ತಪ್ಪದ ವಾಹನ ಸವಾರರ ಸರ್ಕಸ್
Team Udayavani, Feb 28, 2021, 4:21 PM IST
ನರಗುಂದ: ಕಳೆದ ವರ್ಷ ಉಕ್ಕಿ ಹರಿದ ಮಲಪ್ರಭಾ ನದಿ ಪ್ರವಾಹದಿಂದ ಕೊಚ್ಚಿ ಹೋಗಿದ್ದ ತಾಲೂಕಿನ ಕೊಣ್ಣೂರ ಹೊರವಲಯದ ಮಲಪ್ರಭಾನದಿ ಸೇತುವೆ ಸಂಪರ್ಕ ರಸ್ತೆ ಕಡಿದಾಗಿದ್ದು, ಹೆದ್ದಾರಿಯಲ್ಲಿ ನಿತ್ಯವೂ ವಾಹನಗಳು ಸರ್ಕಸ್ ಮಾಡುತ್ತಿರುವುದರಿಂದ ಪ್ರಯಾಣಿಕರುಪರದಾಡುವಂತಾಗಿದೆ. ಈ ಸಂಪರ್ಕ ರಸ್ತೆಗೆ ಶಾಶ್ವತಕಾಯಕಲ್ಪ ಯಾವಾಗ ಎಂಬುದು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.
ನಂ.218 ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಲಪ್ರಭಾ ನದಿ ಸೇತುವೆಯ ಹೆದ್ದಾರಿ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹುಬ್ಬಳ್ಳಿ-ವಿಜಯಪುರ,ಹುಬ್ಬಳ್ಳಿ-ಇಳಕಲ್ಲ, ಹುಬ್ಬಳ್ಳಿ-ಬಾಗಲಕೋಟಸಂಪರ್ಕಕ್ಕೆ ಇದು ಮುಖ್ಯ ಮಾರ್ಗವಾಗಿದೆ.
ಪ್ರವಾಹಕ್ಕೆ ತತ್ತರ: ಪ್ರತಿ ವರ್ಷ ಮಲಪ್ರಭಾ ನದಿ ಪ್ರವಾಹಕ್ಕೆ ಈ ಸೇತುವೆ ಸಂಪರ್ಕ ರಸ್ತೆ ಮುಳುಗಡೆಯಾಗುತ್ತದೆ. ವಾರಗಟ್ಟಲೇ ಹೆದ್ದಾರಿ ಸಂಚಾರ ಬಂದ್ ಆಗುತ್ತದೆ. ಕಳೆದ ವರ್ಷ ಉಕ್ಕಿಹರಿದ ಮಲಪ್ರಭಾ ಪ್ರವಾಹದಲ್ಲಿ ಕೊಣ್ಣೂರು ಕಡೆಗೆಸುಮಾರು 200 ಮೀಟರ್‌ನಷ್ಟು ಸೇತುವೆಯಸಂಪರ್ಕ ರಸ್ತೆ ಕೊಚ್ಚಿ ಹೋಗಿತ್ತು. ಬಳಿಕ ತಾತ್ಕಾಲಿಕದುರಸ್ತಿ ಮಾಡಿದ್ದರಿಂದ ಸುಮಾರು 400 ಮೀಟರ್ ರಸ್ತೆ ಸಂಚಾರ ಕಡಿದಾಗಿದೆ.
ಈ ರಸ್ತೆಗೆ ಶಾಶ್ವತವಾಗಿ ಕಾಯಕಲ್ಪ ನೀಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳುಸಂಪರ್ಕ ರಸ್ತೆಯಲ್ಲಿ ಮೊಹರಂ(ಮುರಂ) ಹಾಕಿತಾತ್ಕಾಲಿಕವಾಗಿ ಸರಿಪಡಿಸುತ್ತಾರೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಇದರಿಂದ ತಗ್ಗು-ದಿನ್ನೆಗಳುನಿರ್ಮಾಣವಾಗಿದ್ದು, ವಾಹನಗಳು ನಿತ್ಯ ಸರ್ಕಸ್‌ಮಾಡುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇಷ್ಟೇ ಅಲ್ಲ ಧೂಳು ಏಳುವುದರಿಂದಗ್ರಾಮ ಪಂಚಾಯಿತಿಯಿಂದ ಪ್ರತಿದಿನ ಮುರಂಗೆ ನೀರು ಹಾಕಿಸಿ ಕಡಿವಾಣ ಹಾಕಲಾಗುತ್ತಿದೆ. ಆದರೆ ಕಡಿದಾದ ರಸ್ತೆಯಲ್ಲಿ ಹೆದ್ದಾರಿ ವಾಹನಗಳ ಸಂಚಾರ ಮಾತ್ರ ಕಷ್ಟಕರವಾಗಿದೆ.
