ಸೆಲೆಬ್ರಿಟಿಗಳಿಗೆ ದಾಸನ ಕಿವಿಮಾತು

ರಾಬರ್ಟ್‌ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌

Team Udayavani, Mar 2, 2021, 11:14 AM IST

ಸೆಲೆಬ್ರಿಟಿಗಳಿಗೆ ದಾಸನ ಕಿವಿಮಾತು

ಸಾಮಾನ್ಯವಾಗಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ವೇದಿಕೆಗಳಲ್ಲಿ ಅಭಿಮಾನಿಗಳ ಮುಂದೆ ನೇರವಾಗಿ ಮಾತಿಗೆ ಸಿಗೋದು ಅಪರೂಪ.

ಹೀಗೆ ಮಾತಿಗೆ ಸಿಗುವ ಸಂದರ್ಭ ಬಂದರಂತೂ ದರ್ಶನ್‌, ತಮ್ಮ ಮನಸ್ಸಿನಲ್ಲಿರುವ ಒಂದಷ್ಟು ವಿಷಯಗಳನ್ನು ಅಭಿಮಾನಿಗಳ ಮುಂದೆ ನೇರವಾಗಿ ತೆರೆದಿಡುತ್ತಾರೆ. ಸದ್ಯ ತಮ್ಮ ಬಹುನಿರೀಕ್ಷಿತ “ರಾಬರ್ಟ್‌’ ಚಿತ್ರದ ಬಿಡುಗಡೆಗೂ ಮುನ್ನ, ಹುಬ್ಬಳ್ಳಿಯಲ್ಲಿ ನಡೆದ “ರಾಬರ್ಟ್‌’ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ದರ್ಶನ್‌, ತಮ್ಮ ಸೆಲೆಬ್ರಿಟಿ (ಅಭಿಮಾನಿ)ಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

ಕಾರ್‌ ಓಡಿಸುತ್ತಿರುವಾಗ ದಯವಿಟ್ಟು ಅಕ್ಕ-ಪಕ್ಕ ಬರ್ಬೇಡಿ  :

“ಸೆಲೆಬ್ರಿಟಿ (ಅಭಿಮಾನಿ)ಗಳಿಗೆ ಒಂದು ಮಾತು ಹೇಳುತ್ತೇನೆ. ಅಭಿಮಾನಿಗಳಿಗೆ ನಾನು ಬೈದಿದ್ದೀನಿ. ತಲೆಮೇಲೆ ಹೊಡೆದಿದ್ದೀನಿ. ಇವತ್ತುಕರ್ನಾಟಕದಾದ್ಯಂತ ಇರುವ ಅಭಿಮಾನಿಗಳಿಗೆ ಈ ಸಂದೇಶ ಹೋಗಲಿ ಎಂದು ಹೇಳುತ್ತಿದ್ದೀನಿ.ದಯಮಾಡಿ ನಾನು ಕಾರು ಓಡಿಸುವಾಗ ನನ್ನ ಅಕ್ಕ-ಪಕ್ಕ ಬೈಕ್‌ನಲ್ಲಿ ಬರಬೇಡಿ. ನಿಮ್ಮ ಪಾದಾರವಿಂದಗಳಿಗೆ ನಾನುಕೇಳಿಕೊಳ್ಳುತ್ತಿದ್ದೇನೆ. ಯಾಕಾಗಿ ಹೇಳ್ತಿದ್ದೇನೆ ಅಂದ್ರೆ, ನೀವು ಮೊಬೈಲ್‌ ಇಟ್ಟುಕೊಂಡು ಬರೋದು, ಒಂದು ಫೋಟೋ, ಲೈಕ್ಸ್‌, ಕಾಮೆಂಟ್ಸ್‌ ಇಂದ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು 110 – 120 ಕಿ.ಮೀ ಸ್ಪೀಡ್‌ನ‌ಲ್ಲಿ ಹೋಗುತ್ತಿರುತ್ತೇವೆ.

