ಜಿಪಂ ಸಭೆಯಲ್ಲಿ ಅಶಿಸ್ತು ಪ್ರದರ್ಶನ!
ಕೊನೆಯ ಸಭೆಯಲ್ಲೂ ಆರೋಪ-ಪ್ರತ್ಯಾರೋಪ! ಚರ್ಚೆಯಲ್ಲಿಯೂ ನುಸುಳಿದ ರಾಜಕಾರಣ
Team Udayavani, Feb 27, 2021, 3:04 PM IST
ದಾವಣಗೆರೆ: ಜಿಲ್ಲಾ ಪಂಚಾಯಿತಿ ಸದಸ್ಯರ ಪ್ರಸ್ತುತ ಆಡಳಿತಾವಧಿ ಮುಗಿಯುತ್ತಿರುವ ಈ ಸಂದರ್ಭದಲ್ಲಿಯೂ ಶಿಸ್ತಿನ ಬಗ್ಗೆ ಉಲ್ಲೇಖೀಸುತ್ತಲೇ ಅಶಿಸ್ತು ಪ್ರದರ್ಶಿಸಿದ ಘಟನೆಗೆ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆ ಸಾಕ್ಷಿಯಾಯಿತು.
ಜಿಪಂ ಚುನಾವಣೆ ಅಧಿಸೂಚನೆ ಸದ್ಯದಲ್ಲಿಯೇ ಹೊರಬೀಳುವ ಸಾಧ್ಯತೆ ಇರುವುದರಿಂದ ಇದು ನಮ್ಮ ಆಡಳಿತಾವಧಿಯ ಕೊನೆಯ ಸಭೆಯಾಗಿದೆ. ಈ ಸಭೆಯಲ್ಲಾದರೂ ಶಿಸ್ತಿನಿಂದ ನಡೆದುಕೊಳ್ಳೋಣ ಎಂದು ಹೇಳುವ ಮೂಲಕ ಸದಸ್ಯರು ಸಭೆ ಆರಂಭಿಸಿದರು. ಆದರೆ, ಸಭೆ ಮುಂದುವರಿಯುತ್ತಿದ್ದಂತೆ ಕೆಲ ಸದಸ್ಯರು ಶಿಸ್ತು ಮರೆತು ಬಿಟ್ಟರು. ಜಿಪಂ ಅಧಿಕಾರ ವ್ಯಾಪ್ತಿ ಮೀರಿದ ಹಾಗೂ ಈ ಹಿಂದೆ ಸಾಕಷ್ಟು ಬಾರಿ ಚರ್ಚೆಯಾದ ಹಾಗೂ ಸರ್ಕಾರ ಮಟ್ಟದ ವಿಚಾರಗಳನ್ನು ತಾಸುಗಟ್ಟಲೆ ಚರ್ಚೆ ಮಾಡಿದರು. ಜತೆಗೆ ರಾಜಕೀಯವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡು ತಮ್ಮ ಕೊನೆಯ ಸಭೆಯಲ್ಲಿಯೂ ಅಶಿಸ್ತು ಪ್ರದರ್ಶಿಸಿದರು.
ಸಭೆ ಆರಂಭದಲ್ಲಿ ಸದಸ್ಯ ಕೆ.ಎಚ್.ಬಸವಂತಪ್ಪ, ಕಳೆದ ಸಭೆಯಲ್ಲಿ ಕೇಳಿದ ಗ್ರಾಮಗಳಲ್ಲಿ ಸ್ವತ್ಛತೆ ವಿಚಾರ ಪ್ರಸ್ತಾಪಿಸಿದಾಗ ಇನ್ನೋರ್ವ ಸದಸ್ಯ ಎನ್.ಜಿ. ನಟರಾಜ್, ಸದಸ್ಯರು ಏಕಾಏಕಿ ತಮ್ಮ ವಿಚಾರ ಮಂಡಿಸುವುದಕ್ಕಿಂತ ಅಧ್ಯಕ್ಷರ ಸೂಚನೆ ಮೇರೆಗೆ ಇಲಾಖಾವಾರು ಚರ್ಚೆ ಮಾಡೋಣ ಎಂದರು.
