ಕೋವಿಡ್ ಲಾಕ್ ಡೌನ್ ಆಘಾತದಿಂದ ಇನ್ನೂ ಚೇತರಿಕೆಯಾಗಿಲ್ಲ ಹೌಸ್ ಹೋಲ್ಡ್ ಇನ್ ಕಮ್ ..!
ಸಮಸ್ಯೆಯ ಮೂಟೆಯಾದ ನಿರುದ್ಯೋಗ
Team Udayavani, Mar 1, 2021, 11:37 AM IST
ಸಾಂದರ್ಭಿಕ ಚಿತ್ರ
ನವ ದೆಹಲಿ : ಭಾರತೀಯ ಆದಾಯವು ಕೆಳಮುಖ ಮಾಡಿತ್ತು ಮತ್ತು ನಂತರ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಸ್ಥಿತಿಯ ಮೇಲೆ ಭಾರಿ ದೊಡ್ಡ ಪರಿಣಾಮವನ್ನು ಕೂಡ ಬೀರಿತು.
ಆರ್ಥಿಕ ಕುಸಿತದಿಂದಾಗಿ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಹೌಸ್ ಹೋಲ್ಡ್ ಇನ್ ಕಮ್ ಸೆಪ್ಟೆಂಬರ್ 2019 ರಿಂದ ಇಳಿಮುಖವಾಗಲು ಪ್ರಾರಂಭವಾಯಿತು. ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರದಿಂದ ವಿಶ್ಲೇಷಿಸಲ್ಪಟ್ಟ ವ್ಯಾಪಾರ ಮಾಹಿತಿ ಕಂಪನಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಹಿತಿಯ ಪ್ರಕಾರ, ಏಪ್ರಿಲ್ 2020 ರಲ್ಲಿ ಹೌಸ್ ಹೋಲ್ಡ ಇನ್ ಕಮ್ ಬಾರಿ ಕುಸಿತ ಕಂಡಿರುವುದನ್ನು ಕಾಣಬಹುದಾಗಿದೆ.
ಓದಿ : ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ: ಪೂಜಾ ಗಾಂಧಿ
ಕಳೆದ ವರ್ಷ ಮಾರ್ಚ್ 24 ರಂದು ಭಾರತ ಸರ್ಕಾರವು ಕಟ್ಟುನಿಟ್ಟಾದ ಕೋವಿಡ್ -19 ಲಾಕ್ ಡೌನ್ ಘೋಷಿಸಿದ ನಂತರದ ಮೊದಲ ಪೂರ್ಣ ತಿಂಗಳು ಏಪ್ರಿಲ್ ನಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು, ಅದು ಆರ್ಥಿಕ ವಿಚಾರದ ಮೇಲೆ ಬಾರಿ ಹೊಡೆತ ಬಿದ್ದಿತ್ತು. ಶಾಲೆ ಮತ್ತು ಸಿನೆಮಾ ಹಾಲ್ ಗಳಿಂದಾದಿಯಾಗಿ ಕಚೇರಿಗಳು ಮತ್ತು ಕಾರ್ಖಾನೆಗಳು ಎಲ್ಲವೂ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಏಪ್ರಿಲ್ ಮತ್ತು ಮೇ ಅವಧಿಯಲ್ಲಿ, ಹಲವಾರು ಕಂಪನಿಗಳು ಬಾರಿ ವೇತನ ಕಡಿತವನ್ನು ಘೋಷಿಸಿದವು, ಮತ್ತು ಇದಕ್ಕೆ ಕೋವಿಡ್ ನೆಪವನ್ನು ಕೂಡ ಹೇಳಿದವು. ಇದು ಸೆಂಟರ್ ಫಾರ್ ಎಕನಾಮಿಕ್ ಡಾಟಾ ಮತ್ತು ಅನಾಲಿಸಿಸ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಹೌಸ್ ಹೋಲ್ಡ ಇನ್ ಕಮ್ ಆವಿಷ್ಕಾರಗಳಿಗೆ ಅನುರೂಪವಾಗಿದೆ.
ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ ನಿಂದ ಜೂನ್) 23.9% ನಷ್ಟು ಆರ್ಥಿಕ ಕುಸಿತ ಕಂಡಿದ್ದು, ಇದು ಕನಿಷ್ಠ ನಾಲ್ಕು ದಶಕಗಳಲ್ಲಿ ಮೊದಲ ಮತ್ತು ಅತಿದೊಡ್ಡ ಒಟ್ಟು ದೇಶೀಯ ಉತ್ಪನ್ನದ ಕುಸಿತವಾಗಿದೆ.
