ತರಬೇತಿಗೆ 2 ತಿಂಗಳ ಹಸುಗೂಸುವಿನೊಂದಿಗೆ ಬಂದ ಗ್ರಾಪಂ ಸದಸ್ಯೆ!
ತಮಿಳುನಾಡು ಗಡಿ 45 ಕಿ.ಮೀ.ದೂರದಿಂದ ಪತಿಯೊಂದಿಗೆ ಆಗಮನ ಬಾಣಂತಿ ಸಂಧ್ಯಾಬಾಯಿ ಕರ್ತವ್ಯಪಾಲನೆಗೆ ಮೆಚ್ಚುಗೆ
Team Udayavani, Feb 25, 2021, 7:13 PM IST
ಬಂಗಾರಪೇಟೆ: ಸರ್ಕಾರಿ ಸಭೆಗಳಿಗೇ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವುದೇ ಕಷ್ಟ. ಅಂತಹ ದ್ದರಲ್ಲಿ ಸುಮಾರು 45 ಕಿ.ಮೀ. ದೂರದ ತಮಿಳುನಾಡು ಗಡಿಯ ಹಳ್ಳಿಯೊಂದರ ಗ್ರಾಪಂ ಸದಸ್ಯೆ ತನ್ನ 2 ತಿಂಗಳ ಹಸುಗೂಸಿನೊಂದಿಗೆ ತರಬೇತಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.
ಹೌದು, ಪಟ್ಟಣದ ತಾಪಂ ಸಭಾಂಗಣದಲ್ಲಿ ಮೈಸೂರಿನ ನಜೀರ್ ಸಾಬ್ ತರಬೇತಿ ಸಂಸ್ಥೆಯ ಮೂಲಕ ತಾಲೂಕಿನ 21 ಗ್ರಾಪಂಗಳ ಸದಸ್ಯರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 5 ದಿನ ತರಬೇತಿ ನಡೆಯಲಿದ್ದು ಮೂರು ದಿನ ಮುಕ್ತಾಯವಾಗಿದೆ.
ತಾಪಂನಿಂದ ಸಕಲ ವ್ಯವಸ್ಥೆ: ತಮಿಳುನಾಡು ನಾಡಿನ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಬಲ ಮಂದೆ ಗ್ರಾಪಂ ಸದಸ್ಯೆಯಾಗಿ ಹೊಸದಾಗಿ ಆಯ್ಕೆಯಾಗಿರುವ ಕನಮನಹಳ್ಳಿಯ ಸಂಧ್ಯಾಬಾಯಿ ಹಸುಗೂಸು ವಿನೊಂದಿಗೆ ಕಳೆದ ಮೂರು ದಿನಗಳಿಂದಲೂ ತರಬೇತಿ ಯಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಪತಿ ಮನ್ನೋಜಿ ರಾವ್ ನಿತ್ಯ 45 ಕಿ.ಮೀ.ದೂರದಿಂದ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬರುತ್ತಾರೆ. ಇನ್ನೂ ಎರಡು ದಿನ ತರಬೇತಿ ನಡೆಯಲಿದೆ. ಬೆಳಗ್ಗೆ 10ರಿಂದ 4ರವರೆಗೂ ತರಬೇತಿ ನಡೆಯಲಿದ್ದು ಊಟದ ವ್ಯವಸ್ಥೆಯನ್ನು ತಾಪಂನಿಂದಲೇ ಮಾಡಲಾಗಿದೆ.
ತರಬೇತಿಯಲ್ಲಿ ಅಚ್ಚರಿ: ವಿವಿಧ ಸರ್ಕಾರಿ ಇಲಾಖೆ ಗಳಲ್ಲಿ ಅಧಿಕಾರಿ ಸಿಬ್ಬಂದಿ ಈ ರೀತಿ ಗರ್ಭಿಣಿಯಾದರೆ 9 ತಿಂಗಳು ರಜೆ ಘೋಷಣೆ ಮಾಡುವ ಪದ್ಧತಿಯಿದೆ. ರಾಜಕಾರಣಿಗಳು ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಯಾವುದೇ ರಜೆಯಾ ಗಲೀ ಅಥವಾ ವಿಶ್ರಾಂತಿಯಾಗಲಿ ಇರಲ್ಲ. ಆದರೆ, ಇಂತಹ ಪರಿಸ್ಥಿತಿಯಲ್ಲಿ 2ತಿಂಗಳ ಮಗುವಿನೊಂದಿಗೆ ಬಾಣಂತಿ ಸದಸ್ಯೆ ತರಬೇತಿಗೆ ಹಾಜರಾಗಿದ್ದು ಶಿಬಿರದಲ್ಲಿ ಅಚ್ಚರಿ ಮೂಡಿಸಿದೆ. ಪಂಚಾಯತ್ ರಾಜ್ ಇಲಾಖೆ ಯಲ್ಲಿನ ವಿವಿಧ ಯೋಜನೆಗಳ ವಿವರ ಸೇರಿ ಸ್ಥಳೀಯ ಸಂಸ್ಥೆಗಳ ಆಡಳಿತದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು 2 ತಿಂಗಳ ಕೂಸಿನೊಂದಿಗೆ ತರಬೇತಿ ಶಿಬಿರಕ್ಕೆ ಆಗ ಮಿಸಿದ್ದು ಕಾರ್ಯಕ್ರಮಗಳಿಗೆ ಗೈರಾಗುವ ಅಧಿಕಾರಿ ಗಳು, ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
- ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.