ಪಕ್ಕದಲ್ಲಿ ನೀವು ಬೈಕ್‌ನಲ್ಲಿ ಬರ್ತೀರಾ, ದಯವಿಟ್ಟು ಯೋಚನೆ ಮಾಡಿ. ಬದುಕಿದ್ರೆ ಮತ್ತೂಮ್ಮೆ ನನ್ನನ್ನು ನೋಡುತ್ತೀರಾ. ನನ್ನ ಕಥೆಹಾಳಾಗಿ ಹೋಗಲಿ. ನೀವು ನನ್ನನ್ನು ನೋಡದೆ ಇದ್ರುಪರವಾಗಿಲ್ಲ. ಮನೆಯಲ್ಲಿ ನಿಮ್ಮನ್ನು ನಂಬಿಕೊಂಡವಯಸ್ಸಾದ ತಂದೆ-ತಾಯಿ, ಕುಟುಂಬದವರು ಇರುತ್ತಾರೆ ನಿಮಗೇನಾದ್ರು ಹೆಚ್ಚು ಕಮ್ಮಿ ಆದರೆ ಅವರಗತಿ ಏನು? ಏನಾದರು ಆದರೆ ನಿಮ್ಮ ಮನೆಯವರುಸಾಯೋವರೆಗೂ ನನ್ನನ್ನು ದೂಷಿಸುತ್ತಾರೆ. ಅದುನಿಮಗೆ ಇಷ್ಟಾನಾ. ನಾನು ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೆ ದಯಮಾಡಿ ಅಕ್ಕ-ಪಕ್ಕದಲ್ಲಿ ಬರಬೇಡಿ. ಬದುಕಿದ್ರೆ ನಿನ್ನೊಂದು ಸಾರಿ ನನ್ನನ್ನು ನೋಡುತ್ತೀರಿ. ದಯಮಾಡಿ ಇದನ್ನು ಕೇಳಿಸಿಕೊಳ್ಳಿ. ಹೀಗೆ ಹೇಳಿದೆ ಅಂತ ಬೇಸರ ಮಾಡಿಕೊಳ್ಳಬೇಡಿ’

ಕಲಾವಿದರು ಯಾವ ಜಾತಿಗೋಸ್ಕರ ಹುಟ್ಟಿಲ್ಲ… :

“ಕಲಾವಿದರು, ಕಲಾವಿದರ ಕುಟುಂಬ ಒಂದೆ. ನಮಗೆ ಜಾತಿ ಇಲ್ಲ, ಮತ ಇಲ್ಲ ಇನ್ನೊಂದು ಇಲ್ಲ. ನಾವು ಯಾರೂ ಯಾವ ಜಾತಿಗೋಸ್ಕರ ಹುಟ್ಟಿಲ್ಲ. ಇಲ್ಲಿ ಲಿಂಗಾಯತರು, ಗೌಡ್ರು, ಕುರುಬರು, ಮುಸ್ಲಿಮ್‌ ಬಾಂಧವರು ಎಲ್ಲರೂ ಇದ್ದಾರೆ. ಇಷ್ಟು ಜನ ಹಾಕಿದ ಕೂಳಿದಿಂದ ಈ ದೇಹ ಇರೋದು. ನಾವು ಯಾರೋ ಒಬ್ಬರ ಸ್ವತ್ತು ಅಲ್ಲ. ಯಾವ ಜಾತಿಗೂ ನಾವು ಸೀಮಿತ ಇಲ್ಲ. ಮನುಷ್ಯ ಸತ್ತಾಗ ಅವರ ಮನೆಯಲ್ಲಿ ಹೀಗೆ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಇದೆ. ಆದರೆ, ನಮಗಿಲ್ಲ. ಅಭಿಮಾನಿಗಳೇ ನಮಗೆಲ್ಲ, ನಮ್ಮ ಸೆಲೆಬ್ರಿಟಿಗಳೇ ನಮಗೆ ಇಷ್ಟೆ ನಮ್ಮ ಜಾತಿ’

ಚಪ್ಪಲಿ ಬಿಟ್ಟು ಮಾತನಾಡಿದ್ರೆ  ನಮಗೂ ಸ್ವಲ್ಪ ಮರ್ಯಾದೆ ಇರುತ್ತೆ :

ಯಾವ ಕಾರ್ಯಕ್ರಮದಲ್ಲೂ ಚಪ್ಪಲಿ  ಬಿಟ್ಟು ಮಾತಾನಾಡಲ್ಲ ಆದರೆ   ಕರ್ನಾಟಕಕ್ಕೆ ಬಂದು ಚಪ್ಪಲಿ ಬಿಟ್ಟು ಮಾತನಾಡಿದ್ರೆ  ನಮಗೂ ಸ್ವಲ್ಪ ಮರ್ಯಾದೆ ಇರುತ್ತೆ. ನಾವು “ಸಂಗೊಳ್ಳಿ ರಾಯಣ್ಣ’ ಸಿನಿಮಾ ಸಮಯದಲ್ಲಿ ವಿಜಯ ಯಾತ್ರೆ ಮಾಡಿದ್ವಿ. ಎಲ್ಲಾ ಕಡೆ ಬೆಂಬಲ ಕೊಟ್ರಾ, ಸಿನಿಮಾನ ಒಂದು ವರ್ಷ ಓಡಿಸಿದ್ರು. ವಿಜಯ ಯಾತ್ರೆ ಹೋದಾಗ ಪ್ರತಿ ಹಳ್ಳಿಗೂ ಹೋಗಬೇಕಾದ್ರೆ ಪ್ರತಿ

