ಪ್ರೊ| ಅಮೃತ ಸೋಮೇಶ್ವರ ಸಹಿತ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
Team Udayavani, Feb 27, 2021, 6:30 AM IST
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ ವರ್ಷದ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಂಗಳೂರಿನ ಪ್ರೊ| ಅಮೃತ ಸೋಮೇಶ್ವರ ಸಹಿತ ಐವರಿಗೆ ಗೌರವ ಪ್ರಶಸ್ತಿ ಹಾಗೂ ಉಡುಪಿಯ ವೀಣಾ ಬನ್ನಂಜೆ, ಉತ್ತರ ಕನ್ನಡ ಜಿಲ್ಲೆಯ ಶಿವಾನಂದ ಕಳವೆ ಸಹಿತ 10 ಮಂದಿಗೆ “ಸಾಹಿತ್ಯ ಶ್ರೀ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ವಸಂತಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು.
ವರ್ಷದ ಗೌರವ ಪ್ರಶಸ್ತಿಯು 50 ಸಾ. ರೂ. ಮತ್ತು ಫಲಕ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವು 25 ಸಾ. ರೂ. ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಮಾರ್ಚ್ ಅಂತ್ಯದಲ್ಲಿ ರಾಯಚೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು :
ಪ್ರೊ| ಅಮೃತ ಸೋಮೇಶ್ವರ (ಮಂಗಳೂರು), ವಿ| ಷಣ್ಮುಖಯ್ಯ ಅಕ್ಕೂರಮಠ (ಗದಗ), ಡಾ| ಕೆ.ಕೆಂಪೇಗೌಡ (ಚನ್ನಪಟ್ಟಣ), ಡಾ| ಕೆ.ಆರ್.ಸಂಧ್ಯಾರೆಡ್ಡಿ (ಚಿತ್ರದುರ್ಗ), ಅಶೋಕಪುರಂ ಕೆ.ಗೋವಿಂದರಾಜು ( ಮೈಸೂರು).
2020ನೇ ಸಾಲಿನ ಸಾಹಿತ್ಯ ಶ್ರೀ ಪುರಸ್ಕೃತರು :
ವೀಣಾ ಬನ್ನಂಜೆ ( ಉಡುಪಿ), ಪ್ರೊ| ಪ್ರೇಮಶೇಖರ್ (ಕೊಳ್ಳೆಗಾಲ), ಡಾ| ರಾಜಪ್ಪ ದಳವಾಯಿ (ಚಿಕ್ಕಮಗಳೂರು), ಬಿ.ಟಿ. ಜಾಹ್ನವಿ (ದಾವಣಗೆರೆ), ಪ್ರೊ| ಕಲ್ಯಾಣರಾವ್ ಜಿ.ಪಾಟೀಲ್ (ಕಲಬುರಗಿ), ಡಾ| ಜೆ.ಪಿ.ದೊಡ್ಡಮನಿ (ಬೆಳಗಾವಿ), ಡಾ| ಮೃತ್ಯುಂಜಯ ರುಮಾಲೆ (ಹೊಸಪೇಟೆ), ಡಿ.ವಿ.ಪ್ರಹ್ಲಾದ್ (ಬೆಂಗಳೂರು), ಡಾ| ಎಂ.ಎಸ್.ಆಶಾದೇವಿ (ದಾವಣಗೆರೆ), ಶಿವಾನಂದ ಕಳವೆ (ಉತ್ತರ ಕನ್ನಡ).
