ಈ ರಾಶಿಯವರಿಗಿಂದು ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು, ಕಾಳಜಿ ವಹಿಸಿರಿ

Team Udayavani, Feb 28, 2021, 7:48 AM IST

horo

28-02-2021

ಮೇಷ: ಅನಿರೀಕ್ಷಿತ ಶುಭ ಸಮಾಚಾರದಿಂದ ಕಾರ್ಯ ಸಿದ್ಧಿಯಾಗಲಿದೆ. ಕಾರ್ಯರಂಗದಲ್ಲಿ ನಿಮ್ಮ ಸ್ವಯಂ ಪ್ರಜ್ಞೆಯೂ ಪ್ರಯತ್ನ ಬಲಕ್ಕೆ ಒತ್ತು ನೀಡಿದ್ದಲ್ಲಿ ಯಶಸ್ಸು ಕೂಡಿ ಬರಲಿದೆ. ಸಣ್ಣ ವಿಚಾರದಲ್ಲಿ ಉದ್ವೇಗ ಮಾಡದಿದ್ದರೆ ಉತ್ತಮ.

ವೃಷಭ: ನಿರುದ್ಯೋಗದಿಂದ ಅಲೆದು ಬೇಸತ್ತ ನಿಮಗೆ ಉದ್ಯೋಗ ದೊರೆತು ಸಂತಸವಾಗಲಿದೆ. ಹಣಕಾಸಿನ ವಿಚಾರದಲ್ಲಿ ಆತಂಕಕ್ಕೆ ಕಾರಣರಾಗದಿರಿ. ನೀವು ನಿಮ್ಮವರು ಎಂದೆಣಿಸಿದವರು ಕೈಚೆಲ್ಲಿ ಕೂತಾರು. ಬೇಸರಿಸದಿರಿ.

ಮಿಥುನ: ಕ್ರಯವಿಕ್ರಯದಲ್ಲಿ ತುಸು ಲಾಭ ಕಂಡು ಬರಲಿದೆ. ಅದರಿಂದ ಉತ್ಸಾಹ ದೊರಕೀತು. ಎಣಿಕೆಗಳೆಲ್ಲಾ ಈಡೇರುವುದರಿಂದ ಧೈರ್ಯ ಪ್ರಯತ್ನ ಬಲದಿಂದ ಕಾರ್ಯ ಸಾಧಿಸುವಿರಿ. ಹೊಸ ವ್ಯಾಪಾರ ವ್ಯವಹಾರ ಈಗ ಬೇಡ.

ಕರ್ಕ: ಹೊಸ ಉದ್ಯಮ ಯಾ ವ್ಯವಹಾರಕ್ಕೆ ಕೈ ಹಾಕಿದ್ದಲ್ಲಿ ಸ್ವಲ್ಪ ಸ್ವಲ್ಪ ಲಾಭಾಂಶ ಕಂಡು ಬಂದು ನಿಧಾನವಾಗಿ ಏರುಗತಿಯನ್ನು ಕಾಣಲಿದೆ. ಆಗಾಗ ಭಿನ್ನಾಭಿಪ್ರಾಯದಿಂದ ಸಾಂಸಾರಿಕ ಸುಖ ಕಿರಿಕಿರಿ ಎನಿಸಲಿದೆ. ತಾಳ್ಮೆ ಇರಲಿ.

ಸಿಂಹ: ವಿವಾಹೇತರರಿಗೆ ವೈವಾಹಿಕ ಜೋಡಣೆಯು ಸಂತಸ ತಂದೀತು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿಯು ಕಂಡು ಬರುವುದು. ಆದರೆ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಅತೀಸಹನೆ ನಿಮಗಿಂದು ಬೇಕು.

