ಎಚ್‌ಕೆಇಗೆ ಮತ್ತೆ ಡಾ| ಬಿಲಗುಂದಿ ಸಾರಥಿ

ಜಗನ್ನಾಥ ಬಿಜಾಪುರ 524 ಹಾಗೂ ಸಾಯಿನಾಥ ಪಾಟೀಲ 516 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

Team Udayavani, Mar 1, 2021, 5:26 PM IST

ಎಚ್‌ಕೆಇಗೆ ಮತ್ತೆ ಡಾ| ಬಿಲಗುಂದಿ ಸಾರಥಿ

ಕಲಬುರಗಿ: ಪ್ರತಿಷ್ಠಿತ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ (ಎಚ್‌ಕೆಇ) ಸಂಸ್ಥೆ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಪುನರಾಯ್ಕೆಯಾಗುವ ಮೂಲಕ ಅದ್ವಿತೀಯ ಸಾಧನೆ ತೋರಿದ್ದಾರೆ. ಶನಿವಾರ ನಡೆದ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯ ಸ್ಥಾನದ ಚುನಾವಣೆ ಮತ ಎಣಿಕೆ ರವಿವಾರ ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಿತು. ಡಾ| ಭೀಮಾಶಂಕರ ಬಿಲಗುಂದಿ ಅವರು 624 ಮತಗಳನ್ನು ಪಡೆದು ಅಧ್ಯಕ್ಷರಾಗಿ ಪುನರಾಯ್ಕೆಯಾದರು.

ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ 479 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದರು. ಭೀಮಾಶಂಕರ ಬಿಲಗುಂದಿ ಅವರು ಅತ್ಯಧಿಕ 145 ಮತಗಳ ಅಂತರದಿಂದ ಎರಡನೇ ಬಾರಿ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿದರು.

ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಕೇವಲ 329 ಮತಗಳನ್ನು ಪಡೆದು ಹೀನಾಯ ಸೋಲು ಅನುಭವಿಸಿದರು. ಅಧ್ಯಕ್ಷರಾದವರ ಪೆನಲ್‌ದಿಂದಲೇ
ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬರಲಾಗುತ್ತಿತ್ತು. ಆದರೆ ಈ ಸಲ ಡಾ| ಶರಣಬಸಪ್ಪ ಹರವಾಳ ಅವರು ಎದುರಿನ ಭೀಮಳ್ಳಿ ಪೆನ್‌ಲ್‌ದಿಂದ ಆಯ್ಕೆಯಾಗುವ
ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಡಾ| ಶರಣಬಸಪ್ಪ ಹರವಾಳ ಅವರು 848 ಮತ ಪಡೆದು ಅತ್ಯಧಿಕ 475 ಮತಗಳ ಅಂತರದಿಂದ ಚುನಾಯಿತರಾಗಿದ್ದಾರೆ. ಹಾಲಿ ಉಪಾಧ್ಯಕ್ಷ ಡಾ|
ಶಿವಾನಂದ ದೇವರಮನಿ 373 ಹಾಗೂ ಆರ್‌. ಎಸ್‌. ಹೊಸಗೌಡ 226 ಮತ ಪಡೆದು ಸೋಲು ಅನುಭವಿಸಿದರು.

ಭೀಮಳ್ಳಿ ಪೆನಲ್‌ ಮೇಲುಗೈ: ಭೀಮಳ್ಳಿ ಪೆನಲ್‌ನಲ್ಲಿ ಉಪಾಧ್ಯಕ್ಷ ಸೇರಿ 13 ಆಡಳಿತ ಮಂಡಳಿ ಸದಸ್ಯ ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ಪಡೆಯುವುದರ ಮೂಲಕ ಮೇಲುಗೈ ಸಾಧಿ ಸಿದ್ದು, ಡಾ| ಭೀಮಾಶಂಕರ ಬಿಲಗುಂದಿ ನೇತೃತ್ವದ ಪೆನಲ್‌ನಲ್ಲಿ ಐವರು ಗೆದ್ದರೆ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಪೆನಲ್‌
ನ ಓರ್ವರು ಮಾತ್ರ ಗೆಲುವು ಸಾಧಿ ಸಿದ್ದಾರೆ. ಡಾ| ಶರಣಬಸಪ್ಪ ಹರವಾಳ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಹಾಲಿ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಸಂಸ್ಥೆ ಮಾಜಿ ಕಾರ್ಯದರ್ಶಿ ಆರ್‌.ಎಸ್‌. ಹೊಸಗೌಡ ಹೀನಾಯ ಸೋಲು ಅನುಭವಿಸಿದ್ದಾರೆ.

