ಶಿವಮೊಗ್ಗದ ರಸ್ತೆ ಬದಿ ಗೋಡೆ ಮೇಲೆ ಆಕರ್ಷಕ ಚಿತ್ತಾರ

Team Udayavani, Mar 1, 2021, 4:51 PM IST

dsa

ಶಿವಮೊಗ್ಗ: ಬೆಂಗಳೂರು ಭೇಟಿ ಕೊಟ್ಟವರಿಗೆ ರಸ್ತೆ ಬದಿ ಕಾಂಪೌಂಡ್‌ಗಳಲ್ಲಿ ಆಕರ್ಷಕ ಚಿತ್ರಗಳು ಗಮನ ಸೆಳೆಯದೆ ಇರದು. ಇಂತಹ ಆಕರ್ಷಕ ಚಿತ್ತಾರಗಳು ಇನ್ಮುಂದೆ ಶಿವಮೊಗ್ಗದಲ್ಲೂ ಕಾಣಬಹುದು. ಬೇರೆ ಬೇರೆ ಕಾರಣಗಳಿಗೆ ವಿರೂಪಗೊಳ್ಳುತ್ತಿದ್ದ ಇಂತಹ ಕಾಂಪೌಂಡ್‌ಗಳನ್ನು ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕಲರ್‌ಫುಲ್‌ ಮಾಡಲಾಗುತ್ತಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕರ್ನಾಟಕ ಚಿತ್ರಕಲಾ ಪರಿಷತ್‌ ಸಹಯೋಗದಲ್ಲಿ ನಗರದ ಸೌಂದರ್ಯ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. 52 ಲಕ್ಷ ರೂ. ವೆಚ್ಚದಲ್ಲಿ ಎಂಟು ಇಲಾಖೆಗಳ ಕಾಂಪೌಂಡ್‌ಗಳಿಗೆ ಬಣ್ಣ ತುಂಬುವ ಕೆಲಸ ಅಚ್ಚುಕಟ್ಟಾಗಿ ನಡೆದಿದ್ದು, ಜನರನ್ನು ಆಕರ್ಷಿಸುತ್ತಿವೆ.

ಸಾಗರ ರಸ್ತೆಯ ಪೊಲೀಸ್‌ ಇಲಾಖೆ, ಎಸ್ಪಿ ಕಚೇರಿ, ಮೆಗ್ಗಾನ್‌ ಆಸ್ಪತ್ರೆ, ಆರ್‌ಟಿಒ ರಸ್ತೆಯ ಅರಣ್ಯ ಇಲಾಖೆ, ಪತ್ರಿಕಾ ಭವನ, ಬಾಲರಾಜ್‌ ಅರಸ್‌ ರಸ್ತೆಯ ಅಂಚೆ ಇಲಾಖೆ, ತಾಪಂ ಕಚೇರಿಯ ಸಾಮರ್ಥ್ಯ ಸೌಧದ ಕಟ್ಟಡಗಳು ಈಗಾಗಲೇ ಸ್ಮಾರ್ಟ್‌ ಆಗಿವೆ. ವಿವಿಧ ಚಿತ್ರಕಲೆಯಿಂದ ಕಂಗೊಳಿಸುತ್ತಿವೆ. ವಿಶೇಷವೆಂದರೆ ಆಯಾ ಇಲಾಖೆಗಳ ಕಾಂಪೌಂಡ್‌ ಮೇಲೆ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವುದನ್ನು ಬಿಂಬಿಸಲಾಗಿದೆ.

ಶಿವಮೊಗ್ಗ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಜೋಗ್‌ಫಾಲ್ಸ್‌, ಸಕ್ರೆಬೈಲ್‌ನ ಆನೆ ಬಿಡಾರ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ, ಶಿವಪ್ಪ ನಾಯಕ ಅರಮನೆ, ತುಂಗಾ ಮತ್ತು ಭದ್ರಾ ಜಲಾಶಯಗಳು ಹೀಗೆ ಹತ್ತು ಹಲವು ಪ್ರವಾಸಿಗಳ ಚಿತ್ರಣ ಗೋಡೆಗಳ ಮೇಲೆ ಮುದ್ರಿತಗೊಳ್ಳುತ್ತಿದೆ. ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಹಾಗೂ ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಿ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಪ್ರವಾಸಿ ತಾಣಗಳ ಪರಿಚಯವನ್ನು ಗೋಡೆಗಳ ಮೇಲೆ ಮಾಡಿಕೊಡಲಾಗುತ್ತಿದೆ. ಸ್ಮಾರ್ಟ್‌ಸಿಟಿಯಿಂದ ಪ್ರಾಯೋಗಿಕ ವಾಗಿ ನಗರದ ಎಂಟು ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳಿಗೆ ಚಿತ್ರ ಬಿಡಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ನಗರದ ಎಲ್ಲ ಕಾಂಪೌಂಡ್‌ಗಳಲ್ಲೂ ಬಣ್ಣ ಬಣ್ಣದ ಚಿತ್ರ ಬಿಡಿಸುವ ಮೂಲಕ ಹೊಸ ಕಲ್ಪನೆ ಹುಟ್ಟು ಹಾಕಲಾಗುವುದು. ಇದರಿಂದ ಹೊರ ಊರು ಅಥವಾ ಪ್ರದೇಶಗಳಿಂದ ಬಂದವರಿಗೆ ಮಲೆನಾಡಿನ ಸಂಪೂರ್ಣ ಚಿತ್ರಣ ಕಣ್ಮುಂದೆ ಬರಲಿದೆ. ಜತೆಗೆ ಏನೆಲ್ಲ ಪ್ರವಾಸಿ ತಾಣಗಳಿವೆ ಎಂಬುದು ಸುಲಭವಾಗಿ ಪ್ರವಾಸಿಗರಿಗೂ ತಿಳಿಯಲಿದೆ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು , ಪಾಲಿಕೆ ಗೋಡೆಗೆ

ಭಿತ್ತಿಚಿತ್ರ: ಜನರಲ್‌ ಥೀಮ್‌ ಇಟ್ಟುಕೊಂಡು 46 ಎಕರೆ ಪ್ರದೇಶದ ಫ್ರೀಡಂ ಪಾರ್ಕ್‌ನ 8 ಎಕರೆ ಜಾಗ (ಹಳೆಯ ಜೈಲಿನ ಗೋಡೆ) ಹಾಗೂ ಮಹಾನಗರ ಪಾಲಿಕೆ ಕಾಂಪೌಂಡ್‌ ಗಳಿಗೆ ಭಿತ್ತಿಚಿತ್ರಗಳ ಮುದ್ರಿಸಲು ಸ್ಮಾಟ್‌ ìಸಿಟಿ ಚಿಂತನೆ ನಡೆಸಿದೆ. ಈ ಮೂಲಕ ಸಿನಿಮಾ, ರಾಜಕೀಯ, ಧಾರ್ಮಿಕ ಸೇರಿ ಇತರೆ ಪೋಸ್ಟರ್‌ ಹಚ್ಚುವುದನ್ನು ತಡೆಯಲು ಮುಂದಾಗಿದೆ.

ಟಾಪ್ ನ್ಯೂಸ್

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

sunil kumar

Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ

1-vitla

ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ

1-raichur

Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ

Na-Desoza-sagara

ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ

Hosnagara-Bus

Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಕೃತ್ಯ ಮಾಡಿದ್ದ ಲಾಯರ್!

Sarji sweet box case: ಲವ್‌ ಫೈಲ್ಯೂರ್‌ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.