ಖಾಲಿ ನಿವೇಶನದಲ್ಲಿ ಬೆಳೆದಿದೆ ಗಿಡಗಂಟಿ
ವಿಷಪೂರಿತ ಹಾವುಗಳಿಂದ ನಾಗರಿಕರಿಗೆ ಸಂಕಷ್ಟ| ಖಾಲಿ ನಿವೇಶನಗಳ ಬಗ್ಗೆ ಕ್ರಮ ಕೈಗೊಳ್ಳಲು ಪಾಲಿಕೆಗೆ ಆಗ್ರಹ
Team Udayavani, Mar 1, 2021, 3:05 PM IST
ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಾ, ರಾಜ್ಯದ ಗಮನ ಸೆಳೆಯುತ್ತಿರುವ, ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿರುವ, ನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿರುವ ಕಲ್ಪತರು ನಗರಿ ತುಂಬಾ ಕಸ, ಕಡ್ಡಿ, ಗಿಡ, ಗಂಟಿ ಬೆಳೆದಿದೆ. ಖಾಲಿ ನಿವೇಶನಗಳಿಂದ ನಿತ್ಯವೂ ಜನ ಸಾಮಾನ್ಯರಿಗೆ ಕಿರಿ ಕಿರಿಯಾಗುತ್ತಿದೆ.
ಹೌದು, ನಗರದ ಹೊರವಲಯದಲ್ಲಿರುವ ಜನವಸತಿ ಪ್ರದೇಶದಲ್ಲಿರುವ ಜನರು ನಿತ್ಯವೂ, ಅನುಭವಿಸುತ್ತಿರುವ ತೊಂದರೆ ಇದಾಗಿದೆ. ತ್ಯಾಜ್ಯ ಸುಟ್ಟ ಕೆಟ್ಟ ವಾಸನೆ, ಮನೆಗೆ ಬೇಡವಾಗಿರುವ ವಸ್ತುಗಳನ್ನು ತಂದು ಬಿಸಾಡುವ ಜಾಗ, ಗಿಡ ಗಂಟಿ ಬೆಳೆದು ವಿಷ ಜಂತುಗಳು ವಾಸಿಸುವ ತಾಣ. ಹೀಗೆ ನಗರದ ತುಂಬಾ ಇರುವ ಸಾವಿರಾರು ಖಾಸಗಿ ಖಾಲಿ ನಿವೇಶನದಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ಒಂದು ಎರಡಲ್ಲ. ಹತ್ತಾರು ಸಮಸ್ಯೆ ಜನರನ್ನು ನಿತ್ಯ ಕಾಡುತ್ತಲೇ ಇದೆ.
ಶ್ರೀಮಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ವಾಸಿಗಳು ನಗರದಲ್ಲಿ ನಿವೇಶನ ಖರೀದಿಸಿರೆ. ನಿವೇಶನ ಖರೀದಿಸುವಾಗ ಬಂದವರು ಇನ್ನೂ ಆ ನಿವೇಶನಗಳತ್ತ ಬರದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತಿದೆ. ಜನವಸತಿ ಪ್ರದೇಶದಲ್ಲಿರುವ ಈ ನಿವೇಶನಗಳ ಕಡೆ ಮಾಲೀಕರು ಗಮನಹರಿಸುತ್ತಿಲ್ಲ. ಮನೆಗಳ ಪಕ್ಕದಲ್ಲಿರುವ ಈ ನಿವೇಶನಗಳು, ಸ್ಥಳೀಯ ನಿವಾಸಿಗಳಿಗೆ ಕಂಟಕವಾಗಿವೆ. ಇತ್ತ ಮನೆ ನಿರ್ಮಾಣ ಮಾಡದೇ ಇರುವ ಕಾರಣ, ಆ ಜಾಗದಲ್ಲಿ ಗಿಡ ಗಂಟಿಗಳು ಬೆಳೆದು ಪೊದೆಗಳು ನಿರ್ಮಾಣವಾಗಿವೆ. ಈ ಪೊದೆಗಳಿಂದ ವಿಷಜಂತುಗಳು ಹಾವಳಿ ಹೆಚ್ಚಾಗುತ್ತಿದೆ.
