ಕೋವಿಡ್ ಲಸಿಕೆ: ಸ್ವಯಂ ನೋಂದಣಿ ಹೇಗೆ? ಇಲ್ಲಿದೆ ವಿವರ
Team Udayavani, Mar 1, 2021, 7:30 AM IST
ಬೆಂಗಳೂರು : ಕೊರೊನಾ ಲಸಿಕೆ ಪಡೆಯಲು ಮೊಬೈಲ್ ಮೂಲಕ ಮನೆಯಲ್ಲಿಯೇ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬಹುದು. ಮೊದಲಾಗಿ www.cowin.gov.in ಗೆ ಹೋಗಿ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕು.
ಮೇಲೆ ತಿಳಿಸಿದ ಕೊವಿನ್ ವೆಬ್‌ಸೈಟ್‌ಗೆ ಹೋದಾಗ ಅಲ್ಲಿ ರಿಜಿಸ್ಟರ್ ಫಾರ್ ವ್ಯಾಕ್ಸಿನೇಶನ್ ಎಂದು ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ “ಗೆಟ್ ಒಟಿಪಿ’ ಪಟ್ಟಿಗೆ ಕ್ಲಿಕ್ ಮಾಡಬೇಕು. ಆ ಕೂಡಲೇ ನಿಮ್ಮ ಮೊಬೈಲ್‌ಗೆ
ಎಸ್‌ಎಂಎಸ್ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ದಾಖಲಿಸಿ ಅಲ್ಲಿ ಕಾಣಿಸುವ “ವೆರಿಫೈ ಬಟನ್’ ಕ್ಲಿಕ್ ಮಾಡಬೇಕು.
ಒಟಿಪಿ ಸರಿಯಾಗಿ ನಮೂದಿಸಿದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಬಳಿಕ ಅಲ್ಲಿ ನಿಮ್ಮ ಕುರಿತು ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. (ಮೊದಲಾಗಿ ಯಾವ ಫೋಟೊ ಐಡಿ ಪ್ರೂಫ್ ಎಂಬುದನ್ನು ತಿಳಿಸಬೇಕು. ಉದಾ: ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತ್ಯಾದಿ. ಅನಂತರ ಕಾರ್ಡ್‌ನ ಸಂಖ್ಯೆ ನಮೂದಿಸಬೇಕು.
ಬಳಿಕ ಕಾರ್ಡ್‌ನಲ್ಲಿ ಇರುವ ರೀತಿಯಲ್ಲಿಯೇ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಈಗ ಲಸಿಕೆ ಪಡೆಯಲು ಅರ್ಹತೆಯ ಕುರಿತು ಮಾಹಿತಿ ನೀಡಬೇಕು. (60 ವರ್ಷ ಮೇಲ್ಪಟ್ಟವರು, ಜತೆಗೆ ಗಂಭೀರ ಅನಾರೋಗ್ಯ ಸಮಸ್ಯೆ ಹೊಂದಿರುವ 45ರಿಂದ 59 ವರ್ಷದೊಳಗಿನ ನಾಗರಿಕರು, ಪಟ್ಟಿ ಮಾಡಿರುವ 20 ರೀತಿಯ ಅನಾರೋಗ್ಯ ಸಮಸ್ಯೆ ಇರುವವರು. ಹೃದಯ ಸಮಸ್ಯೆ, ತೀವ್ರ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗೆ ಒಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವವರು, ಪಾರ್ಶ್ವವಾಯು ಸಂಬಂಧಿ ಕಾಯಿಲೆ ಉಳ್ಳವರು, 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಮಧುಮೇಹದಿಂದ ಬಳಲುತ್ತಿರುವವರು, ಕಿಡ್ನಿ, ಲಿವರ್, ಇತರ ಕ್ಯಾನ್ಸರ್ ಕಾಯಿಲೆ ಉಳ್ಳವರು, ಎಚ್‌ಐವಿ ಸೋಂಕಿತರು) ಇದಾದ ಬಳಿಕ ಕೆಳಬದಿಯಲ್ಲಿರುವ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿದಾಗ ನಿಮ್ಮ ನೋಂದಣಿ ಖಚಿತವಾಗಿರುವ ಕುರಿತು ಮಾಹಿತಿ ಬರುತ್ತದೆ.
