ಉಳ್ಳಾಲ ನಗರಸಭೆ: 10.32 ಲಕ್ಷ ರೂ. ಮಿಗತೆ


Team Udayavani, Feb 26, 2021, 5:15 AM IST

ಉಳ್ಳಾಲ ನಗರಸಭೆ: 10.32 ಲಕ್ಷ ರೂ. ಮಿಗತೆ

ಉಳ್ಳಾಲ: ಉಳ್ಳಾಲ ನಗರಸಭೆಯ ಆಡಳಿತಾರೂಢ ಕಾಂಗ್ರೆಸ್‌ 2021-22ನೇ ಸಾಲಿಗೆ 40.48ಕೋ.ರೂ. ಬಜೆಟ್‌ ಮಂಡಿಸಿದ್ದು, 40.37ಕೋ.ರೂ. ಖರ್ಚು, ಒಟ್ಟು 10.32 ಲಕ್ಷ ರೂ. ಮಿಗತೆ ಬಜೆಟ್‌ಗೆ ನಗರಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್‌ ಅವರ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಅಯ್ಯೂಬ್‌ ಮಂಚಿಲ ಅವರ ಉಪಸ್ಥಿತಿಯಲ್ಲಿ ಪೌರಾಯುಕ್ತ ರಾಯಪ್ಪ ಎ. ಅವರು ಬಜೆಟ್‌ ಮಂಡಿಸಿ ಕೊರೊನಾ, ತೆರಿಗೆ ಸಂಗ್ರಹಣೆಯಲ್ಲಿ ಕೊಂಚ ಮಟ್ಟಿಗೆ ಜನರಿಂದ ಉತ್ತಮ ಸಹಕಾರ ಸಿಗದಿರುವುದರಿಂದ ಕೇವಲ 10.32ಲಕ್ಷ ರೂ ಮಾತ್ರ ಉಳಿತಾಯ ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ 2021-22ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 4.32ಕೋಟಿ ರೂ., ನೀರು ಸರಬರಾಜು ಶುಲ್ಕದಿಂದ 1.80ಕೋಟಿ ರೂ., ವಾಣಿಜ್ಯ ಮಳಿಗೆ ಬಾಡಿಗೆಯಿಂದ 64.38ಲಕ್ಷ ರೂ., ಕಟ್ಟಡ ಪರವಾನಗಿಯಿಂದ 29.75ಲಕ್ಷ ರೂ., ಉದ್ದಿಮೆ ಪರವಾನಿಗೆ ಶುಲ್ಕ 25ಲಕ್ಷ ರೂ., ಘನತ್ಯಾಜ್ಯ ವಿಲೇವಾರಿ ಶುಲ್ಕ 52ಲಕ್ಷ ರೂ., ಪೆರ್ಮನ್ನೂರು ಸ್ಟಾಲ್‌ ನೆಲಬಾಡಿಗೆ 11.61ಲಕ್ಷ ರೂ., ಖಾತೆ ಬದಲಾವಣೆ, ಖಾತೆ ಉತಾರ 9.45ಲಕ್ಷ ರೂ., ಜಾಹೀರಾತು ಶುಲ್ಕ 3.80ಲಕ್ಷ ರೂ., ಒಣಕಸ ಗೊಬ್ಬರ ಮಾರಾಟದ ಆದಾಯ 1ಲಕ್ಷ ರೂ. ಮಾತ್ರವಲ್ಲದೆ ನಗರಸಭೆಗೆ ಇನ್ನಿತರ ಮೂಲಗಳಾದ ಆಸ್ತಿ ತೆರಿಗೆ ದಂಡ, ಉಪಕರ ಸಂಗ್ರಹಣ ಶುಲ್ಕ, ಬಸ್‌ ನಿಲ್ದಾಣಗಳ ಶುಲ್ಕ, ಪಾರ್ಕಿಂಗ್‌ ಶುಲ್ಕ, ನೀರಿನ ಸಂಪರ್ಕ ಶುಲ್ಕ, ಗುತ್ತಿಗೆದಾರರ ಪ್ಲಂಬರ್‌ ನೋಂದಣಿ, ಮುದ್ರಾಂಕ ಶುಲ್ಕ, ಟೆಂಡರ್‌ ಫಾರ್ಮ್ ಶುಲ್ಕ ಮೊದಲಾದವುಗಳಿಂದ ಒಟ್ಟು 99.54ಲಕ್ಷ ರೂ. ಆದಾಯ ಸಂಗ್ರಹಣೆ ನಿರೀಕ್ಷಿಸಲಾಗಿದ್ದು ನಗರಸಭೆಯ ಎಲ್ಲ ಆದಾಯ ಮೂಲಗಳಿಂದ ಒಟ್ಟು 9.10 ಕೋ.ರೂ. ಆದಾಯ ನಿರೀಕ್ಷಿಸಲಾಗಿದ್ದು ರಾಜ್ಯ ಸರಕಾರದಿಂದಲೂ ಬಹಳಷ್ಟು
ಅನುದಾನ ನಿರೀಕ್ಷಿಸಲಾಗಿದೆ ಎಂದರು.