ಸ್ಪಂದಿಸದ ಪಾಲಿಕೆ ಅಧಿಕಾರಿಗಳು : ಖಾಸಗಿ ನಿವೇಶನಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ತ್ಯಾಜ್ಯವನ್ನು ಖಾಲಿ ನಿವೇಶನದಲ್ಲಿ ತಂದು ಸುರಿಯುತ್ತಿದ್ದಾರೆ. ಜನರುವಾಸಿಸುವ ಸ್ಥಳಗಳಲ್ಲಿ ರಾತ್ರಿ ವೇಳೆಯಲ್ಲಿ ಸತ್ತ ಜನಗಳ ಹಾಸಿಗೆ ತಂದು ಸುಡುತ್ತಾರೆ.ರಬ್ಬರ್, ಟೈರ್, ಪ್ಲಾಸ್ಟಿಕ್, ಹಳೆ ಬಟ್ಟೆ ಸುಡುತ್ತಿದ್ದಾರೆ. ಈ ಬಗ್ಗೆ ನಾವು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ, ಏನೂ ಪ್ರಯೋಜನವಾಗುತ್ತಿಲ್ಲ. ಈ ಕೆಟ್ಟ ವಾಸನೆಯಿಂದ ಬಡಾವಣೆ ನಾಗರಿಕರು ಕ್ಯಾನ್ಸರ್‌ನಿಂದ ಸಾಯಬೇಕಾಗುತ್ತದೆ ಎಂದುಸರಸ್ಪತಿಪುರಂ ಎರಡನೇ ಹಂತದ ನಿವಾಸಿ ಜಿ. ಹನುಮಂತಪ್ಪ ಬೇಸರಿಸಿದ್ದಾರೆ.
ಎಲ್ಲೆಲ್ಲಿ ತೊಂದರೆ? :
ನಗರದ ಸರಸ್ಪತಿ ಪುರಂ 2ನೇ ಹಂತದ ನೀಲಗಿರಿ ತೋಪಿನ ಪ್ರದೇಶ, ವಿದ್ಯಾನಿಕೇತನ ಶಾಲೆ ಸಮೀಪ, ಸಪ್ತಗಿರಿ ಬಡಾವಣೆ, ಜಯನಗರ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಶ್ರೀನಗರ,ಬಂಡೇಪಾಳ್ಯ, ಶಿರಾ ಗೇಟ್, ಅರಳಿಮರದ ಪಾಳ್ಯ, ಭೀಮಸಂದ್ರ, ಗಂಗಸಂದ್ರ,ರಾಜೀವ್ ಗಾಂಧಿನಗರ, ಕುರಿಪಾಳ್ಯ, ಸದಾಶಿವನಗರ, ಇಸ್ಮಾಯಲ್‌ನಗರ,ಮರಳೂರು ದಿಣ್ಣೆ, ಶೆಟ್ಟಿಹಳ್ಳಿ ಸೇರಿದಂತೆ ನಗರದ ಪ್ರಮುಖ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿಯಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
ನಗರದಲ್ಲಿ ಸಾವಿರಾರು ಖಾಲಿ ನಿವೇಶನಗಳಿವೆ.ಈ ನಿವೇಶನದಲ್ಲಿ ಗಿಡ ಗಂಟಿ ಬೆಳೆದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಯಾಗುತ್ತಿದೆ ಎನ್ನುವುದುಪಾಲಿಕೆ ಗಮನಕ್ಕೆ ಬಂದಿದೆ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ. ಮೈಸೂರುಮಾದರಿಯಂತೆ ಇಲ್ಲಿಯೂ ಕ್ರಮ ಕೈಗೊಳ್ಳುತ್ತೇವೆ. -ರೇಣುಕಾ, ಆಯುಕ್ತೆ, ಮಹಾನಗರ ಪಾಲಿಕೆ
35 ವಾರ್ಡ್‌ಗಳಲ್ಲಿಯೂ ಖಾಲಿ ನಿವೇಶನಗಳಿಂದ ಜನರಿಗೆತೊಂದರೆಯಾಗುತ್ತಿರು ವುದು ನನ್ನ ಗಮನದಲ್ಲಿದೆ. ಈ ಬಗ್ಗೆ ಚರ್ಚೆ ಆಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. – ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್
ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗಳಿಂದ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ನಿವೇಶನಗಳ ಮಾಲೀಕರಿಗೆ ಪಾಲಿಕೆಯಿಂದ ಜಾಗೃತಿ ಉಂಟು ಮಾಡಿ, ಸ್ವಚ್ಛತೆ ಕಾಪಾಡುವಂತೆ ಸೂಚಿಸಬೇಕು. ಪಾಲಿಕೆ ಪೌರ ಕಾರ್ಮಿಕರು ಖಾಲಿ ನಿವೇಶನ ಸ್ವತ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪಾಲಿಕೆಯಿಂದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ . –ಜೆ.ಕುಮಾರ್, ಪಾಲಿಕೆ ಸದಸ್ಯ
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.