ಸೂರ್ಯ ನಮಸ್ಕಾರದ ಹಲವು ಉಪಯೋಗ
Team Udayavani, Mar 2, 2021, 5:45 PM IST
ಈ ಲೋಕಕ್ಕೆ ಬೆಳಕನ್ನೂ, ಆ ಬೆಳಕಿನ ಮೂಲಕವೇ ಆರೋಗ್ಯ ದಯಪಾಲಿಸುತ್ತಿರುವ ಸೂರ್ಯದೇವನಿಗೆ ನಮಸ್ಕರಿಸುವ ರೀತಿಯಲ್ಲಿ ಮಾಡುವ ಆಸನವೇ- ಸೂರ್ಯ ನಮಸ್ಕಾರ. ಈ ಆಸನವನ್ನು ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ಮಾಡಲಾಗುತ್ತದೆ. ಖಾಲಿಹೊಟ್ಟೆಯಲ್ಲಿ ಇರುವ ಯಾವುದೇ ಸಮಯದಲ್ಲಿ ಈ ಆಸನ ಮಾಡಿದರೂ ಪರಿಣಾಮಕಾರಿ.
ಸೂರ್ಯ ನಮಸ್ಕಾರವನ್ನು ಒಂದು ಚಾಪೆ ಅಥವಾ ಜಮಖಾನ ಹಾಸಿಕೊಂಡು ಮಾಡುವುದು ಒಳಿತು. ಕಾರಣ, ಈ ಆಸನ ಮಾಡುವಾಗ ಕೈ ಮತ್ತು ಕಾಲುಗಳನ್ನು ಮೇಲೆ, ಕೆಳಗೆ ಮತ್ತು ಆಚೀಚೆಗೆ ಚಾಚುತ್ತಾ ಇರಬೇಕಾಗುತ್ತದೆ. ಮೂಗು ಮತ್ತು ಮಂಡಿಯ ಭಾಗ ಕೆಲವೊಮ್ಮೆ ನೆಲಕ್ಕೆ ತಾಕುತ್ತದೆ.
ಬರಿನೆಲದ ಮೇಲೆ ಈ ಆಸನ ಮಾಡಲು ಹೋದರೆ ಆಕಸ್ಮಿಕವಾಗಿ ಬಿದ್ದು ಗಾಯವೂ ಆಗಿಬಿಡುವ ಸಾಧ್ಯತೆ ಇರುತ್ತದೆ. 12 ರೀತಿಯಲ್ಲಿ ಸೂರ್ಯನಮಸ್ಕಾರದ ಭಂಗಿಗಳನ್ನು ಮಾಡಬಹುದು ಎಂದು ಯೋಗತಜ್ಞರು ಹೇಳುವುದುಂಟು. ಆರಂಭದ ದಿನಗಳಲ್ಲಿ 10 ನಿಮಿಷ ಸೂರ್ಯ ನಮಸ್ಕಾರ ಮಾಡಿದರೆ ಸಾಕು. ವಾರದ ನಂತರ ಈ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು.
ಈ ಆಸನ ಮಾಡುವುದರಿಂದ ಇರುವ ಅನುಕೂಲಗಳು ಹಲವು?: ಮುಖ್ಯವಾಗಿ, ಕೈ ಮತ್ತು ಕಾಲಿನ ಸ್ನಾಯುಗಳು ಬಲಿಷ್ಠವಾಗುತ್ತವೆ.ಅಷ್ಟೇ ಅಲ್ಲ, ಈ ಆಸನ ಮಾಡುವುದರಿಂದ ಒತ್ತಡ ಕಡಿಮೆ ಮಾಡಬಹುದು. ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.