ಖಾಸಗಿ ಬ್ಯಾಂಕುಗಳು ಈಗ ಸರ್ಕಾರಿ ವ್ಯವಹಾರವನ್ನು ನಿರ್ವಹಿಸಬಹುದು : ನಿರ್ಮಲಾ ಸೀತಾರಾಮನ್
ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ" ಮಾಡುತ್ತದೆ ಎಂದು ಸಚಿವಾಲಯು ತಿಳಿಸಿದೆ.
Team Udayavani, Feb 25, 2021, 10:33 AM IST
ನವ ದೆಹಲಿ : ಖಾಸಗಿ ಬ್ಯಾಂಕ್ ಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿರ್ಬಂಧವನ್ನು ಕೇಂದ್ರ ಬುಧವಾರ(ಫೆ.24) ತೆಗೆದುಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ನೀಡುವುದರ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. “ಎಲ್ಲಾ ಬ್ಯಾಂಕುಗಳು ಈಗ ಭಾಗವಹಿಸಬಹುದು ಎನ್ನುವುದು ಖಚಿತವಾಗಿದೆ.
Embargo lifted on grant of Govt business to private banks. All banks can now participate. Private banks can now be equal partners in development of the Indian economy, furthering Govt’s social sector initiatives, and enhancing customer convenience. @FinMinIndia @DFS_India
— NSitharamanOffice (@nsitharamanoffc) February 24, 2021
ಇತರ ಆದಾಯ, ಪಿಂಚಣಿ ಪಾವತಿ ಮತ್ತು ಸಣ್ಣ ಉಳಿತಾಯದಂತಹ ಕೆಲವು ಖಾಸಗಿ ವಲಯದ ಸಾಲದಾತರಿಗೆ ಮಾತ್ರ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ವಹಿವಾಟು ನಡೆಸಲು ಅವಕಾಶವಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಬುಧವಾರ ಸರ್ಕಾರ ತೆಗೆದುಕೊಂಡ ನಿರ್ಧಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕುಗಳಿಗೆ ಈ ಕಾರ್ಯಾಚರಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ : ಕೊಲೆ, ದರೋಡೆಗೆ ಜೈಲಲ್ಲೇ ಪ್ಲಾನ್: ಮಂಗಳೂರಿನ ರೌಡಿ ಶೀಟರ್‌ಗಳ ಕರೆಸಿ ಕೊಲೆಗೆ ಸಂಚು!
ಈ ಹಂತವು ಗ್ರಾಹಕರ ಅನುಕೂಲತೆ, ಉತ್ತೇಜಕ ಸ್ಪರ್ಧೆ ಮತ್ತು ಗ್ರಾಹಕ ಸೇವೆಗಳ ಮಾನದಂಡಗಳಲ್ಲಿ ಹೆಚ್ಚಿನ ದಕ್ಷತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಎಂದು ಪ್ರಕಟಣೆ ತಿಳಿಸಿದೆ. ಈ ನಿರ್ಧಾರವು ಖಾಸಗಿ ಬ್ಯಾಂಕುಗಳನ್ನು “ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ” ಮಾಡುತ್ತದೆ ಎಂದು ಸಚಿವಾಲಯು ತಿಳಿಸಿದೆ.
ಖಾಸಗಿ ಸಾಲದಾತರು ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅಧಿಕಾರ ಪಡೆಯಬೇಕಾಗುತ್ತದೆ.
ಏತನ್ಮಧ್ಯೆ, ಈ ನಿರ್ಧಾರವು ಬ್ಯಾಂಕ್ ಷೇರುಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಈಕ್ವಿಟಿ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ, ನಿಫ್ಟಿ ಬ್ಯಾಂಕ್ ಉಪ-ಸೂಚ್ಯಂಕವು ಬುಧವಾರ 3.80% ಲಾಭದೊಂದಿಗೆ ಕೊನೆಗೊಂಡಿದೆ. ಪ್ರಮುಖ ಖಾಸಗಿ ಸಾಲದಾತರಾದ ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಮಾರುಕಟ್ಟೆಯಲ್ಲಿ ಅಗ್ರ ಲಾಭ ಗಳಿಸಿದವರಲ್ಲಿ ಸೇರಿವೆ, ಅವುಗಳ ಷೇರುಗಳ ಬೆಲೆಗಳು 4% -5% ವ್ಯಾಪ್ತಿಯಲ್ಲಿ ಏರಿಕೆಯಾಗಿದೆ.
ಇನ್ನು, ಕೊಟಕ್ ಮಹೀಂದ್ರಾ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯ್ ಕೊಟಕ್ ಈ ಕ್ರಮವನ್ನು ಸ್ವಾಗತಿಸಿದ್ದಾರೆ ಎಂದು ಮಿಂಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಇದು ಬ್ಯಾಂಕಿಂಗ್ ಕ್ಷೇತ್ರವು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದ್ದಾರೆ. “ಖಾಸಗಿ ಮತ್ತು ಸಾರ್ವಜನಿಕ ವಲಯವು ಭಾರತದ ಸುಸ್ಥಿರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂಂದು ಸಹ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಹಿರೇನಾಗವಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಕ್ವಾರಿ ಮಾಲೀಕ ಅರೆಸ್ಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.