ಮಧುಮೇಹಿಗಳಿಗೆ ಹೊಸ ರುಚಿ ಕರದಂಟು
ಸಕ್ಕರೆ-ಬೆಲ್ಲ ರಹಿತ ಅಂಜೂರ-ಕರ್ಜೂರ ಮಿಶ್ರಿತ ಕರದಂಟು!ಮತ್ತೂಂದು ಹೆಜ್ಜೆಯತ್ತ ಅಮೀನಗಡ ವಿಜಯಾ ಕರದಂಟು ಸಂಸ್ಥೆ
Team Udayavani, Feb 25, 2021, 4:01 PM IST
ಅಮೀನಗಡ: ದೇಶ-ವಿದೇಶಗಳಲ್ಲೂ ತನ್ನ ವಿಶಿಷ್ಟ ಸ್ವಾದ, ಪೌಷ್ಟಿಕತೆಯೊಂದಿಗೆ ಪ್ರಸಿದ್ಧಿಯಾದ ಅಮೀನಗಡ ಕರದಂಡು ಮತ್ತೂಂದು ಹೊಸ ಹೆಜ್ಜೆಯತ್ತ ಕಾಲಿಟ್ಟಿದೆ. ಮಧುಮೇಹಿಗಳಿಗಾಗಿಯೇ ವಿಶೇಷ ಕರದಂಟು ಸಿದ್ಧಪಡಿಸಿದೆ.
ಕರದಂಟು ಸಿಹಿ ತಿನಿಸು ಮಾತ್ರವಲ್ಲ ಪೌಷ್ಟಿಕ ಆಹಾರ ನೈಸರ್ಗಿಕ ಅಂಟು, ಚುಕ್ಕಿ ಬೆಲ್ಲ, ಶುದ್ದ ತುಪ್ಪ ಹಾಗೂ ಹತ್ತಾರು ಡ್ರೈ ಫ್ರುಟ್ಸ್‌ಗಳ ಮಿಶ್ರಣದಲ್ಲಿ ತಯಾರಾಗುವ ಅಮೀನಗಡ ಕರದಂಟಿಗೆ 114 ವರ್ಷಗಳ ಇತಿಹಾಸವಿದೆ. ಆಧುನಿಕತೆಗೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದ್ದು, ಮೊದಲಿನ ರುಚಿಯನ್ನೂ ಕಾಯ್ದುಕೊಳ್ಳಲಾಗಿದೆ. ಪೌಷ್ಟಿಕಾಂಶಗಳನ್ನು ಹೊಂದಿರುವ ಅಮೀನಗಡದ ಪ್ರಸಿದ್ಧ ಕರದಂಟು ಗರ್ಭಿಣಿಯರು, ಬಾಣಂತಿಯರು, ಯುವಕರು ಹಾಗೂ ಮಕ್ಕಳ ಆರೋಗ್ಯಕ್ಕೆ ಉತ್ತಮ ತಿನಿಸು. ಉಡುಪಿಯಿಂದ ಗೋಡಂಬಿ, ಆಂಧ್ರದ ತಾಂಡೂರ್‌ನಿಂದ ಗೇರು ಬೀಜ, ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಲ್ಲ.
