ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!
PSLVಯ 53ನೇ ಮಿಷನ್ ಯಶಸ್ವಿ ಉಡಾವಣೆ
Team Udayavani, Feb 28, 2021, 1:04 PM IST
ಚೆನ್ನೈ : ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಈ ಬಾರಿ ಉಪಗ್ರಹದ ಜೊತೆಗೆ ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದಿದೆ.
ಇದರ ಒಂದು ನ್ಯಾನೋ ಉಪಗ್ರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವೂ ಇದೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಅನ್ನು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟದಿಂದ ಯಶಸ್ವಿ ಉಡಾವಣೆ ಮಾಡಲಾಗಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಉಡಾವಣೆಯಾಗಿದೆ.
#Amazonia1 successfully separated from fourth stage of #PSLVC51 and injected into orbit#ISRO #NSIL #INSPACe pic.twitter.com/hEzayrCMeq
— ISRO (@isro) February 28, 2021
PSLVಯ 53ನೇ ಮಿಷನ್ ಯಶಸ್ವಿ ಉಡಾವಣೆ :
ಇದು ಪಿ ಎಸ್ ಎಲ್ ವಿ-ಸಿ 51 ಪಿ ಎಸ್ ಎಲ್ ವಿಯ 53 ನೇ ಮಿಷನ್ ಆಗಿದ್ದು, ಈ ರಾಕೆಟ್ ನೊಂದಿಗೆ ಬ್ರೆಜಿಲ್ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟದ, ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಅನ್ನು ಉಡಾವಣೆ ಮಾಡಲಾಗಿದೆ.
ಈ ರಾಕೆಟ್ ನ ಉಪಗ್ರಹಗಳಲ್ಲಿ ಚೆನ್ನೈನ ಸ್ಪೇಸ್ ಕಿಡ್ಸ್ ಇಂಡಿಯಾದ (SKI) ಸತೀಶ್ ಧವನ್ ಎಸ್ ಎ ಟಿ (SDSAT) ಶಾಮೀಲಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ಕೆಳಗಡೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾ ಮಹೇಶ್ವರನ್ ಅವರ ಹೆಸರನ್ನು ಫಲಕದಲ್ಲಿ ಬರೆಯಲಾಗಿದೆ.
ಇದನ್ನು ‘ಪ್ರಧಾನಿ ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ಒಗ್ಗಟ್ಟು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ‘ ಎಂದು ಎಸ್ ಕೆ ಐ ಹೇಳಿದೆ.
ಈ ಮಿಷನ್ ಮೂಲಕ ಎಸ್ ಕೆ ಐ ಡಿಜಿಟಲ್ ಭಗವದ್ಗೀತೆಯನ್ನು ಎಸ್ ಡಿ ಕಾರ್ಡ್‌ನಲ್ಲಿ ಹಾಕಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಹಾಗೆಯೇ ಈ ಉಪಗ್ರಹವು 25 ಸಾವಿರ ಭಾರತೀಯ ಜನರ ಹೆಸರುಗಳನ್ನು ಕೂಡ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.
ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಪಿ ಎಸ್ ಎಲ್ ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ 51 / ಅಮೆಜೋನಿಯಾ -1 ಯು ಎಸ್ ನಲ್ಲಿ ಸಿಯಾಟಲ್ ನ ಸ್ಯಾಟಲೈಟ್ ರೈಡ್ ಶೇರ್ ಮತ್ತು ಮಿಷನ್ ಮ್ಯಾನೇಜ್ ಮೆಂಟ್ ಪ್ರೊವೈಡರ್ ಸ್ಪೇಸ್ ಪ್ಲೈಟ್ ಇಂಕ್ ನ ವಾಣಿಜ್ಯ ನಿರ್ವಹಣೆಯಡಿಯಲ್ಲಿ ಪ್ರಾರಂಭಿಸಲಾಗುವ ಎನ್ ಎಸ್ ಐ ಎಲ್ ನ ಮೊದಲ ಮೀಸಲಾದ ಕಮರ್ಷಿಯಲ್ ಮಿಷನ್ ಇದಾಗಿದೆ.
ಬ್ರೆಜಿಲ್‌ನಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವನ್ನು ಉಡಾಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಎನ್ ಎಸ್ ಐ ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ನಾರಾಯಣ್ ಹೇಳಿದ್ದಾರೆ.
ಇನ್ನು, 637 ಕೆಜಿ ತೂಕದ ಅಮೆಜೋನಿಯಾ -1 ಭಾರತದಿಂದ ಉಡಾಯಿಸಲ್ಪಡುವ ಬ್ರೆಜಿಲ್ ನ ಮೊದಲ ಉಪಗ್ರಹವಾಗಿದೆ. ಇದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (INPI) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಅಮೆಜೋನಿಯಾ -1 ಮೂಲಕ ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶದ ಮೇಲ್ವಿಚಾರಣೆ ಮತ್ತು ಬ್ರೆಜಿಲ್ ಭಾಗದ ವೈವಿಧ್ಯಮಯ ಕೃಷಿಯ ವಿಶ್ಲೇಷಣೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹವು ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾ ಒದಗಿಸಲಿದೆ ಎಂದು ಇಸ್ರೋ ಹೇಳಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.