ಹೆಬ್ರಿ: ಜಿಂಕೆಗೆ ಬೈಕ್ ಡಿಕ್ಕಿ; ಜಿಂಕೆ ಸ್ಥಳದಲ್ಲೇ ಸಾವು
Team Udayavani, Mar 3, 2021, 12:12 PM IST
ಹೆಬ್ರಿ: ಕನ್ಯಾನ ಸಮೀಪ ಬೈಕ್ ವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ (ಮಾ.3) ಮುಂಜಾನೆ 5.30ರ ಹೊತ್ತಿಗೆ ನಡೆದಿದೆ.
ಬೈಕ್ ಸವಾರ ಹರೀಶ್ ಎಂಬವರು ಖಾಸಗಿ ಬಸ್ ನ ಚಾಲಕರಾಗಿದ್ದು, ಎಂದಿನಂತೆ ಕತ೯ವ್ಯಕ್ಕಾಗಿ ಬರುತ್ತಿರುವಾಗ ಜಿಂಕೆಯೊಂದು ಹಠಾತ್ ರಸ್ತೆಗೆ ಜಿಗಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಜಿಂಕೆಗೆ ಢಿಕ್ಕಿ ಹೊಡೆದು ಸಂಪೂಣ೯ ಜಖಂಗೊಂಡಿದೆ.
ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ: ಸಿದ್ದು ಆಗ್ರಹ
ಜಿಂಕೆಯು ಖಾಸಗಿ ಜಾಗದಿಂದ ಸರಕಾರಿ ಫಾರೆಸ್ಟ್ ಜಾಗಕ್ಕೆ ರಸ್ತೆ ಕ್ರಾಸ್ ಮಾಡುವಾಗ ಘಟನೆ ನಡೆದಿದೆ. ಜಿಂಕೆಯನ್ನು ಇಲಾಖೆಯ ನಿಯಮದಂತೆ ದಫನಮಾಡಲಾಗಿದೆ ಎಂದು ಹೆಬ್ರಿ ವಲಯ ಅರಣ್ಯ ಅಧಿಕಾರಿ ಮಾಕಾ೯ಂಡೇಯ ತಿಳಿಸಿದ್ದಾರೆ.
ಇದನ್ನೂ ಓದಿ: ಸಿ.ಡಿ ಪ್ರಕರಣದ ಹಿಂದೆ ಷಡ್ಯಂತ್ರ; ರಾಜೀನಾಮೆ ಪ್ರಶ್ನೆ ಉದ್ಭವಿಸಲ್ಲ: ಅಶ್ವತ್ಥ ನಾರಾಯಣ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.