ಕನ್ಯಾ: ಉದ್ಯೋಗ ಹಾಗೂ ಕಾರ್ಯರಂಗದಲ್ಲಿ ಖಚಿತ ಹಾಗೂ ಸಮರ್ಪಕ ನಿಲುವು ಮುನ್ನಡೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಆತ್ಮೀಯರು ಮಧ್ಯಸ್ಥಿಕೆ ವಹಿಸಬೇಕಾದ ಸಂದಿಗ್ಧತೆ ತೋರಿ ಬಂದೀತು. ಜಾಗ್ರತೆ ಮಾಡಿರಿ.

ತುಲಾ: ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ಕಂಡು ಬಂದೀತು. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬೇಕೇಬೇಕು.

ವೃಶ್ಚಿಕ: ಆಹಾರ ವ್ಯತ್ಯಯದಿಂದ ಆರೋಗ್ಯ ಸಮಸ್ಯೆಯು ತೋರಿ ಬಂದೀತು. ಕಾಳಜಿ ವಹಿಸಿರಿ. ಹಿರಿಯರ ಅಭಿಪ್ರಾಯ ಭೇದದಿಂದ ಶುಭಮಂಗಲ ಕಾರ್ಯಗಳು ವಿಳಂಬವಾಗಲಿದೆ. ಗೃಹದಲ್ಲಿ ಅತೀ ಹೆಚ್ಚಿನ ಖರ್ಚು ತೋರಿ ಬಂದೀತು.

ಧನು: ಅವಕಾಶಗಳು ಕೂಡಿ ಬರಲು ನಿಧಾನವಾದರೂ ನಿಶ್ಚಿತ ರೂಪದಲ್ಲಿ ನಿಮಗೆ ಅಭಿವೃದ್ಧಿ ತೋರಿಬರುತ್ತದೆ. ಆರ್ಥಿಕವಾಗಿ ಹಣಕಾಸಿನ ಸಂಪಾದನೆ ಉತ್ತಮವಿದ್ದರೂ ಬರಬೇಕಾದ ಬಾಕಿ ಹಣಕ್ಕಾಗಿ ಒದ್ದಾಟ ತಂದೀತು.

ಮಕರ: ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಗಮನ ಹರಿಸಬೇಕಾಗುತ್ತದೆ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಪ್ರಾಪ್ತಿಯಾಗಲಿದೆ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗದಂತೆ ಕಾಳಜಿ ವಹಿಸುವುದು.

ಕುಂಭ: ದಾಂಪತ್ಯದಲ್ಲಿ ಸ್ವಲ್ಪ ಸಮಾಧಾನ ಕಂಡು ಬರಲಿದೆ. ಪತ್ನಿಯ ಸಹಕಾರವು ನಿಮಗೆ ದೊರಕುವುದು. ಬರಬೇಕಾದ ಹಣವು ಕೈ ಸೇರಲಿದೆ. ಮಿತ್ರರಿಂದ ಸಹಕಾರವು ಕೂಡಿ ಬರುವುದು. ನೂತನ ದಂಪತಿಗಳಿಗೆ ಸಿಹಿ ಸುದ್ದಿ ಇದೆ.

ಮೀನ: ಕೌಟುಂಬಿಕವಾಗಿ ಬಂಧು ಭಾಂದವರ ಸಹಕಾರ ನಿಮಗಿದ್ದರೂ ವಿಶ್ವಾಸ ಅತೀ ಇಡದಿರಿ. ಅವಿವಾಹಿತರ ಪ್ರಯತ್ನ ಬಲಕ್ಕೆ ಕಂಕಣ ಭಾಗ್ಯ ಲಭಿಸಲಿದೆ. ಸ್ವಲ್ಪ ಸಮಾಧಾನ ಚಿತ್ತದಿಂದ ಆಲೋಚಿಸಿದರೆ ಉತ್ತಮ ಫ‌ಲವಿದೆ.

ಎನ್.ಎಸ್. ಭಟ್‌

ಟಾಪ್ ನ್ಯೂಸ್

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

BGT 2024: Good news for Team India; A key player back in the team

BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

Dina Bhavishya

Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.