ಮರಳುಗಾರಿಕೆ ಮೇಲೆ ನಿಗಾ : ಜಿಲ್ಲಾಡಳಿತದಿಂದ ಇಂಟಗ್ರೇಟೆಡ್ ಸಾಫ್ಟ್‌ವೇರ್
Team Udayavani, Feb 26, 2021, 5:40 AM IST
ಮಹಾನಗರ : ಮರಳುಗಾರಿಕೆ ಮತ್ತು ಸರಬರಾಜಿನಲ್ಲಿ ಹೆಚ್ಚು ಪಾರದರ್ಶಕ ತರುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂಟಗ್ರೆಟೇಡ್ ಸಾಫ್ಟ್‌ವೇರ್ ( ಸಮಗ್ರ ಮಾಹಿತಿ ಒಳಗೊಂಡ ತಂತ್ರಾಂಶ) ರೂಪಿಸುವ ನಿಟ್ಟಿನಲ್ಲಿ ಕಾಯೊìನ್ಮುಖವಾಗಿದೆ. ಇದಕ್ಕಾಗಿ ಪ್ರಸ್ತುತವಿರುವ ಎಲ್ಲ ತಂತ್ರಾಂಶಗಳನ್ನು ಒಂದೇ ತಂತ್ರಾಂಶದೊಳಗೆ ತರಲು ಪೂರಕ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ನೂತನವಾಗಿ ರೂಪುಗೊಳ್ಳುವ ಇಂಟಗ್ರೇಟಡ್ ಸಾಫ್ಟ್‌ವೇರ್‌ನಲ್ಲಿ ಮರಳು ಗಾರಿಕೆ ದಿಬ್ಬಗಳಿಂದ ಮರಳು ತೆಗೆದು ಬೇಡಿಕೆ ಸಲ್ಲಿಸಿರುವವವರ ತಾಣಕ್ಕೆ ಮರಳು ಸರಬರಾಜು ಆಗುವವರೆಗಿನ ಎಲ್ಲ ಮಾಹಿತಿಗಳು ಒಳ್ಳಗೊಳ್ಳಲಿದೆ. ಇದಕ್ಕಾಗಿ ನೂತನ ಆ್ಯಪ್‌ವೊಂದನ್ನು ಸಿದ್ಧಪಡಿ ಸಲಾಗುವುದು. ಈ ಆ್ಯಪ್ ಸಾರ್ವಜನಿಕರಿಗೂ ಲಭ್ಯವಿರಲಿದ್ದು ಪ್ರತಿಯೊಂದು ಹಂತವನ್ನು ಆ್ಯಪ್ ಮೂಲಕ ವೀಕ್ಷಿಸಬಹುದಾಗಿದೆ. ಇದನ್ನು ಪ್ರಾಯೋಗಿಕವಾಗಿ ಒಂದು ದಿಬ್ಬದಲ್ಲಿ ಅಳವಡಿಸಿ ಬಳಿಕ ಇತರೆಡೆಗೆ ವಿಸ್ತರಿಸುವ ಯೋಜಿಸಲಾಗಿದೆ.
ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳಿಗೆ ಹಾಗೂ ಮರಳು ಸಾಗಾಣಿಕೆ ವಾಹನಗಳಿಗೆ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ. ಮರಳು ದಿಬ್ಬ ಕೇಂದ್ರಗಳ ಬಳಿ ಕೆಮ ರಾಗಳನ್ನು ಅಳವಡಿಸಲಾಗುತ್ತಿದೆ. ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮರಳು ಪೂರೈಸಲಾಗುತ್ತಿದೆ. ಇದಲ್ಲದೆ ವಿವಿಧ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕೆಮರಾಗಳಿರುತ್ತದೆ. ಈ ಎಲ್ಲ ವ್ಯವಸ್ಥೆಗಳನ್ನು ಒಂದೇ ತಂತ್ರಾಂಶದೊಳಗೆ ತಂದು ಒಂದು ಆ್ಯಪ್‌ನಲ್ಲಿ ಅಳವಡಿಸುವ ಯೋಜನೆ ಇಂಟಿಗ್ರೇಟೆಡ್ ಸಾಫ್ಟ್ವೇರ್ ಆಗಿದೆ. ಆ್ಯಪ್ ರೂಪುಗೊಂಡ ಬಳಿಕ ಇದನ್ನು ಮೊಬೈಲ್‌ಗೆ ಲಿಂಕ್ ಮಾಡಲಾಗುತ್ತದೆ. ಸಾರ್ವಜನಿಕರು ಇದನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವ ಅವಕಾಶ ಒದಗಿಸಲಾಗುತ್ತದೆ.
ಸಿಆರ್‌ಝಡ್ ವ್ಯಾಪ್ತಿಯೊಳಗೆ ಬರುವ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ 1 ಬ್ಲಾಕ್ ಸಹಿತ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಅನುಮತಿ ನೀಡಲಾಗಿದೆ. ಒಟ್ಟು 104 ಮಂದಿಗೆ ಮರಳು ತೆಗೆಯಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ತಾತ್ಕಾಲಿಕ ಪರವಾನಿಗೆ ನೀಡಿದೆ.
ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಸಿಆರ್‌ಝಡ್ ಅನುಮತಿಯಂತೆ ಗುರುತಿಸ ಲಾಗಿರುವ 13 ದಿಬ್ಬಗಳಲ್ಲಿನ 10,58,598 ಮೆ. ಟನ್ ಮರಳು ತೆರವುಗೊಳಿಸಬಹುದಾಗಿದೆ.
ಒಂದೇ ತಂತ್ರಾಂಶದಲ್ಲಿ ಸಮಗ್ರ ಮಾಹಿತಿ
ಮರಳುಗಾರಿಕೆ ಹಾಗೂ ಸರಬರಾಜು ವ್ಯವಸ್ಥೆಯಲ್ಲಿ ಪ್ರಸ್ತುತ ಇರುವ ವಿವಿಧ ತಂತ್ರಾಂಶ ಹಾಗೂ ನಿಗಾ ವ್ಯವಸ್ಥೆಗಳನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಇಂಟಗ್ರೆಟೇಡ್ ಸಾಫ್ಟ್‌ವೇರ್ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ತಂತ್ರಾಂಶ ಹಾಗೂ ಆ್ಯಪ್ ರೂಪಿಸುವ ಬಗ್ಗೆ ಪೂರಕ ಪ್ರಕ್ರಿಯೆಗಳನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು.
-ಡಾ| ರಾಜೇಂದ್ರ ಕೆ.ವಿ., ದ.ಕನ್ನಡ ಜಿಲ್ಲಾಧಿಕಾರಿ
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.