ಠಾಣೆಗಳಲ್ಲಿ ಮಾನವ ಹಕ್ಕು ಹರಣ
Team Udayavani, Feb 27, 2021, 3:17 PM IST
ಮುಳಬಾಗಿಲು: ಪೊಲೀಸ್ ಠಾಣೆಯಲ್ಲಿ ಮಾನವ ಹಕ್ಕುಗಳು ಹರಣ ಆಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಠಾಣೆಗೊಬ್ಬರುಪ್ಯಾನಲ್ ವಕೀಲರನ್ನು ನೇಮಕ ಮಾಡಿಆರೋಪಿಗಳಿಗೆ ಕಾನೂನು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಿರಿಯಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಚ್.ಗಂಗಾಧರ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ, ಗ್ರಾಮ ವಿಕಾಸ ಸಂಸ್ಥೆ, ಕ್ಯಾನ್‌ಸಂಸ್ಥೆ, ಗ್ರಾಮೀಣ ಮಹಿಳಾ ಒಕ್ಕೂಟ,ರೋಟರಿ ಕೋಲಾರ ಲೇಕ್ ಸೈಡ್, ಪರಿಸರಹಿತರಕ್ಷಣಾ ಸಮಿತಿ ಮತ್ತು ಯುವ ಸೇನೆಆಶ್ರಯದಲ್ಲಿ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಯಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿಹುಸೇನಸಾಬ ಯಾದವಾಡ ಮಾತನಾಡಿ, ಫೆ.27ರಂದು ಜಿಲ್ಲೆಯಲ್ಲಿ ಲೋಕಅದಾಲತ್ ನಡೆಸಲಾಗುತ್ತಿದ್ದು, ಕಕ್ಷಿದಾರರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಹಿರಿಯ ವಕೀಲ ವಿ.ಜಯಪ್ಪ ಮಾತ ನಾಡಿದರು. ವಕೀಲರ ಸಂಘದ ಅಧ್ಯಕ್ಷಎಂ.ಎಲ್.ವೆಂಕಟೇಶ್, ಕಾರ್ಯದರ್ಶಿಕೆ.ಆರ್.ವೇಣುಗೋಪಾಲ್, ಹಿರಿಯವಕೀಲರಾದ ಎನ್.ಪ್ರಭಾಕರ್, ಕೆ.ಆರ್ .ಧನರಾಜ್, ವಕೀಲರಾದ ಎಂ.ರಾಮಚಂದ್ರ, ಎಸ್.ಎಂ.ಅಶೋಕ್‌ಕುಮಾರ್,ರಮೇಶ್, ದುರ್ಗಾಪ್ರಸಾದ್, ರಾಘವೇಂದ್ರ, ಎಂ.ಎನ್.ಪ್ರವೀಣ್‌ಕುಮಾರ್,ಟಿ.ರಾಜವೇಲು, ವಿ.ಸುಬ್ರಹ್ಮಣಿ,ಗ್ರಾಮವಿಕಾಸ ಸಂಸ್ಥೆ ಹಣಕಾಸು ವಿಭಾಗದಮುಖ್ಯಸ್ಥೆ ಎಂ.ಎಸ್.ಗಿರಿಜಾ, ವಾಸಂತಿ,ಕೆಜಿಎಫ್ ಮಕ್ಕಳ ವಿಕಾಸ ಎನ್‌ಜಿಒ ಮುಖ್ಯಸ್ಥೆ ಪೂಂಗೂಡಿ, ಹೂಹಳ್ಳಿ ನಾಗರಾಜ್ ಪಾಲ್ಗೊಂಡಿದ್ದರು.
ನ್ಯಾಯಯುತವಾಗಿ ಕೆಲಸ ನಿರ್ವಹಿಸಿ :
ಶ್ರೀನಿವಾಸಪುರ: ಸಾರ್ವಜನಿಕರ ಕೆಲಸಗಳಿಗೆ ಪರ ವಿರೋಧ ಮಾಡುವುದಿಲ್ಲ. ಏನಿದ್ದರೂ ಬಂದವರ ಕೆಲಸಗಳನ್ನು ನ್ಯಾಯ ಯುತವಾಗಿ ಮಾಡಿ, ದೂರುಗಳು ಬಂದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಪ್ರಾಮಾ ಣಿಕವಾಗಿ ಕೆಲಸ ಮಾಡಬೇಕೆಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ತಾಲೂಕಿನ 25 ಗ್ರಾಪಂಗಳಲ್ಲಿನ ಎಲ್ಲಾಗ್ರಾಮಗಳಿಗೆ ಸ್ವತ್ಛ ಭಾರತ್‌ನಲ್ಲಿ ಜಮೀನು ಕಾಯ್ದಿರಿಸುವುದು, ಸ್ಮಶಾನ, ಸಮುದಾಯಭವನ, ಪಹಣಿಯಲ್ಲಿನ ಪಿ.ನಂಬರ್‌ತೆಗೆಯುವುದರ ಬಗ್ಗೆ ಹಾಗೂ ವಸತಿ,ವಿಧವಾ ವೇತನ, ವೃದ್ಧಾಪ್ಯ, ಸಂಧ್ಯಾಸುರಕ್ಷಾ, ವಸತಿ ಸೇರಿದಂತೆ ಅನೇಕ ಮೂಲಸೌಲಭ್ಯಗಳನ್ನು ಗ್ರಾಮಗಳಿಗೆ ಬಾಕಿಇರದಂತೆ ಕ್ರಮ ಕೈಗೊಳ್ಳುವ ಉದ್ದೇಶಇದಾಗಿದೆ ಎಂದರು.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಪಂ ಕೇಂದ್ರದಲ್ಲಿ ಮಾ.13ರಂದು ಅಲ್ಲಿನ ಸಮಸ್ಯೆಗಳಿಗೆ
ಪರಿಹಾರ ದೊರಕಿಸಲು ಸಭೆ ನಡೆಸಲಾಗುತ್ತದೆ ಎಂದರು. ಜೆ.ವಿ.ಕಾಲೋನಿಯಲ್ಲಿ ಎಲ್ಲಾ ಕುಟುಂಬಗಳು ಪ.ಜಾತಿಗೆ ಸೇರಿದೆ. ಇವರಿಗೆ ಸ್ವಗ್ರಾಮದಲ್ಲಿ ಪಡಿತರ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅಂತಹ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಮಾಡುವುದಾಗಿ ಆಹಾರ ಇಲಾಖೆ ಕಚೇರಿ ಶಿರಸ್ತೇದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ದಿಂಬಾಲ್ ಅಶೋಕ್, ಆಲಂಬಗಿರಿ ಅಯ್ಯಪ್ಪ, ದ್ವಾರಸಂದ್ರ ಮುನಿ ವೆಂಕಟಪ್ಪ, ನಾರಾಯಣಸ್ವಾಮಿ, ಪಾಳ್ಯ ಗೋಪಾಲರೆಡ್ಡಿ ಇತರೆ ಮುಖಂಡರುಹಾಗೂ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಇಒ ಎಸ್.ಆನಂದ್, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.