ನಾನು ಸದಾ ಇಲ್ಲೇ ಇದ್ದೇನೆ ಗುರುಗಳೇ


Team Udayavani, Mar 2, 2021, 5:35 AM IST

ನಾನು ಸದಾ ಇಲ್ಲೇ ಇದ್ದೇನೆ ಗುರುಗಳೇ

ಕೆಲವು ಸರಳ ಸತ್ಯಗಳನ್ನು ತಿಳಿದು ಕೊಳ್ಳೋಣ: ಸಂಕೀರ್ಣ ಸಂಗತಿಗಳು ಸುಲಭವಾಗಿ ಅರ್ಥವಾಗುತ್ತವೆ. ಹಿಡಿತಕ್ಕೆ ಸಿಗದೆ ಜಾರಿ ಹೋಗುವುದು ಸರಳ ವಾದವುಗಳೇ. ಸರಳ – ಎಷ್ಟು ಸರಳ ಎಂದರೆ, ಮನಸ್ಸು ಅದರ ಮೇಲೆ ಕೆಲಸ ಮಾಡುವುದಕ್ಕಾಗುವುದಿಲ್ಲ. ಈ ಕಥೆ ಕೂಡ ಹಾಗೆಯೇ- ಅರ್ಥ ಮಾಡಿ ಕೊಳ್ಳಲು ಪ್ರಯತ್ನಿಸಬೇಡಿ; ಅನುಭವಿಸಿ.

ಗುರು ಜೋಶುವಾ ಒಂದು ದಿನ ಬೆಳಗ್ಗೆ ಎದ್ದು ಆಶ್ರಮಕ್ಕೆ ಬಂದರು. ಎದು ರಾದ ಒಬ್ಬನನ್ನು ಕುರಿತು, “ನಾನು ನಿನ್ನನ್ನು ಈ ಹಿಂದೆ ನೋಡಿದ್ದೇ ನೆಯೇ’ ಎಂದು ಕೇಳಿ ದರು. ಆತ “ಇಲ್ಲ ಗುರುಗಳೇ. ನಾನು ಇಲ್ಲಿಗೆ ಹೊಸಬ’ ಎಂದು ಉತ್ತರಿಸಿದ. “ಸರಿ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.

ಅಷ್ಟರಲ್ಲಿ ಇನ್ನೊಬ್ಬ ಎದುರಾದ. ಮತ್ತದೇ ಪ್ರಶ್ನೆ, “ನಾನು ನಿನ್ನನ್ನು ಈ ಹಿಂದೆ ನೋಡಿದ್ದೇನೆಯೇ?’ ಆತ, “ಹೌದು ಗುರುಗಳೇ. ನಾನು ಹಲವು ವರ್ಷಗಳಿಂದ ಇಲ್ಲೇ ಇದ್ದೇನೆ’ ಎಂದ. “ಸರಿ ಹಾಗಾದರೆ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.
ಈ ಮಾತುಕತೆ ಕೇಳಿದ ಆಶ್ರಮದ ಒಬ್ಬ ಸಿಬಂದಿಗೆ ವಿಚಿತ್ರ ಎನಿಸಿತು. ಅಪರಿ ಚಿತನ ಜತೆಗೂ ಪರಿಚಿತನ ಜತೆಗೂ ಜೋಶುವಾ ಒಂದೇ ರೀತಿ ಮಾತಾಡಿದ ರಲ್ಲ! ಅಪರಿಚಿತನ ಜತೆಗೆ “ನೀನು ಹೊಸಬ, ಸ್ವಾಗತ. ಚಹಾ ಕುಡಿಯೋಣ’ ಎಂದಿದ್ದರೆ ಸರಿಹೋಗುತ್ತಿತ್ತು; ಇನ್ನೊಬ್ಬ ದಿನವೂ ಸಿಗುವವನಾದ್ದರಿಂದ ಅವನನ್ನು ಚಹಾಕ್ಕೆ ಆಹ್ವಾನಿಸದೆ ಇದ್ದರಾಗುತ್ತಿತ್ತು ಎಂಬುದು ಸಿಬಂದಿಯ ಆಲೋಚನೆ.

