ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್ ಕೋರ್ಸ್
ಆನ್‌ಲೈನ್- ನೇರ ತರಗತಿ ವಿದ್ಯಾರ್ಥಿಗಳ ನಡುವೆ ಅಸಮತೋಲನ
Team Udayavani, Mar 3, 2021, 6:50 AM IST
ಬೆಂಗಳೂರು: ಆನ್‌ಲೈನ್ ಮತ್ತು ನೇರ ತರಗತಿಗಳಿಂದಾಗಿ ಸೃಷ್ಟಿಯಾಗಿರುವ ಕಲಿಕಾ ಅಂತರ ಸರಿದೂಗಿಸಲು ಮತ್ತು ಶಾಲಾ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಬ್ರಿಡ್ಜ್ ಕೋರ್ಸ್ ನಡೆಸಲು ನಿರ್ಧರಿಸಿದೆ.
ನಿತ್ಯ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪಠ್ಯ ವಿಷಯ ಹೆಚ್ಚು ಬೋಧನೆ ಮಾಡಲಾಗುತ್ತಿದೆ ಮತ್ತು ಸಮರ್ಪಕ ಕಲಿಕೆಗೆ ಇದರಿಂದ ಅನುಕೂಲ ವಾಗುತ್ತಿದೆ. ಆದರೆ ಆನ್‌ಲೈನ್ ಮತ್ತು ಪೂರ್ವಮುದ್ರಿತ ವೀಡಿಯೋ ತರಗತಿಗಳಲ್ಲಿ ಕಲಿಕೆ ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಸಮಗ್ರತೆ ಸಿಗುತ್ತಿಲ್ಲ.
ಇದರಿಂದ ಈ ಎರಡು ವಿಧಾನಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಂತರ ಸೃಷ್ಟಿಯಾಗಿದೆ. ಇದನ್ನು ಸರಿದೂಗಿಸಲು ಬ್ರಿಡ್ಜ್ ಕೋರ್ಸ್ ನಡೆಸಲಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
ಸಮಗ್ರ ಶಿಕ್ಷಣದ ಮೂಲಕ ಬ್ರಿಡ್ಜ್ ಕೋರ್ಸ್
ಕೇರಳ, ಮಹಾರಾಷ್ಟ್ರದ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿನಾ ಬೇರೆಲ್ಲ ಕಡೆ 6ರಿಂದ 10ನೇ ತರಗತಿಗಳು ಆರಂಭವಾಗಿವೆ. ಪರೀಕ್ಷೆ ಮತ್ತು ಮೌಲ್ಯ ಮಾಪನವೂ ಆರಂಭವಾಗಿದೆ. ಉಳಿದ 1ರಿಂದ 5ನೇ ವರೆಗಿನ ತರಗತಿಗಳ ಆರಂಭದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಕಲಿಕಾ ಅಂತರ ಗುರುತಿಸುವ ಕಾರ್ಯ ಮೌಲ್ಯಮಾಪನ ಮತ್ತು ಘಟಕ ಪರೀಕ್ಷೆಗಳಲ್ಲಿ ನಡೆಯಲಿದ್ದು, ಅದರ ಆಧಾರದಲ್ಲಿ ಬ್ರಿಡ್ಜ್ ಕೋರ್ಸ್ ನೀಡಲಿದ್ದೇವೆ. ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ -ಕರ್ನಾಟಕ ಇದರ ರಾಜ್ಯ ಯೋಜನಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಪಠ್ಯಕ್ರಮ ಸಿದ್ಧಪಡಿಸಲಾಗುತ್ತದೆ. ಕಲಿಕಾ ಅಂತರ ಎಷ್ಟಿದೆ ಮತ್ತು ಯಾವ ಪಠ್ಯಗಳು ಅಗತ್ಯವಿವೆ ಎಂಬುದನ್ನು ಗಮನಿಸಲಾಗುತ್ತದೆ. ಭಾಷಾ ವಿಷಯವಾಗಿ ವ್ಯಾಕರಣ; ಇಂಗ್ಲಿಷ್ ಮತ್ತು ಗಣಿತ ವಿಷಯಗಳನ್ನು ಪ್ರಧಾನ
ವಾಗಿರಿಸಿ ಬ್ರಿಡ್ಜ್ ಕೋರ್ಸ್ ಸಿದ್ಧಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕಲಿಕೆ ಅಂತರ
ಆನ್‌ಲೈನ್ ಮತ್ತು ಪೂರ್ವ ಮುದ್ರಿತ ವೀಡಿಯೋಗಳ ಬೋಧನ ತರಗತಿ ದಿನಕ್ಕೆ ಗರಿಷ್ಠ 2ರಿಂದ 3 ಅವಧಿ ಇರುತ್ತದೆ. ಆದರೆ ನೇರ ತರಗತಿಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ ಮೂರು- ಒಟ್ಟು 6 ಅವಧಿಯಲ್ಲಿ ಪಾಠ ನಡೆಯುತ್ತದೆ. ಹೀಗಾಗಿ ಆನ್‌ಲೈನ್ ವಿದ್ಯಾರ್ಥಿಗಳಿಗೆ ಎಷ್ಟೋ ವಿಷಯಗಳಲ್ಲಿ ಸಮಗ್ರ ಬೋಧನೆ ಸಿಗುವುದಿಲ್ಲ. ದಿನಪೂರ್ತಿ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವುದು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ. ಹೀಗಾಗಿ ಕಲಿಕೆ ಅಂತರ ಸೃಷ್ಟಿ ಸಹಜ. ಇದರ ನಿವಾರಣೆಗೆ ಬ್ರಿಡ್ಜ್ ಕೋರ್ಸ್ ಅನಿವಾರ್ಯ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳಲ್ಲಿ ಕಲಿಕೆಯ ಅಂತರ ಸಾಕಷ್ಟಿರುವುದು ಖಾಸಗಿ ಸಂಶೋಧನೆಗಳಿಂದ ತಿಳಿದು ಬಂದಿದೆ. ಅದರ ನಿವಾರಣೆಗಾಗಿ ಬ್ರಿಡ್ಜ್ ಕೋರ್ಸ್ ನಡೆಸಲಿದ್ದೇವೆ. ಸಮಗ್ರ ಶಿಕ್ಷಣ ವಿಭಾಗವು ಬ್ರಿಡ್ಜ್ ಕೋರ್ಸ್ ಸಿದ್ಧಪಡಿಸಲಿದ್ದು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮೌಲ್ಯಮಾಪನ ಆರಂಭಿಸಲಿದ್ದೇವೆ.
-ವಿ. ಅನುºಕುಮಾರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.