ಒಂದು ಮೊಬೈಲ್‌ನಿಂದ ನಾಲ್ಕು ಸದಸ್ಯರ ನೋಂದಣಿ ಸಾಧ್ಯ
ಒಂದು ಬಾರಿ ಓರ್ವ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿದ ಬಳಿಕ ಇತರ ಮೂವರನ್ನು ಇದೇ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲಿ ಅಕೌಂಟ್ ಡಿಟೇಲ್ಸ್ ಎಂಬ ಪಟ್ಟಿ ಕಾಣಿಸುವುದು. ಅದರಲ್ಲಿ ಇತರ ಮೂವರ ಮಾಹಿತಿ (ಈ ಮೊದಲು ನೀಡಿದಂತೆಯೇ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಮೊಬೈಲ್ ನಂಬರ್ ಹೊರತುಪಡಿಸಿ ಇತರ ಎಲ್ಲ ಮಾಹಿತಿಗಳು ಪ್ರತ್ಯೇಕವಾಗಿರುತ್ತದೆ) ನೀಡಿ ಹೆಸರು ನೋಂದಾಯಿಸಬಹುದು. ಇಷ್ಟು ಮಾಹಿತಿ ನೀಡಿದ ಬಳಿಕ ಮತ್ತೂಮ್ಮೆ ನೋಂದಣಿ ಖಚಿತವಾದ ಮಾಹಿತಿ ಬರುತ್ತದೆ.
ಅಗತ್ಯ ಬಿದ್ದರೆ ನೋಂದಣಿಯನ್ನು ಲಸಿಕೆ ಪಡೆಯುವ ಹಿಂದಿನ ದಿನದೊಳಗೆ ಡಿಲೀಟ್ ಮಾಡುವುದಕ್ಕೂ ಅವಕಾಶವಿರುತ್ತದೆ.
ದಿನಾಂಕ ಮತ್ತು ಸಮಯ ನಿಗದಿ
ಅಕೌಂಟ್ ಡಿಟೇಲ್ ಪೇಜ್‌ಗೆ ಹೋಗಿ ಅಲ್ಲಿ ನಿಮ್ಮ ಹೆಸರಿನ ಎದುರು ಇರುವ ಶೆಡ್ನೂಲ್ ಕೊಂಡಿಗೆ ಕ್ಲಿಕ್ ಮಾಡಿದಾಗ ಬುಕ್ ಅಪಾಯಿಂಟ್‌ಮೆಂಟ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್, ಪಿನ್‌ಕೋಡ್ ನಮೂದಿಸಿದಾಗ ನಿಮ್ಮ ಹತ್ತಿರದ ಕೇಂದ್ರಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿದಾಗ ಅಲ್ಲಿ ಲಭ್ಯವಿರುವ ದಿನಾಂಕ ಕಾಣಿಸುತ್ತದೆ. ಇವುಗಳಲ್ಲಿ ನಿಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು “ಬುಕ್’ ಬಟನ್ ಕ್ಲಿಕ್ ಮಾಡಿದರೆ ನೋಂದಣಿ ಪೂರ್ಣವಾದ ಮಾಹಿತಿ ಲಭ್ಯವಾಗುವುದು. ಅಲ್ಲಿರುವ ನಿಮ್ಮ ಹೆಸರು, ಕೇಂದ್ರ ಮೊದಲಾದ ಮಾಹಿತಿಗಳನ್ನು ಗಮನಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿದರೆ “ಅಪಾಯಿಂಟ್‌ಮೆಂಟ್ ಸಕ್ಸಸ್‌ಫುಲ್’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಡೌನ್‌ಲೋಡ್ ಮಾಡಿಟ್ಟು ಲಸಿಕೆ ಪಡೆಯುವ ದಿನ ನೀವು ನೋಂದಾಯಿಸಿದ ಕೇಂದ್ರಕ್ಕೆ ಹೋಗಿ ತೋರಿಸಿದರೆ ನಿಮಗೆ ಲಸಿಕೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.