ಎಸ್‌.ಎಫ್‌.ಸಿ ಮುಕ್ತ ನಿಧಿ: 52.75 ಲಕ್ಷ ರೂ.ಅನುದಾನ
ರಾಜ್ಯಹಣಕಾಸು ಆಯೋಗದ ಎಸ್‌.ಎಫ್‌.ಸಿ ಮುಕ್ತ ನಿಧಿ ಅನುದಾನ 52.75 ಲಕ್ಷ ರೂ.ಅನುದಾನ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ. ರಾಜ್ಯಹಣಕಾಸು ಆಯೋಗದ ಎಸ್‌.ಎಫ್‌.ಸಿ ವೇತನ ಅನುದಾನದಡಿ ನಗರಸಭೆಯ ಎಲ್ಲ ಖಾಯಂ ಅಧಿಕಾರಿ ಮತ್ತು ನೌಕರರ ವೇತನ ಪಾವತಿಗೆ ಪ್ರತಿ ತ್ತೈಮಾಸಿಕ ಅವಧಿಗೆ ವೇತನ ಅನುದಾನ ನೀಡುತ್ತಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ 1.50 ಕೋ.ರೂ., ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 5 ಲಕ್ಷ ರೂ., ವಿದ್ಯುತ್ಛಕ್ತಿ ಅನುದಾನ 2.32 ಕೋ.ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ.

ಅಂಗನವಾಡಿ ಅಭಿವೃದ್ಧಿ
ಅಂಗನವಾಡಿ ಮತ್ತು ಮಳೆಯಿಂದ ಹಾನಿಯಾದ ಶಾಲೆಯ ದುರಸ್ತಿಗಾಗಿ ಒಟ್ಟು 7ಲಕ್ಷ ರೂ., ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬರುವ ವಿವಿಧ ಶೀರ್ಷಿಕೆಗಳಿಂದ ಒಟ್ಟು 7.18 ಕೋ.ರೂ. ನಿರೀಕ್ಷಿಸಲಾಗಿದೆ.

ಘನ ತ್ಯಾಜ್ಯ ನಿರ್ವಹಣೆ: 1.45 ಕೋ.ರೂ.
ಘನತ್ಯಾಜ್ಯ ವಸ್ತು ನಿರ್ವಹಣೆಗೆ ತನ್ನ ಅಯವ್ಯಯದಲ್ಲಿ ತನ್ನ ಅದಾಯದ ಶೇ. 21ನ್ನು ಮೀಸಲಿಟ್ಟಿದೆ. ನೈರ್ಮಲ್ಯ ವಿಭಾಗದ ವಾಹನಗಳ ಇಂಧನಕ್ಕಾಗಿ 30 ಲಕ್ಷರೂ., ವಾಹನಗಳ ದುರಸ್ತಿಗಾಗಿ 10 ಲಕ್ಷ ರೂ. ಮತ್ತು ವಿಮೆಗಾಗಿ 5ಲಕ್ಷ ರೂ. ಮತ್ತು ಸದರಿ ವಾಹನಗಳ ಡ್ರೈವರುಗಳನ್ನು ಹೊರಗುತ್ತಿಗೆ ಮೇಲೆ ನಿಯೋಜಿಸುತ್ತಿರುವುದರಿಂದ ಅವರುಗಳ ವೇತನ ಪಾವತಿಗಾಗಿ 22.50 ಲಕ್ಷ ರೂ. ಮೀಸಲಿರಿಸಲಾಗಿದೆ. ಕ್ರಿಮಿನಾಶಕಗಳ ಖರೀದಿಗೆ 10 ಲಕ್ಷರೂ., ಬಯೋ ಮೆಡಿಕಲ್‌ ತ್ಯಾಜ್ಯ ವಿಲೇವಾರಿಗೆ 1 ಲಕ್ಷ ರೂ., ಪೌರಕಾರ್ಮಿಕರಿಗೆ ಸುರಕ್ಷ ಸಾಮಗ್ರಿಗೆ 3 ಲಕ್ಷರೂ. ಇತರ ವೆಚ್ಚ ಕ್ಕಾಗಿ 1ಲಕ್ಷ ರೂ., ಪೌರಕಾರ್ಮಿಕರ ವೇತನ ಪಾವತಿಗೆ 75ಲಕ್ಷ ರೂ. ಮೀಸಲಿರಿಸಲಾಗಿದೆ.ಮನಪಾ ಕಸ ವಿಲೇವಾರಿ ಶುಲ್ಕಗಾಗಿ 40ಲಕ್ಷ ರೂ. ಮೀಸಲಿಡಲಾಗಿದೆ. 15ನೇ ಹಣಕಾಸು ಯೋಜನೆಯಡಿ ಆರ್ಗನಿಕ್‌ ವೇಸ್ಟ್‌ ಕನ್‌ವರrರ್‌ಯಂತ್ರದ ಖರೀದಿಗೆ ಮತ್ತು ಘನತ್ಯಾಜ್ಯ ನಿರ್ವಹಣೆಯ ಇತರೆ ಕಾಮಗಾರಿಗೆ 1.45 ಕೋ.ರೂ. ಮೀಸಲಿಡಲಾಗಿದೆ.