2019ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು :
ಸತ್ಯಮಂಗಲ ಮಹಾದೇವ ( ಕೃತಿ-ಪಂಚವರ್ಣದ ಹಂಸ), ಸಮಿತ್ ಮೇತ್ರಿ (ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ), ವಸುಧೇಂದ್ರ (ತೇಜೋ ತುಂಗಭದ್ರಾ), ಲಕ್ಷ್ಮಣ ಬಾದಾಮಿ (ಒಂದು ಚಿಟಿಕೆ ಮಣ್ಣು), ಉಷಾ ನರಸಿಂಹನ್ (ಕಂಚುಗನ್ನಡಿ), ರಘುನಾಥ್ ಚ.ಹ. (ಬೆಳ್ಳಿ ತೊರೆ), ಡಿ.ಜಿ.ಮಲ್ಲಿಕಾರ್ಜುನ (ಯೋರ್ದಾನ್ ಪಿರೆಮಸ್ ), ಬಿ.ಎಂ.ರೋಹಿಣಿ (ನಾಗಂದಿಗೆಯೊಳಗಿಂದ), ಡಾ| ಗುರುಪಾದ ಮರಿಗುದ್ದಿ (ಪೊದೆಯಿಂದಿಳಿದ ಎದೆಯ ಹಕ್ಕಿ), ವಸುಮತಿ ಉಡುಪ (ಅಭಿಜಿತನ ಕತೆಗಳು), ಡಾ| ಕೆ.ಎಸ್.ಪವಿತ್ರಾ (ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು), ಡಾ| ಮಹಾಬಲೇಶ್ವರ ರಾವ್ (ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮ ಸಂಸ್ಥೆಗಳು), ಡಾ| ಚನ್ನಬಸವಯ್ಯ ಹಿರೇಮಠ (ಅನಾವರಣ), ಗೀತಾ ಶೆಣೈ (ಕಾಳಿಗಂಗಾ), ಧರಣೇಂದ್ರ ಕುರಕುರಿ (ಜ್ವಾಲಾಮುಖೀ ಪರ್), ಸುಧಾ ಆಡುಕಳ (ಬಕುಲದ ಬಾಗಿಲಿನಿಂದ), ಪ್ರೊ| ಡಿ.ವಿ.ಪರಮಶಿವಮೂರ್ತಿ ಡಿ.ಸಿದ್ದಲಿಂಗಯ್ಯ (ನೊಳಂಬರ ಶಾಸನಗಳು), ಕಪಿಲ ಪಿ.ಹುಮನಾಬಾದೆ (ಹಾಣಾದಿ).
2019ನೇ ಸಾಲಿನ ಅಕಾಡೆಮಿ ದತ್ತಿ ಬಹುಮಾನ ಪುರಸ್ಕೃತರು :
ಅನುಪಮಾ ಪ್ರಸಾದ್ ಅವರ “ಪಕ್ಕಿ ಹಳ್ಳದ ಹಾದಿಗುಂಟ’ ಕೃತಿ – ಚದುರಂಗ ದತ್ತಿ ಬಹುಮಾನ
ನೀತಾ ರಾವ್ ಅವರ “ಹತ್ತನೇ ಕ್ಲಾಸಿನ ಹುಡುಗಿ’ ಕೃತಿ- ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ. ಡಾ| ಬಿ.ಪ್ರಭಾಕರ ಶಿಶಿಲ ಅವರ “ಬೊಗಸೆ ತುಂಬಾ ಕನಸು’ ಕೃತಿ- ಸಿಂಪಿ ಲಿಂಗಣ್ಣ ದತ್ತಿ ನಿಧಿ ಬಹುಮಾನ. ಡಾ| ಎಂ.ಉಷಾ ಅವರ “ಕನ್ನಡ ಮ್ಯಾಕ್ ಬೆತ್‌ಗಳು’ ಕೃತಿ- ಪಿ.ಶ್ರೀನಿವಾಸರಾವ್ ದತ್ತಿ ನಿಧಿ ಬಹುಮಾನ. ಜಿ.ಎನ್.ರಂಗನಾಥ್ ರಾವ್ ಅವರ “ಶ್ರೀ ಮಹಾಭಾರತ ಸಂಪುಟ 1,2,3 ಮತ್ತು 4’ಕೃತಿ- ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ. ಭಾಗ್ಯಜ್ಯೋತಿ ಹಿರೇಮಠ ಅವರ “ಪಾದಗಂಧ’ ಕೃತಿ -ಮಧುರಚೆನ್ನ ದತ್ತಿನಿಧಿ ಬಹುಮಾನ. ಪ್ರಮೋದ್ ಮುತಾಲಿಕ್ ಅವರ “ಬಿಯೋಂಡ್ ಲೈಫ್’ ಕೃತಿ- ಅಮೆರಿಕ ಕನ್ನಡ ದತ್ತಿನಿಧಿ ಬಹುಮಾನ. ಮಲ್ಲಿಕಾರ್ಜುನ ಕಡಕೋಳ ಅವರ “ಯಡ್ರಾಮಿ ಸೀಮೆ ಕಥನಗಳು’ ಕೃತಿ - ಬಿ.ವಿ.ವೀರಭದ್ರಪ್ಪ ದತ್ತಿ ನಿಧಿ. ಲಕ್ಷ್ಮೀಕಾಂತ ಪಾಟೀಲ್ ಅವರ ಶ್ರೀ ಪ್ರಸನ್ನ ವೆಂಕಟದಾಸರ್ಯಕೃತ ಶ್ರೀಲಕ್ಷ್ಮೀ ದೇವಿ ಅಪ್ರಕಟಿತ ಸ್ತುತಿರತ್ನಗಳು ಕೃತಿ- ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ನಿಧಿ ಬಹುಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.