ಆಡಳಿತ ಮಂಡಳಿ ಸದಸ್ಯರ ಆಯ್ಕೆ-ಪಡೆದ ಮತ:
ಡಾ| ಮಹಾದೇವಪ್ಪ ರಾಂಪೂರೆ 787, ಶರಣಬಸಪ್ಪ ಕಾಮರೆಡ್ಡಿ 688, ಡಾ| ನಾಗೇಂದ್ರ ಮಂಠಾಳೆ 680, ಅರುಣಕುಮಾರ ಎಂ.ಪಾಟೀಲ 649, ಬಸವರಾಜ
ಖಂಡೇರಾವ್‌ 587, ಡಾ| ಕೈಲಾಶ ಬಿ.ಪಾಟೀಲ 581, ವಿನಯ ಪಾಟೀಲ 570, ಸೋಮನಾಥ ನಿಗ್ಗುಡಗಿ 567, ಡಾ| ರಜನೀಶ ವಾಲಿ 544, ಅನಿಲಕುಮಾರ
ಪಟ್ಟಣ 536, ಗಿರಿಜಾ ಶಂಕರ 534, ಡಾ| ಜಗನ್ನಾಥ ಬಿಜಾಪುರ 524 ಹಾಗೂ ಸಾಯಿನಾಥ ಪಾಟೀಲ 516 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಗೆದ್ದ ವೈದ್ಯರು: ಎಚ್‌ಕೆಇ ಪ್ರಸ್ತುತ ಚುನಾವಣೆಯಲ್ಲಿ  ವೈದ್ಯರೇ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಿರುವುದು ವಿಶೇಷವಾಗಿದೆ. ಅಧ್ಯಕ್ಷ ಡಾ| ಭೀಮಾಶಂಕರ
ಬಿಲಗುಂದಿ ಸೇರಿದಂತೆ ಡಾ| ಶರಣಬಸಪ್ಪ ಹರವಾಳ, ಡಾ| ಶರಣಬಸಪ್ಪ ಕಾಮರೆಡ್ಡಿ, ಡಾ| ನಾಗೇಂದ್ರ ಮಂಠಾಳೆ, ಡಾ| ಕೈಲಾಶ ಪಾಟೀಲ, ಡಾ| ರಜನೀಶ ವಾಲಿ, ಡಾ| ಜಗನ್ನಾಥ ಬಿಜಾಪುರ, ಡಾ| ಅನಿಲಕುಮಾರ ಪಟ್ಟಣ, ಡಾ| ಮಹಾದೇವಪ್ಪ ರಾಂಪೂರೆ ಗೆಲುವಿನ ನಗೆ ಬೀರಿದ್ದಾರೆ.

ಚುನಾವಣೆ ಅಧಿಕಾರಿ ಸಿ.ಸಿ. ಪಾಟೀಲ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಡಾ| ಸಿದ್ದರಾಮ ಪಾಟೀಲ ಭೈರಾಮಡಗಿ, ಕೃಷಿ ಜಂಟಿ ನಿರ್ದೇಶಕ
ರತೇಂದ್ರನಾಥ ಸೂಗೂರ ಚುನಾವಣೆ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದರು. ಗೆದ್ದವರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಪಾರದರ್ಶಕ ಆಡಳಿತ, ಅಭಿವೃದ್ಧಿ ನಿಲುವು ಹಾಗೂ ಸಂಸ್ಥೆಯ ಸರ್ವೋತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪಂಚಸೂತ್ರಕ್ಕೆ ಮತದಾರರು ಬೆಂಬಲಿಸಿದ್ದು, ಮತದಾರರಿಗೆ ಅಭಿನಂದಿಸುವೆ. ಚುನಾವಣೆ ವೇಳೆ ಮತದಾರರಿಗೆ ನೀಡಿದ ಭರವಸೆಯಂತೆ ಕಾರ್ಯ ನಿರ್ವಹಿಸುವೆ.
ಡಾ| ಭೀಮಾಶಂಕರ ಬಿಲಗುಂದಿ,
ಅಧ್ಯಕ್ಷ, ಎಚ್‌ಕೆಇ

ಟಾಪ್ ನ್ಯೂಸ್

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

4-uv-fusion

Childhood Times: ಕಳೆದು ಹೋದ ಸಮಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

Bangladeshದಲ್ಲಿ ಇಸ್ಕಾನ್‌ ನಿಷೇಧಿಸಬೇಕು: ಹೈಕೋರ್ಟ್‌ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!

7-sirsi

Monkey disease: ಶೀಘ್ರ ಶಿರಸಿಗೆ‌ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.