ಮುಂಬೈ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಾದಾಮಿ, ಪಿಸ್ತಾ, ಅಂಜೂರು ಸೇರಿದಂತೆ ಬಹುತೇಕ ಸಾಮಗ್ರಿ ತಂದು ಕರದಂಟಿಗೆ ಬಳಸಲಾಗುತ್ತದೆ. ಬದಲಾವಣೆ ಏನು?: ಸಾವಯವ ಬೆಲ್ಲ, ಕೊಬ್ಬರಿ, ಗೋಡಂಬಿ, ಒಣದ್ರಾಕ್ಷಿ, ಗೇರಬೀಜ, ಬಾದಾಮಿ, ಪಿಸ್ತಾ, ಅಂಜೂರ, ಆಳ್ವಿ, ಗಸಗಸಿ, ಉತ್ತತ್ತಿ, ಆಕ್ರೋಟ್, ಜಾಜಿಕಾಯಿ, ಏಲಕ್ಕಿ ಹಾಗೂ ಶುದ್ದ ತುಪ್ಪ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳಿಂದ ತಯಾರಿಸಲ್ಪಡುವ ಕರದಂಟು ಪ್ರಿಮಿಯಂ, ಕ್ಲಾಸಿಕ್, ಸುಪ್ರೀಂ ಎಂದು ಮೂರು ತರಹದ ಕರದಂಟು ತಯಾರಿಸಿ ಮಾರಾಟ ಮಾಡಲಾಗುತ್ತದೆ.
ಸುಪ್ರೀಂ ಕರದಂಟು ನಾಲ್ಕರಿಂದ ಆರು ತಿಂಗಳು ಬಳಸಲಾಗುತ್ತದೆ. ಆದರೆ ಈಗ ಅಮೀನಗಡ ಪ್ರಸಿದ್ಧ ವಿಜಯಾ ಕರದಂಟು ಒಂದು ಹೆಜ್ಜೆ ಮುಂದೆ ಸಾಗಿ ಸಕ್ಕರೆ, ಬೆಲ್ಲ ರಹಿತವಾದ ಅಂಜೂರ ಮತ್ತು ಕರ್ಜೂರ ಮೂಲಕ ನೂತನ ಸ್ವಾದಿಷ್ಟ ಕರದಂಟು ಸಿದ್ಧಪಡಿಸಿದೆ. ಇದು ಮಧುಮೇಹಿಗಳು, ಹಿಮೋಗ್ಲೋಬಿನ್ ನಿಂದ ಬಳಲುತ್ತಿರುವವರಿಗೆ ಪೌಷ್ಟಿಕ ತಿನಿಸು ಎನ್ನುತ್ತಾರೆ ವಿಜಯಾ ಕರದಂಟು ಅಮೀನಗಡ ಮಾಲಿಕ ಸಂತೋಷ ಐಹೊಳ್ಳಿ.
ಅಂಜೂರ ಮತ್ತು ಕರ್ಜೂರ ಮಿಶ್ರಿತ ಮೂಲಕ ಕರದಂಟು ತಯಾರು ಮಾಡಬೇಕು ಎಂಬ ಉದ್ದೇಶ ಮೊದಲಿನಿಂದಲೂ ಇತ್ತು. ನಮ್ಮ ಅಡುಗೆ ಮನೆಯಲ್ಲಿ ಮೊದಲ ಪ್ರಯತ್ನದಲ್ಲಿ ಕಾಲು ಕೆಜಿ ಕರದಂಟು ಸಿದ್ಧಪಡಿಸಲಾಯಿತು. ನಂತರ 10 ಕೆಜಿ, ಈಗ ಸದ್ಯ 30 ಕೆಜಿ ಕರದಂಟು ಮಾಡಿ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಬೆಲ್ಲ, ದ್ರಾಕ್ಷಿ ಮತ್ತು ಕೊಬ್ಬರಿ ಬಳಸುವುದಿಲ್ಲ. ಇದನ್ನು ವಿಶೇಷವಾಗಿ ಮಧುಮೇಹಿಗಳಿಗೆ, ಹೀಮೋಗ್ಲೋಬಿನ್‌ನಿಂದ ಬಳಲುತ್ತಿರುವವರಿಗಾಗಿ ಸಿದ್ಧಪಡಿಸಲಾಗಿದೆ. ಮೈಸೂರಿನ ಆಹಾರ ಇಲಾಖೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. (ಸಂತೋಷ ಐಹೊಳ್ಳಿ, ಮಾಲಿಕರು, ವಿಜಯಾ ಕರದಂಟು, ಅಮೀನಗಡ)
ಎಚ್.ಎಚ್. ಬೇಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.