2ಎಗೆ ಗೌಡ ಲಿಂಗಾಯತರಿಂದ ಬೆಂಗಳೂರು ಚಲೋ


Team Udayavani, Mar 1, 2021, 12:56 PM IST

2ಎಗೆ ಗೌಡ ಲಿಂಗಾಯತರಿಂದ ಬೆಂಗಳೂರು ಚಲೋ

ಚಾಮರಾಜನಗರ: ರಾಜ್ಯ ಸರ್ಕಾರವು ಹಳೆಯ ಮೈಸೂರು ಪ್ರಾಂತ್ಯದಲ್ಲಿರುವ ಗೌಡ ಲಿಂಗಾಯತ,ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತಸಮುದಾಯಗಳನ್ನು ಪ್ರವರ್ಗ 2 ಎ ಮೀಸಲಾತಿಗೆಸೇರಿಸಬೇಕೆಂದು ಒತ್ತಾಯಿಸಿ ಶೀಘ್ರವೇ ಬೆಂಗಳೂರು ಚಲೋ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ತಾಲೂಕಿನ ಸಂತೆಮರಹಳ್ಳಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಭಾನುವಾರ ರೈತ ಮುಖಂಡಅಮ್ಮನಪುರ ಮಲ್ಲೇಶ್‌ ನೇತೃತ್ವದಲ್ಲಿ ನಡೆದ 2ಎಮೀಸಲಾತಿಗಾಗಿ ಗೌಡ ಲಿಂಗಾಯತರ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರು ಚಲೋ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆ ಆರಂಭದಲ್ಲಿ ಅನೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪಂಚಮಸಾಲಿ ಸಮುದಾಯದ ಶ್ರೀಗಳು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆಮಾಡಿದರು. 780 ಕಿ.ಮೀ.ಪಾದಯಾತ್ರೆ ಮತ್ತುಹೋರಾಟದ ನೇತೃತ್ವ ವಹಿಸಿರುವ ಸ್ವಾಮಿಗಳಕಾರ್ಯವನ್ನು ಶ್ಲಾ ಸಿದರು. ಹಳೇ ಮೈಸೂರು ಪ್ರಾಂತ್ಯದಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ ಸಮುದಾಯದವರು ಇದ್ದಾರೆ. ಈ ಸಮುದಾಯಕ್ಕೆ 2ಎಕೊಡಿಸಲು ಈ ಭಾಗದ ಸ್ವಾಮೀಜಿಗಳು ಸಹ ನೇತೃತ್ವ ವಹಿಸಬೇಕು ಎಂಬ ಒತ್ತಾಯಗಳು ಸಭೆಯಲ್ಲಿ ಕೇಳಿ ಬಂದವು.

ರೈತ ಮುಖಂಡ ಮಲ್ಲೇಶ್‌ ಮಾತನಾಡಿ, ಈಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರು, ಗೌಡ ಲಿಂಗಾಯತ ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಎಂಬ ಪದಗಳುಒಂದೇ ಸಮಾನಾರ್ಥ ಪದಗಳಾಗಿವೆ. ಈಗಾಗಲೇಪಂಚಮಸಾಲಿ ಲಿಂಗಾಯತರ ಹೋರಾಟತೀವ್ರವಾಗಿದೆ. ಅದೇ ಮಾದರಿಯಲ್ಲಿ ಹಳೇ ಮೈಸೂರು ಪ್ರಾಂತ್ಯದ ಗೌಡ ಲಿಂಗಾಯತರು ಹೋರಾಟ ಮಾಡಿ ಮೀಸಲಾತಿ ಪಡೆದುಕೊಳ್ಳಬೇಕಾಗಿದೆ. ನಮ್ಮಹೋರಾಟದ ಕಾವು ರಾಜಧಾನಿಗೆ ತಲುಪಬೇಕಾಗಿದೆ.ಈ ನಿಟ್ಟಿನಲ್ಲಿ ಸಮುದಾಯದವರು ಸಂಘಟಿತರಾಗಿನಮ್ಮ ಹಕ್ಕು ಕೇಳಬೇಕಾಗಿದೆ. ನಮ್ಮ ಹೋರಾಟ 2ಎಗೆಸೇರಿಸುವವರೆಗೆ ನಿರಂತರವಾಗಿರುತ್ತದೆ. ಇದು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಹೋರಾಟ ವಲ್ಲ. ನಮ್ಮ ಮುಂದಿನ ಪೀಳಿಗೆಗೆ ಈ ಹೋರಾಟಅನಿವಾರ್ಯವಾಗಿದೆ. ಇದಕ್ಕೆ ಸಮುದಾಯ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಇದಲ್ಲದೇ, ಒಟ್ಟಾರೆ ಲಿಂಗಾಯತ ಸಮುದಾಯ ವನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಸೇರಿಸಬೇಕು.ಸಭೆಯಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ, ಅಧ್ಯಕ್ಷಮೂಡ್ಲುಪುರ ನಂದೀಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಉಡಿಗಾಲ ಪಾಪಣ್ಣ, ಗ್ರಾಪಂ ಅಧ್ಯಕ್ಷ ಎಂ.ಪಿ.ಶಂಕರ್‌, ಉದ್ಯಮಿ ಎಚ್‌.ಜಿ. ಮಹದೇವಪ್ರಸಾದ್‌, ಶಿವಪುರ ಸುರೇಶ್‌, ಬಂಡಹಳ್ಳಿ ಶಿವಕುಮಾರ್‌, ಡಾ. ಪರಮೇಶ್ವರಪ್ಪ, ಕೊತ್ತಲವಾಡಿ ಕುಮಾರ್‌, ಕಾವುದವಾಡಿ ಗುರು, ಅರಕವಾಡಿ ಮಹೇಶ್‌, ಕಮಲೇಶ್‌, ಅಲೂರು ಪ್ರದೀಪ್‌, ರಮೇಶ್‌ಬಾಬು,ಎನ್‌.ಆರ್‌. ಪುರುಷೋತ್ತಮ್‌, ಮರಹಳ್ಳಿ ರಾಜು, ಮಹದೇವಸ್ವಾಮಿ, ಶಿವಶಂಕರ್‌, ದುಗ್ಗಟ್ಟಿಶಿವಕುಮಾರ್‌, ಎಂ.ಪಿ. ಬಸವಣ್ಣ, ನಟರಾಜು, ಸುಭಾಷ್‌ ಮತ್ತಿತರರು ಭಾಗವಹಿಸಿದ್ದರು.

ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀಗಳು ನೇತೃತ್ವ ವಹಿಸಲಿ : ಹಳೇ ಮೈಸೂರು ಭಾಗದ ಪ್ರಭಾವಿ ಮಠಾಧೀಶರಾದ ಸುತ್ತೂರು ಶ್ರೀಗಳು ಹಾಗೂ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ, 2ಎ ಮೀಸಲಾತಿ ಕೊಡಿಸುವಂತೆ ಮನವಿ ಮಾಡಿಕೊಂಡು ಅವರ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ

ಬೆಂಗಳೂರು ಚಲೋ ಮಾಡಲು ಸಭೆಯಲ್ಲಿನಿರ್ಣಯಕೊಳ್ಳಲಾಯಿತು. ಜಿಲ್ಲೆಯ ಐದುತಾಲೂಕಗಳಲ್ಲಿಯೂ ವೀರಶೈವ ಲಿಂಗಾಯತ ಮುಖಂಡರ ಸಭೆಗಳನ್ನು ನಡೆಸಿ, ಜಾಗೃತಿ ಮೂಡಿಸುವ ಜೊತೆಗೆ ಆಯಾ ಭಾಗದಲ್ಲಿರುವಮಠಾಧೀಶರು ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಬೇಕು. ಅಂತಿಮವಾಗಿ ಸಮಿತಿ ಯನ್ನು ರಚನೆ ಮಾಡಿಕೊಂಡು, ಸಂಘಟನೆಯನ್ನು ಬಲಿಷ್ಠ ಗೊಳಿಸಲು ಶ್ರಮ  ವಹಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.

ಹಳೆ ಮೈಸೂರಿನ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಸಭೆ :

ಗೌಡ ಲಿಂಗಾಯತ ಸಮುದಾಯವು, ಕುಂಭ ಕರ್ಣನ ನಿದ್ದೆಯಿಂದ ಎದ್ದು ಬಂದು ತಮಗೆಸಿಗಬೇಕಾದ ನ್ಯಾಯಕ್ಕಾಗಿ ಹೋರಾಟ ಮಾಡ ಬೇಕಾಗಿದೆ ಎಂದು ಅಮ್ಮನಪುರ ಮಲ್ಲೇಶ್‌ಹೇಳಿದರು. ಗೌಡ ಲಿಂಗಾಯತ ಸಮುದಾಯದಿಂದ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿಲ್ಲ.ನಿಗಮ ಮಂಡಳಿಗಳ ಅಧ್ಯಕ್ಷರಿಲ್ಲ, ಸಚಿವ,ಸಂಸದರಿಲ್ಲ. ಇದಕ್ಕೆಲ್ಲ ಕಾರಣ ರಾಜಕೀಯಪಕ್ಷಗಳ ನಿರ್ಲಕ್ಷ್ಯ ಹಾಗೂ ಗೌಡ ಲಿಂಗಾಯತರಆಲಸ್ಯ ಮನೋಭಾವ ಎಂದು ಅವರು ಹೇಳಿದರು. ಹಳೆ ಮೈಸೂರು ಭಾಗದ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಸಭೆ ನಡೆಸಿ, ಒಟ್ಟಾರೆ ನಿರ್ಣಯಗಳನ್ನು ಕೈಗೊಂಡು, ಬೆಂಗಳೂರು ಚಲೋಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಬೆಂಗಳೂರಿಗೆ, ಪಾದಯಾತ್ರೆ ಅಥವಾಬಸ್‌ಗಳಲ್ಲಿ ತೆರಳಿ, ಧರಣಿ, ಉಪವಾಸ ಸತ್ಯಾಗ್ರಅಥವಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆಎಲ್ಲ ಜಿಲ್ಲಾ ಕೇಂದ್ರಗಳ ಗೌಡ ಲಿಂಗಾಯತರ ಪ್ರಮುಖರ ಅಭಿಪ್ರಾಯಗಳನ್ನುಪಡೆಯಲಾಗುತ್ತಿದೆ ಎಂದು ಮಲ್ಲೇಶ್‌ ತಿಳಿಸಿದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

6-gundlupete

Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು

Kollegala-Archaka

Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು

7-hanur

Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ

5

Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.