ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಾಣದತ್ತ ಪುನೀತ್
Team Udayavani, Mar 3, 2021, 11:38 AM IST
ಬಿಗ್ ಸ್ಕ್ರೀನ್‌ನಲ್ಲಿ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿರುವ ಪವರ್‌ಸ್ಟಾರ್ ಪುನೀತ್ ರಾಜಕುಮಾರ್,”ಪಿಆರ್‌ಕೆ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸಿನಿಮಾದ ಜೊತೆ ಕಿರುತೆರೆಯಲ್ಲೂ ಆಗಾಗ್ಗೆ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿರುವ ಪುನೀತ್ ರಾಜಕುಮಾರ್, ಈಗ ಕಿರುತೆರೆಯಲ್ಲಿ, “ನೇತ್ರಾವತಿ’ ಎಂಬ ಭಕ್ತಿಪ್ರಧಾನ ಧಾರಾವಾಹಿ ನಿರ್ಮಿಸುವ ತಯಾರಿಯಲ್ಲಿದ್ದಾರೆ.
ಅಂದಹಾಗೆ, “ನೇತ್ರಾವತಿ’ ಎನ್ನುವ ಮಂಜುನಾಥ ಸ್ವಾಮಿಯ ಅಪ್ಪಟ ಭಕ್ತೆಯ ಸುತ್ತ ಈ ಧಾರಾವಾಹಿ ಕಥೆ ಸಾಗಲಿದ್ದು, ಜೊತೆಗೆ ಮಹಿಳಾ ಪ್ರಧಾನ ವಿಷಯಗಳು ಕೂಡ ಈ ಧಾರಾವಾಹಿಯಲ್ಲಿ ಇರಲಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಧಾರಾವಾಹಿಯ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, “ನೇತ್ರಾವತಿ’ ಧಾರಾವಾಹಿಯಲ್ಲಿ ಯಾರೆಲ್ಲ ಕಲಾವಿದರು ಅಭಿನಯಿಸಲಿದ್ದಾರೆ, ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ, ಎಂದಿನಿಂದ ಪ್ರಾರಂಭವಾಗಲಿದೆ ಅನ್ನೋ ಇತರ ಮಾಹಿತಿಗಳುಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಪುನೀತ್ ರಾಜಕುಮಾರ್‌ಅಭಿನಯದ ಬಹುನಿರೀಕ್ಷಿತ “ಯುವರತ್ನ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಏ. 1ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
ಇದನ್ನೂ ಓದಿ : ನೋಡುಗರ ಗಮನ ಸೆಳೆದ ಪ್ರೇಮನ್
ಮಾ. 5ಕ್ಕೆ ಗಜಕೇಸರಿ ತೆಲುಗಿನಲ್ಲಿ ತೆರೆಕಾಣಲಿದೆ :
ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ “ಗಜಕೇಸರಿ’ ಚಿತ್ರ ಈಗ ತೆಲುಗಿನಲ್ಲೂ ತೆರೆ ಕಾಣಲು ರೆಡಿಯಾಗಿದೆ. “ಕೆಜಿಎಫ್’ ಚಿತ್ರದ ಬಳಿಕ ತೆಲುಗಿನಲ್ಲಿ ಯಶ್ ಚಿತ್ರಗಳಿಗೆ ಅಲ್ಲಿನ ವಿತರಕರು, ಪ್ರದರ್ಶಕರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದು, ಈಗ 2014 ರಲ್ಲಿ ಕನ್ನಡದಲ್ಲಿ ಬಿಡುಗಡೆ ಆಗಿದ್ದ ಯಶ್ ಅಭಿನಯದ “ಗಜಕೇಸರಿ’ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆಮಾಡಲಾಗುತ್ತಿದೆ. ಫೆ. 26 ರಂದು “ಗಜಕೇಸರಿ’ ತೆಲುಗುಟೀಸರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.ಅಂದಹಾಗೆ, “ಗಜ ಕೇಸರಿ’ ತೆಲುಗು ಡಬ್ ಆವೃತ್ತಿ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದ್ದು, ಟಾಲಿವುಡ್ ನಿರ್ಮಾಪಕ ದಿಲ್ ರಾಜು ವಿತರಣೆ ಹಕ್ಕನ್ನು ಖರೀದಿಸಿದ್ದಾರೆ. ಚಿತ್ರ ಇದೇ ಮಾರ್ಚ್ 5 ರಂದು ಬಿಡುಗಡೆ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.