ಇಂದು ಮೈಲಾರ ಕಾರ್ಣಿಕೋತ್ಸವ

­ಹೊರಗಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ! ­ಗ್ರಾಮದ ಸುತ್ತಲೂ ಪೊಲೀಸ್‌ ಪಹರೆ

Team Udayavani, Mar 1, 2021, 4:14 PM IST

Mailaralingeswar Karanikotsava

ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಮಾ. 1ರಂದು ನಡೆಯಲಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.

ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್‌ ಮಾರ್ಗಸೂಚಿ ಅನ್ವಯ ಈ ಬಾರಿ ಸುಕ್ಷೇತ್ರ  ಮೈಲಾರಕ್ಕೆ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಿದ್ದು ಅದಕ್ಕಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್‌ ಇಲಾಖೆ ಮೈಲಾರ ಸುಕ್ಷೇತ್ರದ ನಾಲ್ಕು ಕಡೆಯಲ್ಲಿ ಬ್ಯಾರಿಕೇಡ್‌ ನಿರ್ಮಿಸಿದ್ದು, ಗ್ರಾಮದ ಸುತ್ತಲೂ ಪೊಲೀಸ್‌ ಪಹರೆ ಹಾಕಲಾಗಿದೆ. ಕೇವಲ ಗ್ರಾಮದ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಹೊರಗಿನಿಂದ ಬಂದು ಹೋಗುವ ಭಕ್ತರಿಗೆ ಅವಕಾಶವಿಲ್ಲದಾಗಿದೆ. ಆದರೂ ಸಹ ಭಕ್ತರು ಧಾರ್ಮಿಕ ಭಾವನೆ ಹಿನ್ನೆಲೆಯಲ್ಲಿ ಕಾರ್ಣಿಕದ ಡೆಂಕನ ಮರಡಿಗೆ ಆಗಮಿಸುವ ನಿರೀಕ್ಷೆ ಇದ್ದು ಸೂಕ್ತ ಮಾರ್ಗಸೂಚಿ ಆನುಸರಿಸಲು ಕ್ರಮ ಕೈಗೊಳ್ಳಲಾಗಿದೆ.

ಧಾರ್ಮಿಕ ಹಿನ್ನೆಲೆ: ಭರತ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ನಾಡಿನ ಸುಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಶ್ರೀ ಮೈಲಾರಲಿಂಗನ ಜಾತ್ರೆಗೆ ರೈತಾಪಿ ವರ್ಗದವರು ಸಕಲ ಸಿದ್ದತೆಯಲ್ಲಿ ತೊಡಗುತ್ತಾರೆ. ಭರತ ಹುಣ್ಣಿಮೆಯ ಮೂರನೆ ದಿವಸ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಜರಗುತ್ತದೆ. ಅಂದು ಜಾತ್ರೆಯ ಕೇಂದ್ರ ಬಿಂದುವಾದ ಕಾರ್ಣಿಕೋತ್ಸವ ನೋಡಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷೋಪ ಲಕ್ಷ ಭಕ್ತರು ಶ್ರೀ ಕ್ಷೇತರ ಮೈಲಾರಕ್ಕೆ ಆಗಮಿಸುತ್ತಾರೆ. ಹುಣ್ಣಿಮೆಗಿಂತ ಮೂರುದಿವಸಗಳ ಕಾಲ ಸುಕ್ಷೇತ್ರ ಮೈಲಾರಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಜಾನಪದ ಸೊಗಡಿನ ಪ್ರತೀಕದಂತೆ ರೈತಾಪಿ ವರ್ಗದವರು ರೈತರ ಗೆಳೆಯ ಎತ್ತುಗಳನ್ನು ಸಿಂಗರಿಸಿಕೊಂಡು ಸವಾರಿ ಬಂಡಿ ಕಟ್ಟಿಕೊಂಡು ಜಾತ್ರೆಗೆ ಹೊರಡುವುದು ಮೈಲಾರಲಿಂಗ ಸ್ವಾಮಿ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ.