ಓದಿ : “ಮುಂಜಾನೆ ಮಂಜಲ್ಲಿ….” ಕರಾವಳಿಯ ವಿವಿಧೆಡೆ ಮಂಜು ಮುಸುಕಿದ ವಾತಾವರಣ
ನವೆಂಬರ್ 2019 ರಿಂದ, ಕೋವಿಡ್ ಪ್ಯಾಂಡಮಿಕ್ ಮತ್ತು ಲಾಕ್ ಡೌನ್ ಹೊಡೆತಕ್ಕೆ ಮುಂಚೆಯೇ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಕೆಳ ಮುಖ ಪ್ರವೃತ್ತಿಯಲ್ಲಿದೆ ಆದರೆ ಬಾರಿ ಕುಸಿತವು ಏಪ್ರಿಲ್ 2020 ರಲ್ಲಿ (ಲಾಕ್ ಡೌನ್ ನ ಮೊದಲ ಪೂರ್ಣ ತಿಂಗಳು) 19% ನಷ್ಟು ಕುಸಿತದೊಂದಿಗೆ ಮತ್ತು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಕ್ರಮವಾಗಿ 41%, ”ಸೆಂಟರ್ ಫಾರ್ ಎಕನಾಮಿಕ್ ಡಾಟಾ ಅಂಡ್ ಅನಾಲಿಸಿಸ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಬುಲೆಟಿನ್ ಗಮನಿಸಿದೆ.
ಗ್ರಾಮೀಣ ಮತ್ತು ನಗರ ಒಟ್ಟು ವೇತನದ ವಿಷಯದಲ್ಲಿನ ಕುಸಿತವು ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಗೆ ಸಮಾನವಾದ ಪ್ರವೃತ್ತಿಯನ್ನು ತೋರಿಸಿದೆ. ಗ್ರಾಮೀಣ ಭಾರತದಲ್ಲಿನ ಸಂಪೂರ್ಣ ವೇತನ ಕುಸಿತ ಕಂಡಿದ್ದು, ನಗರ ಪ್ರದೇಶಕ್ಕೂ ಪ್ರಭಾವ ಬೀರಿದೆ.
ಸಮಸ್ಯೆಯ ಮೂಟೆಯಾದ ನಿರುದ್ಯೋಗ :
ಭಾರತವು ಜೂನ್ ನಲ್ಲಿ ನಿಧಾನವಾಗಿ “ಅನ್ಲಾಕ್” ಆಗಲು ಪ್ರಾರಂಭಿಸಿದ ನಂತರ, ಆದಾಯವು ಸ್ವಲ್ಪ ಚೇತರಿಕೆಗೆ ಮಟ್ಟವನ್ನು ಕಂಡಿತ್ತಾದರೂ. ನಗರ ಹೌಸ್ ಹೋಲ್ಡ್ ವಿಷಯದಲ್ಲಿ, ಮೇ ಮತ್ತು ಜೂನ್ ತಿಂಗಳುಗಳಲ್ಲಿ V ಆಕಾರದ (Up and Down) ತೀಕ್ಷ್ಣವಾದ ಚೇತರಿಕೆ ಕಂಡುಬಂದಿದೆ. ಆದರೆ ಈ ಬೆಳವಣಿಗೆಯು ನಿಧಾನವಾಯಿತು ಮತ್ತು ಆದಾಯವು ಸೆಪ್ಟೆಂಬರ್ 2020 ರಲ್ಲಿ ಕೋವಿಡ್ ಪರಿಸ್ಥಿತಿಯ ಪೂರ್ವ ಮಟ್ಟಕ್ಕಿಂತ ಕಡಿಮೆಯಾಗಿದೆ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ಚೇತರಿಕೆ ಕಂಡುಬಂದಾಗ 2020 ರ ಸೆಪ್ಟೆಂಬರ್ ನಂತರ ಈ ಸನ್ನಿವೇಶವು ಸುಧಾರಿಸಿದೆ ಎಂದು ಹೇಳಬಹುದು, ಆದರೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ದತ್ತಾಂಶವು ಡಿಸೆಂಬರ್‌ನಲ್ಲಿ ನಿರುದ್ಯೋಗ ಸಮಸ್ಯೆಯು 9% ಕ್ಕಿಂತ ಹೆಚ್ಚಾಗಿದೆ ಎಂದು ತೋರಿಸುತ್ತದೆ, ಇದು ಹೌಸ್ ಹೋಲ್ಡ್ ಇನ್ ಕಮ್ ನ ಮೇಲೆ ನೇರ ಪರಿಣಾಮ ಬೀರುತ್ತದೆ.
“ಸೆಪ್ಟೆಂಬರ್ 2020 ರವರೆಗೆ ಉದ್ಯೋಗ ಚೇತರಿಕೆ ಸ್ಥಿರವಾಗಿದ್ದರೂ, ಅದು ಅಕ್ಟೋಬರ್ 2020 ರಿಂದ ಕುಂಠಿತಗೊಳ್ಳಲು ಪ್ರಾರಂಭಿಸಿದೆ” ಎಂದು ನಾವು ಗಮನಿಸಬಹುದುದಾಗಿದೆ.
ಮೂಲ : Scroll.in , Quartz India
ಓದಿ : ಸಿಹಿ-ಕಹಿ ನಡುವೆ ವರ್ಕ್ ಫ್ರಂ ಹೋಂ : ವರ್ಕ್ ಫ್ರಂ ಹೋಂಗೆ ಒನ್ ಇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.