ರೆಡ್ ಮಿ ಡಿಸ್ಪ್ಲೇ 27 ಇಂಚಿನ ಮಾನಿಟರ್ : ವಿಶೇಷತೆಗಳೇನು..?
Team Udayavani, Mar 2, 2021, 2:28 PM IST
ರೆಡ್ ಮಿ ಡಿಸ್ಪ್ಲೇ 27 ಇಂಚಿನ ಮಾನಿಟರ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ರೆಡ್ ಮಿ ಡಿಸ್ಪ್ಲೇ 1 ಎ ನಂತರ ಶಿಯೋಮಿ ಸಬ್ ಬ್ರಾಂಡ್ ನ ಶ್ರೇಣಿಯಲ್ಲಿ ಎರಡನೇ ಮಾನಿಟರ್ ಆಗಿದೆ. ಹೊಸ ಬಜೆಟ್ ಮಾನಿಟರ್ ಪೂರ್ಣ-ಎಚ್ ಡಿ ರೆಸಲ್ಯೂಶನ್, ಮೂರು ಬದಿಗಳಲ್ಲಿ ಸ್ಲಿಮ್ ಬೆಜೆಲ್ ಜೊತೆ ಬರುತ್ತದೆ. ಮಾನಿಟರ್ ಅನ್ನು ಒಂದೇ ಕಪ್ಪು ಬಣ್ಣದ ಆಯ್ಕೆಯಲ್ಲಿ ನೀಡಲಾಗುತ್ತದೆ ಮತ್ತು ನಯವಾದ ಫಾರ್ಮ್ ಫ್ಯಾಕ್ಟರ್ ಹೊಂದಿದೆ.
ಹೊಸ ರೆಡ್ ಮಿ ಡಿಸ್ಪ್ಲೇ ಹೆಚ್ಚು ನಿಖರವಾದ ಬಣ್ಣಗಳಿಗಾಗಿ ಐಪಿಎಸ್ ಫಲಕವನ್ನು ಹೊಂದಿದೆ ಮತ್ತು ಕಂಪನಿಯು ಎಸ್ ಆರ್ ಜಿ ಬಿ ಬಣ್ಣದ ಜಾಗದ 100 ಪ್ರತಿಶತ ವ್ಯಾಪ್ತಿಯನ್ನು ಹೊಂದಿದೆ.
ರೆಡ್ ಮಿ ಡಿಸ್ಪ್ಲೇ 27 ಇಂಚಿನ ಬೆಲೆ..?
ರೆಡ್ ಮಿ ಡಿಸ್ಪ್ಲೇ 27-ಇಂಚಿನ ಬೆಲೆ ಸಿ ಎನ್ ವೈ 799 (ಸರಿಸುಮಾರು ರೂ. 9,100) ಮತ್ತು ಪ್ರಸ್ತುತ ಜೆಡಿ ಡಾಟ್ ಕಾಮ್ ಮತ್ತು ಶಿಯೋಮಿಯೌಪಿನ್ ನಲ್ಲಿ ಪೂರ್ವ ಮಾರಾಟಕ್ಕಾಗಿ ಸಿದ್ಧವಾಗಿದೆ. ಮಾನಿಟರ್ ದೇಶದಲ್ಲಿ ಮಾರ್ಚ್ 9 ರಿಂದ ಸಾಗಾಟವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಇನ್ನು, ಈವರೆಗೆ ಶಿಯೋಮಿ ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ವಿವರಗಳನ್ನು ಹಂಚಿಕೊಂಡಿಲ್ಲ.
ರೆಡ್ ಮಿ ಡಿಸ್ಪ್ಲೇ 27 ಇಂಚಿನ ವಿಶೇಷತೆಗಳೇನು..?
ರೆಡ್ ಮಿಯ ಹೊಸ ಡಿಸ್ಪ್ಲೇ ಮಾನಿಟರ್ 27 ಇಂಚಿನ ಫುಲ್ ಎಚ್ ಡಿ (1,920×1,080 ಪಿಕ್ಸೆಲ್‌ಗಳು) ಐಪಿಎಸ್ ಸ್ಕ್ರೀನ್ ಹೊಂದಿದ್ದು, ಮೇಲ್ಭಾಗ ಮತ್ತು ಬದಿಗಳಲ್ಲಿ ಸ್ಲಿಮ್ ಬೆಜೆಲ್‌ಗಳನ್ನು ಹೊಂದಿದೆ. ಮಾನಿಟರ್ 75Hz ಗರಿಷ್ಠ ರಿಫ್ರೆಶ್ ದರ, 16:9 ಅನುಪಾತ, 6 ಎಂ ಎಸ್ ಜಿಟಿಜಿ ರೆಸ್ಪಾನ್ಸ್ ಟೈಮ್ ಮತ್ತು 10,00,000: 1 ಕಾಂಟ್ರಾಸ್ಟ್ ಅನುಪಾತದೊಂದಿಗೆ ಬರುತ್ತದೆ. ಹಾಗೂ ಇದು 300 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ನ್ನು ಹೊಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.