ಸರಳ-ಸಾಂಪ್ರದಾಯಿಕ ಮಲ್ಲಮ್ಮ ಉತ್ಸವ
Team Udayavani, Mar 1, 2021, 3:58 PM IST
ಬೈಲಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಶುಕ್ರವಾರ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಕೋವಿಡ್ ಮಹಾಮಾರಿ ಕಾರಣದಿಂದ ಈ ವರ್ಷ ಎಲ್ಲ ಉತ್ಸವಗಳನ್ನು ಸರಳವಾಗಿ, ಸಾಂಕೇತಿಕವಾಗಿಮತ್ತು ಅರ್ಥಪೂರ್ಣವಾಗಿ ಮಾಡುತ್ತಿದ್ದೇವೆ. ಆದರೆ ನಾಡು ನುಡಿ ಪ್ರಜೆಗಳ ರಕ್ಷಣೆಗೆ ಹೋರಾಡಿ ಮಡಿದ ವೀರರ ಚರಿತ್ರೆ ಸ್ಮರಣೀಯವಾಗಿಸಲು ಯಾವುದೇ ಸಂಪ್ರದಾಯಗಳಿಗೆ ಕೊರತೆಯಾಗದಂತೆ ಆಚರಿಸುತ್ತಿದ್ದೇವೆ. ಬೆಳವಡಿ ಮಲ್ಲಮ್ಮನ ಗ್ರಾಮಅಭಿವೃದ್ಧಿ ಕುರಿತಾಗಿ ಸಾಕಷ್ಟು ಬೇಡಿಕೆಗಳನ್ನು ಎಲ್ಲರೂ ನನ್ನ ಗಮನಕ್ಕೆ ತಂದಿದ್ದಾರೆ. ಅವುಗಳಲ್ಲಿ ನಮ್ಮಹಂತದಲ್ಲಿ ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತೇನೆ. ಉಳಿದ ಪ್ರಮುಖ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುವದು. ಮುಂದಿನ ಉತ್ಸವದೊಳಗಾಗಿ ಬೆಳವಡಿ ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ರಾಣಿಮಲ್ಲಮ್ಮಳ ಇತಿಹಾಸ ಕುರಿತಾದ ಮತ್ತು ಗ್ರಾಮದಹೆಸರಿನ ದೊಡ್ಡದಾದ ಒಂದು ಬೋರ್ಡ್ ಹಾಕಿಸ ಲಾಗುವುದು. ಬೆಳಗಾವಿಯಲ್ಲಿ ವೀರ ರಾಣಿಕಿತ್ತೂರು ಚನ್ನಮ್ಮ, ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿಗಳಿವೆ. ಆದರೆ ರಾಣಿ ಮಲ್ಲಮ್ಮಳ ಮೂರ್ತಿ ಇಲ್ಲ ಎಂದು ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ. ಅದನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ರಾಣಿ ಚನ್ನಮ್ಮ, ಶೂರ ರಾಯಣ್ಣ ಎಲ್ಲರೂ ಬೈಲಹೊಂಗಲ ಭಾಗಕ್ಕೆ ಸೇರಿದವರು ಎನ್ನುವುದು ಹೆಮ್ಮೆಯ ಸಂಗತಿ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಇದೇ ಸಂದರ್ಭದಲ್ಲಿ ಡಾ. ಬಾಳಪ್ಪ ಚಿನಗುಡಿಯವರು ಬರೆದ ಮಲ್ಲಮ್ಮ ರಾಣಿ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವ ಗ್ರಂಥ ಬಿಡುಗಡೆಯುಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಬೆಳವಡಿ ಮಲ್ಲಮ್ಮನ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಡಿಯೂರಪ್ಪನವರಿಗೆ ವೈಯಕ್ತಿಕವಾಗಿ ಮನವಿಸಲ್ಲಿಸಿ ವಿವರಿಸಿದ್ದೇನೆ. ಈಗ ಮತ್ತೂಮ್ಮೆ ಬೆಳವಡಿಗ್ರಾಮದ ಪ್ರಮುಖರು ಮತ್ತು ಹಾಲಿ ಶಾಸಕರಜತೆಗೂಡಿ ಜಿಲ್ಲಾ ಧಿಕಾರಿಯವರ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರಾಣಿ ಮಲ್ಲಮ್ಮನ ಸಂಸ್ಥಾನದ ರಾಜಗುರು ಸುಳ್ಳಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರಶ್ರೀಗಳು ಮಾತನಾಡಿ, ಚಿನಗುಡಿಯವರು ಬರೆದಿರುವ ವೀರರಾಣಿ ಮಲ್ಲಮ್ಮನ ಸಂಸ್ಥಾನ ಹಾಗೂ ವಂಶಸ್ಥರದೇಸಗತಿಗಳು ಗ್ರಂಥವನ್ನು ಎಲ್ಲರೂ ಅಧ್ಯಯನ ಮಾಡಬೇಕು. ಬೆಳವಡಿ ನಾಡಿನ ಅಭಿವೃದ್ಧಿಗೆ ಎಲ್ಲರೂಪಕ್ಷಭೇದ ಮರೆತು ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ಜ್ಯೋತಿಗೆ ಸ್ವಾಗತ: ರಾಣಿ ಮಲ್ಲಮ್ಮನ ತವರೂರಾದ ಶಿರಸಿ ಜಿಲ್ಲೆ ಸೋಂದಾದಿಂದ ರವಿವಾರ ಬೆಳಗ್ಗೆ ಆಗಮಿಸಿದ ರಾಣಿ ಮಲ್ಲಮ್ಮಳ ವೀರ ಜ್ಯೋತಿಗೆ ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು, ಬೆಳವಡಿ ಗ್ರಾಮಸ್ಥರು ಹಾಗೂ ಮಲ್ಲಮ್ಮನ ಅಭಿಮಾನಿಗಳ ಉಪಸ್ಥಿತಿಯಲ್ಲಿಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ವೇಳೆ ಜನರು ವೀರ ರಾಣಿ ಮಲ್ಲಮ್ಮಳಿಗೆ ಹಾಗೂ ಈಶಪ್ರಭು ದೊರೆಗೆ ಜಯಘೋಷ ಕೂಗಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳವಡಿ ಮಲ್ಲಮ್ಮನ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬೆಳವಡಿ ಸಂಸ್ಥಾನದ ರಾಜಗುರುಗಳು, ಶಾಸಕ ಮಹಾಂತೇಶ
ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ರಾಣಿ ಮಲ್ಲಮ್ಮಳ ಪುತ್ಥಳಿಗೆ ಮಾಲಾರ್ಪಣೆ ಮಾಡಿಗೌರವ ಸಲ್ಲಿಸಿದರು. ಇದೇ ವೇಳೆ ಗ್ರಂಥ ರಚನೆಕಾರ ಡಾ. ಬಾಳಪ್ಪ ಚಿನಗುಡಿಯವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಗಜಾನನ ಚಿನಗುಡಿಯವರನ್ನು ಗ್ರಾಮಸ್ಥರ ಪರವಾಗಿ ಸತ್ಕರಿಸಲಾಯಿತು. ಬೆಳವಡಿ ಉತ್ಸವ ನಿಮಿತ್ತವಾಗಿ ಶಾರದಾ ಸಂಗೀತ ಪಾಠಶಾಲೆ ಹಾಗೂ ಭವಾನಿ ಮೆಲೋಡೀಸ್ ವತಿಯಿಂದ ಮಾ.3ರಿಂದ ನಡೆಯಲಿರುವ ವಾಯ್ಸ ಆಫ್ ಬೆಳವಡಿ ಸಂಗೀತ ಗಾಯನ ಸ್ಪರ್ಧೆಯ ಪ್ರಚಾರ ಕರಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಜಿಪಂ ಸದಸ್ಯ ವೀರಣ್ಣ ಕರೀಕಟ್ಟಿ, ತಾಪಂ ಸದಸ್ಯೆ ಅಮೃತಾ ಕಕ್ಕಯ್ಯನವರ, ತಾಪಂ ಅಧ್ಯಕ್ಷೆ ಪಾರ್ವತಿನರೇಂದ್ರ, ಉಪವಿಭಾಗಾ ಕಾರಿ ಶಶಿಧರ ಬಗಲಿ,ತಹಶೀಲ್ದಾರ ಬಸವರಾಜ ನಾಗರಾಳ, ಬೆ„ಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಳ್ಳಿ, ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್ಲ,ದೊಡವಾಡ ಪಿಎಸ್‌ಐ ಆನಂದ ಕ್ಯಾರಕಟ್ಟಿ, ತಾಪಂ ಇಓ ಸುಭಾಸ ಸಂಪಗಾಂವಿ, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾ ಭಜಂತ್ರಿ,ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಸಿದ್ಧನ್ನವರ, ಬೆಳವಡಿ ಗ್ರಾಪಂ ಅಧ್ಯಕ್ಷೆ ರೇಣುಕಾ ಕುರಿ,ಉಪಾಧ್ಯಕ್ಷ ಸಿದ್ದಪ್ಪ ನಂದಿಹಳ್ಳಿ ಹಾಗೂ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಟಾನ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ, ಯುವ ಜಾಗƒತಿ ವೇದಿಕೆ ಅಧ್ಯಕ್ಷ ಪ್ರಕಾಶ ಹುಂಬಿ, ಮಡಿವಾಳಪ್ಪ ಗರಗ, ಪ್ರಕಾಶ ಬಳಿಗೇರ, ಎಮ್. ಆರ್.ನೆಲ್ಲಿಗಣಿ, ಪ್ರಕಾಶ ಕರೀಮನಿ, ರಾಜು ಬಿಸಲಳ್ಳಿ, ಸಾರಾಬಿ ಹಾದಿಮನಿ, ಬಸಪ್ಪ ದೇಂಗಾವಿ, ದುರಗವ್ವ ಕಪರಿ, ಈರಪ್ಪ ತುರಾಯಿ, ಪಿಡಿಓ ಉಸ್ಮಾನ್ ನದಾಫ್, ಉಪನ್ಯಾಸಕ ಎಮ್.ಪಿ.ಉಪ್ಪಿನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮಳಹೆಸರಿಡಲು ಆದಷ್ಟು ಶೀಘ್ರ ಸರಕಾರಕ್ಕೆಪ್ರಸ್ತಾವನೆ ಸಲ್ಲಿಸುತ್ತೇವೆ. ಮುಂದಿನವರ್ಷದ ಉತ್ಸವದ ಎಲ್ಲ ಭರವಸೆಗಳು ನಿಜವಾಗುವಂತೆ ನೋಡಿಕೊಳ್ಳುತ್ತೇನೆ. – ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿಗಳು ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.