ನೀರು ಸರಬರಾಜು: 1.31 ಕೋ.ರೂ.
ಶುದ್ಧ ಕುಡಿಯುವ ನೀರು ಸರಬರಾಜಿನ ವ್ಯವಸೆªಗಾಗಿ ಕೊಳವೆಬಾವಿಗಳನ್ನು ಸೇರಿ ಮೋಟಾರು ಪಂಪು ಮತ್ತು ಪೈಪ್ ಲೈನ್‌ಗಳ ನಿರ್ವಹಣೆಗೆ 31ಲಕ್ಷ ರೂ., ತುರ್ತು ದುರಸ್ತಿಗಳಿಗಾಗಿ 10ಲಕ್ಷ ರೂ. ನೀರಿನ ಬಿಲ್‌ ಮುದ್ರಿಸಿ ವಿತರಣೆ ಮಾಡಲು 8ಲಕ್ಷ ರೂ. ನಗರಸಭೆಯಲ್ಲಿ ಹೊರಗುತ್ತಿಗೆಯ ಮೇಲೆ ನೀರು ಸರಬರಾಜು ಅಪರೇಟರುಗಳನ್ನು ನಿಯೋಜಿಸಲು 28.55 ಲಕ್ಷ ರೂ.ಮತ್ತು ಉಳ್ಳಾಲಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಮನಪಾ ಬಿಲ್‌ ಪಾವತಿಗಾಗಿ ರೂ 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ನೀರಿನ ಮರು ಬಳಕೆಗಾಗಿ 6.12ಲಕ್ಷ ರೂ., ಮಳೆನೀರು ಕೊಯ್ಲುಗೆ 9.12ಲಕ್ಷ ರೂ., ವಿವಿಧ ಕಾಮಗಾರಿಗಳಿಗಾಗಿ 15ನೇ ಹಣಕಾಸು ಆಯೋಗದ ಅನುದಾನ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬರುವ ಅನುದಾನದಡಿ 1.31 ಕೋ.ರೂ. ಮೀಸಲಿಡಲಾಗಿದೆ.

15ನೇ ಹಣ ಕಾಸು 2.50 ಕೋ.ರೂ.
15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ 2.50 ಕೋ.ರೂ., ಸ್ವತ್ಛಭಾರತ ಮಿಶನ್‌ 10 ಲಕ್ಷ ರೂ., ಸಂಸದರ ಪ್ರದೇಶಾಭಿವೃದ್ಧಿ ಅನುದಾನದಡಿ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಯಡಿ ತಲಾ 5 ರೂ.ಲಕ್ಷ ದಂತೆ ಒಟ್ಟು ರೂ. 10 ಲಕ್ಷ ರೂ, ವಾಜಪೇಯಿ ವಸತಿ ಯೋಜ ನೆಯ ಜಿಯೋಟ್ಯಾಗ್‌ 25 ಸಾ.ರೂ. ಮತ್ತು ಡೇನಲ್ಮ್ ಕಾರ್ಯಕ್ರಮಗಳಿಗಾಗಿ 3.75 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.