ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ ಶೇ7.25 ಬಡ್ಡಿದರದಲ್ಲಿ ಸಾಲ ನೀಡಲಿದೆ ಎಸ್ ಬಿ ಐ
Team Udayavani, Feb 28, 2021, 1:22 PM IST
ನವ ದೆಹಲಿ : ಎಸ್ ಬಿ ಐ ದಿನಕ್ಕೊಂದು ಆಫರ್ ನ್ನು ನೀಡುತ್ತಿದೆ. ಇಗ ಮತ್ತೊಂದು ಆಫರ್ ನೀಡುತ್ತಿದ್ದು, ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಇದು ಉಪಯುಕ್ತವಾಗಬಹುದು ಎಂದು ಎಸ್ ಬಿ ಐ ಹೇಳಿದೆ.
ಎಸ್ ಬಿ ಐನ ಈ ಚಿನ್ನದ ಮೇಲಿನ ಸಾಲದ ಕೊಡುಗೆಯು ವ್ಯಾಪಾರಸ್ಥರಿಗೆ ಮಾತ್ರ ಸಿಗಲಿದೆ. ಆಫರ್ ನ ಅಡಿಯಲ್ಲಿ 1 ಲಕ್ಷದಿಂದ 50 ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು. ಈ ಸಾಲ ಸೌಲಭ್ಯದಿಂದ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ.
ಓದಿ : ವುಮೆನ್ ಡ್ರೀಮಿಂಗ್ : ಬದುಕನ್ನು ಗ್ರಹಿಸಲು ಸಾಧ್ಯವಿಲ್ಲ..!
ಎಸ್ ಬಿ ಐನ ಈ ಆಫರ್ ಅಡಿಯಲ್ಲಿ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಅಂದರೆ, ವರ್ಷಕ್ಕೆ 1 ಲಕ್ಷ ರೂಪಾಯಿಗಳ ಚಿನ್ನದ ಸಾಲವನ್ನು ತೆಗೆದುಕೊಂಡರೆ, ಇದಕ್ಕಾಗಿ 7,250 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ.
ಸಾಮಾನ್ಯವಾಗಿ, ವ್ಯಾಪಾರಸ್ಥರು, ಯಾವುದೇ ರೀತಿಯ ಸಾಲವನ್ನು ಪಡೆಯಬೇಕಾದರೆ, ಬ್ಯಾಲೆನ್ಸ್ ಶೀಟ್ ಅನ್ನು ತೋರಿಸಬೇಕಾಗುತ್ತದೆ. ಆದರೆ ಎಸ್ಬಿಐನ ಈ ವಿಶೇಷ ಕೊಡುಗೆಯಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ತೋರಿಸುವ ಅಗತ್ಯವಿರುವುದಿಲ್ಲ. ಚಿನ್ನವನ್ನು ಅಡವಿಟ್ಟು ಲೋನ್ ಪಡೆದುಕೊಳ್ಳಬಹುದು.
ಎಸ್ ಬಿ ಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ವಿಶೇಷ ಚಿನ್ನ ಸಾಲದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಹತ್ತಿರದ ಶಾಖೆಗೆ ಭೇಟಿ ನಿಡಿ, ಈ ವಿಶೇಷ ಚಿನ್ನದ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತನ್ನ ಗ್ರಾಹಕರಿಗೆ ಎಸ್ ಬಿಐ ತಿಳಿಸಿದೆ. ಸಾಲ ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಬಹಳ ಸರಳವಾಗಿದ್ದು, ಸಾಲಗಾರನಿಗೆ ತೊಂದರೆಯಾಗುವುದಿಲ್ಲ ಎಂದು ಎಸ್ ಬಿ ಐ ಹೇಳಿದೆ.
ಓದಿ : ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.