ಮನೆಯಿಂದ ವಾರಕ್ಕೆ ಸಾಕಾಗುವಷ್ಟು ಆಹಾರ ಕಟ್ಟಿಕೊಂಡು ಶ್ರೀಕ್ಷೇತ್ರಕ್ಕೆ ಹೊರಡುತ್ತಾರೆ. ಸಾಮಾನ್ಯವಾಗಿ ಪ್ರತಿ ಬಂಡಿಯ ಜೊತೆಯಲ್ಲಿ ಒಬ್ಬರು ಕಾಲ್ನಡಿಗೆಯಲ್ಲಿಯೇ ಮೈಲಾರ ತಲುಪುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು: 11 ದಿವಸಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪ್ರತಿದಿನ ಒಂದೊಂದು ಧಾರ್ಮಿಕ ಕಾರ್ಯಗಳು ನೆರವೇರುತ್ತವೆ. ರಥ ಸಪ್ತಮಿಯಂದು ಶ್ರೀ ಮೈಲಾರ ಲಿಂಗನು ಕಾರ್ಣಿಕ ನುಡಿಯುವ ಡೆಂಕನ ಮರಡಿಗೆ ಆರೋಹಣ ಮಾಡುತ್ತಾನೆ. ಅಂದಿನಿಂದ ಕಾರ್ಣಿಕದ ಗೊರವಪ್ಪನು 11 ದಿವಸಗಳ ಕಾಲ ಡೆಂಕನ ಮರಡಿ ಕಾಯುವ ಮೂಲಕವಾಗಿ ಉಪವಾಸ ವ್ರತ ಕೈಗೊಳ್ಳುತ್ತಾನೆ. ಪವಿತ್ರ ಭಾವನೆಯ ಭಂಡಾರದ ನೀರು, ಹಣ್ಣು, ಹಂಪಲು ಸೇವಿಸುವ ಕಾರ್ಣಿಕದ ಗೊರವಪ್ಪನಿಗೆ ಸಾಕ್ಷಾತ್‌ ಶಿವ ದೈವ ಶಕ್ತಿಯ ವಾಣಿಯನ್ನು (ಕಾರ್ಣಿಕ ನುಡಿ) ನುಡಿಯುತ್ತಾನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಕಾರ್ಣಿಕೋತ್ಸವ ರಾಕ್ಷಸ ಸಂಹಾರದ ವಿಜಯೋತ್ಸವದ ಸಂಕೇತ: ಹಿಂದೆ ಭೂಲೋಕದಲ್ಲಿ ಮಲ್ಲಾಸುರ- ಮಣಿಕಾಸುರ ಎಂಬ ಇಬ್ಬರೂ ಸಹೋದರ ರಾಕ್ಷಸರು ಮಾನವರನ್ನೂ ಒಳಗೊಂಡಂತೆ ಮುನಿಗಳನ್ನು, ತಪಸ್ವಿಗಳನ್ನು ಹಿಂಸುಸುತ್ತಿದ್ದರು. ಇವರ ಉಪಟಳ ತಾಳಲಾರದೆ ಕೊನೆಗೆ ದೇವತೆಗಳು ಸಹ ಶಿವನಲ್ಲಿಗೆ ತಮ್ಮ ಕಷ್ಟಗಳನ್ನು ಬಗೆಹರಿಸಲು ಮೊರೆ ಹೋಗುತ್ತಾರೆ. ಆಗ ಶಿವ ಪರಮಾತ್ಮ ತನ್ನ ಏಳು ಕೋಟಿ ದೇವಾನುದೇವತೆಗಳ ಸೈನ್ಯವನ್ನು ಕಟ್ಟಿಕೊಂಡು ಶ್ರೀ ಕ್ಷೇತ್ರದ ಮೂಡಣ ದಿಕ್ಕಿನ ಮಣಿಚುರ ಪರ್ವತಕ್ಕೆ ಸಾಗುತ್ತಾನೆ. ಈ ಸಂದರ್ಭದಲ್ಲಿ ಈಶ್ವರನು ಮಾರ್ತಾಂಡ ಭೈರವನಾಗಿ, ಕಂಬಳಿ ನಿಲುವಂಗಿ ಮುಂಡಾಸ, ಕೈಯಲ್ಲಿ ಡಮರುಗ ತ್ರಿಶೂಲ, ದೋಣಿ ಭಂಡಾರ ಬಟ್ಟಲನ್ನು ಹಿಡಿದುಕೊಂಡು ಶ್ರೀ ವಿಷ್ಣುವಿನನ್ನು ಮುಖ್ಯ ಸೇನಾಧಿಪತಿಯನ್ನಾಗಿ ನಂದೀಶ್ವರ ಕುದುರೆಯಾಗಿ ರಾಕ್ಷಸರ ಸಂಹಾರಕ್ಕೆ ಗುಪ್ತ ಮೌನ ಸವಾರಿ ಮೂಲಕವಾಗಿ ರಾಕ್ಷಸರು ಅವಿತು ಕುಳಿತಿದ್ದ ಡೆಂಕನ ಮರಡಿಗೆ ತೆರಳುತ್ತಾರೆ. ರಥ ಸಪ್ತಮಿ ದಿನದಿಂದ ಸುಮಾರು 22 ದಿನಗಳ ಕಾಲ ರಾಕ್ಷಸರಿಗೂ ಹಾಗೂ ದೇವತೆಗಳಿಗೂ ಘೋರ ಯುದ್ಧ ನಡೆಯುತ್ತದೆ. ನಂತರದಲ್ಲಿ ರಾಕ್ಷಸರ ಸಂಹಾರ ನಡೆಯುತ್ತದೆ ಎನ್ನುವುದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಲ್ಲಾಸುರ ದೈತ್ಯನನ್ನು ಸಂಹರಿಸಿದ್ದಕ್ಕಾಗಿ ಮಲ್ಲಾರಿ ಎಂದು ಹಾಗೆಯೇ ಮಲ್ಲಾರಿ ನೆಲಸಿದ್ದ ಸ್ಥಳವನ್ನು ಮೈಲಾರವೆಂದು ಪ್ರಸಿದ್ಧಿ ಪಡೆದಿರುವುದಾಗಿ ಪ್ರತೀತಿ ಇದೆ. ರಾಕ್ಷಸರ ಸಂಹಾರದ ನಂತರದಲ್ಲಿ ಭೂಲೋಕದಲ್ಲಿ ಮಳೆ ಬೆಳೆ ಸುಭೀಕ್ಷೆಯಿಂದ ಇರಲು ನಾಡಿನ ಭಕ್ತರಿಗೆ ಒಳಿತನ್ನು ಮಾಡುವ ದೈವ ವಾಣಿಯೇ ಇಂದಿಗೂ ಕಾರ್ಣಿಕದ ನುಡಿಯಾಗಿ ಪ್ರಸಿದ್ಧಿಯಾಗಿದೆ.

ಪವಾಡಗಳು: ಕಾರ್ಣಿಕದ ನಂತರದಲ್ಲಿ ಮರು ದಿನ ಸಂಜೆ ಗಂಗಿ ಮಾಳವ್ವ ದೇವಸ್ಥಾನದ ಮುಂದೆ ಗೊರವಪ್ಪನವರು ಸರಪಳಿ ಹರಿಯುವುದು ಕಂಚಿ ವೀರರು ಕಾಲಲ್ಲಿ ಹಾಗೂ ಕೈಯಲ್ಲಿ ಬಗಣಿ ಗೂಟ ಬಡಿದುಕೊಳ್ಳುವುದು ಒಳಗೊಂಡಂತೆ ಆನೇಕ ಪವಾಡಗಳು ನಡೆಯುತ್ತವೆ. ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಭಕ್ತರ ಭಾವನೆಗೆ ಧಕ್ಕೆ ಬಾರದ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲು ಅವಕಾಶ ನೀಡಿದೆ. ಕಾರ್ಣಿಕ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ಪೊಲೀಸ್‌ ಬಿಗಿ ಭದ್ರತೆ ಕೈಗೊಂಡಿದೆ. ಅದಕ್ಕಾಗಿ 5 ಜನ ಡಿವೈಎಸ್‌ಪಿ, 10 ಸಿಪಿಐ, 30 ಎಎಸ್‌ಐ, ಒಳಗೊಂಡಂತೆ 550 ಸಿಬ್ಬಂದಿಗಳನ್ನು 4 ಕೆಎಸ್‌ಆರ್‌ಪಿ ವಾಹನ ನಿಲುಗಡೆ ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ ಕಡಿತ: ಪ್ರತಿ ಬಾರಿ ಜಾತ್ರೆಗೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಈ ಬಾರಿ ವಿಶೇಷ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿರುವುದಲ್ಲದೆ ಪ್ರತಿ ದಿನದ ಓಡಾಡುವ ಬಸ್‌ಗಳ ಸಂಖ್ಯೆಯನ್ನು  ಕಡಿತಗೊಳಿಸಲಾಗಿದೆ.

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.