ಹೆಣ್ಣುಮಕ್ಕಳು, ತಲೆ ಮೇಲೆ ಸೆರಗು, ಹಾಕಿ ಚಪ್ಪಲಿ ಬಿಟ್ಟು ಕೈಮುಗಿಯುತ್ತಿದ್ದರು. ನಾವು ಚಪ್ಪಲಿ ಬಿಟ್ಟು ನಿಮಗೆ ಚಪ್ಪಲಿ ಹಾಕಬೇಕು ಅವತ್ತು ಅಂದುಕೊಂಡೆ, ಇದಕ್ಕೆ ನಾವು ಲಾಯಕ್‌ ಇದಿವಾ ಅಂತ. ನಿಜವಾಗಲೂ ಲಾಯಕ್‌ ಇಲ್ಲ ಸ್ವಾಮಿ. ಇವತ್ತು ನಾವು ಚಪ್ಪಲಿ ಬಿಟ್ಟು ನಿಮ್ಮ ಪಾದಗಳಿಗೆ ನಾವು ಚಪ್ಪಲಿ ಹಾಕಬೇಕು ಅಷ್ಟೆ. ಉತ್ತರ ಕರ್ನಾಟಕ ಜನ ನಮಗೆ ಕೊಡುವ ಗೌರವ, ಕಲಾವಿದರಿಗೆ ತೋರಿಸುವ ಪ್ರೀತಿ ಅಷ್ಟಿದೆ.

ಮೈಸೂರಿನ ಮನೆ ಕಟ್ಟಿಸಿದ್ದು ಉತ್ತರ ಕರ್ನಾಟಕ ಜನರ ದುಡ್ಡಿಂದ :

“ನಮ್ಮ ಅಪ್ಪನಿಗೆ ಒಂದು ವರ್ಷ ಕೆಲಸ ಇರಲಿಲ್ಲ. ಆಗ ಏನು ಮಾಡಬೇಕು ಅಂತ ಯೋಚಿಸಿದ್ರು ಸಹ ಏನು ಆಗಿಲ್ಲ. ದಿವ್ಯ ದರ್ಶನ್‌ ಕಲಾವೃಂದಎನ್ನುವ ನಾಟಕ ಕಂಪನಿ ಇತ್ತು. ಸಿನಿಮಾದವರು ಅಂತೂ ಕರಿತಿಲ್ಲ, ಹಾಗಾಗಿ ನಾಟಕಮಾಡೋಣ ಎಂದು ಉತ್ತರ ಕರ್ನಾಟಕ ಕಡೆ ಹೊರಟರು. ನಾಟಕ ಮಾಡುವಾಗ ಉತ್ತರ ಕರ್ನಾಟಕ ಜನರು 5, 2.50, 10 ರೂ. ನೀಡಿದ್ದಾರೆ. ಸುಮಾರು 6 ತಿಂಗಳು ದುಡಿದ್ದಾರೆ. 6 ತಿಂಗಳು ದುಡಿದ ದುಡ್ಡಿಲ್ಲಿಮೈಸೂರು ಮನೆ ಕಟ್ಟಿದ್ದೇವೆ. ಮೈಸೂರು ಮನೆ ಉತ್ತರ ಕರ್ನಾಟಕ ಜನ ಕೊಟ್ಟ ಮನೆ.ಆದ್ದರಿಂದ ಇಡೀ ಉತ್ತರ ಕರ್ನಾಟಕಕ್ಕೆ ಧನ್ಯವಾದ ಹೇಳುತ್ತೇನೆ. ನಿಮ್ಮ ಋಣ ನಮ್ಮ ಮೇಲಿದೆ, ನಮ್ಮ ಕುಟುಂಬದ ಮೇಲಿದೆ’.

ಟಾಪ್ ನ್ಯೂಸ್

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

Terror 2

Pakistan;ಬಲೂಚಿಸ್ಥಾನದಲ್ಲಿ ಉಗ್ರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಮುಂದಾದ ಪಾಕ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

1-eeqweqweqwe

India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ

court

Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ

Ram Charan: ಅಯ್ಯಪ್ಪನ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟ ರಾಮ್ ಚರಣ್; ಭಾರೀ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Bagheera OTT Release: ಭರ್ಜರಿ ಸಕ್ಸಸ್‌ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

Sandalwood: ಸಂತು ಡಬಲ್‌ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್‌ ಬ್ರದರ್‌!

Sandalwood: ಸಂತು ಡಬಲ್‌ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್‌ ಬ್ರದರ್‌!

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

Road Mishap: ತೆಕ್ಕಟ್ಟೆ: ಇನ್ನೋವಾ, ಮೀನಿನ ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಗಂಭೀರ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

police crime

UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ

10-uv-fusion

UV Fusion: ಬದುಕಿನಲ್ಲಿ ಭರವಸೆಗಳಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.