ಹೊಟೇಲಿಗರ ಸಮಸ್ಯೆ ಬಗೆಹರಿಸುವುದು ಸಂಸ್ಥೆಯ ಧ್ಯೇಯ: ಶಿವಾನಂದ ಡಿ. ಶೆಟ್ಟಿ
Team Udayavani, Feb 27, 2021, 1:24 AM IST
ಮುಂಬಯಿ: ಹೊಟೇಲಿಗರ ಪ್ರತಿಷ್ಠಿತ ಸಂಘಟನೆಯಾಗಿರುವ ಆಹಾರ್ ಸಂಸ್ಥೆಯ 41ನೇ ವಾರ್ಷಿಕ ಮಹಾಸಭೆ ಫೆ. 24ರಂದು ಸಾಂತಾಕ್ರೂಜ್ ಪೂರ್ವದ ಕಲಿನಾದ ಗ್ರ್ಯಾಂಡ್ ಹಯಾತ್ ಫೈವ್‌ಸ್ಟಾರ್ ಹೊಟೇಲ್ ಸಭಾಗೃಹದಲ್ಲಿ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸರಳ ರೀತಿಯಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ಮಾತನಾಡಿ, ಹೊಟೇಲಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಆಹಾರ್ ಕಳೆದ 41 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಆಶಾಕಿರಣವಾಗಿ ಗುರುತಿಸಿ ಕೊಂಡಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಹೊಟೇಲಿಗರ ಹಲವಾರು ಕ್ಲಿಷ್ಟಕರವಾದ ಸಮಸ್ಯೆಗಳನ್ನು ಬಗೆಹರಿ ಸುವಲ್ಲೂ ಯಶಸ್ವಿಯಾಗಿದೆ. ಸಂಬಂಧಪಟ್ಟ ವಿವಿಧ ಅಧಿಕಾರಿಗಳು, ಸಚಿವರು, ಶಾಸಕರು, ಸಂಸದರನ್ನು ಮುಖತಃ ಭೇಟಿಯಾಗಿ ಹೊಟೇಲಿಗರ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿದ್ದೇವೆ. ನಮ್ಮ ಹಗಲಿರುಳಿನ ಸಾರ್ಥಕ ಸೇವೆಯಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಲಭಿಸಿದೆ ಎನ್ನಲು ಸಂತೋಷವಾಗುತ್ತಿದೆ. ಆಹಾರ್ ಸಂಸ್ಥೆಯು ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಇಂದಿನ ಮಹಾಸಭೆಯನ್ನು ಪಂಚತಾರಾ ಹೊಟೇಲ್‌ನಲ್ಲಿ ಆಯೋಜಿಸಲು ಮಹಾಸಭೆ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಮತ್ತು ಅವರಿಗೆ ಸಹಕರಿಸಿದ ಮಹೇಶ್ ಶೆಟ್ಟಿ ಅವರ ಸಹಕಾರವನ್ನು ಮರೆಯುವಂತಿಲ್ಲ. ಕೊರೊನಾ ಅಂಗವಾಗಿ ಸರಕಾರವು ಹೊಟೇಲಿಗರಿಗೆ ಹಲವಾರು ಮಾರ್ಗಸೂಚಿಗಳನ್ನು ನೀಡಿದ್ದು, ಅದಕ್ಕೆ ತಕ್ಕಂತೆ ವ್ಯವಹರಿಸಬೇಕು. ನ್ಯಾಯಬದ್ಧವಾಗಿ ವ್ಯವಹಾರ ಮಾಡಿದಾಗ ಮಾತ್ರ ನಾವು ಯಾರಿಗೂ ಹೆದರುವ ಆವಶ್ಯಕತೆಯಿಲ್ಲ. ಸರಕಾರದ ನಿಯಮಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಹಾರ್‌ನ ಸಾಧನೆಯಲ್ಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಪಾತ್ರ ಅಪಾರವಾಗಿದೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ. ಸದಸ್ಯರ ಸಮಸ್ಯೆಗಳಿಗೆ ಏಕತೆ ಮತ್ತು ಒಗ್ಗಟ್ಟಿನಿಂದ ಸಂಘಟಿತರಾಗಿ ಸಹಕರಿಸೋಣ ಎಂದರು.
ಸಮ್ಮಾನ :
ಇದೇ ಸಂದರ್ಭದಲ್ಲಿ ಆಹಾರ್‌ನ ಮಾಜಿ ಅಧ್ಯಕ್ಷ, ಸಲಹೆಗಾರ ಹಾಗೂ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ದಂಪತಿ, ನಾನಾ ಚೌಕ್‌ನ ಶ್ರೀಕೃಷ್ಣ ಪ್ಯಾಲೇಸ್ ಹೊಟೇಲ್‌ನ ಮಾಲಕ ಕೃಷ್ಣ ವೈ. ಶೆಟ್ಟಿ , ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಇದರ ಮಾಜಿ ಕಾರ್ಯದರ್ಶಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಆಹಾರ್‌ಗೆ ಅಧಿಕ ಮೊತ್ತದ ಧನ ಸಂಗ್ರಹಿಸಿದ ಹಾಗೂ ಮಹಾಸಭೆಯನ್ನು ಆಯೋಜಿಸಲು ಸಹಕರಿಸಿದ ಮಹೇಶ್ ಶೆಟ್ಟಿ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಚಿರಾಗ್ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಆಹಾರ್ ಮಹಾಸಭೆಯ ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ ಮಾತನಾಡಿ, ಆಹಾರ್ ಕುಟುಂಬವು ಈ ಕಾರ್ಯಕ್ರಮದ ಮಹತ್ತರವಾದ ಜವಾಬ್ದಾರಿಯನ್ನು ನನಗೆ ವಹಿಸಿದ್ದು, ಇದರಲ್ಲಿ ಯಶಸ್ವಿಯಾಗಿದ್ದೇವೆ ಎನ್ನಲು ಸಂತೋಷವಾಗುತ್ತಿದೆ. ಇತರ ಪದಾಧಿಕಾರಿಗಳ ಸಹಕಾರದಿಂದ ಇದು ಸುಲಭ ಸಾಧ್ಯವಾಯಿತು. ಹೊಟೇಲಿಗರ ಅನೇಕ ಸವಾಲಿನ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಸದಸ್ಯ ಬಾಂಧವರೊಂದಿಗೆ ಸದಾ ಇದ್ದೇವೆ ಎಂದರು.
