇಂಗ್ಲೆಂಡ್‌ ಡೇ-ನೈಟ್‌ ಟೆಸ್ಟ್‌ ನಲ್ಲಿ ಮುಖಾಮುಖೀ ಆಗುತ್ತಿರುವುದು ಇದೇ ಮೊದಲು.

ವನಿತೆಯರೂ ಆಡಿದ್ದಾರೆ ಪಿಂಕ್‌ ಟೆಸ್ಟ್‌!

ಹಗಲು-ರಾತ್ರಿ ಟೆಸ್ಟ್‌ ಪಂದ್ಯ ಕೇವಲ ಪುರುಷರಿಗಷ್ಟೇ ಸೀಮಿತವಲ್ಲ, ವನಿತೆಯರೂ ಆಡಿರುವುದು ಉಲ್ಲೇಖನೀಯ. ಆದರೆ ಇದು ಒಂದೇ ಪಂದ್ಯಕ್ಕೆ ಸೀಮಿತಗೊಂಡಿದೆ. ಈ ಪಂದ್ಯ 2017ರಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವೆ ಸಿಡ್ನಿಯಲ್ಲಿ ನಡೆದಿತ್ತು. ಆದರೆ ಈ ಪಂದ್ಯ ಡ್ರಾಗೊಂಡಿತ್ತು.

ಅಹ್ಮದಾಬಾದ್‌ 10ನೇ ತಾಣ

ವಿಶ್ವದ 9 ತಾಣಗಳಲ್ಲಿ ಈ ವರೆಗೆ ಡೇ-ನೈಟ್‌ ಟೆಸ್ಟ್‌ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಅತೀ ಹೆಚ್ಚು ಪಂದ್ಯಗಳ ಆತಿಥ್ಯ ವಹಿಸಿದ ಹೆಗ್ಗಳಿಕೆ ಆಸ್ಟ್ರೇಲಿಯದ “ಅಡಿಲೇಡ್‌ ಓವಲ್‌’ಗೆ ಸಲ್ಲುತ್ತದೆ. ಇಲ್ಲಿ 5 ಪಂದ್ಯಗಳನ್ನು ಆಡಲಾಗಿದೆ. ದುಬಾೖ ಮತ್ತು ಬ್ರಿಸ್ಬೇನ್‌ನಲ್ಲಿ ತಲಾ 2 ಪಂದ್ಯಗಳು ನಡೆದಿವೆ. ಬರ್ಮಿಂಗ್‌ಹ್ಯಾಮ್‌, ಪೋರ್ಟ್‌ ಎಲಿಜಬೆತ್‌, ಆಕ್ಲೆಂಡ್‌, ಬ್ರಿಜ್‌ಟೌನ್‌, ಕೋಲ್ಕತಾ ಮತ್ತು ಪರ್ತ್‌ನಲ್ಲಿ ಒಂದೊಂದು ಪಂದ್ಯವನ್ನು ಆಡಲಾಗಿದೆ. ಅಹ್ಮದಾಬಾದ್‌ 10ನೇ ಪಿಂಕ್‌ ಬಾಲ್‌ ಟೆಸ್ಟ್‌ ತಾಣವಾಗಲಿದೆ. ಈ ವರೆಗಿನ ಎಲ್ಲ 15 ಪಿಂಕ್‌ ಟೆಸ್ಟ್‌ಗಳೂ ಸ್ಪಷ್ಟ ಫ‌ಲಿತಾಂಶ ದಾಖಲಿಸಿದ್ದು ವಿಶೇಷ.

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

12-uv-fusion

UV FUsion: ಇತರರನ್ನು ಗೌರವಿಸೋಣ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.