ಈ ನಡುವೆಯೇ ಗ್ರಾಪಂಗಳಲ್ಲಿ ಅನುದಾನ ದುರ್ಬಳಕೆ ಬಗ್ಗೆ ಆಗುತ್ತಿರುವ ಬಗ್ಗೆ ಗಂಭೀರ ಚರ್ಚೆ ಮಾಡಿದ ಸದಸ್ಯರು, ಕೊನೆಗೆ ಇಲಾಖಾವಾರು ಚರ್ಚೆಗೆ ಅಣಿಯಾದರು.
ಸರ್ಕಾರ ಮಟ್ಟದ ವಿಚಾರ: ಕೃಷಿ ಇಲಾಖೆ ಕುರಿತ ಚರ್ಚೆ ವೇಳೆ ಈ ಹಿಂದಿನ ಹಲವು ಸಭೆಯಲ್ಲಿ ಪ್ರಸ್ತಾಪಿತ ಬೆಂಬಲಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ವಿಚಾರವನ್ನು ಸದಸ್ಯ ಡಿ.ಜಿ. ವಿಶ್ವನಾಥ್ ಪ್ರಸ್ತಾಪಿಸಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸದೆ ಇರುವುದರಿಂದ ರೈತರಿಗೆ ಭಾರಿ ತೊಂದರೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಮಹೇಶ್, ರೈತರಿಗೆ ತೊಂದರೆಯಾಗಬಾರದೆಂದೇ ನಮ್ಮ ಸರ್ಕಾರ ಎಪಿಎಂಪಿ ಕಾಯ್ದೆ, ಕೃಷಿ ಕಾಯ್ದೆ ಜಾರಿಗೆ ತರುತ್ತಿದೆ ಎಂದರು. ಈ ಹೇಳಿಕೆಯಿಂದ ಆಕ್ರೋಶಗೊಂಡ ಹದಡಿ ನಿಂಗಪ್ಪ, ಓಬಳಪ್ಪ ಹಾಗೂ ಕೆ.ಎಸ್. ಬಸವಂತಪ್ಪ, ಕಾಯ್ದೆ ಬಗ್ಗೆ ಇಲ್ಲಿ ಚರ್ಚೆ ಬೇಡ. ಇದನ್ನು ನಮ್ಮ ಪಕ್ಷದವರು ಹೊರಗೆ ಹೋರಾಟ ಮಾಡುತ್ತಿದ್ದಾರೆ. ನೀವು ಬೆಂಬಲ ಬೆಲೆ ನಿಗದಿ ಮಾಡಿದ ಮೇಲೆ ಖರೀದಿ ಏಕೆ ಮಾಡುತ್ತಿಲ್ಲ. ನೀವು ಒಬ್ಬ ರೈತನ ಮಗನಾಗಿ ರೈತರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಬಾರದೇ ಎಂದೆಲ್ಲ ಪ್ರತಿ ವಾಗ್ಧಾಳಿ ನಡೆಸಿದರು. ಇದರಿಂದ ಇಡೀ ಚರ್ಚೆ ರಾಜಕೀಯ ತಿರುವು ಪಡೆದುಕೊಂಡು ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಅಧಿಕಾರ ಮಿತಿಯಲ್ಲಿರಲಿ ಚರ್ಚೆ: ಸದಸ್ಯರ ಈ ಚರ್ಚೆಯಿಂದ ಅಸಮಾಧಾನಗೊಂಡ ಸದಸ್ಯೆ ಶೈಲಜಾ ಬಸವರಾಜ್, ನಮ್ಮ ಆಡಳಿತಾವಧಿಯ ಕೊನೆಯ ಸಭೆ ಇದಾಗಿದ್ದು, ಈ ಸಭೆಯಲ್ಲಾದರೂ ಜಿಲ್ಲಾ ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಬರುವ ವಿಚಾರಗಳನ್ನು ಚರ್ಚೆ ಮಾಡಿ. ಸರ್ಕಾರ ಮಟ್ಟದ ವಿಚಾರಗಳನ್ನು ಜಿಪಂ ಅಧ್ಯಕ್ಷೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಚರ್ಚೆ ಮಾಡಿದರೆ ಪ್ರಯೋಜನವಾಗದು. ಸುಮ್ಮನೇ ಸಮಯ ವ್ಯರ್ಥವಾಗುತ್ತದೆ ಎನ್ನುವ ಮೂಲಕ ಮೆಕ್ಕೆಜೋಳದ ಚರ್ಚೆಗೆ ತೆರೆಎಳೆಯಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.