ಗರ್ಭಿಣಿಯರ ಆರೋಗ್ಯಕ್ಕೆ ಬೇಕು ಯೋಗ

ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಕೊಂಚ ಹೊತ್ತಿನ ಬಳಿಕ ಎಡ ಮೂಗಿನ ಮೂಲಕ ಹೊರ ಬಿಡಬೇಕು.

Team Udayavani, Mar 1, 2021, 11:25 AM IST

ಗರ್ಭಿಣಿಯರ ಆರೋಗ್ಯಕ್ಕೆ ಬೇಕು ಯೋಗ

Representative Image

ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟ ಗರ್ಭಧಾರಣೆ. ಈ ವೇಳೆ ತಾಯಿ ತನ್ನ ಆರೋಗ್ಯದ ಕಾಳಜಿ ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಕಾಳಜಿಗೂ ವಿಶೇಷ ಗಮನ ಹರಿಸಬೇಕಾಗುತ್ತದೆ. ಆರಂಭದ ದಿನದಿಂದಲೇ ಪೋಷಕಾಂಶಯುಕ್ತ ಆಹಾರದ ಜತೆಗೆ, ಒಂದಷ್ಟು ವ್ಯಾಯಾಮಗಳನ್ನು ತಾಯಿ ಅಳವಡಿಸಿಕೊಂಡರೆ ತಾಯಿ, ಮಗು ಆರೋಗ್ಯವಾಗಿರಲು ಸಾಧ್ಯವಿದೆ.ಗರ್ಭಿಣಿಯರ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ ಮಹತ್ವದ್ದು. ಹೀಗಾಗಿ ಗರ್ಭಿಣಿಯರು ಮಾಡಬಹುದಾದ ಸರಳಯೋಗಾಸನಗಳು ಇಲ್ಲಿವೆ.

ವಿಪರೀತ ಕಾರಣಿ
ನೇರವಾಗಿ ಮಲಗಿ ಕಾಲುಗಳನ್ನು ಗೋಡೆಯ ಸಹಾಯದಿಂದ ಎತ್ತುವುದು. ಹೀಗೆ ಮಾಡುವುದರಿಂದ ಕಾಲುಗಳಲ್ಲಿನ ಊತ, ಉಬ್ಬಿರುವ ರಕ್ತನಾಳಗಳನ್ನು ಸಮಸ್ಥಿತಿಗೆ ತಂದು ರಕ್ತ ಪರಿಚಲನೆ ಸರಾಗವಾಗುತ್ತದೆ.

ಮಾರ್ಜಾರಿಯಾಸನ
ಕೈ ಮತ್ತು ಕಾಲಿನ ಸಹಾಯದಿಂದ ಬೆಕ್ಕು ಕುಳಿತುಕೊಳ್ಳುವ ಭಂಗಿಯಲ್ಲಿ ಕುಳಿತು ಕತ್ತಿನ ಚಲನೆಯನ್ನು ನಿಧಾನವಾಗಿ ಮೇಲ್ಮುಖ ಮತ್ತು ಕೆಳಮುಖವಾಗಿ ಮಾಡಬೇಕು. ನಿಧಾನವಾಗಿ ಉಸಿರನ್ನು ಒಳಕ್ಕೆ ಮತ್ತು ಹೊರಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಬೇಕು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಬೆನ್ನೆಲುಬುಗಳಿಗೆ ಶಕ್ತಿ ತುಂಬುತ್ತದೆ, ಜೀರ್ಣ ಕ್ರಿಯೆಯ ವೃದ್ಧಿಗೂ ಇದು ಸಹಕಾರಿ. ಜತೆಗೆ, ಮಣಿಕಟ್ಟು ಮತ್ತು ಭುಜಗಳು ಬಲಯುತವಾಗುತ್ತದೆ.

