![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 28, 2021, 6:50 AM IST
ಚನ್ನಪಟ್ಟಣ: ಪಾರಂಪರಿಕ ಗೊಂಬೆ ಉದ್ಯಮದಲ್ಲಿ ಹೊಸ ಆಲೋಚನೆ, ಹೊಸತನವನ್ನು ಅಳವಡಿಸಿಕೊಂಡು ವಿಶ್ವದ ಮಕ್ಕಳನ್ನು ಸೆಳೆಯುವ ಗೊಂಬೆಗಳನ್ನು ಆವಿಷ್ಕರಿಸುವಂತೆ ಪ್ರಧಾನಿ ಮೋದಿ ಗೊಂಬೆ ತಯಾರಕರಿಗೆ ಸಲಹೆ ನೀಡಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಯಡಿ ಶನಿವಾರ ಆರಂಭವಾದ “ದಿ ಇಂಡಿಯಾ ಟಾಯ್ಸ್ ಫೇರ್ 2021′ ವರ್ಚುವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಚನ್ನಪಟ್ಟಣವೂ ಸೇರಿದಂತೆ ದೇಶದ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಚನ್ನಪಟ್ಟಣದ ಗೊಂಬೆಗಳನ್ನು ಕೇವಲ ಆ ಕ್ಷೇತ್ರ, ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಮೋದಿ, ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗ್ಳ ಜತೆ ಕರಕುಶಲಕರ್ಮಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರದ ಜತೆ ಚರ್ಚಿಸಿ ಮುನ್ನಡೆಯುತ್ತೇವೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಖುದ್ದು ನಿಗಾ ವಹಿಸಲಿದೆ ಎಂದಿದ್ದಾರೆ.
ಸ್ಪರ್ಧೆ ಆಯೋಜಿಸಿ
ಚನ್ನಪಟ್ಟಣದಲ್ಲಿ ಗೊಂಬೆ ಉದ್ಯಮದಲ್ಲಿ ತೊಡಗಿರುವ 2 ಸಾವಿರ ಮಂದಿಗೆ ಒಂದು ಸ್ಪರ್ಧೆ ಆಯೋಜಿಸಬೇಕು. ಯಾರು ಹೊಸ ವಿಧಾನದಲ್ಲಿ ಗೊಂಬೆ ಉತ್ಪಾದನೆ ಮಾಡುತ್ತಾರೆಯೋ ಅವರಿಗೆ ಬಹುಮಾನ ನೀಡುವ ಮೂಲಕ ಹೊಸ ಪ್ರಯತ್ನಗಳು ಮಾರುಕಟ್ಟೆಗೆ ಬರುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದರು.
ಹೊಸ ಗೊಂಬೆಗಳ ಆವಿಷ್ಕಾರ
ಗೊಂಬೆ ಉದ್ಯಮವನ್ನು ಇ-ಮಾರುಕಟ್ಟೆ ಮುಖಾಂತರ ವಿಶ್ವಕ್ಕೆ ತಲುಪಿಸಬೇಕೆನ್ನುವ ಆಲೋಚನೆಯನ್ನು ಮಾಡಿದ್ದೀರಾ ಎಂದು ಪ್ರಧಾನಿ ಪ್ರಶ್ನಿಸಿದರು. ಹೊಸ ಮಾದರಿಯ ಗೊಂಬೆಗಳ ಆವಿಷ್ಕಾರ ಆಗಬೇಕಿದೆ ಎಂದು ಹುರಿದುಂಬಿಸಿದರು.
ಹೊಸ ಆವಿಷ್ಕಾರ ಮಾಡುತ್ತೇವೆ
ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಧಾನಿಗೆ ವಿವರ ನೀಡಿದ ಪ್ರತಿನಿಧಿ ಕೌಸರ್ ಪಾಷಾ, ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲ ಕರ್ಮಿಗಳು 200 ವರ್ಷಗಳಿಂದ ಗೊಂಬೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೊಂಬೆಗಳು ರಾಸಾಯನಿಕಗಳನ್ನು ಬಳಸದೆ ತಯಾರಾಗುತ್ತವೆ. ಶೇ. 80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಈ ಉದ್ಯಮದಲ್ಲಿದ್ದಾರೆ. ಈಗ ಕೇಂದ್ರ ಸರಕಾರ ನಮ್ಮ ಬೆಂಬಲಕ್ಕೆ ನಿಂತಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.