ಯೋಜನೆಗೆ ಪ್ರಸ್ತಾವನೆ: ಗ್ರಾಮಸ್ಥರ ಬೇಡಿಕೆಯಂತೆ ರಾಷ್ಟ್ರೀಯ ಹೆದ್ದಾರಿ ನರಗುಂದ ಉಪವಿಭಾಗ 400ಮೀಟರ್ ಸಂಪರ್ಕ ರಸ್ತೆಯಲ್ಲಿ ಎತ್ತರದ ಬಾಕ್ಸ್ ಶೆಲ್‌ಗಳನ್ನೊಳಗೊಂಡ 60 ಮೀಟರ್ ಸೇತುವೆಸಹಿತ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ 6 ಕೋಟಿ ರೂ.ವೆಚ್ಚದ ಯೋಜನೆಗೆ ಪ್ರಸ್ತಾವನೆಸಲ್ಲಿಸಿದೆ. ಆದರೆ ಈ ಯೋಜನೆಗೆ ಅನುಮೋದನೆ ಬಾಕಿಯಿದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಮಜಾಯಿಷಿ.ಸೇತುವೆ ಸಂಪರ್ಕ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ಆವರಿಸುವ ಧೂಳು ಈ ಭಾಗದ ತೋಟಗಾರಿಕೆ ಬೆಳೆಗಳಿಗೆ ಮಾರಕವಾಗಿದೆ.
ಸಂಪರ್ಕ ರಸ್ತೆ ಎತ್ತರಗೊಳಿಸಿದರೆ ಪ್ರವಾಹದಿಂದ ಗ್ರಾಮಕ್ಕೆ ಪ್ರವಾಹ ಭೀತಿ ತಪ್ಪಿಸಬಹುದು. ಶೀಘ್ರವೇಕಾಮಗಾರಿ ಕೈಗೆತ್ತಿಕೊಂಡು ಸಂಪರ್ಕ ರಸ್ತೆ ಮತ್ತುಸೇತುವೆ ನಿರ್ಮಿಸಬೇಕು ಎಂಬುದು ಕೊಣ್ಣೂರ ಗ್ರಾಮಸ್ಥರ ಅಭಿಲಾಷೆ.
ಹುಬ್ಬಳ್ಳಿ-ವಿಜಯಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನೂರಾರುವಾಹನಗಳ ಓಡಾಟವಿದೆ. ಕೊಣ್ಣೂರು ಸೇತುವೆ ಸಂಪರ್ಕ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.ಆದಷ್ಟು ಶೀಘ್ರ ರಸ್ತೆ ಸುಧಾರಣೆಗೆ ಕ್ರಮಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆಅನುವು ಮಾಡಿಕೊಡಲಿ. -ಪ್ರಶಾಂತ ತೋಂಟದ, ಕೊಣ್ಣೂರ ಗ್ರಾಮಸ್ಥ
ಕೊಣ್ಣೂರ ಮಲಪ್ರಭಾ ನದಿ ಸೇತುವೆ ಸಂಪರ್ಕದ 400 ಮೀಟರ್ ರಸ್ತೆಸುಧಾರಣೆ, 60 ಮೀಟರ್ ಸೇತುವೆ ನಿರ್ಮಾಣಕ್ಕೆಸಂಬಂಧಿಸಿ 6 ಕೋಟಿ ರೂ. ವೆಚ್ಚದ ಕಾಮಗಾರಿಗೆಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆದೊರೆತು ಗುತ್ತಿಗೆ ನಿಯೋಜನೆ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. -ರಾಜೇಂದ್ರ, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನರಗುಂದ ಉಪವಿಭಾಗ
-ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.