ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ


Team Udayavani, Mar 2, 2021, 1:35 PM IST

ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ

ಸವಣೂರ: ಇತರರಿಗೆ ಆದರ್ಶಪ್ರಾಯರಾಗಿ ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ ಎಂದು ಗೃಹ, ಕಾನೂನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ದೊಡ್ಡ ಹುಣಸೇ ಕಲ್ಮಠದ ಆವರಣದಲ್ಲಿ ಲಿಂ| ಶ್ರೀಗುರು ರಾಚೋಟೇಶ್ವರ ಮಹಾಸ್ವಾಮಿಗಳ 44ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದಶರಣ ಸಂಸ್ಕೃತಿ ಸಮಾರಂಭ ಹಾಗೂ ಕಲ್ಪವೃಕ್ಷಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಗರ್ಭದಲ್ಲಿ ಜೀವಕ್ಕೆ ಆತ್ಮಸಾಕ್ಷಿ ಎಂಬ ಸಂಸ್ಕಾರ ಸಿಕ್ಕರೆ, ಜೀವ ಭೂಗರ್ಭ ಪ್ರವೇಶಿಸಿದೊಡನೆ ಇನ್ನೊಂದು ಬಗೆಯ ಮಾರ್ಗದತ್ತ ಬದುಕು ಮನುಷ್ಯನನ್ನು ಕೊಂಡೊಯ್ಯುತ್ತದೆ. ನಮ್ಮ ಅಂತರಂಗದ ಆತ್ಮಸಾಕ್ಷಿಜೀವಾತ್ಮವಾಗಿದೆ. ಆತ್ಮಸಾಕ್ಷಿ ಎದುರು ಸತ್ಯವಷ್ಟೇ ನಡೆಯುತ್ತದೆ. ನಾವು ಎಲ್ಲರಿಗೂ ಮಿಥ್ಯ ಹೇಳಬಹುದು.ಆದರೆ, ಆತ್ಮಸಾಕ್ಷಿಗೆ ಮಿಥ್ಯ ಹೇಳಲು ಸಾಧ್ಯವಿಲ್ಲ ಎಂದರು.

ದೇವರು ನಮ್ಮೆಲ್ಲರ ಅಂತರಂಗದಲ್ಲಿದ್ದಾನೆ. ಜೀವಾತ್ಮ ಪರಮಾತ್ಮನ ಒಂದು ಅಂಗವಾಗಿದೆ. ತಾಯಿಗರ್ಭದಲ್ಲಿಯೇ ಮನುಷ್ಯ ಜೀವನದ ಪ್ರತಿಯೊಂದು ಭವಿಷ್ಯವೂ ನಿರ್ಧರಿತವಾಗುತ್ತದೆ. ಭೂಮಿಗೆ ಬಂದ ನಂತರ ಬದುಕು ಕೇವಲ ಅದರ ಪರಿಣಾಮವಾಗಿದೆ. ನಮ್ಮದು ಹೋರಾಟದ ಬದುಕಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.

ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊಳೆಮಠ ಬನವಾಸಿಯ ನಾಗಭೂಷಣ ಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಶ್ರೀಮಠದ ಚನ್ನಬಸವಸ್ವಾಮೀಜಿ ನೇತೃತ್ವ ವಹಿಸಿದ್ದರು. ಗೊಟಗೋಡಿ ಜಾನಪದವಿವಿಯ ಸಹಾಯಕ ಪ್ರಾಧ್ಯಾಪಕ ಡಾ|ರಾಜಶೇಖರ ಡೊಂಬರ ಮತ್ತೂರ ಉಪನ್ಯಾಸ ನೀಡಿದರು.ಸೃಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಾದ ಕು|ಮನುಶ್ರೀ ಯಲಿಗಾರ ಹಾಗೂ ಸಂಗಡಿಗರಿಂದ ವಚನ ನೃತ್ಯ ಪ್ರದರ್ಶನ ನಡೆಯಿತು. ಕು|ಪೃಥ್ವಿ ಶಿರೂರಅವರಿಂದ ವೀರಗಾಸೆ ನೃತ್ಯ ಪ್ರದರ್ಶನ ನಡೆಯಿತು. ಚಿಕ್ಕಮಣಕಟ್ಟಿ ಜೋಡಿ ಬಸವೇಶ್ವರ ಜಾನಪದ ಕಲಾ ತಂಡದವರು ಜಾನಪದ ಸಂಗೀತದ ರಸದೌತಣ ಉಣಬಡಿಸಿದರು. ಯಲವಿಗಿ ಪರಮೇಶ್ವರ ಗವಾಯಿಗಳು ಸಂಗೀತ ಸೇವೆ ನೀಡಿದರು.

ಬೆಂಗಳೂರಿನ ಹೃದಯಸ್ಪರ್ಷ ಎಜುಕೇಶನ್‌ ಟ್ರಸ್ಟ್‌ನ ಸುರೇಶ, ಬೆಂಗಳೂರಿನ ಸಮಾಜ ಸೇವಕಿ ವಿಜಯಲಕ್ಷ್ಮೀ ಎ., ಬೆಂಗಳೂರಿನ ಡಾ| ಹರಿಪ್ರಸಾದ, ತಹಶೀಲ್ದಾರ್‌ ಸಿ.ಎಸ್‌. ಭಂಗಿ, ಹಿರಿಯ ಮುಖಂಡ ಸಿ.ಎಂ ಬೆಣ್ಣಿ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರವೀಣ ಚರಂತಿಮಠ, ಕರವೇ ಅಧ್ಯಕ್ಷ ಪರಶುರಾಮ ಈಳಗೇರ ಹಾಗೂ ರಾಮಣ್ಣ ಅಗಸರ ಸೇರಿದಂತೆ ಇತರರನ್ನು ಶ್ರೀಮಠದಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹಾಗೂ ತೆಗ್ಗಿಹಳ್ಳಿ ಗ್ರಾಪಂ ಸದಸ್ಯ ರಸೂಲ್‌ಸಾಬ್‌ ಗುಂಡೂರ ದಾಸೋಹ ಸೇವೆ ಕೈಗೊಂಡರು. ಪ್ರಾಚಾರ್ಯ ಆರ್‌.ಎನ್‌.ತೊಂಡೂರ, ಡಿ.ಎಫ್‌. ಬಿಂದಲಗಿ ಸ್ವಾಗತಿಸಿ, ನಿರ್ವಹಿಸಿದರು.

ಮನುಷ್ಯ ನಿರ್ಮಿತ ಕಾನೂನು ಹಾಗೂ ದೇವರ ಕಾನೂನು ಪರಸ್ಪರ ಸನಿಹಕ್ಕೆ ಬಂದಾಗ ಪ್ರಪಂಚ ಸ್ವರ್ಗವಾಗಲಿದೆ. ಮನುಷ್ಯ ಮಾಡಿದ ಕಾನೂನಿನಲ್ಲಿ ಅಪರಾಧಕ್ಕನುಗುಣವಾಗಿ ಶಿಕ್ಷೆ ಇದೆ. ನಿಸರ್ಗ ಮತ್ತು ದೇವರ ಕಾನೂನಿನಂತೆ ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಪುಣ್ಯ ಪ್ರಾಪ್ತಿಯಾಗಲಿದೆ. – ಬಸವರಾಜ ಬೊಮ್ಮಾಯಿ, ಗೃಹ ಸಚಿವರು

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.