ಪರಿಚಯ, ಜತೆಗಿರುವುದು, ಸದರ, ಸಲುಗೆಗಳು ಔದಾಸೀನ್ಯ, ಅಸಡ್ಡೆಗಳನ್ನು ಉಂಟುಮಾಡುತ್ತವೆ. ಸುಪರಿಚಿತವಾದು ದನ್ನು ನಾವು ಗಣನೆಗೆ ತೆಗೆದುಕೊಳ್ಳುವು ದಿಲ್ಲ. ನಾವು ನಮ್ಮ ಪತ್ನಿ ಅಥವಾ ಪತಿಯ ಮುಖವನ್ನು ಸರಿಯಾಗಿ ನೋಡದೆ ವರ್ಷಗಳೇ ಕಳೆದಿರಬಹುದು! ಅವರು ಎಷ್ಟೋ ವರ್ಷಗಳಿಂದ ನಮ್ಮ ಜತೆಗೇ ಇದ್ದಾರಲ್ಲ. ಸುಮ್ಮನೆ ಕಣ್ಣು ಮುಚ್ಚಿ ಅವರ ಮುಖವನ್ನು ಚಿತ್ರಿಸಲು ಪ್ರಯತ್ನಿಸಿ. ಪ್ರಾಯಃ ಮದುವೆಯಾದ ಹೊಸತರ ಮುಖ ಕಣ್ಣೆದುರು ಬರಬಹುದು. ಆದರೆ ಅವರ ಬದುಕು, ದೇಹ ನಿಂತ ನೀರಲ್ಲ. ಈ ಇಷ್ಟು ವರ್ಷಗಳಲ್ಲಿ ಎಷ್ಟೋ ಬದಲಾವಣೆಗಳು ಆಗಿರುತ್ತವೆ. ಅದ್ಯಾ ವುದೂ ನಮ್ಮ ಲಕ್ಷ್ಯಕ್ಕೆ ಬಂದಿರುವುದಿಲ್ಲ.
ಕಡಲ ಕಿನಾರೆಯಲ್ಲಿ ಇಬ್ಬರು ಶ್ರೀಮಂತರು ಮಲಗಿಕೊಂಡು ಸೂರ್ಯ ಸ್ನಾನ ಮಾಡುತ್ತಿದ್ದರು. ಅವರಲ್ಲೊಬ್ಬ ಹೇಳಿದ, “ಆ ಮಾಧುರಿ ದೀಕ್ಷಿತ್‌ ಅಂದರೆ ಜನ ಯಾಕೆ ಅಷ್ಟು ಹುಚ್ಚರಾಗುತ್ತಾರೋ ಗೊತ್ತಿಲ್ಲ. ಏನಿದೆ ಆಕೆಯಲ್ಲಿ? ಕಣ್ಣು, ಮೂಗು, ತುಟಿ,