ಆಹಾರ್‌ನ ಮಾಜಿ ಅಧ್ಯಕ್ಷ, ಸಲಹೆಗಾರ ಲಯನ್ ಸಂತೋಷ್ ಆರ್. ಶೆಟ್ಟಿ ಮಾತನಾಡಿ, ಆಹಾರ್‌ನ ಪ್ರಸ್ತುತ ಅಧ್ಯಕ್ಷ ಶಿವಾನಂದ ಶೆಟ್ಟಿ ಮತ್ತು ಅವರ ತಂಡವು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಆಹಾರ್ ಇಂದು ಸ್ಟಾರ್ ಹೊಟೇಲ್‌ನಲ್ಲಿ ಮಹಾಸಭೆಯನ್ನು ಮಾಡುವಷ್ಟು ಬೆಳೆದಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆಹಾರ್‌ನಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯುತ್ತಿರಲಿ ಎಂದು ಹಾರೈಸಿದರು.
ಆಹಾರ್‌ನ ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರ ಎ. ಬಿ. ಶೆಟ್ಟಿ ಮಾತನಾಡಿ, ಹೊಟೇಲಿಗರ ಸಮಸ್ಯೆಗಳನ್ನು ಪರಿಹರಿಸುತ್ತಾ ಆಹಾರ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಆಹಾರ್ ಮಾಜಿ ಅಧ್ಯಕ್ಷ ಮತ್ತು ಸಲಹೆಗಾರ ನಾರಾಯಣ ಆಳ್ವ ಮಾತನಾಡಿ, ಕೋವಿಡ್ ಲಾಕ್‌ಡೌನ್ ಸಂದರ್ಭ ಕಷ್ಟ ಏನೆಂಬುದು ಎಲ್ಲರಿಗೂ ಅರಿವಾಗಿದೆ. ಆಹಾರ್‌ನ ಸಾಧನೆ ಅಭಿನಂದನೀಯ ಎಂದರು.
ಆಹಾರ್‌ನ ಮಾಜಿ ಅಧ್ಯಕ್ಷರಾದ ಅರವಿಂದ ಶೆಟ್ಟಿ, ಸಂತೋಷ್ ಶೆಟ್ಟಿ, ಸುಧಾ ಕರ್ ಶೆಟ್ಟಿ ಮೊದಲಾದವರು ಆಹಾರ್‌ನ ಸಾಧನೆಗಳನ್ನು ವಿವರಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಹೊಟೇಲಿಗರ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಕೋವಿಡ್ ಮಾರ್ಗ
ಸೂಚಿಗಳಿಗೆ ಅನುಗುಣವಾಗಿ ಮಹಾಸಭೆ ಯನ್ನು ಆಯೋಜಿಸಲಾಗಿತ್ತು.
ಶಶಿಕಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ದರು. ಆಹಾರ್‌ನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ವಂದಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳು, ಪ್ರಾದೇಶಿಕ ವಲಯಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಸಹಕರಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆಹಾರ್ ಕುಟುಂಬದವನಾದ ನನಗೆ ಇಂದು ನನ್ನದೇ ಮನೆಯಿಂದ ಸಮ್ಮಾನ ಲಭಿಸಿದೆ. ಆಹಾರ್ ಫೈವ್‌ಸ್ಟಾರ್ ಹೊಟೇಲ್‌ನಲ್ಲಿ ಮಹಾಸಭೆಯನ್ನು ಆಯೋಜಿಸುವಷ್ಟು ಬೆಳೆದು ನಿಂತಿರುವುದು ಅಭಿಮಾನದ ಸಂಗತಿಯಾಗಿದೆ. ಆಹಾರ್ ಪ್ರತಿಯೊಂದು ಸಮಯದಲ್ಲೂ ಹೊಟೇಲಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ. ಸಮ್ಮಾನಿಸಿದ ಎಲ್ಲರಿಗೂ ಕೃತಜ್ಞತೆಗಳು. ನನ್ನ ಮೇಲೆ ಗೌರವ ಮತ್ತು ಪ್ರೀತ್ಯಾಭಿಮಾನದಿಂದ ಬಂಟರ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು, ಸಂಘದ ಪ್ರತಿಷ್ಠೆ, ಘನತೆಯನ್ನು ಹೆಚ್ಚಿಸಲು ಸದಾ ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ. –ಚಂದ್ರಹಾಸ್ ಕೆ. ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.