ಕೋನಾಸನ
ಕಾಲುಗಳನ್ನು ಕೊಂಚ ಅಗಲವಾಗಿರಿಸಿ ನೇರವಾಗಿ ನಿಂತುಕೊಳ್ಳಬೇಕು. ಎರಡೂ ಕೈಗಳನ್ನು ಒಂದಕ್ಕೊಂದು ಜೋಡಿಸಿ ತಲೆಯಿಂದ ಮೇಲಕ್ಕೆ ಚಾಚಬೇಕು. ಅನಂತರ ನಿಧಾನವಾಗಿ ಉಸಿರನ್ನು ಒಳ ಎಳೆದುಕೊಂಡು ಹೊರಕ್ಕೆ ಬಿಡುತ್ತಾ ಬಲಬದಿಗೆ, ಅನಂತರ ಎಡಬದಿಗೆ ನಿಧಾನವಾಗಿ ವಾಲಬೇಕು. ಇದರಿಂದ ದೇಹ ಸಡಿಲವಾಗಿ, ವಿಶ್ರಾಂತ ಸ್ಥಿತಿಯಲ್ಲಿರಿಸಲು ಸಹಾಯಕವಾಗುತ್ತದೆ. ಬೆನ್ನು ಮೂಳೆಗೂ ಹೆಚ್ಚು ಬಲತುಂಬುತ್ತದೆ. ಬೆನ್ನು ನೋವು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ತೋಳು, ಕಾಲು ಸಹಿತ ಅಂಗಾಗಗಳು ಬಲಿಷ್ಠವಾಗುವ ದೃಷ್ಟಿಯಿಂದಲೂ ಈ ಆಸನ ಪ್ರಯೋಜನಕಾರಿ. ಗರ್ಭಿಣಿಯರಿಗೆ ಆರಂಭದ ತ್ತೈಮಾಸಿಕ ಬಹಳ
ಮಹತ್ವದ್ದಾಗಿರುತ್ತದೆ. ಈ ವೇಳೆ ಯೋಗ, ವ್ಯಾಯಾಮದಲ್ಲಿ ಹೊಸ ಪ್ರಯೋಗ ಮಾಡಲು ಹೋಗಬಾರದು. ಅಲ್ಲದೇ ಯಾವುದೇ ಯೋಗ ಭಂಗಿಯನ್ನು ಮಾಡುವ ಮೊದಲು ಆರೋಗ್ಯ ಸ್ಥಿತಿಯನ್ನು ಗಮನ ದಲ್ಲಿರಿಸಿಕೊಂಡು ವೈದ್ಯರ, ತಜ್ಞರ ಸಲಹೆ ಪಡೆದು ಮಾಡುವುದು ಉತ್ತಮ.

ನಾಡಿ ಶೋಧನ ಪ್ರಾಣಾಯಾಮ
ನೇರವಾಗಿ ಕುಳಿತು ಎಡಗೈಯನ್ನು ಮೆಲ್ಮುಖವಾಗಿ ಎಡಕಾಲಿನ ಮೇಲೆ ಹೆಬ್ಬೆರಳು ಮತ್ತು ತೋರುಬೆರಳನ್ನು ಒಂದಕ್ಕೊಂದು ಜೋಡಿಸಿಡಬೇಕು. ಕಣ್ಣುಗಳನ್ನು ಮುಚ್ಚಿ ಬಲಗೈಯ ಹೆಬ್ಬೆರಳಿನ ಸಹಾಯದಿಂದ ಬಲ ಮೂಗು, ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಣೆಗೆ ತಾಕುವಂತೆ ಹಾಗೂ ಉಂಗುರ ಬೆರಳು ಕಿರುಬೆರಳುಗಳನ್ನು ಎಡ ಮೂಗಿನ ಮೇಲಿಡಬೇಕು. ಪ್ರಶಾಂತ ಮನಸ್ಥಿತಿಯಿಂದ ಎಡ ಮೂಗನ್ನು ಮುಚ್ಚಿ ಬಲ ಮೂಗಿನಿಂದ ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಕೊಂಚ ಹೊತ್ತಿನ ಬಳಿಕ ಎಡ ಮೂಗಿನ ಮೂಲಕ ಹೊರ ಬಿಡಬೇಕು. ಹಾಗೇ ಎಡ ಮೂಗಿನಿಂದ ಉಸಿರು ತೆಗೆದುಕೊಂಡು ಬಲ ಮೂಗಿನಿಂದ ಬಿಡಬೇಕು. ಇದು ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಮತ್ತು ದೈಹಿಕ ಆಘಾತ ಹಾಗೂ ತೀರದ ಒತ್ತಡ ಇವುಗಳಿಂದಾಗುವ ದುಷ್ಪರಿಣಾಮಗಳನ್ನು ತಡೆದು ದೇಹ ಮತ್ತು ಮನಸ್ಸಿಗೆ ಉಲ್ಲಾಸ ತುಂಬುತ್ತದೆ.

ಟಾಪ್ ನ್ಯೂಸ್

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.