ಸುಂದರ ನಗು, ದೇಹದ ಉಬ್ಬುತಗ್ಗು- ಇದನ್ನೆಲ್ಲ ತೆಗೆದು ಬಿಟ್ಟರೆ ಉಳಿದದ್ದು ಏನು?’
ಇನ್ನೊಬ್ಬ ಶ್ರೀಮಂತ ದುಃಖದ ಸ್ವರದಲ್ಲಿ ಹೇಳಿದ, “ನನ್ನ ಹೆಂಡತಿ, ಉಳಿದದ್ದು ನನ್ನ ಹೆಂಡತಿ…’
ನಮ್ಮ ನಮ್ಮ ಪತಿಯಾ ಪತ್ನಿಯ ವಿಚಾರದ ಲ್ಲಿಯೂ ಇದು ನಿಜ. ಹಲವು ವರ್ಷಗಳ ಜತೆ ವಾಸ, ಸಲುಗೆ, ಸದರ ಗಳಿಂದ ಈಗ ಉಳಿದಿ ರುವುದು ಏನೂ ಇಲ್ಲ! ಆದರೆ ಇದು ಸದಾ ಹೀಗೆ ಇರಲಿಲ್ಲ. ನಾವು ಆತ ಅಥವಾ ಆಕೆಯನ್ನು ಒಂದು ಕಾಲದಲ್ಲಿ ಬಹಳ ಪ್ರೀತಿಸಿದ್ದೆವು. ಅವರ ಜತೆಗೆ ಕಳೆಯುವ ಒಂದೊಂದು ಕ್ಷಣಕ್ಕೂ ಕಾತರಿಸಿದ್ದೆವು. ಆದರೆ ಆ ಕ್ಷಣ ಈಗಿಲ್ಲ.
ಈ ನಗಣ್ಯ, ನಿರ್ಲಕ್ಷ್ಯಗಳನ್ನು ಕಳೆಯ ಲೆಂದೇ ಜೋಶುವಾ ಇಬ್ಬರಿಗೂ ಒಂದೇ ರೀತಿ ಉತ್ತರಿಸಿದ್ದು.

ಈಗ ಮತ್ತೆ ಮೂಲ ಕಥೆಗೆ ಮರಳ್ಳೋಣ. ಸಿಬಂದಿ ತನ್ನ ಅಚ್ಚರಿ ಯನ್ನು ಜೋಶುವಾ ಬಳಿ ಹೇಳಿಕೊಂಡ. ತತ್‌ಕ್ಷಣ ಜೋಶುವಾ ದೊಡ್ಡ ಸ್ವರದಲ್ಲಿ ಆತನ ಹೆಸರು ಹಿಡಿದು ಕೂಗಿದರು, “ನೀನು ಇಲ್ಲಿದ್ದೀಯಾ?’

“ಹೌದು ಗುರುಗಳೇ ಇಲ್ಲೇ ಇದ್ದೇನೆ’ ಎಂದ ಸಿಬಂದಿ. “ಸರಿ, ಚಹಾ ಕುಡಿ ಯೋಣ ಬಾ’ ಎಂದರು ಜೋಶುವಾ.
ಹೆಸರು ಹಿಡಿದು ಕರೆಯುವುದು ಎಂದರೆ ಆಯಾ ವ್ಯಕ್ತಿಯ ಅರಿವನ್ನು ಎಚ್ಚರಿಸುವುದು. ಅರಿವು ಯಾವಾಗಲೂ ಹೊಸತು. ದೇಹ ಪರಿಚಿತವಾಗುತ್ತದೆ, ಆದರೆ ಆತ್ಮವಲ್ಲ. ಸಿಬಂದಿಯ ಹೆಸರು ಹಿಡಿದು ಕರೆದಾಗ ಪ್ರತಿಕ್ರಿಯಿಸಿದ್ದು ಅವನ ಅರಿವು; ಮನಸ್ಸಲ್ಲ.
ಜೋಶುವಾಗೆ ಎಲ್ಲವೂ ಹೊಸತು, ವಿಸ್ಮಯ. ಪ್ರತೀ ಕ್ಷಣವೂ ನಿತ್ಯನೂತನ. ಹಾಗಾಗಿ ಅಸಡ್ಡೆ ಎಂಬುದು ಇಲ್ಲ. ನಾವು ಕೂಡ ನಮ್ಮ ಕಿವಿ, ಕಣ್ಣು, ಮೂಗು ಇತ್ಯಾದಿ ಮುಚ್ಚಿಕೊಂಡು ಬದುಕುವು ದನ್ನು ಬಿಟ್ಟು ಪ್ರತೀ ಕ್ಷಣವನ್ನೂ ಪ್ರತಿ ಯೊಂದನ್ನೂ ಹೊಸತು ಎಂಬಂತೆ ಬೆರಗಿನಿಂದ ಕಾಣಲು ಕಲಿಯೋಣ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.